ವಿದ್ಯುತ್ ಲೆಕ್ಕಾಚಾರದಲ್ಲಿ ಶೋಭಕ್ಕನ ಪರದಾಟದ ಪ್ರಸಂಗ
[Updated 07/08/2012 11:32 pm]ಬೆಂಗಳೂರು.ಆ.6: ಬಿಜೆಪಿ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಾಲ್ಕು ವರ್ಷಗಳಲ್ಲಿ ವಿದ್ಯುತ್ ಉತ್ಪಾದನೆಗೆ ಮಾಡಿದ ವೆಚ್ಚದ ವಿವರಗಳನ್ನು ನೀಡಲು ಇಂಧನ ಸಚಿವೆ ಶೋಭಾ ಕರಂದ್ಲಾಜೆ ಪರದಾಡಿದ ಪ್ರಸಂಗ ಮಂಗಳವಾರ ನಡೆಯಿತು. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ರಾಜ್ಯ ಬಿಜೆಪಿ ಸರಕಾರ ವಿದ್ಯುತ್ ಖರೀದಿಗಾಗಿ 9,500 ಕೋಟಿ ರೂ. ಖರ್ಚು ಮಾಡಿದೆ ಎಂದು ಹೇಳಿದ ಅವರು ವೆಚ್ಚದ ವಿವರ ನೀಡುವಲ್ಲಿ ತಬ್ಬಿಬಾದರು.
ಒಂದು ಹಂತದಲ್ಲಿ ಪ್ರಶ್ನೆ ಕೇಳಿದ ಮಾಧ್ಯಮದವರನ್ನೇ ನೀವು ಕೊಂಕು ನುಡಿಯುತ್ತಿದ್ದೀರಾ. ಅನಗತ್ಯ ವಿಷಯಗಳನ್ನು ಪ್ರಸ್ತಾಪಿಸುತ್ತಿದ್ದೀರಾ ಎಂದು ಅವರ ಮೇಲೆಯೇ ತಿರುಗಿ ಬೀಳಲು ಪ್ರಯತ್ನಿಸಿದರು.
ಆದರೆ ಪಟ್ಟು ಬಿಡದೇ ವಿದ್ಯುತ್ ಉತ್ಪಾದನೆಗೆ ಮಾಡಿದ ವೆಚ್ಚದ ವಿವರಗಳನ್ನು ನೀಡುವಂತೆ ಕೇಳಿದಾಗ ಇಂಧನ ಇಲಾಖೆಯ ಉನ್ನತ ಅಧಿಕಾರಿಗಳಿಂದ ಮಾಹಿತಿ ಕೋರಿದರು. ನಂತರ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಗೆ ಸುಮಾರು 5,400 ಕೋಟಿ ರೂ.ಗಳಷ್ಟು ಬಂಡವಾಳ ಹೂಡಲಾಗಿದೆ ಎಂದರು. ಸಂಪೂರ್ಣ ವಿವರ ನೀಡಿ ಎಂದಾಗ ಅರ್ಧಗಂಟೆ ಕಳೆದರೂ ಸಮಗ್ರ ಮಾಹಿತಿ ಲಭ್ಯವಾಗಲಿಲ್ಲ. ಒಟ್ಟಾರೆ ಅವರ ವರ್ತನೆ ಬೆಟ್ಟ ಅಗೆದು ಇಲಿ ಹಿಡಿದಂತಿತ್ತು. ಮೂಗಿಗಿಂತ ಮೂಗುತಿ ಭಾರ ಎನ್ನುವಂತೆ ರಾಜ್ಯ ಬಿಜೆಪಿ ಸರಕಾರ ವಿದ್ಯುತ್ ಉತ್ಪಾದನೆಗಿಂತ ವಿದ್ಯುತ್ ಖರೀದಿಗೆ ಹೆಚ್ಚಿನ ಒತ್ತು ನೀಡಿರುವುದಂತೂ ಸ್ಪಷ್ಟವಾಗಿದೆ.
