ಜೆಡಿಎಸ್ ಜತೆ ಹೊಂದಾಣಿಕೆ ಇಲ್ಲ ಎಂದ ಕಾಂಗ್ರೆಸ್
[Updated 21/07/2012 11:42 pm]ಬೆಂಗಳೂರು, ಜು.21: ರಾಜ್ಯ ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವ ರಾಜ್ಯ ಕಾಂಗ್ರೆಸ್ ಮುಖಂಡರು, ಮುಂದಿನ ಕಾರ್ಯತಂತ್ರಗಳ ಕುರಿತು ಕಾಂಗ್ರೆಸ್ ಕೋರ್ ಸಮಿತಿ ಸದಸ್ಯರು ಮಹತ್ವದ ಸಮಾಲೋಚನೆ ನಡೆಸಿದ್ದು, ಜೆಡಿಎಸ್ ಜತೆ ಯಾವುದೇ ರೀತಿಯ ಹೊಂದಾಣಿಕೆ ಇಲ್ಲ ಎನ್ನುವ ಸಂದೇಶ ರವಾನಿಸಿದ್ದಾರೆ.
ಅಲ್ಲದೇ ಮುಂದಿನ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಡಿ ಎದುರಿಸಲು ತೀರ್ಮಾನಿಸಿದ್ದು, ಸಧ್ಯಕ್ಕೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡದಿರಲು ನಿರ್ಧರಿಸಿದ್ದಾರೆ. ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಶನಿವಾರ ಸಭೆ ಸೇರಿದ್ದ ಪಕ್ಷದ ಪ್ರಮುಖರ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದು, ಪ್ರದೇಶ ಕಾಂಗ್ರೆಸ್ ನಲ್ಲಿ ಯಾವುದೇ ಬದಲಾವಣೆ ಮಾಡದಿರಲು ನಿರ್ಧರಿಸುವ ಮೂಲಕ ಈ ಕುರಿತ ಊಹಾಪೋಹಗಳಿಗೆ ಸ್ಪಷ್ಟವಾಗಿ ತೆರೆ ಎಳೆದಿದ್ದಾರೆ. ಸಮನ್ವಯ ಸಮಿತಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎಐಸಿಸಿ ಕಾರ್ಯದರ್ಶಿ ಹನುಮಂತರಾವ್, ಜೆಡಿಎಸ್ ನೊಂದಿಗೆ ಯಾವುದೇ ರೀತಿಯ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ರಾಜ್ಯದಲ್ಲಿ ಪಕ್ಷ ಏಕಾಂಗಿಯಾಗಿ ಚುನಾವಣೆ ಎದುರಿಸುತ್ತದೆ ಎಂದು ಹೇಳಿದರು.

ವಿಧಾನಮಂಡಲದ ಉಭಯ ಸದನಗಳ ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ ಮತ್ತು ಎಸ್.ಆರ್.ಪಾಟೀಲ್, ಕೇಂದ್ರ ಸಚಿವರಾದ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್. ಮುನಿಯಪ್ಪ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಆಸ್ಕರ್ ಫರ್ನಾಂಡೀಸ್, ಬಿ.ಕೆ. ಹರಿಪ್ರಸಾದ್, ಸಂಸದರಾದ ಕೆ.ರೆಹಮಾನ್ ಖಾನ್, ಎನ್. ಧರಂಸಿಂಗ್, ಎಚ್. ವಿಶ್ವನಾಥ್, ಮಾಜಿ ಸಚಿವರಾದ ಎಂ.ವಿ. ರಾಜಶೇಖರನ್, ಎಚ್.ಕೆ. ಪಾಟೀಲ್, ಡಿ.ಕೆ. ತಾರಾದೇವಿ, ಬಿ.ಎ. ಮೊಹಿದ್ದೀನ್ ಸೇರಿದಂತೆ ಹಿರಿಯ ನಾಯಕರು ಸಭೆಯಲ್ಲಿ ಗಹನವಾದ ಚರ್ಚೆ ನಡೆಸಿದರು.
Cong rules out poll tie-up with JD(S)
Bangalore: The Congress leaders in the state are busy gearing themselves up for the ensuing assembly elections. The Congress Core Committee which met recently has ruled out any possibility of entering into an alliance with the JD(S).
