ಯೌವನದ ಹೊಳೆಯಲ್ಲಿ ಜಾರಿ ಬಿದ್ದೀರಿ ಜೋಕೆ!
[Updated 30/07/2012 04:48 pm]ಕಿರಣ್ ನಿರ್ಕಾಣ್
ಮೊಬೈಲ್ ಮೆಸೇಜ್ ಟೋನ್ ರಿಂಗಣಿಸಿದಾಗ ಚಿತ್ತವತ್ತ ತೆರಳಿತು. ಪರಿಚಿತ ಹೆಸರಿನ ಗೆಳೆಯನ ಫಾರ್ವರ್ಡ್ ಮೆಸೇಜ್ ವೀಕ್ಷಿಸಲು ಓಪನ್ ಬಟನ್ ಅದುಮಿದಾಗ ಡಿಸ್ಪ್ಲೇ ಮೇಲೆ ಪದಪುಂಜಗಳು ಗೋಚರಿಸಿದವು. ಯಾರೊಬ್ಬರ ಮೇಲೆ ಪ್ರೀತಿಯ ಮುಲಾಖಾತ್ ಆಗದ ಜೀವವಿಲ್ಲ. ಇಂದು ಆಕೆ ಅಥವಾ ಆತ ನಿನ್ನ ಪತಿ ಅಥವಾ ಪತ್ನಿ ಅಥವಾ ಪತ್ನಿಯಾಗಿದ್ದಲ್ಲಿ ಮಾತ್ರ ಖಂಡಿತ ಬಾಲಿಷವಾದ ಮಾತುಗಳೆಂದು ಮೇಲ್ನೋಟಕ್ಕೆ ಕಂಡರೂ ಏಕಾಂತದ ಸಮಯದಲ್ಲಿ ಮನದೊಳಗೆ ಈ ವಾಕ್ಯ ಕಿಚ್ಚೆಬ್ಬಿಸುವುದಂತೂ ನಿಜ.
ವಯೋ ಸಹಜ ಕಾಮನೆಗಳಿಗೆ ಬಲಿಯಾಗಿ ಮನಸ್ಸು ಪರವ್ಯಕ್ತಿಯತ್ತ ಆಕರ್ಷಿತವಾಗುವುದು ಸಹಜ. ಕೆಲವು ಬಾರಿ ಮನಸ್ಸು ಮಾತ್ರವಲ್ಲದೇ ದೇಹ ಕೂಡಾ ಪರವ್ಯಕ್ತಿಯ ತೋಳ ತೆಕ್ಕೆಯಲ್ಲಿ ಒಂದಾಗುತ್ತದೆ. ಯಾವುದು ಪವಿತ್ರ, ವಿವಾಹದ ಚೌಕಟ್ಟಿನ ಕಟ್ಟುಪಾಡಿನೊಳಗಡೆಯೇ ಬಂಧಿಯಾಗಿ ಅದರ ಅಮೃತದ ಸವಿಯನ್ನು ಅನುಭವಿಸಿದರಷ್ಟೇ ಬಾಳಿಗೊಂದು ಅರ್ಥ ಎಂಬ ವಿಚಾರವು ಅನರ್ಥವಾಗಿ ವಿವಾಹ ಪೂರ್ವ ಹೊರೆಗೆ ಕಾರಣವಾಗಿ ಬಿಡುತ್ತದೆ.