ರೈತರು ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಬಳಕೆ ಮಾಡುತ್ತಾರೆ. ಅವರು ಕಡಿಮೆ ವಿದ್ಯುತ್ ಬಳಸಬೇಕು. ಟ್ರಾನ್ಸ್ ಫಾರ್ಮ ಗಳ ವಿಫಲತೆ ಹೆಚ್ಚಾಗಿದ್ದು, ರೈತರು ಹೆಚ್ಚು ವಿದ್ಯುತ್ ಬಳಕೆ ಮಾಡುತ್ತಿರುವುದರಿಂದ ಬೇಡಿಕೆಯೂ ಹೆಚ್ಚಾಗಿದೆ. ಇಂಧನ ಮಿತವ್ಯಯಕ್ಕೆ ಒತ್ತು ನೀಡಬೇಕೆಂದು ಸಲಹೆ ನೀಡಿದರು. ರೈತರಿಗೆ ಕೇವಲ ಎರಡು ಗಂಟೆ ಮಾತ್ರ ವಿದ್ಯುತ್ ನೀಡಲಾಗುತ್ತಿದೆ. ಇದಕ್ಕಿಂತ ಹೆಚ್ಚಿನ ವಿದ್ಯುತ್ ಲಭ್ಯವಾಗುತ್ತಿಲ್ಲ. ಅನಗತ್ಯವಾಗಿ ರೈತರ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದು ಹೇಳಿದಾದ ಅದಕ್ಕೂ ಸಚಿವರು ಕೋಪಿಸಿಕೊಂಡರು. ಹೆಚ್ಚುತ್ತಿರುವ ಬೇಡಿಕೆಯಿಂದಾಗಿ 1 ಸಾವಿರ ಮೆಗಾವ್ಯಾಟ್ ವಿದ್ಯುತ್ ಕೊರತೆಯಿರುವುದರಿಂದ ಬೇಡಿಕೆಯಷ್ಟು ವಿದ್ಯುತ್ ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಒಂದು ಹಂತದಲ್ಲಿ ಅಸಹಾಯಕತೆಯನ್ನು ಸಚಿವರು ವ್ಯಕ್ತಪಡಿಸಿದರು.
ಎರಡು ಲಕ್ಷ ಕೊಳವೆ ಬಾವಿ: ಬರಪೀಡಿತ ತಾಲೂಕುಗಳಲ್ಲಿ ಸುಮಾರು ಎರಡು ಲಕ್ಷ ಕೊಳವೆಬಾವಿ ಕೊರೆಯಲು ರೈತರು ಮುಂದಾಗಿದ್ದಾರೆ. ಅಲ್ಲದೇ, ಒಂದು ಲಕ್ಷಕ್ಕೂ ಹೆಚ್ಚು ಅಕ್ರಮ ಪಂಪ್ ಸೆಟ್ ಗಳ ಮೂಲಕ ನೀರೆತ್ತಲಾಗುತ್ತಿದೆ. ಇದರಿಂದ ಗ್ರಿಡ್ ಮೇಲೆ ಭಾರೀ ಒತ್ತಡ ಬೀಳುತ್ತಿದೆ. ರೈತ ಸಮುದಾಯ ಅಗತ್ಯ ಪ್ರಮಾಣದಲ್ಲಿ ವಿದ್ಯುತ್ ಬಳಕೆ ಮಾಡಿಕೊಂಡರೆ ಗ್ರಿಡ್ ಮೇಲೆ ಒತ್ತಡ ಕಡಿಮೆ ಮಾಡಲು ಸಾಧ್ಯ. ಒಂದು ವೇಳೆ ಹೆಚ್ಚು ಬಳಕೆಯಾದರೆ ಉತ್ತರ ಭಾರತದಲ್ಲಿ ಆದ ಪರಿಸ್ಥಿತಿ ನಮ್ಮಲ್ಲಿಯೂ ಬರಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ವಿದ್ಯುತ್ ಸರಬರಾಜು ಹಾಗೂ ಲೈನ್ಸ್ ಗಳ ಸುಧಾರಣೆ ಮತ್ತು ವಿದ್ಯುತ್ ಘಟಕಗಳ ಆಧುನೀಕರಣಕ್ಕೆ ಮೂರು ವರ್ಷದಲ್ಲಿ ಹತ್ತೂವರೆ ಸಾವಿರ ಕೋಟಿ ರೂಗಳನ್ನು ವೆಚ್ಚ ಮಾಡಲಾಗಿದೆ. ವಿದ್ಯುತ್ ಸುಧಾರಣೆಗೆ ಅಗತ್ಯ ಕ್ರಮ ಕೈಗೊಂಡಿರುವುದರಿಂದ ಕಳೆದ ವಾರ ಉತ್ತರ ಭಾರತದಲ್ಲಿ 22 ರಾಜ್ಯಗಳಲ್ಲಿ ಕಗ್ಗತ್ತಲಿನ ವಾತಾವರಣ ನಿರ್ಮಾಣವಾಗಿತ್ತು. ರಾಜ್ಯದಲ್ಲಿ ವಿದ್ಯುತ್ ಜಾಲ ಸಮರ್ಪಕವಾಗಿ ಮತ್ತು ತೊಂದರೆಯಿಲ್ಲದೆ ಕಾರ್ಯ ನಿರ್ವಹಿಸುವಂತಹ ಆಧುನಿಕ ಯಂತ್ರಗಳನ್ನು ಅಳವಡಿಸಿರುವುದೇ ಇದಕ್ಕೆ ಕಾರಣ ಎಂದು ಹೇಳಿದರು.
