ಅಸ್ಸಾಂ ಹಿಂಸಾಚಾರದ ಹಿಂದೆ ವಿದೇಶಿ ಕೈವಾಡ: ಕೇಂದ್ರ ಶಂಕೆ
[Updated 07/08/2012 11:27 am]ಹೊಸದಿಲ್ಲಿ: ಅಸ್ಸಾಂನಲ್ಲಿ ನಡೆದ ಜನಾಂಗೀಯ ಹಿಂಸಾಚಾರದ ಹಿಂದೆ ವಿದೇಶಿ ಶಕ್ತಿಗಳ ಕೈವಾಡವಿದೆ ಎಂದು ಕೇಂದ್ರ ಸರಕಾರ ಹೇಳಿದ್ದು, ಅಂತಹ ಶಕ್ತಿಗಳನ್ನು ಬೇಟೆಯಾಡುವುದಾಗಿ ಘೋಷಿಸಿದೆ. ಅಸ್ಸಾಂ ಸರಕಾರ ಕೂಡ ಹಿಂಸಾಚಾರದ ತನಿಖೆಯನ್ನು ಸಿಬಿಐಗೆ ಒಪ್ಪಿಸುವ ನಿರೀಕ್ಷೆಯಿದೆ.
ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ. ಹಿಂಸಾಚಾರದಲ್ಲಿ ವಿದೇಶಿ ಶಕ್ತಿಗಳ ಕೈವಾಡವಿರುವ ಶಂಕೆ ಬಲವಾಗಿದೆ ಎಂದು ಕೇಂದ್ರ ಗೃಹ ಕಾರ್ಯದರ್ಶಿ ಆರ್.ಕೆ ಸಿಂಗ್ ತಿಳಿಸಿದರು. ಆದರೆ ಆ ವಿದೇಶಿ ಶಕ್ತಿಗಳು ಯಾವುವು ಎಂಬುದನ್ನು ಅವರು ಸ್ಪಷ್ಟಪಡಿಸಲಿಲ್ಲ.
ಕಳೆದ 15 ದಿನಗಳಿಂದ ಹಿಂಸೆಯಲ್ಲಿ ತೊಡಗಿರುವ ಜನರಿಗೆ ನೆರೆಯ ಬಾಂಗ್ಲಾದೇಶದ ಸಂಪರ್ಕ ಬಲವಾಗಿದೆ. ಆದರೆ ಗಡಿಯುದ್ದಕ್ಕೂ ಕಟ್ಟೆಚ್ಚರದ ಕಾವಲು ಇರುವುದರಿಂದ ಹಾಗೂ ಅಂತಾರಾಷ್ಟ್ರೀಯ ಗಡಿಗಳನ್ನು ಮುಚ್ಚಿರುವುದರಿಂದ ವಿದೇಶದ ಸಂಘಟಿತ ಗುಂಪುಗಳು ಇಷ್ಟೊಂದು ವ್ಯವಸ್ಥಿತ ಹಿಂಸಾಕೃತ್ಯಗಳಲ್ಲಿ ತೊಡಗುವುದು ಸುಲಭವಲ್ಲ ಎಂಬುದು ಆರ್.ಕೆ ಸಿಂಗ್ ಹೇಳಿಕೆ.
ರಾಜ್ಯ ಹಾಗೂ ಕೇಂದ್ರ ಸರಕಾರಗಳು ಜನರ ಸಹಕಾರದೊಂದಿಗೆ ಇದರ ಹಿಂದಿನ ಶಕ್ತಿಗಳನ್ನು ಪತ್ತೆಹಚ್ಚಿ ಬಗ್ಗುಬಡಿಯಲು ಬದ್ಧವಾಗಿವೆ ಎಂದವರು ತಿಳಿಸಿದರು.
ಕಳೆದ ಎರಡು ದಿನಗಳಿಂದ ಬೋಡೋಲ್ಯಾಂಡ್ ಪ್ರಾದೇಶಿಕ ಆಡಳಿತದ ಜಿಲ್ಲೆಗಳಲ್ಲಿ (ಬಿಟಿಎಡಿ) ಎರಡು ಸಮುದಾಯಗಳ ಮಧ್ಯೆ ಮತ್ತೆ ಹಿಂಸಾಚಾರ ನಡೆದಿದೆ. ಚಿರಂಗ್ ಜಿಲ್ಲೆಯಲ್ಲಿ ನಿನ್ನೆ ಐದು ಶವಗಳು ಪತ್ತೆಯಾಗಿದ್ದು, ಪುನಃ ಅನಿರ್ದಿಷ್ಟಾವಧಿ ಕರ್ಫ್ಯೂ ಹೇರಲಾಗಿದೆ. ಬಸ್ಕಾ, ಧುಬ್ರಿ, ಕೊಕ್ರಝಾರ್ ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ ಮುಂದುವರಿಸಲಾಗಿದೆ.
ಇದುವರೆಗೆ ಹಿಂಸಾಚಾರದಲ್ಲಿ 61 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 5.02 ಲಕ್ಷ ಮಂದಿ ನಿರಾಶ್ರಿತರಾಗಿದ್ದಾರೆ.