ಯಾವುದೋ ಒಂದು ಕೆಟ್ಟ ಗಳಿಗೆ ದೇಹವನ್ನು ಸಮರ್ಪಿಸಿರುತ್ತೇವಲ್ಲ. ಹಾಗಾದರೆ ಮುಂದೇನು ಎಂದು ಕಾಡಲಾರಂಭಿಸಿದಾಗಲೇ ಮನಸ್ಸಿನಲ್ಲಿ ತಳಮಳ ಉಂಟಾಗುವುದು. ಕೆಲವರು ಆಧುನಿಕ ಜಗತ್ತಿನ ಸುರಕ್ಷತಾ ಸಾಧನಗಳ ಬೆನ್ನತ್ತಿದರೆ, ಇನ್ನೂ ಕೆಲವರು ಬೆಂಕಿಯ ಜ್ವಾಲೆಯ ಬಿಸಿಗೆ ಬೆಣ್ಣೆ ಕರಗಿದಂತೆ ಕರಗಿ ಹೋಗಿರುತ್ತಾರೆ. ಕೆಲವರು ಕೆರೆ, ಬಾವಿಯ ಹಾದಿ ನೋಡಿದರೆ ಇನ್ನೂ ಕೆಲವರು ಆದದ್ದೆಲ್ಲಾ ಒಂದು ಕೆಟ್ಟ ಕನಸೆಂದು, ಬದುಕಿನ ಪುಟದ ಮಗ್ಗಲು ಬದಲಾಯಿಸುತ್ತಾರೆ.
ಆದರೆ ಮೊದಲ ಸ್ವಾತಿ ಮುತ್ತಿನ ಮಳೆಹನಿಗೆ ಮೈಯೊಡ್ಡಿದಾಗ ಆಗುವ ಹಿತವಾದ ಸವಿ ನೆನಪು ಮನದಾಳದಿಂದ ಮಾಸುವುದಿಲ್ಲವೋ, ಅದೇ ರೀತಿ ಆ ಗಳಿಗೆಯ ನೆನಪು ಸಹ ಮನದಾಳದಿಂದ ಮರೆಯಾಲಾಗದ ನೆನಪಿನ ರಥವನ್ನು ವಿವಾಹ ಎಂಬ ಕುದುರೆಗೆ ಕಟ್ಟಿ ಪತಿ ಅಥವಾ ಪತ್ನಿ ಎಂಬ ಸಾರಥಿಯ ಕೈಗೆ ಇತ್ತಾಗ ಜೀವನ ರಥ ಸಾಗಲೇಬೇಕಾದ ಅನಿವಾರ್ಯತೆ ಇರುತ್ತದೆ.
ಇಂತಹ ಸಂದರ್ಭದಲ್ಲಿ ಹಳೆ ನೆನಪುಗಳು ಮೇಲಾದರೆ, ಬಾಳ ರಥ ಓಡುವುದಾದರೂ ಹೇಗೆ ? ದಾಂಪತ್ಯ ಜೀವನದಲ್ಲಿ ಹಳೆ ಹಾಡುಗಳೇ ಪ್ರತಿಧ್ವನಿಸುತ್ತಿದ್ದರೆ ಅನುಮಾನ, ಅಪಮಾನ, ವಿರಸ, ಉಚಿತ ಉಡುಗೊರೆಗಳಾಗುತ್ತದೆ. ಅತ್ತ ಮೊದಲ ಪ್ರೀತಿಯು ಸಿಗದು ಇತ್ತ ದೇವ ಸಾಕ್ಷಿಯಾಗಿ ತುಳಿದ ಸಪ್ತಪದಿಯ ಹಾದಿ ಕೂಡಾ ಕಗ್ಗಂಟಾಗಬಹುದು.
