ಹುಂಡೈ ಆಸೆಂಟ್ ಮಾರಾಟ ಸ್ಥಗಿತಕ್ಕೆ ಚಿಂತನೆ
[Updated 07/08/2012 09:20 am]ಭಾರತೀಯ ಮಾರುಕಟ್ಟೆಯಲ್ಲಿ ಸಿವಿಕ್ ಕಾರುಗಳ ಬೇಡಿಕೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಹೋಂಡಾ ಕಂಪನಿ ಈ ಕಾರುಗಳ ಮಾರಾಟ ಸ್ಥಗಿತಗೊಳಿಸಿದ ಬೆನ್ನಲ್ಲೇ ಹುಂಡೈ ಕೂಡ ತನ್ನ ಕೆಲವು ಮಾರಾಟವನ್ನು ನಿಲ್ಲಿಸಲು ಚಿಂತಿಸಿದೆ. ಕಂಪನಿಯು ತನ್ನ ಅಸೆಂಟ್ ಕಾರುಗಳ ಮಾರಾಟ ಸ್ಥಗಿತಗೊಳಿಸಲು ಚಿಂತಿಸಿದೆ ಎಂದು ಮೂಲಗಳು ತಿಳಿಸಿವೆ.
1999ರಲ್ಲಿ ದೇಶಕ್ಕೆ ಕಾಲಿಟ್ಟ ದಕ್ಷಿಣ ಕೊರಿಯ ಮೂಲದ ಕಂಪನಿ ಹುಂಡೈ, ಆ ಸಂದರ್ಭ ಸ್ಯಾಂಟ್ರೊ ಹ್ಯಾಚ್ ಮತ್ತು ಆಸೆಂಟ್ ಸೆಡಾನ್ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಿತ್ತು. ಎಸ್ಟೀಂನಂತಹ ಕಾರುಗಳಿಗೆ ಇವು ಪ್ರಬಲ ಪೈಪೋಟಿ ನೀಡಿದ್ದವು. ಹೋಂಡಾ ಸಿಟಿಗೆ ಪರ್ಯಾಯವಾಗಿ ಹುಂಡೈ ಅಸೆಂಟ್ ಮಾರುಕಟ್ಟೆಗೆ ಬಂದಿತ್ತು.
ಹುಂಡೈ ಆಸೆಂಟ್ ಕಂಪನಿಯ ಅತಿ ಹೆಚ್ಚು ಮಾರಾಟವಾಗುತ್ತಿದ್ದ ಕಾರು ಆಗಿತ್ತು. ಇತ್ತೀಚಿನ ವರೆಗೂ ಆಸೆಂಟ್ ತೀವ್ರ ಬೇಡಿಕೆ ಹೊಂದಿತ್ತು. ಅದರೆ ಸಿಆರ್ ಡಿ ಐ ಆವೃತ್ತಿ ಹೆಚ್ಚು ಜನಪ್ರಿಯವಾಗಿತ್ತು. ಈ ನಡುವೆ ಮಾರುತಿ ಡಿಸೈರ್ ಮಾರುಕಟ್ಟೆಯಲ್ಲಿ ವ್ಯಾಪಕ ಜನಪ್ರಿಯತೆ ಪಡೆಯಲು ಆರಂಭವಾದ ಬಳಿಕ ಅದು ಆಸೆಂಟ್ ಗೆ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದಿದೆ ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ. ಅಲ್ಲದೆ, ಇದರಲ್ಲಿ ಡೀಸೆಲ್ ಆವೃತ್ತಿ ಇಲ್ಲದಿರುವುದೂ ಬೇಡಿಕೆ ಕಡಿಮೆಯಾಗಲು ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಕಂಪನಿಯು ಈ ಆವೃತ್ತಿಯನ್ನು ಸ್ಥಗಿತಗೊಳಿಸಲು ಚಿಂತಿಸಿದೆ ಎಂದು ಮೂಲಗಳು ಹೇಳಿವೆ.