ರಾಜ್ಯದ ಜಲಾಶಯಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದರೂ ಕಳೆದ ಮೂರ್ನಾಲ್ಕು ದಿನಗಳಿಂದ ಬೀಳುತ್ತಿರುವ ಮಳೆಯಿಂದಾಗಿ ಈ ತಿಂಗಳ ಅಂತ್ಯದ ವೇಳೆಗೆ ಜಲಾಶಯಗಳಲ್ಲಿ ನೀರಿನ ಒಳಹರಿವಿನ ಪ್ರಮಾಣ ಗಣನೀಯವಾಗಿ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಡಿಸೆಂಬರ್ ವರೆಗೆ ರಾಜ್ಯದ ಜಲಾಶಯಗಳಿಂದ ಕಡಿಮೆ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಮಾಡಲು ಸೂಚಿಸಲಾಗಿದೆ ಎಂದರು.
ಪವನ ವಿದ್ಯುತ್ ಮತ್ತು ಶಾಖೋತ್ಪನ್ನ ವಿದ್ಯುತ್ ಗಳಿಂದ ಹೆಚ್ಚು ವಿದ್ಯುತ್ ಉತ್ಪಾದನೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದು, ಈ ನಿಟ್ಟಿನಲ್ಲಿ ಪವನ ವಿದ್ಯುತ್ನಿಂದ ರಾಜ್ಯಕ್ಕೆ ಪ್ರತಿದಿನ 1200 ಮೆಗಾವ್ಯಾಟ್ ವಿದ್ಯುತ್ ಸರಬರಾಜು ಆಗುತ್ತಿರುವುದರಿಂದ ಬೇಡಿಕೆಯ ಶೇಕಡಾ 90ರಷ್ಟು ಸರಬರಾಜು ಮಾಡಲು ಸಾಧ್ಯವಾಗುತ್ತಿದೆ ಎಂದರು.
Overdrawing power may lead to blackout: Shobha Karandlaje
Bangalore: State Energy Minister Shobha Karandlaje has said that the state government has spent Rs 9500 crore for power purchase purposes. She said the demand for power has increased as the farming community was using more electricity, Water is being drawn from over one lakh illegal pumpsets leading to increased pressure on grids, she added.
29ರಿಂದ ವಿಧಾನ ಮಂಡಲ ಅಧಿವೇಶನ
ಬೆಂಗಳೂರು: ಮೇ 29 ರಿಂದ ವಿಧಾನ ಮಂಡಲದ ಅಧಿವೇಶನವನ್ನು ನಡೆಸಲು ನಿರ್ಧರಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೇ 31 ರಂದು ಸ್ಪೀಕರ್ ಸ್ಥಾನಕ್ಕೆ...
ಭ್ರಷ್ಟಾಚಾರಕ್ಕೆ ಅವಕಾಶ ನೀಡದಂತೆ ಸಚಿವರಿಗೆ ಸಿಎಂ ಕರೆ
ಬೆಂಗಳೂರು: ಭ್ರಷ್ಟಾಚಾರ ನಡೆಸಿದ ಸರ್ಕಾರವನ್ನು ಹೊರಗಿಟ್ಟು ಕಾಂಗ್ರೆಸ್ ಗೆ ಜನ ಅವಕಾಶ ಮಾಡಿಕೊಟ್ಟಿದ್ದಾರೆ. ಆದ್ದರಿಂದ ಭ್ರಷ್ಟಾಚಾರಕ್ಕೆ ಅವಕಾಶ ನೀಡದೆ ಕಾನೂನು ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ...
