ಆಟೊಮೊಬೈಲ್ ಕ್ಷೇತ್ರದಲ್ಲಿ ಎಸ್ಯುವಿ ಹವಾ
[Updated 14/09/2012 02:16 pm]ಆಟೊಮೊಬೈಲ್ ಕ್ಷೇತ್ರದಲ್ಲೂ ಎಸ್ಯುವಿ (ಸ್ಪೋರ್ಟ್ಸ್ ಯೂಟಿಲಿಟಿ ವೆಹಿಕಲ್) ಹವಾ ಜೋರಾಗಿ ಬೀಸುತ್ತಿದೆ. ಡಸ್ಟರ್, ಎಕ್ಸ್ಯುವಿ500 ಮತ್ತು ಎರ್ಟಿಗಾದಂಥ ಎಸ್ಯುವಿಗಳಿಗಂತೂ ಬಿಸಿ ಬಿಸಿ ಕೇಕ್ ನ ಬೇಡಿಕೆ.
ಪ್ರಸಕ್ತ ವರ್ಷದಲ್ಲಿ ಒಟ್ಟಾರೆ ಪ್ಯಾಸೆಂಜರ್ ವೆಹಿಕಲ್ ವಿಭಾಗದಲ್ಲಿ ಬಹು ಬಳಕೆ ವಾಹನಗಳ (ಎಂಯುವಿ) ಕೊಡುಗೆ ಶೇ.13-14 ಇದೆ. ಮುಂದಿನ ಕೆಲವು ವರ್ಷಗಳಲ್ಲಿ ಶೇ.20ರಷ್ಟು ಸಿಎಜಿಆರ್ ದರದಲ್ಲಿ ಬೆಳವಣಿಗೆ ಕಾಣಲಿದೆ ಎಂದಿದ್ದಾರೆ ತಜ್ಞರು. ಯಾವಾಗ ಯುಟಿಲಿಟಿ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ ಎಂದು ಗೊತ್ತಾಯಿತೋ ಆಟೊಮೊಬೈಲ್ ಕಂಪನಿಗಳು ಅಂದಿನಿಂದಲೇ ತಮ್ಮ ಉತ್ಪಾದನೆ ಸಾಮರ್ಥ್ಯವನ್ನು ಪೂರ್ಣಪ್ರಮಾಣಕ್ಕೆ (ಶೇ.100)ಹೆಚ್ಚಿಸಲು ಶತಪ್ರಯತ್ನ ಮಾಡಲಾರಂಭಿಸಿವೆ. ಮಹೀಂದ್ರ ಕಂಪನಿಯ ಎಕ್ಸ್ಯುವಿ500, ಮಾರುತಿ ಸುಜುಕಿಯ ಎರ್ಟಿಗಾ ಮತ್ತು ರೆನಾಲ್ಟ್ ಕಂಪನಿಯ ಡಸ್ಟರ್ ಎಸ್ಯುವಿಗಳಿಗೆ ಸಿಗುತ್ತಿರುವ ಮನ್ನಣೆ ನೋಡಿದರೆ ಇತರ ಬೃಹತ್ ವಾಹನ ಕಂಪನಿಗಳು ದಂಗಾಗಿವೆ.