ಸ್ಯಾಮ್ ಸಂಗ್ ನಿಂದ 5ಜಿ ಸಂಶೋಧನೆ
ಹೊಸದಿಲ್ಲಿ: ಸ್ಯಾಮ್ ಸಂಗ್ ಕಂಪನಿ ಐದನೇ ಜನರೇಷನ್ 5ಜಿಯನ್ನು ಕಂಡುಹಿಡಿದಿದ್ದು, ಇದರಿಂದ ಡೆಟಾ ವರ್ಗಾವಣೆ ತುಂಬಾ ಸರಳವಾಗಲಿದೆ ಎಂದು ಅದು ಹೇಳಿದೆ. 5ಜಿಯಿಂದ ಹೆಚ್ಚಿನ ಡೆಟಾವನ್ನು ಸರಳ ಹಾಗು ವೇಗವಾಗಿ
ಸೋನಿ ಎಕ್ಸ್ ಪಿರಿಯಾ zrನಲ್ಲಿ ನೀರಿನೊಳಗೂ ಫೋಟೊ ತೆಗೆಯಬಹುದು!
ಹೊಸದಿಲ್ಲಿ: ಸೋನಿ ಕಂಪನಿ ಹೊಸ ಸ್ಮಾರ್ಟ್ ಫೋನ್ ನ್ನು ತಯಾರಿಸಿದ್ದು, ಇದು ನೀರಿನ ಒಳಗೆ ಫೋಟೊ ಮತ್ತು ವೀಡಿಯೋ ತೆಗೆಯಬಹುದಾಗಿದೆ.
ಸ್ಯಾಮ್ಸಂಗ್ ನಿಂದ 16 ಮೆಗಾಪಿಕ್ಸಲ್ ಕ್ಯಾಮರಾವುಳ್ಳ ಸ್ಮಾರ್ಟ್ ಫೋನ್
ಹೊಸದಿಲ್ಲಿ: ಸ್ಯಾಮ್ಸಂಗ್ ಕ್ಯಾಮಾರಾಕ್ಕೆ ಹೆಚ್ಚಿನ ಆದ್ಯತೆ ನೀಡುವ ಹೊಸ ಮೊಬೈಲ್ ನ್ನು ಬಿಡುಗಡೆ ಮಾಡಲಿದೆ ಎಂದು ವರದಿಗಳು ಹೇಳಿವೆ.
ಅಡೊಬ್ ಸಾಫ್ಟ್ ವೇರ್ ಬಳಕೆಗೆ ತಿಂಗಳ ಶುಲ್ಕ
ಲಂಡನ್: ಅಡೊಬ್ ಕ್ರಿಯೇಟಿವ್ ಸೂಟ್ ಸಾಫ್ಟ್ ವೇರ್ ಬಳಸುವುದನ್ನು ಮುಂದುವರಿಸಬೇಕಾದರೆ ಹೊಸ ತಿಂಗಳ ಶುಲ್ಕವನ್ನು ಇನ್ನು ಮುಂದೆ ಕಟ್ಟಬೇಕಾಗುತ್ತದೆ.
ಮುಖದ ಅಂದ ಹೆಚ್ಚಿಸುವ ಆ್ಯಪ್!
ವೆಲ್ಲಿಂಗ್ಟನ್: ಪಿಕ್ಸ್ಟ್ರಾ ಎನ್ನುವ ಹೊಸ ಆ್ಯಪ್ ನಿಮ್ಮ ಮುಖ ಹೇಗೆ ಇದ್ದರೂ ಅದನ್ನು ಚಂದಗಾನಿಸುವಂತೆ ಮಾಡಿಸುತ್ತದೆ.
ಎರಡೇ ವಾರದಲ್ಲಿ ಐದು ಲಕ್ಷ ಫೇಸ್ ಬುಕ್ ಹೋಮ್ ಆ್ಯಪ್ ಡೌನ್ ಲೋಡ್
ವಾಷಿಂಗ್ಟನ್: ಆಂಡ್ರಾಯ್ಡ್ ಫೋನ್ ಗಳಿಗಾಗಿ ಅಭಿವೃದ್ಧಿಪಡಿಸಲಾದ ಫೇಸ್ ಬುಕ್ ನ ಹೊಸ ಹೋಮ್ ಆ್ಯಪ್ ಸುಮಾರು ಐದು ಲಕ್ಷದಷ್ಟು ಬಾರಿ ಡೌನ್ ಲೋಡ್ ಆಗಿದೆ ಎಂದು ಮೂಲಗಳು ಹೇಳಿವೆ.
