ಮಾನವೀಯ ಸ್ಪಂದನಕ್ಕೆ ಅಸ್ಸಾಂ ಮೊರೆ
[Updated 08/08/2012 06:29 pm]ಅಸ್ಸಾಂನಲ್ಲಿ ಸಂಭವಿಸಿದ ಮಾನವ ದುರಂತದ ತೀವ್ರತೆಯ ಮಗ್ಗಲುಗಳು ಒಂದೊಂದಾಗಿ ತೆರೆದುಕೊಳ್ಳುತ್ತಿವೆ. ನೊಂದವರ ಸಾಂತ್ವನಕ್ಕೆ ನಾವು ಮುಂದಾಗಿದ್ದೇವೆಯೆ? ಸಹಾಯಹಸ್ತ ಚಾಚಿ ಎಂದು ದಿನಪತ್ರಿಕೆಗಳು ಪ್ರತಿದಿನವೂ ಪ್ರಕಟಿಸುತ್ತಿರುವ ಮನವಿಗಳು ನಿಮ್ಮ ಗಮನಕ್ಕೆ ಬಂದಿಲ್ಲವೆ? ಮಾನವೀಯತೆಯ ನೆರವಿನ ಬಗ್ಗೆ ದೊಡ್ಡದೊಡ್ಡ ಮಾತನಾಡುವ ಸಂಘ-ಸಂಸ್ಥೆಗಳು ಈಗೆಲ್ಲಿವೆ?
ದೇಶ ವಿಭನೆಯ ಬಳಿಕ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಸುಮಾರು 4 ಲಕ್ಷಕ್ಕೂ ಅಧಿಕ ಬೋಡೋಗಳು ಹಾಗೂ ಮುಸ್ಲಿಮರು ಬುಡಸಮೇತ ತಮ್ಮ ನೆಲೆಗಳನ್ನು ಕಳೆದುಕೊಂಡಿದ್ದಾರೆ. ಕೇವಲ 10 ದಿನಗಳ ಅವಧಿಯಲ್ಲಿ ಪ್ರಾಣಭೀತಿಯಿಂದ ಮನೆ-ಮಠ ಎಲ್ಲವನ್ನೂ ತೊರೆದು ಪಲಾಯನ ಮಾಡಿದ್ದಾರೆ. ಮಿಂಚಿನ ವೇಗದ ಸಂಪರ್ಕ, ಸುದ್ದಿ ಮಾಧ್ಯಮಗಳ ವ್ಯಾಪಕತೆ ತೀವ್ರವಾಗಿರುವ ಸಂದರ್ಭದಲ್ಲೂ ಈ ಘಟನೆಗಳಿಂದ ನಾವು ವಿಚಲಿತರಾಗಿಲ್ಲ ಎಂದರೆ ಏನು ಹೇಳೋಣ?
2002ರಲ್ಲಿ ಗುಜರಾತ್ ಹತ್ಯಾಕಾಂಡ ನಡೆದಾಗ ೨ ಲಕ್ಷಕ್ಕೂ ಹೆಚ್ಚು ಜನರ ಬದುಕು ಗಾಳಿಗೆ ತೂರಿಹೋಯಿತು. ಆಗಲೂ ಅಷ್ಟೇ. ಸಂಕಷ್ಟದಲ್ಲಿರುವವರ ನೆರವಿಗೆ ಬಂದವರು ತೀರಾ ಅತ್ಯಲ್ಪ. ಆದರೆ ಅದಕ್ಕೆ ಒಂದೇ ವರ್ಷ ಮೊದಲು ಭೀಕರ ಭೂಕಂಪದಿಂದ ಜನ ಸಾವು-ನೋವಿಗೆ ಗುರಿಯಾದಾಗ ದೇಶ-ವಿದೇಶಗಳಿಂದ ಕಾರ್ಪೋರೇಟ್ ಜಗತ್ತಿನಿಂದ ಉದಾರ ನೆರವಿನ ಮಹಾಪೂರವೇ ಹರಿದು ಬಂದಿತ್ತು. ಆದರೆ ಇಂತಹ ಮಾನವ ನಿರ್ಮಿತ ದುರಂತಗಳು ಸಂಭವಿಸಿದಾಗ ಯಾರೂ ನೊಂದವರ ನೆರವಿಗೆ ಧಾವಿಸುವುದಿಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತಿದೆ. ಹೀಗೇಕೆ?
ಅಸ್ಸಾಂ ಕೂಡ ಈಗ ದಶಕದಲ್ಲೇ ಅತಿ ಭೀಕರ ನೈಸರ್ಗಿಕ ದುರಂತ, ಪ್ರವಾಹ್ಕೆ ಸಿಲುಕಿ ನಲುಗುತ್ತಿದೆ. ಪ್ರವಾಹ ಸಂತ್ರಸ್ತರ ನೆರವಿಗೂ ನೂರಾರು ಸಂಘಟನೆಗಳು ಪೈಪೋಟಿಯಲ್ಲಿ ನೆರವಿನ ಹಸ್ತ ಮುಂದೆ ಚಾಚುತ್ತವೆ. ಆದರೆ ಕೊಕ್ರಝಾರ್, ಧುಬ್ರಿ, ಚಿರಂಗ್ ಮತ್ತು ಬೊಂಗೈಗಾಂವ್ ನ ಹಿಂಸಾಗ್ರಸ್ತ ಪ್ರದೇಶಗಳಲ್ಲಿ ಮನೆ-ಮಠ ಕಳೆದುಕೊಂಡವರ ನೆರವಿಗೆ ಬರುವವರು ಯಾರು?