ಫ್ರಾನ್ಸ್ ಮೂಲದ ರೆನಾಲ್ಟ್ ತನ್ನ ಕಾಂಪ್ಯಾಕ್ಟ್ ಎಸ್ಯುವಿ ಡಸ್ಟರ್ ನ ಉತ್ಪಾದನೆಯನ್ನು ದ್ವಿಗುಣಗೊಳಿಸಲು ಉದ್ದೇಶಿಸಿದರೆ, ಮಹೀಂದ್ರ ಅಂಡ್ ಮಹೀಂದ್ರ ಎಕ್ಸ್ಯುವಿ ಉತ್ಪಾದನೆಯನ್ನು ಶೇ.25ರಷ್ಟು ಹೆಚ್ಚಿಸಿದೆ. ಮಾರುತಿ ಕೂಡ ಎರ್ಟಿಗಾ ಉತ್ಪಾದನೆಯನ್ನು ದುಪ್ಪಟ್ಟುಗೊಳಿಸಲು ಪ್ರಯತ್ನಿಸುತ್ತಿದೆ. ದಿನಕ್ಕೆ 140-150 ಎರ್ಟಿಗಾ ಉತ್ಪಾದನೆ ಮಾಡುತ್ತಿದ್ದ ಮಾರುತಿ ಸುಜುಕಿ ಇದೀಗ 270 ಯೂನಿಟ್ ಗಳನ್ನು ಉತ್ಪಾದಿಸುತ್ತಿದೆ. ಈಗಾಗಲೇ 32,000 ವಾಹನಗಳಿಗೆ ಮುಂಗಡ ಕಾದಿರಿಸುವಿಕೆಯಾಗಿರುವುದರಿಂದ ಕಾಯುವ ಅವಧಿ 3 ರಿಂದ 7 ತಿಂಗಳವರೆಗೆ ವಿಸ್ತರಿಸಿದೆ.ಡಸ್ಟರ್ ಗೆ 16,000, ಎಕ್ಸ್ಯುವಿಗೆ 15,000 ಬುಕ್ಕಿಂಗ್ ಆಗಿದೆ.
ಸಾಮಾಜಿಕ ತಾಣದ ಸರದಿಗೆ ಯಾಹೂ ಸೇರ್ಪಡೆ
ಹೊಸದಿಲ್ಲಿ: ಯಾಹೂ 1.1 ಬಿಲಿಯನ್ ಡಾಲರ್ ಗೆ ಟಂಬ್ಲರ್ ನ್ನು ಖರೀದಿಸಲಿದೆ ಎಂದು ತಿಳಿದುಬಂದಿದೆ. ಟಂಬ್ಲರ್ ಖರೀದಿಸಿ ಯಾಹೂ ಕೂಡ ಸಾಮಾಜಿಕ ತಾಣಕ್ಕೆ
ಸ್ಯಾಮ್ ಸಂಗ್ ನಿಂದ 5ಜಿ ಸಂಶೋಧನೆ
ಹೊಸದಿಲ್ಲಿ: ಸ್ಯಾಮ್ ಸಂಗ್ ಕಂಪನಿ ಐದನೇ ಜನರೇಷನ್ 5ಜಿಯನ್ನು ಕಂಡುಹಿಡಿದಿದ್ದು, ಇದರಿಂದ ಡೆಟಾ ವರ್ಗಾವಣೆ ತುಂಬಾ ಸರಳವಾಗಲಿದೆ ಎಂದು ಅದು ಹೇಳಿದೆ. 5ಜಿಯಿಂದ ಹೆಚ್ಚಿನ ಡೆಟಾವನ್ನು ಸರಳ ಹಾಗು ವೇಗವಾಗಿ
ಸೋನಿ ಎಕ್ಸ್ ಪಿರಿಯಾ zrನಲ್ಲಿ ನೀರಿನೊಳಗೂ ಫೋಟೊ ತೆಗೆಯಬಹುದು!
ಹೊಸದಿಲ್ಲಿ: ಸೋನಿ ಕಂಪನಿ ಹೊಸ ಸ್ಮಾರ್ಟ್ ಫೋನ್ ನ್ನು ತಯಾರಿಸಿದ್ದು, ಇದು ನೀರಿನ ಒಳಗೆ ಫೋಟೊ ಮತ್ತು ವೀಡಿಯೋ ತೆಗೆಯಬಹುದಾಗಿದೆ.
ಸ್ಯಾಮ್ಸಂಗ್ ನಿಂದ 16 ಮೆಗಾಪಿಕ್ಸಲ್ ಕ್ಯಾಮರಾವುಳ್ಳ ಸ್ಮಾರ್ಟ್ ಫೋನ್
ಹೊಸದಿಲ್ಲಿ: ಸ್ಯಾಮ್ಸಂಗ್ ಕ್ಯಾಮಾರಾಕ್ಕೆ ಹೆಚ್ಚಿನ ಆದ್ಯತೆ ನೀಡುವ ಹೊಸ ಮೊಬೈಲ್ ನ್ನು ಬಿಡುಗಡೆ ಮಾಡಲಿದೆ ಎಂದು ವರದಿಗಳು ಹೇಳಿವೆ.
