ಬಿಜೆಪಿ ರಾಜ್ಯಾಧ್ಯಕ್ಷ ರೇಸ್ ನಲ್ಲಿ ಡಿ .ವಿ.ಎಸ್, ನಳೀನ್ ಕುಮಾರ್
[Updated 15/07/2012 03:09 pm]ಬಳ್ಳಾರಿ,ಜು.15: ಬಿಜೆಪಿ ರಾಜ್ಯಘಟಕಕ್ಕೆ ಶೀಘ್ರದಲ್ಲೇ ನೂತನ ಅಧ್ಯಕ್ಷರನ್ನು ನೇಮಿಸಲಾಗುವುದು ಎಂದು ಪ್ರಸ್ತುತ ಪಕ್ಷದ ರಾಜ್ಯಾಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಬಳ್ಳಾರಿಗೆ ಭೇಟಿ ನೀಡಿರುವ ಅವರು ಭಾನುವಾರ ಬೆಳಗ್ಗೆ ಚೌಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷಸ್ಥಾನಕ್ಕೆ ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದಗೌಡ ಮತ್ತು ಸಂಸದ ನಳೀನ್ ಕುಮಾರ್ ಕಟೀಲ್ ಅವರು ರೇಸ್ ನಲ್ಲಿದ್ದಾರೆ.
ಈ ಇಬ್ಬರಲ್ಲಿ ಯಾರಿಗೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ನೀಡಬೇಕು ಎಂಬ ಬಗ್ಗೆ ಶೀಘ್ರದಲ್ಲೇ ವರಿಷ್ಠರು ನಿರ್ಧರಿಸಲಿದ್ದಾರೆ ಎಂದು ತಿಳಿಸಿದರು. ನೂತನ ಸಚಿವ ಸಂಪುಟದ ಎಲ್ಲ ಸಚಿವರಿಗೂ ಭಾನುವಾರ ಮಧ್ಯಾಹ್ನದೊಳಗೆ ಖಾತೆ ಹಂಚಿಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ನಂತರ ಜಿಲ್ಲಾ ಉಸ್ತುವಾರಿಗಳ ನೇಮಕ ಮಾಡಲಾವುದು ಎಂದರು.
ನಂತರ ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಉಪಮುಖ್ಯಮಂತ್ರಿ ಈಶ್ವರಪ್ಪ ಜಿಲ್ಲೆಯ ಎಲ್ಲ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಳ್ಳಾರಿ ಜಿಲ್ಲೆಯಲ್ಲಿ ತಲೆದೋರಿರುವ ಬರ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದರು.
DVS, Nalin in race for State BJP Presidentship
Bellary: Deputy Chief Minister and State BJP President KS Eshwarappa has said that former CM Sadananda Gowda and MP Nalin Kumar were in the race for the state BJP Presidentship and that the party higher ups would decided as to who among the two would be chosen for the top post.
ಮೊಬೈಲ್ ಬಿಲ್ ಪಾವತಿಯಾಗದ ಹಿನ್ನೆಲೆಯಲ್ಲಿ 108 ಸೇವೆ ಸ್ಥಗಿತ
ಬೆಂಗಳೂರು: ಜಿವಿಕೆ ಸಂಸ್ಥೆ ಏರ್ ಟೆಲ್ ನ ಮೊಬೈಲ್ ಬಿಲ್ ಪಾವತಿಸದಿರುವ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿಯಿಂದ 108 ಆ್ಯಂಬುಲೆನ್ಸ್ ಸೇವೆ ಸಂಪೂರ್ಣ ಸ್ಥಗಿತಗೊಂಡಿದೆ.