ಹಿಂಸಾಚಾರದಿಂದಾಗಿ ನೆಲೆ ಕಳೆದುಕೊಂಡವರಿಗಾಗಿ ನಿರ್ಮಿಸಿದ ನಿರಾಶ್ರಿತರ ಶಿಬಿರಗಳಿಗೆ ಪ್ರವೇಶಿಸಲು ಹೊರಗಿನವರಿಗೆ ಸರಕಾರವೇ ಅವಕಾಶ ನೀಡುವುದಿಲ್ಲ. ಹೀಗಾಗಿ ಕೆಲವು ಮಾನವೀಯ ಸಂಘಟನೆಗಳಿಗೆ ನೆರವು ನೀಡುವ ಮನಸ್ಸಿದ್ದರೂ ಅದನ್ನು ಮಾಡಲಾಗದ ಪರಿಸ್ಥಿತಿಯಿದೆ. ಇದರಿಂದಾಗಿ ಜನರ ನಡುವಣ ಕಂದಕ ಮತ್ತಷ್ಟು ಅಗಲವಾಗುತ್ತದೆ ಅಷ್ಟೆ. ನಿರಾಶ್ರಿತ ಶಿಬಿರದಲ್ಲಿರುವ ಮಗುವಿನ ಹೊಟ್ಟೆಯ ಹಸಿವು ಅದರ ತಾಯಿಯ ಹೃದಯದಲ್ಲಿ ದ್ವೇಷವನ್ನು ಹುಟ್ಟುಹಾಕುತ್ತದೆ. ಅಮಾನುಷ ದಾಳಿಕೋರರು ಉಂಟುಮಾಡಿದ ಗಾಯಗಳನ್ನು ಜಾಗರೂಕತೆಯಿಂದ ವಾಸಿಮಾಡಬೇಕಾಗುತ್ತದೆ.
ಅಜಾಗ್ರತೆಯ ಶುಶ್ರೂಷೆಯಿಂದ ಗಾಯಗಳು (ಮೈಮೇಲಿನ ಗಾಯ ಮಾತ್ರವಲ್ಲ, ಮನಸ್ಸುಗಳು ಮತ್ತು ಸಮಾಜಕ್ಕಾದ ಗಾಯಗಳೂ) ಉಲ್ಬಣವಾಗುತ್ತವೆ ಅಷ್ಟೆ. ಭಯವು ಭೀತಿಯ ದುಸ್ವಪ್ನವಾಗಿ ಬದಲಾಗದಂತೆ ನೋಡಿಕೊಳ್ಳಬೇಕು.
ಪ್ರಾಕೃತಿಕ ದುರಂತಗಳು ನಮ್ಮ ಹೃದಯವನ್ನು ಆರ್ದ್ರಗೊಳಿಸುತ್ತವೆ, ನೆರವಿನ ವಿಷಯದಲ್ಲೂ ನಮ್ಮ ಕೈಗಳು ಉದಾರವಾಗುತ್ತವೆ. ಆದರೆ ಮನುಷ್ಯನ ಅಮಾನವೀಯ ಕೃತ್ಯಗಳಿಂದ ಸಮಾಜದ ಮೇಲೆ ಉಂಟಾದ ಆಘಾತಕ್ಕೆ ಚಿಕಿತ್ಸೆ ನೀಡುವಲ್ಲಿ ಸರಕಾರವೂ ರಾಜಕೀಯ ಮಾಡುತ್ತದೆ. ಸೇವಾ ಸಂಘಟನೆಗಳೂ ಹಿಂಜರಿಯುತ್ತವೆ. ಇಂತಹ ಪರಿಸ್ಥಿತಿ ತಂದುಕೊಂಡಿದ್ದಕ್ಕಾಗಿ ಸಂತ್ರಸ್ತರನ್ನೇ ನಾವು ದೂಷಿಸಬೇಕಷ್ಟೆ. ಅದಕ್ಕಿಂತಲೂ ಹೆಚ್ಚಾಗಿ ನಾವು ಪಕ್ಷಪಾತಿಗಳಾಗಿಬಿಡುತ್ತೇವೆ.
ವ್ಯಂಗ್ಯವೆಂದರೆ, ಘರ್ಷಣೆಯಿಂದಾದ ಆಂತರಿಕ ಸ್ಥಾನಪಲ್ಲಟವು ಭಾರತದಲ್ಲಿ ಅತಿದೊಡ್ಡ ಸಮಾನತೆಯ ಹರಿಕಾರನಾಗಿಬಿಡುತ್ತದೆ. ಅದು ಎಲ್ಲಾ ಸಮುದಾಯ, ಧರ್ಮಗಳು ಮತ್ತು ಬುಡಕಟ್ಟು ಗುಂಪುಗಳ ಮೇಲೂ ಸಮಾನವಾಗಿ ದುರಂತ ಪರಿಣಾಮ ಉಂಟುಮಾಡುತ್ತದೆ.
ಕೇಂದ್ರ ಸರಕಾರದ ನಿಗಾ ಸಂಸ್ಥೆ ಅಥವಾ ಮಾಹಿತಿಯ ಅನುಪಸ್ಥಿತಿಯಲ್ಲಿ, ಎಸಿಎಚ್ಆರ್, ಅಮ್ನೆಸ್ಟಿ ಇಂಟರ್ನ್ಯಾಷನಲ್ ನಂತಹ ಮಾನವ ಹಕ್ಕು ಸಂಘಟನೆಗಳು ಐಡಿಎಂಸಿ (ಇಂಟರ್ನ್ಯಾಷನಲ್ ಡಿಸ್ಪ್ಲೇಸ್ ಮೆಂಟ್ ಮಾನಿಟರಿಂಗ್ ಸೆಂಟರ್) ಯಂತಹ ಸಂಘಟನೆಗಳು ಒಟ್ಟಾರೆ ಅಂದಾಜಿನ ಮೇರೆಗೆ, ಭಾರತದಲ್ಲಿ 60 ಲಕ್ಷಕ್ಕೂ ಹೆಚ್ಚು ಜನ ಹಿಂಸಾಚಾರದಿಂದಾಗಿ ಸ್ಥಾನಪಲ್ಲಟಗೊಂಡಿದ್ದಾರೆ ಎಂದು ಹೇಳುತ್ತಿವೆ.