ಅಡೊಬ್ ಸಾಫ್ಟ್ ವೇರ್ ಬಳಕೆಗೆ ತಿಂಗಳ ಶುಲ್ಕ
ಲಂಡನ್: ಅಡೊಬ್ ಕ್ರಿಯೇಟಿವ್ ಸೂಟ್ ಸಾಫ್ಟ್ ವೇರ್ ಬಳಸುವುದನ್ನು ಮುಂದುವರಿಸಬೇಕಾದರೆ ಹೊಸ ತಿಂಗಳ ಶುಲ್ಕವನ್ನು ಇನ್ನು ಮುಂದೆ ಕಟ್ಟಬೇಕಾಗುತ್ತದೆ.
ಮುಖದ ಅಂದ ಹೆಚ್ಚಿಸುವ ಆ್ಯಪ್!
ವೆಲ್ಲಿಂಗ್ಟನ್: ಪಿಕ್ಸ್ಟ್ರಾ ಎನ್ನುವ ಹೊಸ ಆ್ಯಪ್ ನಿಮ್ಮ ಮುಖ ಹೇಗೆ ಇದ್ದರೂ ಅದನ್ನು ಚಂದಗಾನಿಸುವಂತೆ ಮಾಡಿಸುತ್ತದೆ.
ಎರಡೇ ವಾರದಲ್ಲಿ ಐದು ಲಕ್ಷ ಫೇಸ್ ಬುಕ್ ಹೋಮ್ ಆ್ಯಪ್ ಡೌನ್ ಲೋಡ್
ವಾಷಿಂಗ್ಟನ್: ಆಂಡ್ರಾಯ್ಡ್ ಫೋನ್ ಗಳಿಗಾಗಿ ಅಭಿವೃದ್ಧಿಪಡಿಸಲಾದ ಫೇಸ್ ಬುಕ್ ನ ಹೊಸ ಹೋಮ್ ಆ್ಯಪ್ ಸುಮಾರು ಐದು ಲಕ್ಷದಷ್ಟು ಬಾರಿ ಡೌನ್ ಲೋಡ್ ಆಗಿದೆ ಎಂದು ಮೂಲಗಳು ಹೇಳಿವೆ.
ಐಡಿಯಾದಿಂದ ಕಡಿಮೆ ಬೆಲೆಯ ಸ್ಮಾರ್ಟ್ ಪೋನ್ ಮಾರುಕಟ್ಟೆಗೆ
ಹೊಸದಿಲ್ಲಿ: ಐಡಿಯಾ ಸೆಲ್ಯೂಲರ್ ಆಂಡ್ರಾಯ್ಡ್ ಜೆಲ್ಲಿ ಬೀನ್ಸ್ 3ಜಿ ಸ್ಮಾರ್ಟ್ ಪೋನ್ ಔರಸ್-2ನ್ನು ಬಿಡುಗಡೆ ಮಾಡಿದೆ.
2020ರ ವೇಳೆಗೆ ಭೂಮಿ ಮೇಲಿನ ಪ್ರತಿಯೊಬ್ಬರಲ್ಲೂ ಇಂಟರ್ನೆಟ್
ವಾಷಿಂಗ್ಟನ್: ಮುಂದಿನ ಏಳು ವರ್ಷಗಳಲ್ಲಿ ಸಂಪೂರ್ಣ ವಿಶ್ವದಲ್ಲಿ ಪ್ರತಿಯೊಬ್ಬರು ಇಂಟರ್ನೆಟ್ ನಲ್ಲಿರುತ್ತಾರೆ ಎಂದು ಗೂಗಲ್ ನ ಕಾರ್ಯನಿರ್ವಾಹಕ ಕಾರ್ಯಾಧ್ಯಕ್ಷ ಎರಿಕ್ ಸ್ಮಿತ್ ತಿಳಿಸಿದ್ದಾರೆ.