ಐಡಿಯಾದಿಂದ ಕಡಿಮೆ ಬೆಲೆಯ ಸ್ಮಾರ್ಟ್ ಪೋನ್ ಮಾರುಕಟ್ಟೆಗೆ
ಹೊಸದಿಲ್ಲಿ: ಐಡಿಯಾ ಸೆಲ್ಯೂಲರ್ ಆಂಡ್ರಾಯ್ಡ್ ಜೆಲ್ಲಿ ಬೀನ್ಸ್ 3ಜಿ ಸ್ಮಾರ್ಟ್ ಪೋನ್ ಔರಸ್-2ನ್ನು ಬಿಡುಗಡೆ ಮಾಡಿದೆ.
2020ರ ವೇಳೆಗೆ ಭೂಮಿ ಮೇಲಿನ ಪ್ರತಿಯೊಬ್ಬರಲ್ಲೂ ಇಂಟರ್ನೆಟ್
ವಾಷಿಂಗ್ಟನ್: ಮುಂದಿನ ಏಳು ವರ್ಷಗಳಲ್ಲಿ ಸಂಪೂರ್ಣ ವಿಶ್ವದಲ್ಲಿ ಪ್ರತಿಯೊಬ್ಬರು ಇಂಟರ್ನೆಟ್ ನಲ್ಲಿರುತ್ತಾರೆ ಎಂದು ಗೂಗಲ್ ನ ಕಾರ್ಯನಿರ್ವಾಹಕ ಕಾರ್ಯಾಧ್ಯಕ್ಷ ಎರಿಕ್ ಸ್ಮಿತ್ ತಿಳಿಸಿದ್ದಾರೆ.
ಚೀನಾದಲ್ಲಿ ಮೈಕ್ರೋಸಾಫ್ಟ್ ಸಂಶೋಧನಾ ಕೇಂದ್ರ
ಬೀಜಿಂಗ್: ದಕ್ಷಿಣ ಚೀನಾದ ಹೈನಾನ್ ಪ್ರದೇಶದಲ್ಲಿ ಮೈಕ್ರೋಸಾಫ್ಟ್ ಹೊಸ ಸಂಶೋಧನಾ ಕೇಂದ್ರವನ್ನು ತೆರೆಯಲಿದೆ ಎಂದು ವರದಿಯಾಗಿದೆ.
ಆ್ಯಪಲ್ ನ ಸುಧಾರಿತ ಫೋನ್ ಸದ್ಯದಲ್ಲೇ ಮಾರುಕಟ್ಟೆಗೆ
ಈ ವರ್ಷ ಆ್ಯಪಲ್ ನ ಸುಧಾರಿತ ಫೋನ್ ಬೇಸಗೆಯಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ಹೇಳಿದೆ.
29ರಿಂದ ವಿಧಾನ ಮಂಡಲ ಅಧಿವೇಶನ
ಬೆಂಗಳೂರು: ಮೇ 29 ರಿಂದ ವಿಧಾನ ಮಂಡಲದ ಅಧಿವೇಶನವನ್ನು ನಡೆಸಲು ನಿರ್ಧರಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೇ 31 ರಂದು ಸ್ಪೀಕರ್ ಸ್ಥಾನಕ್ಕೆ...