1990ರಲ್ಲಿ 2.5 ರಿಂದ 4 ಲಕ್ಷ ಸಂಖ್ಯೆಯ ಕಾಶ್ಮೀರಿ ಪಂಡಿತರು ನಿರಾಶ್ರಿತರಾದರು. ಈಶಾನ್ಯ ಭಾರತದಲ್ಲಿ- 1993, 1996 ಮತ್ತು 1998ರಲ್ಲಿ ಅಸ್ಸಾಂನ ಕೊಕ್ರಝಾರ್ ಮತ್ತು ಬೊಂಗೈಗಾಂವ್ ಜಿಲ್ಲೆಗಳಲ್ಲಿ ನಡೆದ ಬೋಡೋ ಮುಸ್ಲಿಂ- ಬೋಡೋ ಸಂತಾಲ್ ಹಿಂಸಾಚಾರದಲ್ಲಿ 47,000 ಮಂದಿ ಸ್ಥಾನಪಲ್ಲಟಗೊಂಡರು. ಹೀಗೆ ನಿರಾಶ್ರಿತರಾದವರಲ್ಲಿ 44,000 ಜನ ಮಕ್ಕಳೇ ಆಗಿದ್ದರು ಎಂಬುದು ಗಮನಾರ್ಹ.2008ರಲ್ಲಿ ಅಸ್ಸಾಂನ ದರಾಂಗ್ ಮತ್ತು ಉದಲ್ಗುರಿ ಜಿಲ್ಲೆಗಳಲ್ಲಿ ನಡೆದ ಬೋಡೋ-ಮುಸ್ಲಿಂ ಕಾಳಗಗಳಲ್ಲಿ 1,25,000 ಮಂದಿ ನಿರಾಶ್ರಿತರಾದರು. ಅಸ್ಸಾಂ-ಮೇಘಾಲಯ ಗಡಿ ಭಾಗದಲ್ಲಿ ಖಾಸಿಗಳು ಮತ್ತು ನೇಪಾಳಿ ಭಾಷಿಕರ ನಡುವಣ ಹಿಂಸಾಚಾರದಲ್ಲಿ 4,000 ಜನ ಮನೆ-ಮಠ ಕಳೆದುಕೊಂಡು ಬೀದಿಪಾಲಾದರು. 1997ರಿಂದ 2009ರ ನಡುವೆ 31,703 ಬ್ರೂ ಗಳು ತ್ರಿಪುರಾದಿಂದ ಮಿಜೋರಾಂಗೆ ಪಲ್ಲಟಗೊಂಡರು. 2009ರಲ್ಲಿ ಛತ್ತೀಸ್ ಗಢದಲ್ಲಿ 1 ಲಕ್ಷಕ್ಕೂ ಹೆಚ್ಚು ಜನ ನಿರಾಶ್ರಿತರಾದರು. 2002ರಿಂದೀಚೆಗೆ ಗುಜರಾತ್ ನಲ್ಲಿ ಮತ್ತು 2007-08ರಲ್ಲಿ ಒರಿಸ್ಸಾದಲ್ಲಿ ನಡೆದ ಹಿಂಸಾಚಾರಗಳಲ್ಲಿ ಸಾವಿರಾರು ಮಂದಿಯ ಬದುಕುವ ಪರಿಸರ ಪಲ್ಲಟಗೊಂಡಿದೆ.
ಈ ಸಂಖ್ಯೆಗಳು ಕೇವಲ ನೋಂದಾಯಿತ ಶಿಬಿರಗಳಲ್ಲಿ ವಾಸಿಸುತ್ತಿರುವವರದ್ದು ಮಾತ್ರವಾಗಿದೆ. ದಿಕ್ಕುದೆಸೆಯಿಲ್ಲದೆ ಚದುರಿಹೋಗಿರುವ, ಇಂದಿಗೂ ಎಲ್ಲೂ ಆಶ್ರಯ ಸಿಗದ ಮಂದಿಯ ಲೆಕ್ಕ ಇದರಲ್ಲಿ ಸೇರಿಲ್ಲ. ಅವರನ್ನೂ ಸೇರಿಸಿದರೆ, ಸಂಖ್ಯೆಗಳು ಏರುತ್ತವೆ.
ಆಂತರಿಕ ಸ್ಥಾನಪಲ್ಲಟದ ಕುರಿತಂತೆ 1998ರಲ್ಲಿ ವಿಶ್ವಸಂಸ್ಥೆ 30 ಮಾರ್ಗದರ್ಶಿ ಸೂತ್ರಗಳನ್ನು ಅಂಗೀಕರಿಸಿದೆ. ಇವುಗಳು ಪ್ರಚಲಿತ ಅಂತಾರಾಷ್ಟ್ರೀಯ ಮಾನವ ಹಕ್ಕುಗಳು ಹಾಗೂ ಮಾನವೀಯ ಕಾಯ್ದೆಗಳಿಂದ ಆಯ್ದ ಸೂತ್ರಗಳಾಗಿದ್ದು, ಜಗತ್ತಿನಾದ್ಯಂತ ಹಿಂಸೆಯಿಂದಾಗಿ ಸ್ಥಾನಪಲ್ಲಟಗೊಳ್ಳುವ ಜನರ ಹಿತರಕ್ಷಣೆಗೆ ಅನುಸರಿಲಾಗುತ್ತಿದೆ. ಭಾರತದಲ್ಲೂ ಇದನ್ನು ಅನುಸರಿಸಬೇಕಾಗಿದೆ.
ಭಾರತದಲ್ಲಿ ಇನ್ನೂ ಈ ಕುರಿತ ಸ್ಪಷ್ಟ ನೀತಿ ರೂಪಿತವಾಗಿಲ್ಲ. ಹಿಂಸೆಗೆ ಗುರಿಯಾಗಿ ಬದುಕುವ ಪರಿಸರ ಕಳೆದುಕೊಂಡವರನ್ನು ಕೇವಲ ವಲಸಿಗರೆಂದು ಪರಿಗಣಿಸಲಾಗುತ್ತಿದೆ. ಅವರಿಗೆ ನಿರ್ದಿಷ್ಟ ಹಕ್ಕುಗಳಿವೆ ಎಂಬುದನ್ನು ಮಾನ್ಯ ಮಾಡಲಾಗುತ್ತಿಲ್ಲ. ಬಿಡುಗಡೆ, ಪುನರ್ವಸತಿ ಮತ್ತು ಪರಿಹಾರ ಕುರಿತಂತೆ ಸಮಗ್ರ ರಾಷ್ಟ್ರೀಯ ನೀತಿಗಳನ್ನು ರೂಪಿಸಬೇಕಿದೆ.