ಚೀನಾದಲ್ಲಿ ಮೈಕ್ರೋಸಾಫ್ಟ್ ಸಂಶೋಧನಾ ಕೇಂದ್ರ
ಬೀಜಿಂಗ್: ದಕ್ಷಿಣ ಚೀನಾದ ಹೈನಾನ್ ಪ್ರದೇಶದಲ್ಲಿ ಮೈಕ್ರೋಸಾಫ್ಟ್ ಹೊಸ ಸಂಶೋಧನಾ ಕೇಂದ್ರವನ್ನು ತೆರೆಯಲಿದೆ ಎಂದು ವರದಿಯಾಗಿದೆ.
ಅಗ್ಗದ ಮದ್ಯ ಮಾರಾಟ ಮಾಡಿದರೆ ಪ್ರತಿಭಟನೆ
ಬೆಂಗಳೂರು: ಮತ್ತೆ ರಾಜ್ಯದಲ್ಲಿ ಅಗ್ಗದ ಮದ್ಯ ಮಾರಾಟ ಮಾಡಲು ಸರ್ಕಾರ ಮುಂದಾದರೆ ರಾಜ್ಯದಾದ್ಯಂತ ಉಗ್ರ ಪ್ರತಿಭಟನೆ ನಡೆಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ಎಚ್ಚರಿಕೆ ನೀಡಿದ್ದಾರೆ.
ಅದೃಷ್ಟದ ಕೊಠಡಿಗಾಗಿ ಸಚಿವರ ಕಿತ್ತಾಟ
ಬೆಂಗಳೂರು: ಹೋರಾಟದ ಮೂಲಕ ಸಚಿವ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಂಡ ಸಚಿವರು ಇದೀಗ ವಿಧಾನಸೌಧದಲ್ಲಿ ತಮ್ಮ ಅದೃಷ್ಟದ ಕಚೇರಿ ಮತ್ತು ಬಂಗಲೆಗಾಗಿ ಕಿತ್ತಾಟ ಆರಂಭಿಸಿದ್ದಾರೆ.
ಮಹಾತ್ಮ ಗಾಂಧಿ ಅವರ ರಕ್ತ ಹರಾಜಿಗೆ!
ಲಂಡನ್: ಲಂಡನ್ ಮೂಲದ ಜಾಗತಿಕ ಹರಾಜು ಸಂಸ್ಥೆ ಮುಲ್ಲೊಕ್ಸ್ ಮಂಗಳವಾರ ಮಹಾತ್ಮ ಗಾಂಧಿ ಅವರಿಗೆ ಸಂಬಂಧಪಟ್ಟಿರುವ ಕೆಲವು ಮಹತ್ವದ ವಸ್ತುಗಳನ್ನು ಹರಾಜು ಹಾಕಲಿದ್ದು, ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಒಂದಾ ಈ...
ಭಾರತ-ಚೀನಾ ಗಡಿ ವಿವಾದದ ಮಾತುಕತೆ ಯಶಸ್ವಿ
ಹೊಸದಿಲ್ಲಿ: ಅತ್ಯಂತ ಮಹತ್ವದ ಭಾರತ ಮತ್ತು ಚೀನಾ ಗಡಿ ವಿವಾದ ಸಹಿತ ಹಲವಾರು ವಿಷಯಗಳ ಚರ್ಚೆ ಯಶಸ್ವಿಯಾಗಿದೆ ಎಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಸೋಮವಾರ ಹೇಳಿದರು.
ಬಂಧನದ ವೇಳೆ ಮದ್ಯಪಾನ ಮಾಡಿದ್ದ ಶ್ರೀಶಾಂತ್
ಹೊಸದಿಲ್ಲಿ: ಸ್ಪಾಟ್ ಫಿಕ್ಸಿಂಗ್ ಮಾಡಿರುವ ರಾಜಸ್ಥಾನ ರಾಯಲ್ಸ್ ತಂಡದ ವೇಗಿ ಎಸ್. ಶ್ರೀಶಾಂತ್ ಬಂಧನದ ವೇಳೆ ಮದ್ಯಪಾನ ಮಾಡಿದ್ದು, ಯುವತಿಯರೊಂದಿಗೆ ಪಂಚತಾರಾ ಹೋಟೆಲ್ ನ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ಕಾರಿನಲ್ಲಿದ್ದ
ಖಾತೆಗಳ ಹಂಚಿಕೆ: ಪ್ರಮುಖ ಖಾತೆಗಳ ಜವಾಬ್ದಾರಿ ಹೊತ್ತುಕೊಂಡ ಸಿಎಂ
ಬೆಂಗಳೂರು: ಸಚಿವರು ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಹಂಚಿಕೆಯಾಗಬೇಕಿದ್ದ ಖಾತೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಹಂಚಿಕೆ ಮಾಡಿದ್ದು, ಪ್ರಮುಖ ಖಾತೆಗಳಾದ ಇಂಧನ ಹಾಗೂ ಹಣಕಾಸು....
