ಯಡ್ಡಿ ಮತ್ತು ಪುತ್ರನ ವಿರುದ್ಧ ಸಮಗ್ರ ತನಿಖೆಗೆ ಆದೇಶ
[Updated 11/08/2012 09:12 am]ಬೆಂಗಳೂರು: ಕಾನೂನು ಬಾಹಿರ ಡಿನೋಟಿಫಿಕೇಶನ್ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಪುತ್ರನ ವಿರುದ್ಧದ ದೂರಿನ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಲೋಕಾಯುಕ್ತ ಪೊಲೀಸರಿಗೆ ಶುಕ್ರವಾರ ಲೋಕಾಯುಕ್ತ ವಿಶೇಷ ನ್ಯಾಯಾಲಯ ಆದೇಶಿಸಿದೆ.
ಯಡಿಯೂರಪ್ಪ ತಮ್ಮ ಅಧಿಕಾರದ ದುರ್ಬಳಕೆ ಮಾಡಿಕೊಂಡು 2010ರಲ್ಲಿ ಭದ್ರಾವತಿಯಲ್ಲಿ 69 ಎಕರೆ ಜಮೀನನ್ನು ಡಿನೋಟಿಫೈ ಮಾಡಿಸಿದ್ದರು ಎಂದು ಆರೋಪಿಸಿ ವಿನೋದ್ ಬಿ. ಎಂಬವರು ಲೋಕಾಯುಕ್ತ ನ್ಯಾಯಾಲಯಕ್ಕೆ ದೂರು ನೀಡಿದ್ದರು.
ಜಮೀನು ಡಿನೋಟಿಫಿಕೇಷನ್ ನ ಎರಡು ತಿಂಗಳುಗಳ ಬಳಿಕ ಮಾಜಿ ಮುಖ್ಯಮಂತ್ರಿ ಮತ್ತು ಅದರ ಬೇನಾಮಿದಾರರು ಈ ಆಸ್ತಿಯನ್ನು ಧವಳಗಿರಿ ಪ್ರಾಪರ್ಟಿಸ್ ಹೆಸರಿಗೆ ವರ್ಗಾಯಿಸಿದರು ಎಂದು ಅವರು ಆಪಾದಿಸಿದ್ದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಅವರ ಪುತ್ರ, ಸಂಸತ್ ಸದಸ್ಯ ಬಿ.ವೈ. ರಾಘವೇಂದ್ರ ಮತ್ತು ಇತರ ಐವರನ್ನು ಪ್ರತಿವಾದಿಗಳನ್ನಾಗಿ ದೂರಿನಲ್ಲಿ ಹೆಸರಿಸಲಾಗಿತ್ತು. ಇದರ ವಿಚಾರಣೆಯನ್ನು ಇಂದು ನಡೆಸಿದ ಲೋಕಾಯುಕ್ತ ನ್ಯಾಯಾಲಯದ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್, ಈ ಪ್ರಕರಣದ ಸಮಗ್ರ ವಿಚಾರಣೆ ನಡೆಸಿ, ತನಿಖೆ ನಡೆಸುವಂತೆ ಬೆಂಗಳೂರು ನಗರ ನಾಲ್ಕನೇ ಲೋಕಾಯುಕ್ತ ಡಿವೈಎಸ್ಪಿ ನಹದ್ರಿಗೆ ಆದೇಶ ನೀಡಿದರಲ್ಲದೆ ಆ.31ಕ್ಕೆ ವಿಚಾರಣೆಗೆ ದಿನ ನಿಗದಿಪಡಿಸಿದರು.
Lokayukta spl court orders thorough probe against Yeddy, son
Bangalore: The Lokayukta Special Court, on Friday has directed the Lokayukta police to thoroughly investigate into the complaints against former CM Yeddyurappa nad his son in the illegal denotification case.
ಸರ್ಕಾರ ನಿಮ್ಮ ಇ ಮೇಲ್, ದೂರವಾಣಿ ಕರೆ ಟ್ಯಾಪ್ ಮಾಡಬಹುದು!
ಹೊಸದಿಲ್ಲಿ: ಭಾರತ ಸರ್ಕಾರ ಕಣ್ಗಾವಲು ವ್ಯವಸ್ಥೆಯನ್ನು ಆರಂಭಿಸಿದ್ದು, ಇದರ ಮೂಲಕ ತೆರಿಗೆ ಇಲಾಖೆ ಸಹಿತ ಭಾರತ ಸರ್ಕಾರದ ವಿವಿಧ ಏಜೆನ್ಸಿ ಮತ್ತು ಇಲಾಖೆಗಳು ಸಂಶಯಾಸ್ಪದ ವ್ಯಕ್ತಿಗಳ ಇಮೇಲ್ ಮತ್ತು ದೂರವಾಣಿ
ಇನ್ನು ಫ್ಯಾನ್ ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವಂತಿಲ್ಲ!