ಭಯ ಹಾಗೂ ಜೀವಬೆದರಿಕೆ ಹಿನ್ನೆಲೆಯಲ್ಲಿ ವಾಸಸ್ಥಳವನ್ನು ತೊರೆದು ಬೇರೆಡೆ ಹೋಗುವ ಜನರ ಸಾಂವಿಧಾನಿಕ ಹಕ್ಕುಗಳಿಗೆ ಮನ್ನಣೆ ದೊರೆಯದಿದ್ದರೆ ಅವರ ಸ್ಥಿತಿ ಮತ್ತಷ್ಟು ಹದಗೆಡುತ್ತದೆ. ಅವರ ವಿತ್ತ-ಜೀವಿತಗಳಿಗೆ ರಕ್ಷಣೆಯೇ ಇಲ್ಲವಾಗುತ್ತದೆ. ಅವರ ಹಕ್ಕುಗಳ ರಕ್ಷಣೆಯನ್ನು ಯಾವುದೇ ರಾಜಿಯಿಲ್ಲದೆ ಮಾಡಬೇಕಾಗುತ್ತದೆ.
ಯಾವುದೇ ಕಾನೂನಿನ ಚೌಕಟ್ಟು ಇಲ್ಲದೆ, ಏಕರೂಪವಾದ ರಾಷ್ಟ್ರೀಯ ಮಟ್ಟದ ನ್ಯಾಯಯುತ ನೀತಿಗಳನ್ನು ಹೊಂದಿರದೆ, ನೀಡುವ ತಾತ್ಕಾಲಿಕ ಪರಿಹಾರ ಅಥವಾ ಪುನರ್ವಾಸ ವ್ಯವಸ್ಥೆಯು ನಿರಾಶ್ರಿತರ ಬದುಕನ್ನು ನರಕವಾಗಿಸುವುದಲ್ಲದೆ, ಸುಧಾರಿಸಲು ಸಾಧ್ಯವಿಲ್ಲ.
ಆಹಾರ, ನೀರು, ಆರೋಗ್ಯಪಾಲನೆ ಸೌಲಭ್ಯ ಒದಗಿಸುವಲ್ಲಿ- ಮಕ್ಕಳು, ಮಹಿಳೆಯರು ಮತ್ತು ವೃದ್ಧರು, ದುರ್ಬಲರಿಗೆ ವಿಶೇಷ ವ್ಯವಸ್ಥೆಗಳನ್ನು ಕಲ್ಪಿಸುವಲ್ಲಿ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ.
ಅವರಿಗೆ ತಮ್ಮ ದಾಖಲೆಗಳು, ಮನೆಗಳು, ಭೂಮಿ, ಕಳೆದುಹೋದ ಜಾನುವಾರುಗಳು, ಜೀವನದ ಆಧಾರಗಳು ಮತ್ತು ಅವರ ಘನತೆಯನ್ನು ಮರಳಿ ದೊರಕಿಸಲು ಯಾವುದೇ ಏಕಗವಾಕ್ಷಿ ವ್ಯವಸ್ಥೆ ನಮ್ಮಲ್ಲಿಲ್ಲ. ಹಿಂಸಾಚಾರದಿಂದಾಗಿ ನೆಲೆ ಕಳೆದುಕೊಂಡವರ ಮೇಲೆ ಆಗುವ ಲೈಂಗಿಕ ಅತ್ಯಾಚಾರ, ಕುಟುಂಬ ಸದಸ್ಯರ ಬೇರ್ಪಡೆ, ಕುಟುಂಬದ ಜವಾಬ್ದಾರಿಯಲ್ಲಿ ಬದಲಾವಣೆ, ಮಕ್ಕಳ ಪಾಲನೆಯಲ್ಲಿ ಹತಾಶ ನಿರ್ಲಕ್ಷ್ಯ, ಹೆಚ್ಚುವ ಕೌಟುಂಬಿಕ ಹಿಂಸಾಚಾರ, ಪರಿಹಾರ ಶಿಬಿರಗಳಲ್ಲೇ ಲೈಂಗಿಕ ಶೋಷಣೆ- ಇತ್ಯಾದಿಗಳಿಂದ ಉಂಟಾಗುವ ಮಾನಸಿಕ ದುಷ್ಪರಿಣಾಮ ವಿವರಿಸಲು ಅಸಾಧ್ಯ.
ಈ ಕುರಿತು ಸರಕಾರ ಸ್ಪಷ್ಟ ನೀತಿಯನ್ನು ಅಂಗೀಕರಿಸಬೇಕಾದರೆ ದೇಶದಲ್ಲಿ ಇನ್ನೆಷ್ಟು ಹಿಂಸಾಚಾರದಿಂದಾಗುವ ಸ್ಥಾನಪಲ್ಲಟಗಳು ನಡೆಯಬೇಕೋ? ಉತ್ತರಿಸುವವರು ಯಾರು?
Assam calls for a human response
As the magnitude of the human tragedy in Assam unfolds, where is our healing touch? Where are the appeals for funds that newspapers routinely issue? Where are the big humanitarian aid agencies? This is possibly the single largest conflict-induced human displacement to take place in India over such a short period of time since partition — over 4,00,000 Bodos and Muslims uprooted, terrified, and running for their lives in under 10 days. In this hyper-connected age, news travels fast, graphically, and into our drawing rooms, yet we appear unmoved.
ಸಂಜಯ್ ದತ್ ಪುಣೆಯ ಯೆರವಾಡ ಜೈಲಿಗೆ
ಮುಂಬಯಿ: 1993ರ ಸರಣಿ ಸ್ಫೋಟ ಪ್ರಕರಣದಲ್ಲಿ ಅಪರಾಧಿಯಾಗಿರುವ ಬಾಲಿವುಡ್ ನಟ ಸಂಜಯ್ ದತ್ ನ್ನು ಪುಣೆಯ ಯೆರವಾಡ ಜೈಲಿಗೆ ಸ್ಥಳಾಂತರಿಸಲಾಗಿದೆ. ಮೇ 16ರಂದು ದತ್ ವಿಶೇಷ ಟಾಡಾ ಕೋರ್ಟ್ ಮುಂದೆ ಶರಣಾಗಿದ್ದರು.