29ರಿಂದ ವಿಧಾನ ಮಂಡಲ ಅಧಿವೇಶನ
ಬೆಂಗಳೂರು: ಮೇ 29 ರಿಂದ ವಿಧಾನ ಮಂಡಲದ ಅಧಿವೇಶನವನ್ನು ನಡೆಸಲು ನಿರ್ಧರಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೇ 31 ರಂದು ಸ್ಪೀಕರ್ ಸ್ಥಾನಕ್ಕೆ...
ಭ್ರಷ್ಟಾಚಾರಕ್ಕೆ ಅವಕಾಶ ನೀಡದಂತೆ ಸಚಿವರಿಗೆ ಸಿಎಂ ಕರೆ
ಬೆಂಗಳೂರು: ಭ್ರಷ್ಟಾಚಾರ ನಡೆಸಿದ ಸರ್ಕಾರವನ್ನು ಹೊರಗಿಟ್ಟು ಕಾಂಗ್ರೆಸ್ ಗೆ ಜನ ಅವಕಾಶ ಮಾಡಿಕೊಟ್ಟಿದ್ದಾರೆ. ಆದ್ದರಿಂದ ಭ್ರಷ್ಟಾಚಾರಕ್ಕೆ ಅವಕಾಶ ನೀಡದೆ ಕಾನೂನು ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ...
ಖಾದರ್, ರೈ, ಜೈನ್, ಸೊರಕೆ ಸಹಿತ ಸಚಿವರ ಪ್ರಮಾಣವಚನ
ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ನೂತನ ಸಚಿವರುಗಳು ಶನಿವಾರ ರಾಜ್ಯಪಾಲರ ಭವನದ ಗಾಜಿನಮನೆಯಲ್ಲಿ ನಡೆದ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಇಂದು ನೂತನ ಸಚಿವರ ಪ್ರಮಾಣ ವಚನ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸಚಿವ ಸಂಪುಟ ಇಂದು ಅಸ್ಥಿತ್ವಕ್ಕೆ ಬರಲಿದ್ದು, ಬೆಳಿಗ್ಗೆ 10.30ಕ್ಕೆ ರಾಜಭವನದಲ್ಲಿ ನಡೆಯುವ ಸರಳ ಸಮಾರಂಭದಲ್ಲಿ 29 ಮಂದಿ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಪ್ರಯೋಗ ಶೀಲ ಕಲಾವಿದನ ಕಲ್ಪನೆಯಲ್ಲಿ ಮೂಡಿದ ಕಾಗದ ಭಿತ್ತಿ ಶಿಲ್ಪಗಳು
ಆಧುನಿಕತೆ ಬೆಳೆದಂತೆಲ್ಲ ಕಲೆಯು ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಲಿದೆ. ಪ್ರಸುತ್ತ ಸಂದರ್ಭದಲ್ಲಿ ಕಲಾವಿದ ತನ್ನದೇ ಆದ ಮಾಧ್ಯಮದಿಂದ ಕಲಾಕೃತಿಗಳನ್ನು ರಚಿಸುತ್ತ ತನ್ನ ಕಲ್ಪನೆಯನ್ನು ಅಭಿವ್ಯಕ್ತಿಸಲು ವಿಭಿನ್ನ ಮಾರ್ಗವನ್ನು ಕಂಡುಕೊಳ್ಳುತ್ತಿದ್ದಾನೆ.
ಮ್ಯಾಜಿಕ್ ಕಲೆಯ ಸಾಗರ ಈ ಸಾಗರ್...!