ಯೌವನ ಎಂಬ ಮರ್ಕಟ ಪ್ರಾಯದಲ್ಲಿ, ಪಾಚಿ ಮೇಲೆ ನಡೆಯುವ ಸನ್ನಿವೇಶದಲ್ಲಿ ಕಾಲು ಜಾರದಂತೆ ಎಚ್ಚರ ವಹಿಸುವುದು ನಮ್ಮ ಕೈಯಲ್ಲಿದೆ. ಕಾಲು ಜಾರಿದರೆ ಎದ್ದು ನಿಲ್ಲುವ ತಾಕತ್ತು, ಎದ್ದು ನಿಂತಾಗ ಹಿಂದೆ ಕಾಲು ಜಾರಿದ್ದನ್ನು ನೆನಪಿಸಿಕೊಳ್ಳದ ವರ್ಚಸ್ಸು, ನಿಮ್ಮಲ್ಲಿದ್ದರೆ ಬಾಳು ನಂದಾದೀಪವಾಗುತ್ತದೆ. ಅದರಲ್ಲಿ ಬೆಳಕು ತುಂಬಿರುತ್ತದೆ. ಅವರವರ ಭಾವಕ್ಕೊಪ್ಪುವ ಈ ವಿಚಾರಗಳಲ್ಲಿ ಹಲವು ಮನಸ್ಸುಗಳಲ್ಲಿ ನೂರಾರು ವಿಚಾರ ಧಾರೆಗಳಿರಬಹುದು. ಮನಸ್ಸಿದ್ದರೆ ಇಲ್ಲಿ ಹಂಚಿಕೊಳ್ಳಿ.
ಪಟಾಕಿ ಬಗ್ಗೆ ಒಂಚೂರು ಹುಷಾರ್!
ಬಾಳಲ್ಲಿ ಇರುವ ಅಂಧಕಾರವನ್ನು ಒದ್ದೋಡಿಸಿ ಬೆಳಕು ಮೂಡಲಿ ಎಂದು ಆಚರಿಸುವ ಹಬ್ಬವೇ ಬೆಳಕಿನ ಹಬ್ಬ ದೀಪಾವಳಿ. ಹಿಂದೆ ಬೆಳಕಿನ ಹಬ್ಬವೆಂದರೆ ಮನೆ ಮುಂದಿನ ತುಳಸಿ ಕಟ್ಟೆ, ಮನೆಯ ಪ್ರವೇಶ ದ್ವಾರದ ಬದಿಗಳಲ್ಲಿ ದೀಪ
ಫಸ್ಟ್ ಡೇಟಿಂಗ್ ಗೆ ನಿಮ್ಮ ಉಡುಗೆ ಹೇಗಿರಬೇಕು..?
ನೀವು ಮೊದಲ ಬಾರಿ ನಿಮ್ಮ ಹುಡುಗ ಅಥವಾ ಹುಡುಗಿಯ ಜೊತೆ ಡೇಟಿಂಗ್ ಹೋಗ್ತಾ ಇದೀರಾ?.. ಏನು ಧರಿಸೋದು ಅನ್ನೋ ಬಗ್ಗೆ ಕನ್ ಫ್ಯೂಸ್ ಆಗ್ತಾ ಇದ್ಯಾ?.. ಡೊಂಟ್ ವರಿ..
ಮೊಬೈಲ್ ಖರೀದಿಸಲು ಕೆಲವು ಸೂತ್ರ
ಐಲು ಐಲು ಐಲು ಕೈಲಿದ್ರೆ ಮೊಬೈಲು ಎಂಬ ಕನ್ನಡ ಚಿತ್ರದ ಹಾಡನ್ನು ನೀವೆಲ್ಲಾ ಕೇಳಿರಬಹುದು. ಇಂದಿನ ದಿನಗಳಲ್ಲಿ ಒಬ್ಬ ಪರ್ಫೆಕ್ಟ್ ಮ್ಯಾನ್ ಆಗಬೇಕಾದಲ್ಲಿ...
ಮೀಸೆ ಇದ್ದ ಗಂಡಸಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು...
ಕನ್ನಡ ಒಂದು ಚಿತ್ರದಲ್ಲಿ ಈ ಹಾಡನ್ನು ನೀವು ಕೇಳಿರಬಹುದು ಅಥವಾ ವೀರ ಮದಕರಿ ಚಿತ್ರದಲ್ಲಿ ನಟ ಸುದೀಪ್ ಮೀಸೆ ಮೇಲೆ ಕೈ ಇಟ್ಟು ...
ಆ್ಯಂಕರಿಂಗ್ ಕ್ಷೇತ್ರದಲ್ಲಿದೆ ಡಬಲ್ ಧಮಾಕಾ..