ಶ್ರೀಶಾಂತ್ ಹೋಟೆಲ್ ರೂಮ್ ಗೆ ಪೊಲೀಸ್ ದಾಳಿ
ಮುಂಬಯಿ: ಮುಂಬಯಿ ಪೊಲೀಸರು ಶನಿವಾರ ಪಂಚತಾರಾ ಹೋಟೆಲ್ ಒಂದರ ಮೇಲೆ ದಾಳಿ ಮಾಡಿ ಸ್ಪಾಟ್ ಫಿಕ್ಸಿಂಗ್ ನಲ್ಲಿ ಬಂಧಿತನಾಗಿರುವ ರಾಜಸ್ಥಾನ ರಾಯಲ್ಸ್ ನ ಆಟಗಾರ ಎಸ್. ಶ್ರೀಶಾಂತ್ ಗೆ ಸಂಬಂಧಪಟ್ಟ ಲ್ಯಾಪ್ ಟಾಪ್
ಖಾದರ್, ರೈ, ಜೈನ್, ಸೊರಕೆ ಸಹಿತ ಸಚಿವರ ಪ್ರಮಾಣವಚನ
ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ನೂತನ ಸಚಿವರುಗಳು ಶನಿವಾರ ರಾಜ್ಯಪಾಲರ ಭವನದ ಗಾಜಿನಮನೆಯಲ್ಲಿ ನಡೆದ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಇಂದು ನೂತನ ಸಚಿವರ ಪ್ರಮಾಣ ವಚನ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸಚಿವ ಸಂಪುಟ ಇಂದು ಅಸ್ಥಿತ್ವಕ್ಕೆ ಬರಲಿದ್ದು, ಬೆಳಿಗ್ಗೆ 10.30ಕ್ಕೆ ರಾಜಭವನದಲ್ಲಿ ನಡೆಯುವ ಸರಳ ಸಮಾರಂಭದಲ್ಲಿ 29 ಮಂದಿ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಸ್ಪಾಟ್ ಫಿಕ್ಸಿಂಗ್: ಕರ್ನಾಟಕದ ಅಮಿತ್ ಸಿಂಗ್ ಸೆರೆ
ಹೊಸದಿಲ್ಲಿ: ಐಪಿಎಲ್ ನಲ್ಲಿ ತಲ್ಲಣವನ್ನು ಉಂಟು ಮಾಡಿರುವ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಬುಕ್ಕಿಗಳು ಮತ್ತು ಆಟಗಾರರ ಮಧ್ಯವರ್ತಿಯಾಗಿದ್ದ ರಾಜಸ್ಥಾನ ರಾಯಲ್ಸ್ ನ ಮಾಜಿ ವೇಗಿ ಅಮಿತ್ ಸಿಂಗ್ ನನ್ನು ಪೊಲೀಸರು ಬಂಧಿಸಿದ್ದಾರೆ.
ನಾನು ನಿರ್ದೋಷಿ, ಹಗರಣದಲ್ಲಿ ನನ್ನನ್ನು ಸಿಲುಕಿಸಲಾಗಿದೆ: ಶ್ರೀಶಾಂತ್
ಹೊಸದಿಲ್ಲಿ: ಐಪಿಎಲ್ ನಲ್ಲಿ ಸ್ಪಾಟ್ ಫಿಕ್ಸಿಂಗ್ ಆರೋಪದಲ್ಲಿ ಸಿಲುಕಿರುವ ವೇಗಿ ಶ್ರೀಶಾಂತ್, ತಾನು ನಿರ್ದೋಷಿ ಮತ್ತು ಪ್ರಕರಣದಲ್ಲಿ ತನ್ನನ್ನು ಸಿಲುಕಿಸಲಾಗಿದೆ ಎಂದು ದೆಹಲಿ ಕೋರ್ಟ್ ಮುಂದೆ ಹೇಳಿದರು.
ಲಾಕೆಟ್, ಕರ್ಚಿಫ್ ಸ್ಪಾಟ್ ಫಿಕ್ಸಿಂಗ್ ಸಂಕೇತಗಳು!
ನವದೆಹಲಿ: ಐಪಿಎಲ್ ನಲ್ಲಿ ಸ್ಫಾಟ್ ಫಿಕ್ಸಿಂಗ್ ನಲ್ಲಿ ನಡೆಸಿದ ಆರೋಪದ ಮೇಲೆ ಬಂಧಿತರಾಗಿರುವ ರಾಜಸ್ಥಾನ ರಾಯಲ್ಸ್ ತಂಡದ ಎಸ್. ಶ್ರೀಶಾಂತ್, ಅಜಿತ್ ಚಾಂಡಿಲಾ ಮತ್ತು ಅಂಕಿತ್ ಚೌವ್ಹಾಣ್ ಬುಕ್ಕಿಗಳಿಗೆ ನಿರ್ದೇಶನ ನೀಡಲು ವಿವಿಧ
ನಾಳೆ ಸಚಿವರ ಪ್ರಮಾಣ ವಚನ?
ಬೆಂಗಳೂರು: ಸಚಿವ ಸಂಪುಟಕ್ಕೆ 22 ಸಚಿವರನ್ನು ಸೇರ್ಪಡೆ ಮಾಡಿಕೊಳ್ಳಲು ಹೈಕಮಾಂಡ್ ಸೂಚಿಸಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ನಾಳೆ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯುವ ಸಾಧ್ಯತೆ ದಟ್ಟವಾಗಿದೆ.