ಮ್ಯಾಜಿಕ್ ನೊಂದಿಗೆ ಕೆಲವು ಅಪಾಯಕಾರಿ ಸ್ಟಂಟ್ ಗಳನ್ನು ಮಾಡುವ ಸಾಗರ್ ಗೆ ಮನೆಯೇ ಮೊದಲ ಪ್ರಯೋಗ ಶಾಲೆ. ಚಾಪರ್ ಬ್ಲೇಡ್ ನ ಹರಿತವಾದ ಭಾಗದ ಮೇಲೆ ನಡೆದಾಡುವ ಸಾಗರ್, ಪ್ರೇಕ್ಷಕರನ್ನು ನಿಬ್ಬೆರಗಾಗುವಂತೆ ಮಾಡುವುದಲ್ಲದೆ...
ಶಿಕ್ಷಣ ವ್ಯವಸ್ಥೆಗೇ ಸವಾಲೆಸೆಯುತ್ತಿರುವ ಸ್ವರೂಪ
ಚಿತ್ರಕಲೆ ಮೂಲಕ ಸಾಧಾರಣಾ ವಿದ್ಯಾರ್ಥಿಯೊಬ್ಬ ಹೆಚ್ಚಿನ ಅಂಕ ಪಡೆಯಲು ಸಾಧ್ಯವೇ? ದಡ್ಡನೆಂದು ಬೈದು ಶಾಲೆಯಿಂದ ಹೊರದಬ್ಬಲ್ಪಟ್ಟ ವಿದ್ಯಾರ್ಥಿ ಕೇವಲ 20 ದಿನಗಳ ತರಬೇತಿಯ ಮೂಲಕ ಡಿಸ್ಟಿಂಕ್ಷನ್ ಪಡೆಯಲು ಸಾಧ್ಯವೇ? ಡ್ಯಾನ್ಸ್ ಮಾಡಿ ಗಣಿತ-ವಿಜ್ಞಾನದಲ್ಲಿ...ವಿಶೇಷ
ಕುಟುಂಬವೆಂಬ ವಟವೃಕ್ಷದ ಕೆಳಗೆ...
ಮೇ 15 ವಿಶ್ವ ಅಂತರರಾಷ್ಟ್ರೀಯ ಕುಟುಂಬ ದಿನ, ಸತ್ಸಂಪ್ರದಾಯದಲ್ಲಿ ವಿಶ್ವಕ್ಕೆ ಮಾದರಿಯಾದ ಭಾರತದ ಕುಟುಂಬ ಪದ್ಧತಿಯಲ್ಲಿ ಆತಂಕಕಾರಿಯಲ್ಲದಿದ್ದರೂ ಅಲ್ಪಪ್ರಮಾಣದ ಪಾಶ್ಚಾತ್ಯರ ಅನುಕರಣೆಯಾಗುತ್ತಿರುವುದು ಅಸಹನೀಯವೇ.
ಇತಿಹಾಸದ ಕಥೆ ಹೇಳುತ್ತಿದೆ ಮಡಿಕೇರಿ ಅರಮನೆ
ಕೊಡಗಿನ ಮುಖ್ಯ ಪಟ್ಟಣ ಮಡಿಕೇರಿಗೆ ಆಗಮಿಸುವ ಪ್ರವಾಸಿಗರನ್ನು ಎತ್ತರದ ಸಮತಟ್ಟಾದ ಸ್ಥಳದಲ್ಲಿ ಕಲ್ಲುಕೋಟೆ ನಡುವೆ ನೆಲೆನಿಂತ ಅರಮನೆ ಗಮನಸೆಳೆಯುತ್ತದೆ. ಈ ಅರಮನೆ ಮೈಸೂರು ಅರಮನೆಯಂತೆ ವಿಶ್ವವಿಖ್ಯಾತಿ ಪಡೆಯದಿರಬಹುದು.
ಸ್ತ್ರೀಯರ ಮಹತ್ವದ ದಿನ ಅಕ್ಷಯ ತೃತೀಯಾ....