ಭ್ರಷ್ಟಾಚಾರಕ್ಕೆ ಅವಕಾಶ ನೀಡದಂತೆ ಸಚಿವರಿಗೆ ಸಿಎಂ ಕರೆ
ಬೆಂಗಳೂರು: ಭ್ರಷ್ಟಾಚಾರ ನಡೆಸಿದ ಸರ್ಕಾರವನ್ನು ಹೊರಗಿಟ್ಟು ಕಾಂಗ್ರೆಸ್ ಗೆ ಜನ ಅವಕಾಶ ಮಾಡಿಕೊಟ್ಟಿದ್ದಾರೆ. ಆದ್ದರಿಂದ ಭ್ರಷ್ಟಾಚಾರಕ್ಕೆ ಅವಕಾಶ ನೀಡದೆ ಕಾನೂನು ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ...
ಶ್ರೀಶಾಂತ್ ಹೋಟೆಲ್ ರೂಮ್ ಗೆ ಪೊಲೀಸ್ ದಾಳಿ
ಮುಂಬಯಿ: ಮುಂಬಯಿ ಪೊಲೀಸರು ಶನಿವಾರ ಪಂಚತಾರಾ ಹೋಟೆಲ್ ಒಂದರ ಮೇಲೆ ದಾಳಿ ಮಾಡಿ ಸ್ಪಾಟ್ ಫಿಕ್ಸಿಂಗ್ ನಲ್ಲಿ ಬಂಧಿತನಾಗಿರುವ ರಾಜಸ್ಥಾನ ರಾಯಲ್ಸ್ ನ ಆಟಗಾರ ಎಸ್. ಶ್ರೀಶಾಂತ್ ಗೆ ಸಂಬಂಧಪಟ್ಟ ಲ್ಯಾಪ್ ಟಾಪ್
ಖಾದರ್, ರೈ, ಜೈನ್, ಸೊರಕೆ ಸಹಿತ ಸಚಿವರ ಪ್ರಮಾಣವಚನ
ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ನೂತನ ಸಚಿವರುಗಳು ಶನಿವಾರ ರಾಜ್ಯಪಾಲರ ಭವನದ ಗಾಜಿನಮನೆಯಲ್ಲಿ ನಡೆದ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಇಂದು ನೂತನ ಸಚಿವರ ಪ್ರಮಾಣ ವಚನ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸಚಿವ ಸಂಪುಟ ಇಂದು ಅಸ್ಥಿತ್ವಕ್ಕೆ ಬರಲಿದ್ದು, ಬೆಳಿಗ್ಗೆ 10.30ಕ್ಕೆ ರಾಜಭವನದಲ್ಲಿ ನಡೆಯುವ ಸರಳ ಸಮಾರಂಭದಲ್ಲಿ 29 ಮಂದಿ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಸ್ಪಾಟ್ ಫಿಕ್ಸಿಂಗ್: ಕರ್ನಾಟಕದ ಅಮಿತ್ ಸಿಂಗ್ ಸೆರೆ
ಹೊಸದಿಲ್ಲಿ: ಐಪಿಎಲ್ ನಲ್ಲಿ ತಲ್ಲಣವನ್ನು ಉಂಟು ಮಾಡಿರುವ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಬುಕ್ಕಿಗಳು ಮತ್ತು ಆಟಗಾರರ ಮಧ್ಯವರ್ತಿಯಾಗಿದ್ದ ರಾಜಸ್ಥಾನ ರಾಯಲ್ಸ್ ನ ಮಾಜಿ ವೇಗಿ ಅಮಿತ್ ಸಿಂಗ್ ನನ್ನು ಪೊಲೀಸರು ಬಂಧಿಸಿದ್ದಾರೆ.
ನಾನು ನಿರ್ದೋಷಿ, ಹಗರಣದಲ್ಲಿ ನನ್ನನ್ನು ಸಿಲುಕಿಸಲಾಗಿದೆ: ಶ್ರೀಶಾಂತ್
ಹೊಸದಿಲ್ಲಿ: ಐಪಿಎಲ್ ನಲ್ಲಿ ಸ್ಪಾಟ್ ಫಿಕ್ಸಿಂಗ್ ಆರೋಪದಲ್ಲಿ ಸಿಲುಕಿರುವ ವೇಗಿ ಶ್ರೀಶಾಂತ್, ತಾನು ನಿರ್ದೋಷಿ ಮತ್ತು ಪ್ರಕರಣದಲ್ಲಿ ತನ್ನನ್ನು ಸಿಲುಕಿಸಲಾಗಿದೆ ಎಂದು ದೆಹಲಿ ಕೋರ್ಟ್ ಮುಂದೆ ಹೇಳಿದರು.