ಮೊದಲ ಮಹಿಳಾ ಯೋಧೆ ಸಂಶಯಾಸ್ಪದ ಸಾವು
ನವದೆಹಲಿ: ಭಾರತೀಯ ಸೇನೆಯ ಮೊದಲ ಮಹಿಳಾ ಯೋಧೆ ಶಾಂತಿ ತಿಗ್ಗಾ(37) ಅವರು ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಈ ಬಗ್ಗೆ ಹಲವಾರು ಸಂಶಯಗಳು ಕಾಡಲಾರಂಭಿಸಿದೆ.
ಚೆನ್ನೈ ಪೊಲೀಸರ ದಾಳಿ: 6 ಮಂದಿ ಬುಕ್ಕಿಗಳ ಸೆರೆ
ಚೆನ್ನೈ: ಸ್ಪಾಟ್ ಫಿಕ್ಸಿಂಗ್ ಆರೋಪದ ಮೇಲೆ ರಾಜಸ್ಥಾನ ರಾಯಲ್ಸ್ ನ ಮೂರು ಮಂದಿ ಆಟಗಾರರು ಸಿಕ್ಕಿಬಿದ್ದ ಮರುದಿನ ಚೆನ್ನೈ ಪೊಲೀಸರು 10 ಕಡೆಗಳಲ್ಲಿ ದಾಳಿ ಮಾಡಿ 6 ಮಂದಿ ಬುಕ್ಕಿಗಳನ್ನು ಬಂಧಿಸಿದ್ದಾರೆ.
ದೆಹಲಿಯಲ್ಲಿ ವೈದ್ಯನಿಂದ ರೋಗಿಯ ಅತ್ಯಾಚಾರ
ಹೊಸದಿಲ್ಲಿ: ದೆಹಲಿಯ ಸರ್ಕಾರಿ ಆಸ್ಪತ್ರೆಯ 51ರ ಹರೆಯದ ವೈದ್ಯ ತನ್ನ ಕ್ಲಿನಿಕ್ ನಲ್ಲಿ 21ರ ಹರೆಯದ ರೋಗಿಯೊಬ್ಬಳನ್ನು ಅತ್ಯಾಚಾರ ಮಾಡಿದ ಪ್ರಕರಣ ನಡೆದಿದೆ. ದೆಹಲಿಯ ಜಗ್ ಪ್ರವೇಶ್ ಚಂದ್ರ ಆಸ್ಪತ್ರೆಯಲ್ಲಿ
ದೆಹಲಿಯಲ್ಲಿ 12ನೇ ತರಗತಿ ಬಾಲಕಿಯ ಗುಂಡಿಕ್ಕಿ ಹತ್ಯೆ
ಹೊಸದಿಲ್ಲಿ: ದಕ್ಷಿಣ ದೆಹಲಿಯಲ್ಲಿ 12ನೇ ತರಗತಿಯಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿನಿಯೊಬ್ಬಳನ್ನು ಹುಡುಗನೊಬ್ಬ ಗುಂಡು ಹಾರಿಸಿ ಕೊಂದ ಘಟನೆ ನಡೆದಿದೆ. ಮುನಿಕ್ರಾ ಪ್ರದೇಶದ ಬುಧ ವಿಹಾರ್ ಪ್ರದೇಶದಲ್ಲಿರುವ
ಬಿಜೆಪಿ ನಾಯಕನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು
ಮುಂಬಯಿ: ಮಹಾರಾಷ್ಟ್ರದ ಬಿಜೆಪಿಯ ಎಂಎಲ್ ಸಿ ಮಧು ಚೌವಾಣ್ ತನ್ನ ಪಕ್ಷದ ಮಾಜಿ ಕಾರ್ಯಕರ್ತೆಯನ್ನು ಅತ್ಯಾಚಾರ ಮಾಡಿದ ಆರೋಪವನ್ನು ಎದುರಿಸುತ್ತಿದ್ದಾರೆ.
ಮಧು ಚೌವಾಣ್ ವಿರುದ್ಧ ಮುಂಬಯಿ ಪೊಲೀಸರು
ಹಲ್ಲೆಗೊಳಗಾಗಿದ್ದ ಪಾಕ್ ಕೈದಿ ಸಾವು
ಚಂಡೀಗಡ: ಜಮ್ಮು ಜೈಲಿನಲ್ಲಿ ಕಳೆದ ವಾರ ಸಹ ಕೈದಿಗಳಿಂದ ಹಲ್ಲೆಗೊಳಗಾಗಿದ್ದ ಪಾಕಿಸ್ತಾನದ ಕೈದಿ ಸಾನುಲ್ಲಾ ರಂಜಾಯ್ ಗುರುವಾರ ಬೆಳಗ್ಗೆ ಮೃತಪಟ್ಟಿದ್ದಾನೆ.