ಮೈತ್ರಿ ಮುರಿದುಕೊಂಡ ಎರಡೇ ದಿನದಲ್ಲಿ ಬಿಜೆಪಿ-ಜೆಡಿಯು ಹೊಡೆದಾಟ
ಪಟ್ನಾ: ಎನ್ ಡಿಎ ಮೈತ್ರಿಕೂಟದಿಂದ ಹೊರನಡೆದ ಜೆಡಿಯು ಮಾಡಿರುವ ವಿಶ್ವಾಸಘಾತಕ್ಕೆ ಮಂಗಳವಾರ ಬಿಹಾರ್ ಬಂದ್ ಗೆ ಕರೆ ನೀಡಿರುವ ಬಿಜೆಪಿ ಮತ್ತು ಜೆಡಿಯು ಕಾರ್ಯಕರ್ತರ ಮಧ್ಯೆ ಮಾರಾಮಾರಿ ನಡೆದಿದೆ.
ಡಿಎಸ್ ಪಿ ಕಾರು ಅವಘಡಕ್ಕೆ ಪಾದಚಾರಿಗಳ ಸಹಿತ ಐವರು ಬಲಿ
ಪುಣೆ: ಸೋಮವಾರ ಸಂಜೆ ಉಪ ಪೊಲೀಸ್ ಆಯುಕ್ತರೊಬ್ಬರು ತನ್ನ ಕಾರಿನ ನಿಯಂತ್ರಣ ಕಳಕೊಂಡು ಪಾದಚಾರಿಗಳಿಗೆ ಡಿಕ್ಕಿ ಹೊಡೆದಿದ್ದು, ಈ ದುರ್ಘಟನೆಯಲ್ಲಿ ಐದು ಮಂದಿ ಸಾವನ್ನಪ್ಪಿದ್ದಾರೆ.
ಸಾಮಾಜಿಕ ತಾಣಗಳಲ್ಲಿ ವಿಚ್ಛೇದನ ವಿರೋಧಿಸಿ ಪ್ರತಿಭಟನೆ
ಮುಂಬಯಿ: ಸ್ಕೈಪೆ ಮತ್ತು ಫೇಸ್ ಬುಕ್ ನಂತಹ ಮಾಧ್ಯಮಗಳನ್ನು ಉಪಯೋಗಿಸಿಕೊಂಡು ತಲಾಕ್ ನೀಡುತ್ತಿರುವಂತಹ ಬೆಳವಣಿಗಳು ನಡೆಯುತ್ತಿರುವುದನ್ನು ವಿರೋಧಿಸಿ ಭಾರತೀಯ ಮುಸ್ಲಿಂ ಮಹಿಳಾ ಅಂದೋಲನ್(ಬಿಎಂಎಂಎ)
ಕೊಡಗಿನ ಮಳೆಗಾಲದ ಸುಂದರಿ ಡೇಲಿಯಾ
ಮುಂಗಾರು ಮಳೆ ಸುರಿದಾಗ ಮನೆಮುಂದಿನ ಹೂತೋಟದಲ್ಲಿ ಸುಪ್ತವಾಗಿದ್ದ ಡೆಲೀಯಾ ಗೆಡ್ಡೆಗಳು ಮೊಳಕೆಯೊಡೆದು ಗಿಡಗಳಾಗಿ ವಿವಿಧ ಆಕಾರ, ಬಣ್ಣಗಳಲ್ಲಿ ಗೊಂಚಲುಗೊಂಚಲಾಗಿ ಹೂಬಿಟ್ಟು ಕಂಗೊಳಿಸುತ್ತವೆ.
ಮೈಸೂರಿನಲ್ಲಿ ಅಖಿಲೇಶ್ ಕಳೆದ ಮಧುರ ಕ್ಷಣಗಳು...
ಮೈಸೂರು: ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮೈಸೂರಿನ ಜೆಸಿಇ ಕ್ಯಾಂಪಸ್ಸಿಗೆ ಬರುವ ಮುನ್ನ ಅವರ ಶಿಕ್ಷಕರು ಮತ್ತು ಸ್ನೇಹಿತರನ್ನು ಮಾತಿಗೆಳೆದಾಗ ಅವತ್ತಿನ ಆ ಮಧುರ ಕ್ಷಣಗಳನ್ನು ನೆನಪು ಮಾಡಿಕೊಂಡ ಪರಿ ಇಲ್ಲಿದೆ.

Write Your Comment Here...