ಲಾಕೆಟ್, ಕರ್ಚಿಫ್ ಸ್ಪಾಟ್ ಫಿಕ್ಸಿಂಗ್ ಸಂಕೇತಗಳು!
ನವದೆಹಲಿ: ಐಪಿಎಲ್ ನಲ್ಲಿ ಸ್ಫಾಟ್ ಫಿಕ್ಸಿಂಗ್ ನಲ್ಲಿ ನಡೆಸಿದ ಆರೋಪದ ಮೇಲೆ ಬಂಧಿತರಾಗಿರುವ ರಾಜಸ್ಥಾನ ರಾಯಲ್ಸ್ ತಂಡದ ಎಸ್. ಶ್ರೀಶಾಂತ್, ಅಜಿತ್ ಚಾಂಡಿಲಾ ಮತ್ತು ಅಂಕಿತ್ ಚೌವ್ಹಾಣ್ ಬುಕ್ಕಿಗಳಿಗೆ ನಿರ್ದೇಶನ ನೀಡಲು ವಿವಿಧ
ನಾಳೆ ಸಚಿವರ ಪ್ರಮಾಣ ವಚನ?
ಬೆಂಗಳೂರು: ಸಚಿವ ಸಂಪುಟಕ್ಕೆ 22 ಸಚಿವರನ್ನು ಸೇರ್ಪಡೆ ಮಾಡಿಕೊಳ್ಳಲು ಹೈಕಮಾಂಡ್ ಸೂಚಿಸಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ನಾಳೆ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯುವ ಸಾಧ್ಯತೆ ದಟ್ಟವಾಗಿದೆ.
ಮೊದಲ ಮಹಿಳಾ ಯೋಧೆ ಸಂಶಯಾಸ್ಪದ ಸಾವು
ನವದೆಹಲಿ: ಭಾರತೀಯ ಸೇನೆಯ ಮೊದಲ ಮಹಿಳಾ ಯೋಧೆ ಶಾಂತಿ ತಿಗ್ಗಾ(37) ಅವರು ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಈ ಬಗ್ಗೆ ಹಲವಾರು ಸಂಶಯಗಳು ಕಾಡಲಾರಂಭಿಸಿದೆ.
ಪ್ರಯೋಗ ಶೀಲ ಕಲಾವಿದನ ಕಲ್ಪನೆಯಲ್ಲಿ ಮೂಡಿದ ಕಾಗದ ಭಿತ್ತಿ ಶಿಲ್ಪಗಳು
ಆಧುನಿಕತೆ ಬೆಳೆದಂತೆಲ್ಲ ಕಲೆಯು ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಲಿದೆ. ಪ್ರಸುತ್ತ ಸಂದರ್ಭದಲ್ಲಿ ಕಲಾವಿದ ತನ್ನದೇ ಆದ ಮಾಧ್ಯಮದಿಂದ ಕಲಾಕೃತಿಗಳನ್ನು ರಚಿಸುತ್ತ ತನ್ನ ಕಲ್ಪನೆಯನ್ನು ಅಭಿವ್ಯಕ್ತಿಸಲು ವಿಭಿನ್ನ ಮಾರ್ಗವನ್ನು ಕಂಡುಕೊಳ್ಳುತ್ತಿದ್ದಾನೆ.
ಮ್ಯಾಜಿಕ್ ಕಲೆಯ ಸಾಗರ ಈ ಸಾಗರ್...!