ಹತ್ಯೆ ಪ್ರಕರಣ: ತಲ್ವಾರ್ ದಂಪತಿ ಹೇಳಿಕೆ ದಾಖಲಿಸಲು ಕೋರ್ಟ್ ಆದೇಶ
ಘಜಿಯಾಬಾದ್: ಆರುಷಿ-ಹೇಮರಾಜ್ ಹತ್ಯಾ ಪ್ರಕರಣದಲ್ಲಿ ಮಂಗಳವಾರ ಸಿಬಿಐ ವಿಶೇಷ ನ್ಯಾಯಾಲಯವು ರಾಜೇಶ್ ಮತ್ತು ನುಪುರ್ ತಲ್ವಾರ್ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಿದೆ.
ಅತ್ಯಾಚಾರ ಪ್ರಕರಣ: ವೈದ್ಯಕೀಯ ವಿದ್ಯಾರ್ಥಿನಿ ದೇಹದ ಮೇಲಿತ್ತು ಕಚ್ಚಿದ ಗುರುತು!
ಹೊಸದಿಲ್ಲಿ: ಕಳೆದ ವರ್ಷ ಡಿಸೆಂಬರ್ ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ವೈದ್ಯಕೀಯ ವಿದ್ಯಾರ್ಥಿನಿಯನ್ನು ಇಬ್ಬರು ಕಚ್ಚಿದ ಗುರುತುಗಳಿದ್ದವು ಎಂದು ಹೇಳಲಾಗಿದೆ. ಈ ಎರಡು ಗುರುತುಗಳು
ಬಾಲಿವುಡ್ ನಿರ್ಮಾಪಕಿ ಏಕ್ತಾ ಕಪೂರ್ ಮನೆ, ಕಚೇರಿಗೆ ಐಟಿ ದಾಳಿ
ಮುಂಬಯಿ: ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಮಂಗಳವಾರ ಬಾಲಿವುಡ್ ನಿರ್ಮಾಪಕಿ ಏಕ್ತಾ ಕಪೂರ್ ಮನೆ ಹಾಗೂ ಕಚೇರಿಗೆ ದಾಳಿ ಮಾಡಿದ್ದಾರೆ. ಕಿರುತೆರೆಯಲ್ಲಿ ತನ್ನ ಧಾರಾವಾಹಿಗಳಿಂದ ಹೆಚ್ಚಿನ ಪ್ರಚಾರವನ್ನು ಪಡೆದುಕೊಂಡಿರುವ
ಹೆಲಿಕಾಪ್ಟರ್ ನಲ್ಲಿ ವಧುವನ್ನು ಕರೆತಂದ ಬಿಹಾರದ ಕಾಂಗ್ರೆಸ್ ಶಾಸಕ
ಪಟ್ನಾ: ಜನರಿಗೆ ಮೂಲಭೂತ ಸೌಲಭ್ಯಗಳಿಲ್ಲದಿದ್ದರೂ ನಮ್ಮ ರಾಷ್ಟ್ರದ ಎಲ್ಲಾ ರಾಜ್ಯಗಳ ಶಾಸಕರು ತಮ್ಮ ಶ್ರೀಮಂತಿಕೆಯನ್ನು ತೋರಿಸುವುದರಲ್ಲಿ ಹಿಂದೆ ಬಿದ್ದಿಲ್ಲ. ಬಿಹಾರದಲ್ಲಿ ಕಾಂಗ್ರೆಸ್ ನ ಶಾಸಕನೊಬ್ಬ ಹೆಲಿಕಾಪ್ಟರ್ ನಲ್ಲಿ ವಧುವನ್ನು ಕರೆದುಕೊಂಡು ಬಂದಿದ್ದಾನೆ.
ಪ್ರತಿಭಟನಾ ನಿರತ ಯುವತಿಯರ ಮೇಲೆ ಹಲ್ಲೆ: ಸುಪ್ರೀಂ ಪ್ರಶ್ನೆ
ಹೊಸದಿಲ್ಲಿ: ಐದರ ಹರೆಯದ ಬಾಲಕಿಯ ವಿರುದ್ಧ ಅತ್ಯಾಚಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಯುವತಿಯ ಮೇಲೆ ಕೈಮಾಡಿರುವುದು ಯಾಕೆಂದು ಸುಪ್ರೀಂ ಕೋರ್ಟ್, ದೆಹಲಿ ಪೊಲೀಸರನ್ನು ಪ್ರಶ್ನಿಸಿದೆ.