ಲೇಡಿಸ್ ಆಂಡ್ ಜಂಟಲ್ ಮೆನ್.. ವೆಲ್ ಕಮ್ ಟು ದ ವೀಕೆಂಡ್ಸ್ ಬಿಗ್ಗೆಸ್ಟ್ ಸಿಂಗಿಂಗ್ ಕೊನ್ಸರ್ಟ್... ಎಂದು ಮೈಕಿನ ಒಂದು ಬದಿಗೆ ತೊಂಡೆಯಂತಹ ತುಟಿಯಂಚನ್ನು ...
ಲಾಸ್ಟ್ ಬೆಂಚ್ ಟಪೋರಿಗಿರಿಗೊಂದು ಸಲಾಮ್...
ಕಾಲೇಜು ದಿನಗಳ ಸುಂದರ ದಿನಗಳನ್ನು ಕಳೆದು ಕೆಲಸದ ಜಂಜಾಟದಲ್ಲಿ ಸದಾ ಮುಳುಗಿರುವ ಹಲವರಂತೆ ನಾನೂ ಸಹ ಆಫೀಸಿನ ಕೆಲಸದಲ್ಲಿ ಮುಳುಗೆದ್ದು ಸೂರ್ಯ ತನ್ನ ಮನೆಗೆ ತೆರಳುವ ಸಮಯದಲ್ಲಿ....
ಎಲ್ಲಾ ಅಪ್ಪ ಅಮ್ಮಂದಿರಿಗೂ ಆ ಭಯ ಇದ್ದೇ ಇರುತ್ತೆ
ಮಗಳು ಕಾಲೇಜಿಗೆ ಹೊರಟಾಗ ಅಮ್ಮ ಬಾರಿ ಬಾರಿ ಎಚ್ಚರಿಕೆ ನೀಡ್ತಾಳೆ. ನೋಡು, ಸುಮ್ನೆ ಹಲ್ಲು ಕಿರಿದು ನಗೋದು ಮಾಡ್ಬೇಡ. ಸುಮ್ನೆ ಕಾಲೇಜಿಗೆ ಹೋಗೋದು ಬರೋದು ಮಾಡಿದ್ರೆ ಸಾಕು. ಹುಡುಗರ ಫ್ರೆಂಡ್...
ದಾಂಡಿಯಾ ರಾತ್ರಿಗೆ ರಂಗೀನ್ ಬಣ್ಣಗಳಿಗೆ ಮೊರೆಹೋಗಿ..
ನವರಾತ್ರಿಯ ಹಲವಾರು ವಿಶೇಷತೆಗಳಲ್ಲಿ ದಾಂಡಿಯಾ ನೃತ್ಯ ಕೂಡಾ ಒಂದು. ಹಲವಾರು ಜನರು ಒಂದೆಡೆ ಕಲೆತು ದೇವಿಯ ಆರಾಧನೆ ಮಾಡಿ ದಾಂಡಿಯಾ ನೃತ್ಯಕ್ಕೆ ಹೆಜ್ಜೆ ಹಾಕುತ್ತಿದ್ದರೆ.. ನೋಡಲು ಸೊಬಗು..
ಸಾರಿ ಕಣ್ರೀ.. ಟೈಮಿಲ್ಲ
ಅಯ್ಯೋ ಸಾರಿ ಕಣ್ರೀ.. ಖಂಡಿತ ನೀವು ಹೇಳಿದ ಕೆಲಸ ನಾನು ಮಾಡ್ತಿದ್ದೆ, ಆದ್ರೆ ಏನು ಮಾಡ್ಲಿ.. ಈಗ ನಾನು ತುಂಬಾ ಬ್ಯುಸಿ.. ಟೈಮಿಲ್ಲ.. ಏನು ಮಾಡೋದು..?
ಪುರುಷರೇ ಎಚ್ಚರ....! ಇದು ಮಕ್ಕಳಾಟವಲ್ಲ....