ಚೆನ್ನೈ ಪೊಲೀಸರ ದಾಳಿ: 6 ಮಂದಿ ಬುಕ್ಕಿಗಳ ಸೆರೆ
ಚೆನ್ನೈ: ಸ್ಪಾಟ್ ಫಿಕ್ಸಿಂಗ್ ಆರೋಪದ ಮೇಲೆ ರಾಜಸ್ಥಾನ ರಾಯಲ್ಸ್ ನ ಮೂರು ಮಂದಿ ಆಟಗಾರರು ಸಿಕ್ಕಿಬಿದ್ದ ಮರುದಿನ ಚೆನ್ನೈ ಪೊಲೀಸರು 10 ಕಡೆಗಳಲ್ಲಿ ದಾಳಿ ಮಾಡಿ 6 ಮಂದಿ ಬುಕ್ಕಿಗಳನ್ನು ಬಂಧಿಸಿದ್ದಾರೆ.
ದೆಹಲಿಯಲ್ಲಿ ವೈದ್ಯನಿಂದ ರೋಗಿಯ ಅತ್ಯಾಚಾರ
ಹೊಸದಿಲ್ಲಿ: ದೆಹಲಿಯ ಸರ್ಕಾರಿ ಆಸ್ಪತ್ರೆಯ 51ರ ಹರೆಯದ ವೈದ್ಯ ತನ್ನ ಕ್ಲಿನಿಕ್ ನಲ್ಲಿ 21ರ ಹರೆಯದ ರೋಗಿಯೊಬ್ಬಳನ್ನು ಅತ್ಯಾಚಾರ ಮಾಡಿದ ಪ್ರಕರಣ ನಡೆದಿದೆ. ದೆಹಲಿಯ ಜಗ್ ಪ್ರವೇಶ್ ಚಂದ್ರ ಆಸ್ಪತ್ರೆಯಲ್ಲಿ
ದೆಹಲಿಯಲ್ಲಿ 12ನೇ ತರಗತಿ ಬಾಲಕಿಯ ಗುಂಡಿಕ್ಕಿ ಹತ್ಯೆ
ಹೊಸದಿಲ್ಲಿ: ದಕ್ಷಿಣ ದೆಹಲಿಯಲ್ಲಿ 12ನೇ ತರಗತಿಯಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿನಿಯೊಬ್ಬಳನ್ನು ಹುಡುಗನೊಬ್ಬ ಗುಂಡು ಹಾರಿಸಿ ಕೊಂದ ಘಟನೆ ನಡೆದಿದೆ. ಮುನಿಕ್ರಾ ಪ್ರದೇಶದ ಬುಧ ವಿಹಾರ್ ಪ್ರದೇಶದಲ್ಲಿರುವ
ಬಿಜೆಪಿ ನಾಯಕನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು
ಮುಂಬಯಿ: ಮಹಾರಾಷ್ಟ್ರದ ಬಿಜೆಪಿಯ ಎಂಎಲ್ ಸಿ ಮಧು ಚೌವಾಣ್ ತನ್ನ ಪಕ್ಷದ ಮಾಜಿ ಕಾರ್ಯಕರ್ತೆಯನ್ನು ಅತ್ಯಾಚಾರ ಮಾಡಿದ ಆರೋಪವನ್ನು ಎದುರಿಸುತ್ತಿದ್ದಾರೆ.
ಮಧು ಚೌವಾಣ್ ವಿರುದ್ಧ ಮುಂಬಯಿ ಪೊಲೀಸರು
ಹಲ್ಲೆಗೊಳಗಾಗಿದ್ದ ಪಾಕ್ ಕೈದಿ ಸಾವು
ಚಂಡೀಗಡ: ಜಮ್ಮು ಜೈಲಿನಲ್ಲಿ ಕಳೆದ ವಾರ ಸಹ ಕೈದಿಗಳಿಂದ ಹಲ್ಲೆಗೊಳಗಾಗಿದ್ದ ಪಾಕಿಸ್ತಾನದ ಕೈದಿ ಸಾನುಲ್ಲಾ ರಂಜಾಯ್ ಗುರುವಾರ ಬೆಳಗ್ಗೆ ಮೃತಪಟ್ಟಿದ್ದಾನೆ.
ಹತ್ಯೆ ಪ್ರಕರಣ: ತಲ್ವಾರ್ ದಂಪತಿ ಹೇಳಿಕೆ ದಾಖಲಿಸಲು ಕೋರ್ಟ್ ಆದೇಶ
ಘಜಿಯಾಬಾದ್: ಆರುಷಿ-ಹೇಮರಾಜ್ ಹತ್ಯಾ ಪ್ರಕರಣದಲ್ಲಿ ಮಂಗಳವಾರ ಸಿಬಿಐ ವಿಶೇಷ ನ್ಯಾಯಾಲಯವು ರಾಜೇಶ್ ಮತ್ತು ನುಪುರ್ ತಲ್ವಾರ್ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಿದೆ.
ಅತ್ಯಾಚಾರ ಪ್ರಕರಣ: ವೈದ್ಯಕೀಯ ವಿದ್ಯಾರ್ಥಿನಿ ದೇಹದ ಮೇಲಿತ್ತು ಕಚ್ಚಿದ ಗುರುತು!