ಬಿಹಾರದ ಜೆಡಿಯು ಸರ್ಕಾರ ಭದ್ರ
ಪಟ್ನಾ: ಬಿಜೆಪಿಯೊಂದಿಗಿನ ಮೈತ್ರಿ ಕಡಿದುಕೊಂಡ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಸರ್ಕಾರ ಬುಧವಾದ ವಿಶ್ವಾಸಮತ ಗೆದ್ದುಕೊಂಡಿದೆ. ಬಿಜೆಪಿ ವಿಶ್ವಾಸಮತ ಯಾಚನೆ ವಿರುದ್ಧ
ಕೊನೆಗೂ ಕೇರಳ ಸಿಎಂಗೆ ಕೈಗೆ ಮೊಬೈಲ್!
ತಿರುವನಂತಪುರಂ: ತುಂಬಾ ಸರಳ ಜೀವಿಯಾಗಿರುವ ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂದಿ ಅವರು ಸದ್ಯದಲ್ಲೇ ಮೊಬೈಲ್ ಫೋನ್ ಖರೀದಿ ಮಾಡಲಿದ್ದಾರಂತೆ. ಚಾಂದಿ ಅವರ ಬಳಿಯಲ್ಲಿ ಸ್ವಂತ ಮೊಬೈಲ್ ಇಲ್ಲದಿದ್ದ ಕಾರಣ
ಉಗ್ರ ಸಂಘಟನೆಗೆ ಪಾಕ್ ಸರ್ಕಾರದ ಅನುದಾನ
ಲಾಹೋರ್: 2008ರ ಮುಂಬಯಿ ಸ್ಪೋಟದಲ್ಲಿ ಭಾಗಿಯಾಗಿರುವ ನಿಷೇಧಿತ ಲಷ್ಕರ್-ಎ-ತೊಯ್ಬಾದ ಅಂಗ ಸಂಸ್ಥೆಯಾಗಿರುವ ಜಮಾತ್ ಉದ್-ದವಾ(ಜೆಯುಡಿ)ಗೆ ಪಾಕಿಸ್ತಾನದ ಪಂಜಾಬ್ ಪ್ರಾಂತೀಯ ಸರ್ಕಾರವು
ಡಿಎಸ್ ಪಿ ಕಾರು ಅವಘಡಕ್ಕೆ ಪಾದಚಾರಿಗಳ ಸಹಿತ ಐವರು ಬಲಿ
ಪುಣೆ: ಸೋಮವಾರ ಸಂಜೆ ಉಪ ಪೊಲೀಸ್ ಆಯುಕ್ತರೊಬ್ಬರು ತನ್ನ ಕಾರಿನ ನಿಯಂತ್ರಣ ಕಳಕೊಂಡು ಪಾದಚಾರಿಗಳಿಗೆ ಡಿಕ್ಕಿ ಹೊಡೆದಿದ್ದು, ಈ ದುರ್ಘಟನೆಯಲ್ಲಿ ಐದು ಮಂದಿ ಸಾವನ್ನಪ್ಪಿದ್ದಾರೆ.
ಬೆಳ್ಳಿತೆರೆಯಲ್ಲೂ ಮಿಂಚಲು ರೆಡಿ: ಅನುಶ್ರೀ
ಕನ್ನಡ ಚಿತ್ರರಂಗ ಮತ್ತು ಕಿರುತೆರೆಗೆ ಯಾವತ್ತೂ ಅವಿನಾಭಾವ ಸಂಬಂಧ. ಒಂದು ಕಡೆ ಕನ್ನಡ ಚಿತ್ರರಂಗ, ಕನ್ನಡ ಚಿತ್ರಗಳಿಗೆ ಪ್ರೇಕ್ಷಕರಿಲ್ಲ, ಚಿತ್ರಗಳು ಓಡುತ್ತಿಲ್ಲ ಎಂದು ಕೂಗುತ್ತಿದ್ದರೆ, ಇನ್ನೊಂದೆಡೆ ಕನ್ನಡ ಕಿರುತೆರೆ...
ಕೊಡಗಿನ ಮಳೆಗಾಲದ ಸುಂದರಿ ಡೇಲಿಯಾ
ಮುಂಗಾರು ಮಳೆ ಸುರಿದಾಗ ಮನೆಮುಂದಿನ ಹೂತೋಟದಲ್ಲಿ ಸುಪ್ತವಾಗಿದ್ದ ಡೆಲೀಯಾ ಗೆಡ್ಡೆಗಳು ಮೊಳಕೆಯೊಡೆದು ಗಿಡಗಳಾಗಿ ವಿವಿಧ ಆಕಾರ, ಬಣ್ಣಗಳಲ್ಲಿ ಗೊಂಚಲುಗೊಂಚಲಾಗಿ ಹೂಬಿಟ್ಟು ಕಂಗೊಳಿಸುತ್ತವೆ.

Write Your Comment Here...