ದೇಶದಲ್ಲಿ ಬಂಜೆ ಪುರುಷರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಕಳೆದ ಕೆಲವು ವರ್ಷಗಳ ಪರೀಕ್ಷೆಯಲ್ಲಿ ಶೇಕಡಾ 40 ಪುರುಷರು..
ಸ್ಪಾಟ್ ಫಿಕ್ಸಿಂಗ್: ಬಾಲಿವುಡ್ ನಟ ವಿಂದೂ ದಾರಾ ಸಿಂಗ್ ಬಂಧನ
ಹೊಸದಿಲ್ಲಿ: ಬಾಲಿವುಡ್ ಮತ್ತು ಸ್ಪಾಟ್ ಫಿಕ್ಸಿಂಗ್ ಲಿಂಕ್ ಒಂದೊಂದಾಗಿ ಬಯಲಾಗುತ್ತಿದ್ದು, ಜನಪ್ರಿಯ ನಟ, ಕುಸ್ತಿಪಟು, ದಿವಂಗತ ದಾರಾ ಸಿಂಗ್ ಅವರ ಪುತ್ರ ವಿಂದೂ ದಾರಾ ಸಿಂಗ್ ನನ್ನು ಪೊಲೀಸರು ಮುಂಬಯಿಯಲ್ಲಿ ಬಂಧಿಸಿದ್ದಾರೆ.
ಐಪಿಎಲ್ ಪಂದ್ಯಗಳಿಗೆ ತಡೆ ಹೇರಲು ಸುಪ್ರೀಂ ನಕಾರ
ಹೊಸದಿಲ್ಲಿ: ಸ್ಪಾಟ್ ಫಿಕ್ಸಿಂಗ್ ನಿಂದಾಗಿ ಐಪಿಎಲ್ ನ ಮುಂದಿನ ಪಂದ್ಯಗಳಿಗೆ ತಡೆ ಹೇರಲು ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ. ಕೆಲವು ಆಟಗಾರರು ಅಕ್ರಮದಲ್ಲಿ ತೊಡಗಿದ್ದಾರೆಂಬ ಕಾರಣಕ್ಕೆ ಐಪಿಎಲ್ ನ್ನು ಸಂಪೂರ್ಣವಾಗಿ
ಅಗ್ಗದ ಮದ್ಯ ಮಾರಾಟ ಮಾಡಿದರೆ ಪ್ರತಿಭಟನೆ
ಬೆಂಗಳೂರು: ಮತ್ತೆ ರಾಜ್ಯದಲ್ಲಿ ಅಗ್ಗದ ಮದ್ಯ ಮಾರಾಟ ಮಾಡಲು ಸರ್ಕಾರ ಮುಂದಾದರೆ ರಾಜ್ಯದಾದ್ಯಂತ ಉಗ್ರ ಪ್ರತಿಭಟನೆ ನಡೆಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ಎಚ್ಚರಿಕೆ ನೀಡಿದ್ದಾರೆ.
ಅದೃಷ್ಟದ ಕೊಠಡಿಗಾಗಿ ಸಚಿವರ ಕಿತ್ತಾಟ
ಬೆಂಗಳೂರು: ಹೋರಾಟದ ಮೂಲಕ ಸಚಿವ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಂಡ ಸಚಿವರು ಇದೀಗ ವಿಧಾನಸೌಧದಲ್ಲಿ ತಮ್ಮ ಅದೃಷ್ಟದ ಕಚೇರಿ ಮತ್ತು ಬಂಗಲೆಗಾಗಿ ಕಿತ್ತಾಟ ಆರಂಭಿಸಿದ್ದಾರೆ.
ಮಹಾತ್ಮ ಗಾಂಧಿ ಅವರ ರಕ್ತ ಹರಾಜಿಗೆ!