ಹೊಸದಿಲ್ಲಿ: ಕಳೆದ ವರ್ಷ ಡಿಸೆಂಬರ್ ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ವೈದ್ಯಕೀಯ ವಿದ್ಯಾರ್ಥಿನಿಯನ್ನು ಇಬ್ಬರು ಕಚ್ಚಿದ ಗುರುತುಗಳಿದ್ದವು ಎಂದು ಹೇಳಲಾಗಿದೆ. ಈ ಎರಡು ಗುರುತುಗಳು
ಬಾಲಿವುಡ್ ನಿರ್ಮಾಪಕಿ ಏಕ್ತಾ ಕಪೂರ್ ಮನೆ, ಕಚೇರಿಗೆ ಐಟಿ ದಾಳಿ
ಮುಂಬಯಿ: ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಮಂಗಳವಾರ ಬಾಲಿವುಡ್ ನಿರ್ಮಾಪಕಿ ಏಕ್ತಾ ಕಪೂರ್ ಮನೆ ಹಾಗೂ ಕಚೇರಿಗೆ ದಾಳಿ ಮಾಡಿದ್ದಾರೆ. ಕಿರುತೆರೆಯಲ್ಲಿ ತನ್ನ ಧಾರಾವಾಹಿಗಳಿಂದ ಹೆಚ್ಚಿನ ಪ್ರಚಾರವನ್ನು ಪಡೆದುಕೊಂಡಿರುವ
ಹೆಲಿಕಾಪ್ಟರ್ ನಲ್ಲಿ ವಧುವನ್ನು ಕರೆತಂದ ಬಿಹಾರದ ಕಾಂಗ್ರೆಸ್ ಶಾಸಕ
ಪಟ್ನಾ: ಜನರಿಗೆ ಮೂಲಭೂತ ಸೌಲಭ್ಯಗಳಿಲ್ಲದಿದ್ದರೂ ನಮ್ಮ ರಾಷ್ಟ್ರದ ಎಲ್ಲಾ ರಾಜ್ಯಗಳ ಶಾಸಕರು ತಮ್ಮ ಶ್ರೀಮಂತಿಕೆಯನ್ನು ತೋರಿಸುವುದರಲ್ಲಿ ಹಿಂದೆ ಬಿದ್ದಿಲ್ಲ. ಬಿಹಾರದಲ್ಲಿ ಕಾಂಗ್ರೆಸ್ ನ ಶಾಸಕನೊಬ್ಬ ಹೆಲಿಕಾಪ್ಟರ್ ನಲ್ಲಿ ವಧುವನ್ನು ಕರೆದುಕೊಂಡು ಬಂದಿದ್ದಾನೆ.
ನಾನು ಮುಗ್ದ, ಯಾವುದೇ ತಪ್ಪು ಮಾಡಿಲ್ಲ: ಶ್ರೀಶಾಂತ್
ಹೊಸದಿಲ್ಲಿ: ನಾನು ಮುಗ್ದ ಮತ್ತು ಯಾವುದೇ ತಪ್ಪನ್ನು ಮಾಡಿಲ್ಲ. ನಾನು ಸ್ಪಾಟ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿಲ್ಲ ಎಂದು ಐಪಿಎಲ್ ಸ್ಪಾಟ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿರುವ ಆರೋಪವನ್ನು ಎದುರಿಸುತ್ತಿರುವ ರಾಜಸ್ಥಾನ್ ರಾಯಲ್ಸ್ ತಂಡ...
ಸ್ಪಾಟ್ ಫಿಕ್ಸಿಂಗ್: ಬಾಲಿವುಡ್ ನಟ ವಿಂದೂ ದಾರಾ ಸಿಂಗ್ ಬಂಧನ
ಹೊಸದಿಲ್ಲಿ: ಬಾಲಿವುಡ್ ಮತ್ತು ಸ್ಪಾಟ್ ಫಿಕ್ಸಿಂಗ್ ಲಿಂಕ್ ಒಂದೊಂದಾಗಿ ಬಯಲಾಗುತ್ತಿದ್ದು, ಜನಪ್ರಿಯ ನಟ, ಕುಸ್ತಿಪಟು, ದಿವಂಗತ ದಾರಾ ಸಿಂಗ್ ಅವರ ಪುತ್ರ ವಿಂದೂ ದಾರಾ ಸಿಂಗ್ ನನ್ನು ಪೊಲೀಸರು ಮುಂಬಯಿಯಲ್ಲಿ ಬಂಧಿಸಿದ್ದಾರೆ.
ಅಗ್ಗದ ಮದ್ಯ ಮಾರಾಟ ಮಾಡಿದರೆ ಪ್ರತಿಭಟನೆ
ಬೆಂಗಳೂರು: ಮತ್ತೆ ರಾಜ್ಯದಲ್ಲಿ ಅಗ್ಗದ ಮದ್ಯ ಮಾರಾಟ ಮಾಡಲು ಸರ್ಕಾರ ಮುಂದಾದರೆ ರಾಜ್ಯದಾದ್ಯಂತ ಉಗ್ರ ಪ್ರತಿಭಟನೆ ನಡೆಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ಎಚ್ಚರಿಕೆ ನೀಡಿದ್ದಾರೆ.
ಅದೃಷ್ಟದ ಕೊಠಡಿಗಾಗಿ ಸಚಿವರ ಕಿತ್ತಾಟ
ಬೆಂಗಳೂರು: ಹೋರಾಟದ ಮೂಲಕ ಸಚಿವ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಂಡ ಸಚಿವರು ಇದೀಗ ವಿಧಾನಸೌಧದಲ್ಲಿ ತಮ್ಮ ಅದೃಷ್ಟದ ಕಚೇರಿ ಮತ್ತು ಬಂಗಲೆಗಾಗಿ ಕಿತ್ತಾಟ ಆರಂಭಿಸಿದ್ದಾರೆ.
ಮಹಾತ್ಮ ಗಾಂಧಿ ಅವರ ರಕ್ತ ಹರಾಜಿಗೆ!
ಲಂಡನ್: ಲಂಡನ್ ಮೂಲದ ಜಾಗತಿಕ ಹರಾಜು ಸಂಸ್ಥೆ ಮುಲ್ಲೊಕ್ಸ್ ಮಂಗಳವಾರ ಮಹಾತ್ಮ ಗಾಂಧಿ ಅವರಿಗೆ ಸಂಬಂಧಪಟ್ಟಿರುವ ಕೆಲವು ಮಹತ್ವದ ವಸ್ತುಗಳನ್ನು ಹರಾಜು ಹಾಕಲಿದ್ದು, ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಒಂದಾ ಈ...