ಪ್ರಯೋಗ ಶೀಲ ಕಲಾವಿದನ ಕಲ್ಪನೆಯಲ್ಲಿ ಮೂಡಿದ ಕಾಗದ ಭಿತ್ತಿ ಶಿಲ್ಪಗಳು
ಆಧುನಿಕತೆ ಬೆಳೆದಂತೆಲ್ಲ ಕಲೆಯು ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಲಿದೆ. ಪ್ರಸುತ್ತ ಸಂದರ್ಭದಲ್ಲಿ ಕಲಾವಿದ ತನ್ನದೇ ಆದ ಮಾಧ್ಯಮದಿಂದ ಕಲಾಕೃತಿಗಳನ್ನು ರಚಿಸುತ್ತ ತನ್ನ ಕಲ್ಪನೆಯನ್ನು ಅಭಿವ್ಯಕ್ತಿಸಲು ವಿಭಿನ್ನ ಮಾರ್ಗವನ್ನು ಕಂಡುಕೊಳ್ಳುತ್ತಿದ್ದಾನೆ.
ಮ್ಯಾಜಿಕ್ ಕಲೆಯ ಸಾಗರ ಈ ಸಾಗರ್...!
ಮ್ಯಾಜಿಕ್ ನೊಂದಿಗೆ ಕೆಲವು ಅಪಾಯಕಾರಿ ಸ್ಟಂಟ್ ಗಳನ್ನು ಮಾಡುವ ಸಾಗರ್ ಗೆ ಮನೆಯೇ ಮೊದಲ ಪ್ರಯೋಗ ಶಾಲೆ. ಚಾಪರ್ ಬ್ಲೇಡ್ ನ ಹರಿತವಾದ ಭಾಗದ ಮೇಲೆ ನಡೆದಾಡುವ ಸಾಗರ್, ಪ್ರೇಕ್ಷಕರನ್ನು ನಿಬ್ಬೆರಗಾಗುವಂತೆ ಮಾಡುವುದಲ್ಲದೆ...
ಶಿಕ್ಷಣ ವ್ಯವಸ್ಥೆಗೇ ಸವಾಲೆಸೆಯುತ್ತಿರುವ ಸ್ವರೂಪ
ಚಿತ್ರಕಲೆ ಮೂಲಕ ಸಾಧಾರಣಾ ವಿದ್ಯಾರ್ಥಿಯೊಬ್ಬ ಹೆಚ್ಚಿನ ಅಂಕ ಪಡೆಯಲು ಸಾಧ್ಯವೇ? ದಡ್ಡನೆಂದು ಬೈದು ಶಾಲೆಯಿಂದ ಹೊರದಬ್ಬಲ್ಪಟ್ಟ ವಿದ್ಯಾರ್ಥಿ ಕೇವಲ 20 ದಿನಗಳ ತರಬೇತಿಯ ಮೂಲಕ ಡಿಸ್ಟಿಂಕ್ಷನ್ ಪಡೆಯಲು ಸಾಧ್ಯವೇ? ಡ್ಯಾನ್ಸ್ ಮಾಡಿ ಗಣಿತ-ವಿಜ್ಞಾನದಲ್ಲಿ...ವಿಶೇಷ
ಕುಟುಂಬವೆಂಬ ವಟವೃಕ್ಷದ ಕೆಳಗೆ...
ಮೇ 15 ವಿಶ್ವ ಅಂತರರಾಷ್ಟ್ರೀಯ ಕುಟುಂಬ ದಿನ, ಸತ್ಸಂಪ್ರದಾಯದಲ್ಲಿ ವಿಶ್ವಕ್ಕೆ ಮಾದರಿಯಾದ ಭಾರತದ ಕುಟುಂಬ ಪದ್ಧತಿಯಲ್ಲಿ ಆತಂಕಕಾರಿಯಲ್ಲದಿದ್ದರೂ ಅಲ್ಪಪ್ರಮಾಣದ ಪಾಶ್ಚಾತ್ಯರ ಅನುಕರಣೆಯಾಗುತ್ತಿರುವುದು ಅಸಹನೀಯವೇ.
ಇತಿಹಾಸದ ಕಥೆ ಹೇಳುತ್ತಿದೆ ಮಡಿಕೇರಿ ಅರಮನೆ
ಕೊಡಗಿನ ಮುಖ್ಯ ಪಟ್ಟಣ ಮಡಿಕೇರಿಗೆ ಆಗಮಿಸುವ ಪ್ರವಾಸಿಗರನ್ನು ಎತ್ತರದ ಸಮತಟ್ಟಾದ ಸ್ಥಳದಲ್ಲಿ ಕಲ್ಲುಕೋಟೆ ನಡುವೆ ನೆಲೆನಿಂತ ಅರಮನೆ ಗಮನಸೆಳೆಯುತ್ತದೆ. ಈ ಅರಮನೆ ಮೈಸೂರು ಅರಮನೆಯಂತೆ ವಿಶ್ವವಿಖ್ಯಾತಿ ಪಡೆಯದಿರಬಹುದು.