ಲಂಡನ್: ಲಂಡನ್ ಮೂಲದ ಜಾಗತಿಕ ಹರಾಜು ಸಂಸ್ಥೆ ಮುಲ್ಲೊಕ್ಸ್ ಮಂಗಳವಾರ ಮಹಾತ್ಮ ಗಾಂಧಿ ಅವರಿಗೆ ಸಂಬಂಧಪಟ್ಟಿರುವ ಕೆಲವು ಮಹತ್ವದ ವಸ್ತುಗಳನ್ನು ಹರಾಜು ಹಾಕಲಿದ್ದು, ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಒಂದಾ ಈ...
ಭಾರತ-ಚೀನಾ ಗಡಿ ವಿವಾದದ ಮಾತುಕತೆ ಯಶಸ್ವಿ
ಹೊಸದಿಲ್ಲಿ: ಅತ್ಯಂತ ಮಹತ್ವದ ಭಾರತ ಮತ್ತು ಚೀನಾ ಗಡಿ ವಿವಾದ ಸಹಿತ ಹಲವಾರು ವಿಷಯಗಳ ಚರ್ಚೆ ಯಶಸ್ವಿಯಾಗಿದೆ ಎಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಸೋಮವಾರ ಹೇಳಿದರು.
ಖಾತೆಗಳ ಹಂಚಿಕೆ: ಪ್ರಮುಖ ಖಾತೆಗಳ ಜವಾಬ್ದಾರಿ ಹೊತ್ತುಕೊಂಡ ಸಿಎಂ
ಬೆಂಗಳೂರು: ಸಚಿವರು ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಹಂಚಿಕೆಯಾಗಬೇಕಿದ್ದ ಖಾತೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಹಂಚಿಕೆ ಮಾಡಿದ್ದು, ಪ್ರಮುಖ ಖಾತೆಗಳಾದ ಇಂಧನ ಹಾಗೂ ಹಣಕಾಸು....
29ರಿಂದ ವಿಧಾನ ಮಂಡಲ ಅಧಿವೇಶನ
ಬೆಂಗಳೂರು: ಮೇ 29 ರಿಂದ ವಿಧಾನ ಮಂಡಲದ ಅಧಿವೇಶನವನ್ನು ನಡೆಸಲು ನಿರ್ಧರಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೇ 31 ರಂದು ಸ್ಪೀಕರ್ ಸ್ಥಾನಕ್ಕೆ...
ಭ್ರಷ್ಟಾಚಾರಕ್ಕೆ ಅವಕಾಶ ನೀಡದಂತೆ ಸಚಿವರಿಗೆ ಸಿಎಂ ಕರೆ
ಬೆಂಗಳೂರು: ಭ್ರಷ್ಟಾಚಾರ ನಡೆಸಿದ ಸರ್ಕಾರವನ್ನು ಹೊರಗಿಟ್ಟು ಕಾಂಗ್ರೆಸ್ ಗೆ ಜನ ಅವಕಾಶ ಮಾಡಿಕೊಟ್ಟಿದ್ದಾರೆ. ಆದ್ದರಿಂದ ಭ್ರಷ್ಟಾಚಾರಕ್ಕೆ ಅವಕಾಶ ನೀಡದೆ ಕಾನೂನು ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ...
ಖಾದರ್, ರೈ, ಜೈನ್, ಸೊರಕೆ ಸಹಿತ ಸಚಿವರ ಪ್ರಮಾಣವಚನ
ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ನೂತನ ಸಚಿವರುಗಳು ಶನಿವಾರ ರಾಜ್ಯಪಾಲರ ಭವನದ ಗಾಜಿನಮನೆಯಲ್ಲಿ ನಡೆದ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಮಾಯಾಲೋಕದ ಅಪೂರ್ವ ಬಾಲೆ...!
ಹ್ಯಾಟ್ ತಲೆಗೇರಿಸಿ, ಕೈಯಲ್ಲೊಂದು ಮಂತ್ರದಂಡ ಹಿಡಿದುಕೊಂಡು ಸ್ಟೇಜ್ ಏರಿದಳೆಂದರೆ ಎದುರು ಕುಳಿತವರು ಕಣ್ ಕಣ್ ಬಿಟ್ಟು ನೋಡುತ್ತಲೇ ಇರಬೇಕೆನ್ನುವ ಮಯಾ ಲೋಕವೇ ಸೃಷ್ಟಿಯಾಗಿಬಿಡುತ್ತದೆ. ಈ ಮಾಯಾಲೋಕದ...