ಅಕ್ಷಯ ತದಿಗೆ ಸ್ತ್ರೀಯರಿಗೆ ಮಹತ್ವದ್ದಾಗಿದೆ. ಸ್ತ್ರೀಯರು ಚೈತ್ರದಲ್ಲಿ ಕೂರಿಸಿದ ಚೈತ್ರ ಗೌರಿಯನ್ನು ಈ ದಿನ ವಿಸರ್ಜನೆ ಮಾಡುತ್ತಾರೆ. ಇದರ ಪ್ರಯುಕ್ತ ಅರಿಶಿನ-ಕುಂಕುಮ ನೀಡುವ ಕಾರ್ಯಕ್ರಮವನ್ನೂ ಮಾಡುತ್ತಾರೆ.
ಅಮ್ಮಾ ಜಸ್ಟ್ ಫ್ರೆಂಡ್ ಅಲ್ಲ, ಬೆಸ್ಟ್ ಫ್ರೆಂಡ್!
ಅಮ್ಮಾ ನಿನ್ನ ತೋಳಿನಲ್ಲಿ ಕಂದ ನಾನು... ನಿನ್ನಾ ಸಂಗ ಆಡಲೆಂದು ಬಂದೆ ನಾನು... ಪದ್ಯದ ಸಾಲುಗಳಲ್ಲಿ ಅಮ್ಮಾ... ಅನ್ನೋ ಪದವನ್ನು ಕೇಳಿದಾಗ ಹೆತ್ತು, ಹೊತ್ತು, ಸಾಕಿ ಸಲಹಿದ ಅಮ್ಮನನ್ನು ನೆನೆಸಿಕೊಳ್ಳದವರು ಇರಲಿಕ್ಕಿಲ್ಲ.
ಕೊಡಗಿನಲ್ಲಿ ಕಂಡ ಕಂಡವರನ್ನು ಬೈಯ್ಯೋ ಹಬ್ಬ...
ಇದೊಂದು ವಿಚಿತ್ರವಾದರೂ ವಿಶಿಷ್ಟ ಹಬ್ಬ. ಬಹುಶಃ ಇಂತಹವೊಂದು ಹಬ್ಬವನ್ನು ಕೊಡಗು ಹೊರತುಪಡಿಸಿದರೆ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಇಷ್ಟಕ್ಕೂ ಇದ್ಯಾವುದಪ್ಪಾ ಅಂತಹ ವಿಚಿತ್ರಹಬ್ಬ ಎಂಬ ಕುತೂಹಲ ಪ್ರತಿಯೊಬ್ಬರನ್ನು ಕಾಡದಿರದು.
ಸ್ಯಾಂಡಲ್ ವುಡ್ ನಲ್ಲಿ ಮತ್ತೊಬ್ಬ ಸರ್ಜಾ
ಕನ್ನಡದವರೇ ಆಗಿರುವ ತಮಿಳು, ತೆಲುಗು ಚಿತ್ರರಂಗದಲ್ಲಿ ವಿಶೇಷವಾಗಿ ಹೆಸರು ಮಾಡಿರುವ, ಬಹುಮುಖ್ಯವಾಗಿ ಈ ವರ್ಷ ಕನ್ನಡದ ಪ್ರಸಾದ್ ಚಿತ್ರದ ಮನೋಜ್ಞ ಅಭಿನಯಕ್ಕಾಗಿ ಈ ವರ್ಷದ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿಯನ್ನು...
ಬನ್ನಿ ಬಿಳಿಗಿರಿರಂಗನ ಬೆಟ್ಟಕ್ಕೆ...... ನಿಸರ್ಗದ ಸ್ವರ್ಗಕ್ಕೆ......
ಚಾಮರಾಜನಗರ ಜಿಲ್ಲೆಯ ಪ್ರವಾಸಿ ತಾಣಗಳಲ್ಲೊಂದಾದ ಬಿಳಿಗಿರಿರಂಗನ ಬೆಟ್ಟವು ಮೈಸೂರಿನಿಂದ ಸುಮಾರು ತೊಂಬತ್ತು ಕಿ.ಮೀ. ಹಾಗೂ ಚಾಮರಾಜನಗರ ಜಿಲ್ಲೆಯ ಯಳಂದೂರಿನಿಂದ ಸುಮಾರು 15ಕಿಮೀ ದೂರದಲ್ಲಿದೆ.

Write Your Comment Here...