ಸ್ತ್ರೀಯರ ಮಹತ್ವದ ದಿನ ಅಕ್ಷಯ ತೃತೀಯಾ....
ಅಕ್ಷಯ ತದಿಗೆ ಸ್ತ್ರೀಯರಿಗೆ ಮಹತ್ವದ್ದಾಗಿದೆ. ಸ್ತ್ರೀಯರು ಚೈತ್ರದಲ್ಲಿ ಕೂರಿಸಿದ ಚೈತ್ರ ಗೌರಿಯನ್ನು ಈ ದಿನ ವಿಸರ್ಜನೆ ಮಾಡುತ್ತಾರೆ. ಇದರ ಪ್ರಯುಕ್ತ ಅರಿಶಿನ-ಕುಂಕುಮ ನೀಡುವ ಕಾರ್ಯಕ್ರಮವನ್ನೂ ಮಾಡುತ್ತಾರೆ.
ಅಮ್ಮಾ ಜಸ್ಟ್ ಫ್ರೆಂಡ್ ಅಲ್ಲ, ಬೆಸ್ಟ್ ಫ್ರೆಂಡ್!
ಅಮ್ಮಾ ನಿನ್ನ ತೋಳಿನಲ್ಲಿ ಕಂದ ನಾನು... ನಿನ್ನಾ ಸಂಗ ಆಡಲೆಂದು ಬಂದೆ ನಾನು... ಪದ್ಯದ ಸಾಲುಗಳಲ್ಲಿ ಅಮ್ಮಾ... ಅನ್ನೋ ಪದವನ್ನು ಕೇಳಿದಾಗ ಹೆತ್ತು, ಹೊತ್ತು, ಸಾಕಿ ಸಲಹಿದ ಅಮ್ಮನನ್ನು ನೆನೆಸಿಕೊಳ್ಳದವರು ಇರಲಿಕ್ಕಿಲ್ಲ.
ಕೊಡಗಿನಲ್ಲಿ ಕಂಡ ಕಂಡವರನ್ನು ಬೈಯ್ಯೋ ಹಬ್ಬ...
ಇದೊಂದು ವಿಚಿತ್ರವಾದರೂ ವಿಶಿಷ್ಟ ಹಬ್ಬ. ಬಹುಶಃ ಇಂತಹವೊಂದು ಹಬ್ಬವನ್ನು ಕೊಡಗು ಹೊರತುಪಡಿಸಿದರೆ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಇಷ್ಟಕ್ಕೂ ಇದ್ಯಾವುದಪ್ಪಾ ಅಂತಹ ವಿಚಿತ್ರಹಬ್ಬ ಎಂಬ ಕುತೂಹಲ ಪ್ರತಿಯೊಬ್ಬರನ್ನು ಕಾಡದಿರದು.
ಸ್ಯಾಂಡಲ್ ವುಡ್ ನಲ್ಲಿ ಮತ್ತೊಬ್ಬ ಸರ್ಜಾ
ಕನ್ನಡದವರೇ ಆಗಿರುವ ತಮಿಳು, ತೆಲುಗು ಚಿತ್ರರಂಗದಲ್ಲಿ ವಿಶೇಷವಾಗಿ ಹೆಸರು ಮಾಡಿರುವ, ಬಹುಮುಖ್ಯವಾಗಿ ಈ ವರ್ಷ ಕನ್ನಡದ ಪ್ರಸಾದ್ ಚಿತ್ರದ ಮನೋಜ್ಞ ಅಭಿನಯಕ್ಕಾಗಿ ಈ ವರ್ಷದ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿಯನ್ನು...
ಬನ್ನಿ ಬಿಳಿಗಿರಿರಂಗನ ಬೆಟ್ಟಕ್ಕೆ...... ನಿಸರ್ಗದ ಸ್ವರ್ಗಕ್ಕೆ......
ಚಾಮರಾಜನಗರ ಜಿಲ್ಲೆಯ ಪ್ರವಾಸಿ ತಾಣಗಳಲ್ಲೊಂದಾದ ಬಿಳಿಗಿರಿರಂಗನ ಬೆಟ್ಟವು ಮೈಸೂರಿನಿಂದ ಸುಮಾರು ತೊಂಬತ್ತು ಕಿ.ಮೀ. ಹಾಗೂ ಚಾಮರಾಜನಗರ ಜಿಲ್ಲೆಯ ಯಳಂದೂರಿನಿಂದ ಸುಮಾರು 15ಕಿಮೀ ದೂರದಲ್ಲಿದೆ.

Write Your Comment Here...