ಚೊಚ್ಚಲ ಚಿತ್ರದಲ್ಲೇ ಕೇಳುಗರ ಮೋಡಿ ಮಾಡಿದ ಸಂಗೀತ ನಿರ್ದೇಶಕ ವಿಜೇತ್
ಕಳೆದ ಸಂಚಿಕೆಯಲ್ಲಿ ಸರ್ಜಾ ಕುಟುಂಬದಿಂದ ಚಿತ್ರರಂಗಕ್ಕೆ ನಟನಾಗಿ ಪ್ರವೇಶ ಮಾಡ್ತಾ ಇರೋ ಭರತ್ ಸರ್ಜಾ ರವರ ಬಗ್ಗೆ ಪರಿಚಯ ಮಾಡಿಸಲಾಯ್ತು. ಈ ಬಾರಿ ಸರ್ಜಾ ಕುಟುಂಬದ ಮತ್ತೊಬ್ಬನ ಪರಿಚಯ. ಆತ ಚಿತ್ರರಂಗವನ್ನು ಕಾಲಿಟ್ಟಿರುವುದು...
ಪ್ರಯೋಗ ಶೀಲ ಕಲಾವಿದನ ಕಲ್ಪನೆಯಲ್ಲಿ ಮೂಡಿದ ಕಾಗದ ಭಿತ್ತಿ ಶಿಲ್ಪಗಳು
ಆಧುನಿಕತೆ ಬೆಳೆದಂತೆಲ್ಲ ಕಲೆಯು ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಲಿದೆ. ಪ್ರಸುತ್ತ ಸಂದರ್ಭದಲ್ಲಿ ಕಲಾವಿದ ತನ್ನದೇ ಆದ ಮಾಧ್ಯಮದಿಂದ ಕಲಾಕೃತಿಗಳನ್ನು ರಚಿಸುತ್ತ ತನ್ನ ಕಲ್ಪನೆಯನ್ನು ಅಭಿವ್ಯಕ್ತಿಸಲು ವಿಭಿನ್ನ ಮಾರ್ಗವನ್ನು ಕಂಡುಕೊಳ್ಳುತ್ತಿದ್ದಾನೆ.
ಮ್ಯಾಜಿಕ್ ಕಲೆಯ ಸಾಗರ ಈ ಸಾಗರ್...!
ಮ್ಯಾಜಿಕ್ ನೊಂದಿಗೆ ಕೆಲವು ಅಪಾಯಕಾರಿ ಸ್ಟಂಟ್ ಗಳನ್ನು ಮಾಡುವ ಸಾಗರ್ ಗೆ ಮನೆಯೇ ಮೊದಲ ಪ್ರಯೋಗ ಶಾಲೆ. ಚಾಪರ್ ಬ್ಲೇಡ್ ನ ಹರಿತವಾದ ಭಾಗದ ಮೇಲೆ ನಡೆದಾಡುವ ಸಾಗರ್, ಪ್ರೇಕ್ಷಕರನ್ನು ನಿಬ್ಬೆರಗಾಗುವಂತೆ ಮಾಡುವುದಲ್ಲದೆ...