ಭೋಪಾಲ್: ಇತ್ತೀಚಿನ ದಿನಗಳಲ್ಲಿ ಸಣ್ಣ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಆತ್ಮಹತ್ಯೆಗೆ ಹೆಚ್ಚಾಗಿ ಬಳಸಿಕೊಳ್ಳುವುದು ಮನೆಯಲ್ಲಿರುವ ಫ್ಯಾನ್. ಇದನ್ನು ಆತ್ಮಹತ್ಯೆಗೆ
ಉಗ್ರ ಸಂಘಟನೆಗೆ ಪಾಕ್ ಸರ್ಕಾರದ ಅನುದಾನ
ಲಾಹೋರ್: 2008ರ ಮುಂಬಯಿ ಸ್ಪೋಟದಲ್ಲಿ ಭಾಗಿಯಾಗಿರುವ ನಿಷೇಧಿತ ಲಷ್ಕರ್-ಎ-ತೊಯ್ಬಾದ ಅಂಗ ಸಂಸ್ಥೆಯಾಗಿರುವ ಜಮಾತ್ ಉದ್-ದವಾ(ಜೆಯುಡಿ)ಗೆ ಪಾಕಿಸ್ತಾನದ ಪಂಜಾಬ್ ಪ್ರಾಂತೀಯ ಸರ್ಕಾರವು
ಡಿಎಸ್ ಪಿ ಕಾರು ಅವಘಡಕ್ಕೆ ಪಾದಚಾರಿಗಳ ಸಹಿತ ಐವರು ಬಲಿ
ಪುಣೆ: ಸೋಮವಾರ ಸಂಜೆ ಉಪ ಪೊಲೀಸ್ ಆಯುಕ್ತರೊಬ್ಬರು ತನ್ನ ಕಾರಿನ ನಿಯಂತ್ರಣ ಕಳಕೊಂಡು ಪಾದಚಾರಿಗಳಿಗೆ ಡಿಕ್ಕಿ ಹೊಡೆದಿದ್ದು, ಈ ದುರ್ಘಟನೆಯಲ್ಲಿ ಐದು ಮಂದಿ ಸಾವನ್ನಪ್ಪಿದ್ದಾರೆ.
ಬೆಳ್ಳಿತೆರೆಯಲ್ಲೂ ಮಿಂಚಲು ರೆಡಿ: ಅನುಶ್ರೀ
ಕನ್ನಡ ಚಿತ್ರರಂಗ ಮತ್ತು ಕಿರುತೆರೆಗೆ ಯಾವತ್ತೂ ಅವಿನಾಭಾವ ಸಂಬಂಧ. ಒಂದು ಕಡೆ ಕನ್ನಡ ಚಿತ್ರರಂಗ, ಕನ್ನಡ ಚಿತ್ರಗಳಿಗೆ ಪ್ರೇಕ್ಷಕರಿಲ್ಲ, ಚಿತ್ರಗಳು ಓಡುತ್ತಿಲ್ಲ ಎಂದು ಕೂಗುತ್ತಿದ್ದರೆ, ಇನ್ನೊಂದೆಡೆ ಕನ್ನಡ ಕಿರುತೆರೆ...
ಕೊಡಗಿನ ಮಳೆಗಾಲದ ಸುಂದರಿ ಡೇಲಿಯಾ
ಮುಂಗಾರು ಮಳೆ ಸುರಿದಾಗ ಮನೆಮುಂದಿನ ಹೂತೋಟದಲ್ಲಿ ಸುಪ್ತವಾಗಿದ್ದ ಡೆಲೀಯಾ ಗೆಡ್ಡೆಗಳು ಮೊಳಕೆಯೊಡೆದು ಗಿಡಗಳಾಗಿ ವಿವಿಧ ಆಕಾರ, ಬಣ್ಣಗಳಲ್ಲಿ ಗೊಂಚಲುಗೊಂಚಲಾಗಿ ಹೂಬಿಟ್ಟು ಕಂಗೊಳಿಸುತ್ತವೆ.

Write Your Comment Here...