ಫಾರ್ಮ್ ನಲ್ಲಿರುವ ಶ್ರೀಲಂಕಾಗೆ ಎದುರಾಗಲಿದೆ ಟೀಂ ಇಂಡಿಯಾ
[Updated 21/07/2012 11:36 am]ಹಂಬಂಟೋಟಾ: ಹೊಸ ಋತುವನ್ನು ಗೆಲುವಿನೊಂದಿಗೆ ಆರಂಭಿಸಲು ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ ಹಾತೊರೆಯುತ್ತಿದೆ. ಆದರೆ ಫಾರ್ಮ್ ನಲ್ಲಿರುವ ಶ್ರೀಲಂಕಾ ವಿರುದ್ಧ ಭಾರತಕ್ಕೆ ಕಠಿಣ ಸವಾಲಿದೆ.
ಐದು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಇಂದು(ಶನಿವಾರ) ನಡೆಯಲಿದೆ. ಮಾರ್ಚ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಏಕೈಕ 20-20 ಪಂದ್ಯವನ್ನು ಆಡಿದ್ದ ಧೋನಿ ಪಡೆ ಇದರ ಬಳಿಕ ವಿಶ್ರಾಂತಿ ಪಡೆದಿತ್ತು. ಈಗ ಹೊಸ ಹುರುಪಿನೊಂದಿಗೆ ಹೊಸ ಋತುವನ್ನು ಆರಂಭಿಸಲು ಕಾತರಿಸಿದೆ.
ಆದರೆ ಶ್ರೀಲಂಕಾ ಮಾತ್ರ ಉತ್ಕೃಷ್ಟ ಫಾರ್ಮ್ ನಲ್ಲಿದೆ. ಪಾಕಿಸ್ತಾನ ವಿರುದ್ಧ ಏಕದಿನ ಹಾಗೂ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿರುವ ಲಂಕಾ ಅಮೋಘ ಫಾರ್ಮ್ ನಲ್ಲಿದೆ. ಆದರೆ ಭಾರತವನ್ನು ಸೋಲಿಸಬೇಕಾದಲ್ಲಿ ತಂಡ ಶ್ರೇಷ್ಠ ಪ್ರದರ್ಶನ ನೀಡಬೇಕಾಗಿದೆ ಎಂದು ಲಂಕಾಗೆ ಕೂಡ ತಿಳಿದಿದೆ. ಭಾರತವನ್ನು ಮಣಿಸುವುದು ಅಷ್ಟು ಸುಲಭವಲ್ಲ ಎನ್ನುವುದು ಜಯವರ್ಧನೆ ಪಡೆ ಅರಿತುಕೊಂಡಿದೆ.
ಐಪಿಎಲ್ ಬಳಿಕ ಎರಡು ತಿಂಗಳ ವಿಶ್ರಾಂತಿ ಸಿಕ್ಕಿರುವ ಕಾರಣ ಆಟಗಾರರು ಹೊಸ ಋತುವನ್ನು ಗೆಲುವಿನೊಂದಿಗೆ ಆರಂಭಿಸಲು ಬಯಸಿದ್ದಾರೆ. ನಮಗೆ ಲಂಕಾದ ಪಿಚ್ ಗಳು ಅಪರಿಚಿತವೇನಲ್ಲ. ನಾವು ಅದಕ್ಕೆ ಎಷ್ಟು ಬೇಗ ಹೊಂದಿಕೊಳ್ಳುತ್ತೇವೆ ಎನ್ನುವುದು ತುಂಬಾ ಮುಖ್ಯವಾಗಿದೆ ಎಂದು ಧೋನಿ ಹೇಳಿದರು.
India to face tough challenge from Lankans
Indian cricket team will be facing tough challenge against Srilanka which is in good form in the five one day series between the two nations which begins on Saturday.