ಮ್ಯಾಜಿಕ್ ನೊಂದಿಗೆ ಕೆಲವು ಅಪಾಯಕಾರಿ ಸ್ಟಂಟ್ ಗಳನ್ನು ಮಾಡುವ ಸಾಗರ್ ಗೆ ಮನೆಯೇ ಮೊದಲ ಪ್ರಯೋಗ ಶಾಲೆ. ಚಾಪರ್ ಬ್ಲೇಡ್ ನ ಹರಿತವಾದ ಭಾಗದ ಮೇಲೆ ನಡೆದಾಡುವ ಸಾಗರ್, ಪ್ರೇಕ್ಷಕರನ್ನು ನಿಬ್ಬೆರಗಾಗುವಂತೆ ಮಾಡುವುದಲ್ಲದೆ...
ಶಿಕ್ಷಣ ವ್ಯವಸ್ಥೆಗೇ ಸವಾಲೆಸೆಯುತ್ತಿರುವ ಸ್ವರೂಪ
ಚಿತ್ರಕಲೆ ಮೂಲಕ ಸಾಧಾರಣಾ ವಿದ್ಯಾರ್ಥಿಯೊಬ್ಬ ಹೆಚ್ಚಿನ ಅಂಕ ಪಡೆಯಲು ಸಾಧ್ಯವೇ? ದಡ್ಡನೆಂದು ಬೈದು ಶಾಲೆಯಿಂದ ಹೊರದಬ್ಬಲ್ಪಟ್ಟ ವಿದ್ಯಾರ್ಥಿ ಕೇವಲ 20 ದಿನಗಳ ತರಬೇತಿಯ ಮೂಲಕ ಡಿಸ್ಟಿಂಕ್ಷನ್ ಪಡೆಯಲು ಸಾಧ್ಯವೇ? ಡ್ಯಾನ್ಸ್ ಮಾಡಿ ಗಣಿತ-ವಿಜ್ಞಾನದಲ್ಲಿ...ವಿಶೇಷ
ಕುಟುಂಬವೆಂಬ ವಟವೃಕ್ಷದ ಕೆಳಗೆ...
ಮೇ 15 ವಿಶ್ವ ಅಂತರರಾಷ್ಟ್ರೀಯ ಕುಟುಂಬ ದಿನ, ಸತ್ಸಂಪ್ರದಾಯದಲ್ಲಿ ವಿಶ್ವಕ್ಕೆ ಮಾದರಿಯಾದ ಭಾರತದ ಕುಟುಂಬ ಪದ್ಧತಿಯಲ್ಲಿ ಆತಂಕಕಾರಿಯಲ್ಲದಿದ್ದರೂ ಅಲ್ಪಪ್ರಮಾಣದ ಪಾಶ್ಚಾತ್ಯರ ಅನುಕರಣೆಯಾಗುತ್ತಿರುವುದು ಅಸಹನೀಯವೇ.
ಇತಿಹಾಸದ ಕಥೆ ಹೇಳುತ್ತಿದೆ ಮಡಿಕೇರಿ ಅರಮನೆ
ಕೊಡಗಿನ ಮುಖ್ಯ ಪಟ್ಟಣ ಮಡಿಕೇರಿಗೆ ಆಗಮಿಸುವ ಪ್ರವಾಸಿಗರನ್ನು ಎತ್ತರದ ಸಮತಟ್ಟಾದ ಸ್ಥಳದಲ್ಲಿ ಕಲ್ಲುಕೋಟೆ ನಡುವೆ ನೆಲೆನಿಂತ ಅರಮನೆ ಗಮನಸೆಳೆಯುತ್ತದೆ. ಈ ಅರಮನೆ ಮೈಸೂರು ಅರಮನೆಯಂತೆ ವಿಶ್ವವಿಖ್ಯಾತಿ ಪಡೆಯದಿರಬಹುದು.
ಸ್ತ್ರೀಯರ ಮಹತ್ವದ ದಿನ ಅಕ್ಷಯ ತೃತೀಯಾ....