ಭಾರತ-ಚೀನಾ ಗಡಿ ವಿವಾದದ ಮಾತುಕತೆ ಯಶಸ್ವಿ
ಹೊಸದಿಲ್ಲಿ: ಅತ್ಯಂತ ಮಹತ್ವದ ಭಾರತ ಮತ್ತು ಚೀನಾ ಗಡಿ ವಿವಾದ ಸಹಿತ ಹಲವಾರು ವಿಷಯಗಳ ಚರ್ಚೆ ಯಶಸ್ವಿಯಾಗಿದೆ ಎಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಸೋಮವಾರ ಹೇಳಿದರು.
ಖಾತೆಗಳ ಹಂಚಿಕೆ: ಪ್ರಮುಖ ಖಾತೆಗಳ ಜವಾಬ್ದಾರಿ ಹೊತ್ತುಕೊಂಡ ಸಿಎಂ
ಬೆಂಗಳೂರು: ಸಚಿವರು ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಹಂಚಿಕೆಯಾಗಬೇಕಿದ್ದ ಖಾತೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಹಂಚಿಕೆ ಮಾಡಿದ್ದು, ಪ್ರಮುಖ ಖಾತೆಗಳಾದ ಇಂಧನ ಹಾಗೂ ಹಣಕಾಸು....
29ರಿಂದ ವಿಧಾನ ಮಂಡಲ ಅಧಿವೇಶನ
ಬೆಂಗಳೂರು: ಮೇ 29 ರಿಂದ ವಿಧಾನ ಮಂಡಲದ ಅಧಿವೇಶನವನ್ನು ನಡೆಸಲು ನಿರ್ಧರಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೇ 31 ರಂದು ಸ್ಪೀಕರ್ ಸ್ಥಾನಕ್ಕೆ...
ಭ್ರಷ್ಟಾಚಾರಕ್ಕೆ ಅವಕಾಶ ನೀಡದಂತೆ ಸಚಿವರಿಗೆ ಸಿಎಂ ಕರೆ
ಬೆಂಗಳೂರು: ಭ್ರಷ್ಟಾಚಾರ ನಡೆಸಿದ ಸರ್ಕಾರವನ್ನು ಹೊರಗಿಟ್ಟು ಕಾಂಗ್ರೆಸ್ ಗೆ ಜನ ಅವಕಾಶ ಮಾಡಿಕೊಟ್ಟಿದ್ದಾರೆ. ಆದ್ದರಿಂದ ಭ್ರಷ್ಟಾಚಾರಕ್ಕೆ ಅವಕಾಶ ನೀಡದೆ ಕಾನೂನು ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ...
ಖಾದರ್, ರೈ, ಜೈನ್, ಸೊರಕೆ ಸಹಿತ ಸಚಿವರ ಪ್ರಮಾಣವಚನ
ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ನೂತನ ಸಚಿವರುಗಳು ಶನಿವಾರ ರಾಜ್ಯಪಾಲರ ಭವನದ ಗಾಜಿನಮನೆಯಲ್ಲಿ ನಡೆದ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಆತ ರಕ್ಷಿಸಿದ ಮಗು ಬದುಕುಳಿಯಲಿಲ್ಲವೆಂದು ಬಿಕ್ಕಿಬಿಕ್ಕಿ ಅತ್ತಿದ್ದ...!
ದೇಶದ ಇತಿಹಾಸದಲ್ಲಿಯೇ ಭೀಕರ ದುರಂತವಾದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತಕ್ಕೆ ಇಂದಿಗೆ(ಮೇ 22) ಮೂರು ವರ್ಷಗಳು ತುಂಬುತ್ತಿದೆ. 2010ರ ಮೇ 22 ರಂದು ಬೆಳಗ್ಗೆ 6.05ರ...
ಮಾಯಾಲೋಕದ ಅಪೂರ್ವ ಬಾಲೆ...!
ಹ್ಯಾಟ್ ತಲೆಗೇರಿಸಿ, ಕೈಯಲ್ಲೊಂದು ಮಂತ್ರದಂಡ ಹಿಡಿದುಕೊಂಡು ಸ್ಟೇಜ್ ಏರಿದಳೆಂದರೆ ಎದುರು ಕುಳಿತವರು ಕಣ್ ಕಣ್ ಬಿಟ್ಟು ನೋಡುತ್ತಲೇ ಇರಬೇಕೆನ್ನುವ ಮಯಾ ಲೋಕವೇ ಸೃಷ್ಟಿಯಾಗಿಬಿಡುತ್ತದೆ. ಈ ಮಾಯಾಲೋಕದ...
ಚೊಚ್ಚಲ ಚಿತ್ರದಲ್ಲೇ ಕೇಳುಗರ ಮೋಡಿ ಮಾಡಿದ ಸಂಗೀತ ನಿರ್ದೇಶಕ ವಿಜೇತ್
ಕಳೆದ ಸಂಚಿಕೆಯಲ್ಲಿ ಸರ್ಜಾ ಕುಟುಂಬದಿಂದ ಚಿತ್ರರಂಗಕ್ಕೆ ನಟನಾಗಿ ಪ್ರವೇಶ ಮಾಡ್ತಾ ಇರೋ ಭರತ್ ಸರ್ಜಾ ರವರ ಬಗ್ಗೆ ಪರಿಚಯ ಮಾಡಿಸಲಾಯ್ತು. ಈ ಬಾರಿ ಸರ್ಜಾ ಕುಟುಂಬದ ಮತ್ತೊಬ್ಬನ ಪರಿಚಯ. ಆತ ಚಿತ್ರರಂಗವನ್ನು ಕಾಲಿಟ್ಟಿರುವುದು...
ಪ್ರಯೋಗ ಶೀಲ ಕಲಾವಿದನ ಕಲ್ಪನೆಯಲ್ಲಿ ಮೂಡಿದ ಕಾಗದ ಭಿತ್ತಿ ಶಿಲ್ಪಗಳು
ಆಧುನಿಕತೆ ಬೆಳೆದಂತೆಲ್ಲ ಕಲೆಯು ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಲಿದೆ. ಪ್ರಸುತ್ತ ಸಂದರ್ಭದಲ್ಲಿ ಕಲಾವಿದ ತನ್ನದೇ ಆದ ಮಾಧ್ಯಮದಿಂದ ಕಲಾಕೃತಿಗಳನ್ನು ರಚಿಸುತ್ತ ತನ್ನ ಕಲ್ಪನೆಯನ್ನು ಅಭಿವ್ಯಕ್ತಿಸಲು ವಿಭಿನ್ನ ಮಾರ್ಗವನ್ನು ಕಂಡುಕೊಳ್ಳುತ್ತಿದ್ದಾನೆ.