External elements behind Assam violence: Govt
New Delhi: The Centre on Monday said external elements were behind the ethnic clashes between Bodos and minorities in Assam and vowed to hunt down those responsible for it.
ಉಗ್ರ ಸಂಘಟನೆಗೆ ಪಾಕ್ ಸರ್ಕಾರದ ಅನುದಾನ
ಲಾಹೋರ್: 2008ರ ಮುಂಬಯಿ ಸ್ಪೋಟದಲ್ಲಿ ಭಾಗಿಯಾಗಿರುವ ನಿಷೇಧಿತ ಲಷ್ಕರ್-ಎ-ತೊಯ್ಬಾದ ಅಂಗ ಸಂಸ್ಥೆಯಾಗಿರುವ ಜಮಾತ್ ಉದ್-ದವಾ(ಜೆಯುಡಿ)ಗೆ ಪಾಕಿಸ್ತಾನದ ಪಂಜಾಬ್ ಪ್ರಾಂತೀಯ ಸರ್ಕಾರವು
ಡಿಎಸ್ ಪಿ ಕಾರು ಅವಘಡಕ್ಕೆ ಪಾದಚಾರಿಗಳ ಸಹಿತ ಐವರು ಬಲಿ
ಪುಣೆ: ಸೋಮವಾರ ಸಂಜೆ ಉಪ ಪೊಲೀಸ್ ಆಯುಕ್ತರೊಬ್ಬರು ತನ್ನ ಕಾರಿನ ನಿಯಂತ್ರಣ ಕಳಕೊಂಡು ಪಾದಚಾರಿಗಳಿಗೆ ಡಿಕ್ಕಿ ಹೊಡೆದಿದ್ದು, ಈ ದುರ್ಘಟನೆಯಲ್ಲಿ ಐದು ಮಂದಿ ಸಾವನ್ನಪ್ಪಿದ್ದಾರೆ.
ಬಿಹಾರದ ಜೆಡಿಯು ಸರ್ಕಾರ ಭದ್ರ
ಪಟ್ನಾ: ಬಿಜೆಪಿಯೊಂದಿಗಿನ ಮೈತ್ರಿ ಕಡಿದುಕೊಂಡ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಸರ್ಕಾರ ಬುಧವಾದ ವಿಶ್ವಾಸಮತ ಗೆದ್ದುಕೊಂಡಿದೆ. ಬಿಜೆಪಿ ವಿಶ್ವಾಸಮತ ಯಾಚನೆ ವಿರುದ್ಧ
ಕೊನೆಗೂ ಕೇರಳ ಸಿಎಂಗೆ ಕೈಗೆ ಮೊಬೈಲ್!
ತಿರುವನಂತಪುರಂ: ತುಂಬಾ ಸರಳ ಜೀವಿಯಾಗಿರುವ ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂದಿ ಅವರು ಸದ್ಯದಲ್ಲೇ ಮೊಬೈಲ್ ಫೋನ್ ಖರೀದಿ ಮಾಡಲಿದ್ದಾರಂತೆ. ಚಾಂದಿ ಅವರ ಬಳಿಯಲ್ಲಿ ಸ್ವಂತ ಮೊಬೈಲ್ ಇಲ್ಲದಿದ್ದ ಕಾರಣ
ಬೆಳ್ಳಿತೆರೆಯಲ್ಲೂ ಮಿಂಚಲು ರೆಡಿ: ಅನುಶ್ರೀ
ಕನ್ನಡ ಚಿತ್ರರಂಗ ಮತ್ತು ಕಿರುತೆರೆಗೆ ಯಾವತ್ತೂ ಅವಿನಾಭಾವ ಸಂಬಂಧ. ಒಂದು ಕಡೆ ಕನ್ನಡ ಚಿತ್ರರಂಗ, ಕನ್ನಡ ಚಿತ್ರಗಳಿಗೆ ಪ್ರೇಕ್ಷಕರಿಲ್ಲ, ಚಿತ್ರಗಳು ಓಡುತ್ತಿಲ್ಲ ಎಂದು ಕೂಗುತ್ತಿದ್ದರೆ, ಇನ್ನೊಂದೆಡೆ ಕನ್ನಡ ಕಿರುತೆರೆ...
ಕೊಡಗಿನ ಮಳೆಗಾಲದ ಸುಂದರಿ ಡೇಲಿಯಾ
ಮುಂಗಾರು ಮಳೆ ಸುರಿದಾಗ ಮನೆಮುಂದಿನ ಹೂತೋಟದಲ್ಲಿ ಸುಪ್ತವಾಗಿದ್ದ ಡೆಲೀಯಾ ಗೆಡ್ಡೆಗಳು ಮೊಳಕೆಯೊಡೆದು ಗಿಡಗಳಾಗಿ ವಿವಿಧ ಆಕಾರ, ಬಣ್ಣಗಳಲ್ಲಿ ಗೊಂಚಲುಗೊಂಚಲಾಗಿ ಹೂಬಿಟ್ಟು ಕಂಗೊಳಿಸುತ್ತವೆ.

Write Your Comment Here...