ಅಕ್ಷಯ ತದಿಗೆ ಸ್ತ್ರೀಯರಿಗೆ ಮಹತ್ವದ್ದಾಗಿದೆ. ಸ್ತ್ರೀಯರು ಚೈತ್ರದಲ್ಲಿ ಕೂರಿಸಿದ ಚೈತ್ರ ಗೌರಿಯನ್ನು ಈ ದಿನ ವಿಸರ್ಜನೆ ಮಾಡುತ್ತಾರೆ. ಇದರ ಪ್ರಯುಕ್ತ ಅರಿಶಿನ-ಕುಂಕುಮ ನೀಡುವ ಕಾರ್ಯಕ್ರಮವನ್ನೂ ಮಾಡುತ್ತಾರೆ.
ಅಮ್ಮಾ ಜಸ್ಟ್ ಫ್ರೆಂಡ್ ಅಲ್ಲ, ಬೆಸ್ಟ್ ಫ್ರೆಂಡ್!
ಅಮ್ಮಾ ನಿನ್ನ ತೋಳಿನಲ್ಲಿ ಕಂದ ನಾನು... ನಿನ್ನಾ ಸಂಗ ಆಡಲೆಂದು ಬಂದೆ ನಾನು... ಪದ್ಯದ ಸಾಲುಗಳಲ್ಲಿ ಅಮ್ಮಾ... ಅನ್ನೋ ಪದವನ್ನು ಕೇಳಿದಾಗ ಹೆತ್ತು, ಹೊತ್ತು, ಸಾಕಿ ಸಲಹಿದ ಅಮ್ಮನನ್ನು ನೆನೆಸಿಕೊಳ್ಳದವರು ಇರಲಿಕ್ಕಿಲ್ಲ.
ಕೊಡಗಿನಲ್ಲಿ ಕಂಡ ಕಂಡವರನ್ನು ಬೈಯ್ಯೋ ಹಬ್ಬ...
ಇದೊಂದು ವಿಚಿತ್ರವಾದರೂ ವಿಶಿಷ್ಟ ಹಬ್ಬ. ಬಹುಶಃ ಇಂತಹವೊಂದು ಹಬ್ಬವನ್ನು ಕೊಡಗು ಹೊರತುಪಡಿಸಿದರೆ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಇಷ್ಟಕ್ಕೂ ಇದ್ಯಾವುದಪ್ಪಾ ಅಂತಹ ವಿಚಿತ್ರಹಬ್ಬ ಎಂಬ ಕುತೂಹಲ ಪ್ರತಿಯೊಬ್ಬರನ್ನು ಕಾಡದಿರದು.
ಸ್ಯಾಂಡಲ್ ವುಡ್ ನಲ್ಲಿ ಮತ್ತೊಬ್ಬ ಸರ್ಜಾ
ಕನ್ನಡದವರೇ ಆಗಿರುವ ತಮಿಳು, ತೆಲುಗು ಚಿತ್ರರಂಗದಲ್ಲಿ ವಿಶೇಷವಾಗಿ ಹೆಸರು ಮಾಡಿರುವ, ಬಹುಮುಖ್ಯವಾಗಿ ಈ ವರ್ಷ ಕನ್ನಡದ ಪ್ರಸಾದ್ ಚಿತ್ರದ ಮನೋಜ್ಞ ಅಭಿನಯಕ್ಕಾಗಿ ಈ ವರ್ಷದ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿಯನ್ನು...
ಬನ್ನಿ ಬಿಳಿಗಿರಿರಂಗನ ಬೆಟ್ಟಕ್ಕೆ...... ನಿಸರ್ಗದ ಸ್ವರ್ಗಕ್ಕೆ......
ಚಾಮರಾಜನಗರ ಜಿಲ್ಲೆಯ ಪ್ರವಾಸಿ ತಾಣಗಳಲ್ಲೊಂದಾದ ಬಿಳಿಗಿರಿರಂಗನ ಬೆಟ್ಟವು ಮೈಸೂರಿನಿಂದ ಸುಮಾರು ತೊಂಬತ್ತು ಕಿ.ಮೀ. ಹಾಗೂ ಚಾಮರಾಜನಗರ ಜಿಲ್ಲೆಯ ಯಳಂದೂರಿನಿಂದ ಸುಮಾರು 15ಕಿಮೀ ದೂರದಲ್ಲಿದೆ.

Write Your Comment Here...