ತಿಹಾರ್ ಜೈಲಿನಿಂದ ಹೊರಬಂದ ಶ್ರೀಶಾಂತ್
ಹೊಸದಿಲ್ಲಿ: ತಿಹಾರ್ ಜೈಲಿನಲ್ಲಿ 27 ದಿನಗಳನ್ನು ಕಳೆದ ಬಳಿಕ ಜಾಮೀನನ ಮೇಲೆ ಹೊರಬಂದಿರುವ ವೇಗಿ ಎಸ್. ಶ್ರೀಶಾಂತ್, ಈ ಪ್ರಕರಣವನ್ನು ಯಾವತ್ತೂ ಮರೆಯಲು ಸಾಧ್ಯವಿಲ್ಲ. ಯಾಕೆಂದರೆ ಇದು ನನಗೆ ಬಹಳಷ್ಟು
ರಾಜ್ ಕುಂದ್ರಾ ವಜಾಗೊಳಿಸಿದ ಬಿಸಿಸಿಐ
ಹೊಸದಿಲ್ಲಿ: ಬೆಟ್ಟಿಂಗ್ ಆರೋಪವನ್ನು ಎದುರಿಸುತ್ತಿರುವ ರಾಜಸ್ಥಾನ್ ರಾಯಲ್ಸ್ ನ ಸಹ ಮಾಲಕ ರಾಜ್ ಕುಂದ್ರಾ ಅವರನ್ನು ತನಿಖೆ ಪೂರ್ಣಗೊಳ್ಳುವ ತನಕ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ವಜಾಗೊಳಿಸಿದೆ.
ಇನ್ನು ಫ್ಯಾನ್ ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವಂತಿಲ್ಲ!
ಭೋಪಾಲ್: ಇತ್ತೀಚಿನ ದಿನಗಳಲ್ಲಿ ಸಣ್ಣ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಆತ್ಮಹತ್ಯೆಗೆ ಹೆಚ್ಚಾಗಿ ಬಳಸಿಕೊಳ್ಳುವುದು ಮನೆಯಲ್ಲಿರುವ ಫ್ಯಾನ್. ಇದನ್ನು ಆತ್ಮಹತ್ಯೆಗೆ
ಬಿಹಾರದ ಜೆಡಿಯು ಸರ್ಕಾರ ಭದ್ರ
ಪಟ್ನಾ: ಬಿಜೆಪಿಯೊಂದಿಗಿನ ಮೈತ್ರಿ ಕಡಿದುಕೊಂಡ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಸರ್ಕಾರ ಬುಧವಾದ ವಿಶ್ವಾಸಮತ ಗೆದ್ದುಕೊಂಡಿದೆ. ಬಿಜೆಪಿ ವಿಶ್ವಾಸಮತ ಯಾಚನೆ ವಿರುದ್ಧ
ಬೆಳ್ಳಿತೆರೆಯಲ್ಲೂ ಮಿಂಚಲು ರೆಡಿ: ಅನುಶ್ರೀ
ಕನ್ನಡ ಚಿತ್ರರಂಗ ಮತ್ತು ಕಿರುತೆರೆಗೆ ಯಾವತ್ತೂ ಅವಿನಾಭಾವ ಸಂಬಂಧ. ಒಂದು ಕಡೆ ಕನ್ನಡ ಚಿತ್ರರಂಗ, ಕನ್ನಡ ಚಿತ್ರಗಳಿಗೆ ಪ್ರೇಕ್ಷಕರಿಲ್ಲ, ಚಿತ್ರಗಳು ಓಡುತ್ತಿಲ್ಲ ಎಂದು ಕೂಗುತ್ತಿದ್ದರೆ, ಇನ್ನೊಂದೆಡೆ ಕನ್ನಡ ಕಿರುತೆರೆ...
ಕೊಡಗಿನ ಮಳೆಗಾಲದ ಸುಂದರಿ ಡೇಲಿಯಾ
ಮುಂಗಾರು ಮಳೆ ಸುರಿದಾಗ ಮನೆಮುಂದಿನ ಹೂತೋಟದಲ್ಲಿ ಸುಪ್ತವಾಗಿದ್ದ ಡೆಲೀಯಾ ಗೆಡ್ಡೆಗಳು ಮೊಳಕೆಯೊಡೆದು ಗಿಡಗಳಾಗಿ ವಿವಿಧ ಆಕಾರ, ಬಣ್ಣಗಳಲ್ಲಿ ಗೊಂಚಲುಗೊಂಚಲಾಗಿ ಹೂಬಿಟ್ಟು ಕಂಗೊಳಿಸುತ್ತವೆ.

Write Your Comment Here...