ಮ್ಯಾಜಿಕ್ ಕಲೆಯ ಸಾಗರ ಈ ಸಾಗರ್...!
ಮ್ಯಾಜಿಕ್ ನೊಂದಿಗೆ ಕೆಲವು ಅಪಾಯಕಾರಿ ಸ್ಟಂಟ್ ಗಳನ್ನು ಮಾಡುವ ಸಾಗರ್ ಗೆ ಮನೆಯೇ ಮೊದಲ ಪ್ರಯೋಗ ಶಾಲೆ. ಚಾಪರ್ ಬ್ಲೇಡ್ ನ ಹರಿತವಾದ ಭಾಗದ ಮೇಲೆ ನಡೆದಾಡುವ ಸಾಗರ್, ಪ್ರೇಕ್ಷಕರನ್ನು ನಿಬ್ಬೆರಗಾಗುವಂತೆ ಮಾಡುವುದಲ್ಲದೆ...
ಶಿಕ್ಷಣ ವ್ಯವಸ್ಥೆಗೇ ಸವಾಲೆಸೆಯುತ್ತಿರುವ ಸ್ವರೂಪ
ಚಿತ್ರಕಲೆ ಮೂಲಕ ಸಾಧಾರಣಾ ವಿದ್ಯಾರ್ಥಿಯೊಬ್ಬ ಹೆಚ್ಚಿನ ಅಂಕ ಪಡೆಯಲು ಸಾಧ್ಯವೇ? ದಡ್ಡನೆಂದು ಬೈದು ಶಾಲೆಯಿಂದ ಹೊರದಬ್ಬಲ್ಪಟ್ಟ ವಿದ್ಯಾರ್ಥಿ ಕೇವಲ 20 ದಿನಗಳ ತರಬೇತಿಯ ಮೂಲಕ ಡಿಸ್ಟಿಂಕ್ಷನ್ ಪಡೆಯಲು ಸಾಧ್ಯವೇ? ಡ್ಯಾನ್ಸ್ ಮಾಡಿ ಗಣಿತ-ವಿಜ್ಞಾನದಲ್ಲಿ...ವಿಶೇಷ
ಕುಟುಂಬವೆಂಬ ವಟವೃಕ್ಷದ ಕೆಳಗೆ...
ಮೇ 15 ವಿಶ್ವ ಅಂತರರಾಷ್ಟ್ರೀಯ ಕುಟುಂಬ ದಿನ, ಸತ್ಸಂಪ್ರದಾಯದಲ್ಲಿ ವಿಶ್ವಕ್ಕೆ ಮಾದರಿಯಾದ ಭಾರತದ ಕುಟುಂಬ ಪದ್ಧತಿಯಲ್ಲಿ ಆತಂಕಕಾರಿಯಲ್ಲದಿದ್ದರೂ ಅಲ್ಪಪ್ರಮಾಣದ ಪಾಶ್ಚಾತ್ಯರ ಅನುಕರಣೆಯಾಗುತ್ತಿರುವುದು ಅಸಹನೀಯವೇ.
ಇತಿಹಾಸದ ಕಥೆ ಹೇಳುತ್ತಿದೆ ಮಡಿಕೇರಿ ಅರಮನೆ
ಕೊಡಗಿನ ಮುಖ್ಯ ಪಟ್ಟಣ ಮಡಿಕೇರಿಗೆ ಆಗಮಿಸುವ ಪ್ರವಾಸಿಗರನ್ನು ಎತ್ತರದ ಸಮತಟ್ಟಾದ ಸ್ಥಳದಲ್ಲಿ ಕಲ್ಲುಕೋಟೆ ನಡುವೆ ನೆಲೆನಿಂತ ಅರಮನೆ ಗಮನಸೆಳೆಯುತ್ತದೆ. ಈ ಅರಮನೆ ಮೈಸೂರು ಅರಮನೆಯಂತೆ ವಿಶ್ವವಿಖ್ಯಾತಿ ಪಡೆಯದಿರಬಹುದು.
ಸ್ತ್ರೀಯರ ಮಹತ್ವದ ದಿನ ಅಕ್ಷಯ ತೃತೀಯಾ....
ಅಕ್ಷಯ ತದಿಗೆ ಸ್ತ್ರೀಯರಿಗೆ ಮಹತ್ವದ್ದಾಗಿದೆ. ಸ್ತ್ರೀಯರು ಚೈತ್ರದಲ್ಲಿ ಕೂರಿಸಿದ ಚೈತ್ರ ಗೌರಿಯನ್ನು ಈ ದಿನ ವಿಸರ್ಜನೆ ಮಾಡುತ್ತಾರೆ. ಇದರ ಪ್ರಯುಕ್ತ ಅರಿಶಿನ-ಕುಂಕುಮ ನೀಡುವ ಕಾರ್ಯಕ್ರಮವನ್ನೂ ಮಾಡುತ್ತಾರೆ.
ಅಮ್ಮಾ ಜಸ್ಟ್ ಫ್ರೆಂಡ್ ಅಲ್ಲ, ಬೆಸ್ಟ್ ಫ್ರೆಂಡ್!
ಅಮ್ಮಾ ನಿನ್ನ ತೋಳಿನಲ್ಲಿ ಕಂದ ನಾನು... ನಿನ್ನಾ ಸಂಗ ಆಡಲೆಂದು ಬಂದೆ ನಾನು... ಪದ್ಯದ ಸಾಲುಗಳಲ್ಲಿ ಅಮ್ಮಾ... ಅನ್ನೋ ಪದವನ್ನು ಕೇಳಿದಾಗ ಹೆತ್ತು, ಹೊತ್ತು, ಸಾಕಿ ಸಲಹಿದ ಅಮ್ಮನನ್ನು ನೆನೆಸಿಕೊಳ್ಳದವರು ಇರಲಿಕ್ಕಿಲ್ಲ.

Write Your Comment Here...