ಶಿಕ್ಷಣ ವ್ಯವಸ್ಥೆಗೇ ಸವಾಲೆಸೆಯುತ್ತಿರುವ ಸ್ವರೂಪ
ಚಿತ್ರಕಲೆ ಮೂಲಕ ಸಾಧಾರಣಾ ವಿದ್ಯಾರ್ಥಿಯೊಬ್ಬ ಹೆಚ್ಚಿನ ಅಂಕ ಪಡೆಯಲು ಸಾಧ್ಯವೇ? ದಡ್ಡನೆಂದು ಬೈದು ಶಾಲೆಯಿಂದ ಹೊರದಬ್ಬಲ್ಪಟ್ಟ ವಿದ್ಯಾರ್ಥಿ ಕೇವಲ 20 ದಿನಗಳ ತರಬೇತಿಯ ಮೂಲಕ ಡಿಸ್ಟಿಂಕ್ಷನ್ ಪಡೆಯಲು ಸಾಧ್ಯವೇ? ಡ್ಯಾನ್ಸ್ ಮಾಡಿ ಗಣಿತ-ವಿಜ್ಞಾನದಲ್ಲಿ...ವಿಶೇಷ
ಕುಟುಂಬವೆಂಬ ವಟವೃಕ್ಷದ ಕೆಳಗೆ...
ಮೇ 15 ವಿಶ್ವ ಅಂತರರಾಷ್ಟ್ರೀಯ ಕುಟುಂಬ ದಿನ, ಸತ್ಸಂಪ್ರದಾಯದಲ್ಲಿ ವಿಶ್ವಕ್ಕೆ ಮಾದರಿಯಾದ ಭಾರತದ ಕುಟುಂಬ ಪದ್ಧತಿಯಲ್ಲಿ ಆತಂಕಕಾರಿಯಲ್ಲದಿದ್ದರೂ ಅಲ್ಪಪ್ರಮಾಣದ ಪಾಶ್ಚಾತ್ಯರ ಅನುಕರಣೆಯಾಗುತ್ತಿರುವುದು ಅಸಹನೀಯವೇ.
ಇತಿಹಾಸದ ಕಥೆ ಹೇಳುತ್ತಿದೆ ಮಡಿಕೇರಿ ಅರಮನೆ
ಕೊಡಗಿನ ಮುಖ್ಯ ಪಟ್ಟಣ ಮಡಿಕೇರಿಗೆ ಆಗಮಿಸುವ ಪ್ರವಾಸಿಗರನ್ನು ಎತ್ತರದ ಸಮತಟ್ಟಾದ ಸ್ಥಳದಲ್ಲಿ ಕಲ್ಲುಕೋಟೆ ನಡುವೆ ನೆಲೆನಿಂತ ಅರಮನೆ ಗಮನಸೆಳೆಯುತ್ತದೆ. ಈ ಅರಮನೆ ಮೈಸೂರು ಅರಮನೆಯಂತೆ ವಿಶ್ವವಿಖ್ಯಾತಿ ಪಡೆಯದಿರಬಹುದು.
ಸ್ತ್ರೀಯರ ಮಹತ್ವದ ದಿನ ಅಕ್ಷಯ ತೃತೀಯಾ....
ಅಕ್ಷಯ ತದಿಗೆ ಸ್ತ್ರೀಯರಿಗೆ ಮಹತ್ವದ್ದಾಗಿದೆ. ಸ್ತ್ರೀಯರು ಚೈತ್ರದಲ್ಲಿ ಕೂರಿಸಿದ ಚೈತ್ರ ಗೌರಿಯನ್ನು ಈ ದಿನ ವಿಸರ್ಜನೆ ಮಾಡುತ್ತಾರೆ. ಇದರ ಪ್ರಯುಕ್ತ ಅರಿಶಿನ-ಕುಂಕುಮ ನೀಡುವ ಕಾರ್ಯಕ್ರಮವನ್ನೂ ಮಾಡುತ್ತಾರೆ.
ಅಮ್ಮಾ ಜಸ್ಟ್ ಫ್ರೆಂಡ್ ಅಲ್ಲ, ಬೆಸ್ಟ್ ಫ್ರೆಂಡ್!
ಅಮ್ಮಾ ನಿನ್ನ ತೋಳಿನಲ್ಲಿ ಕಂದ ನಾನು... ನಿನ್ನಾ ಸಂಗ ಆಡಲೆಂದು ಬಂದೆ ನಾನು... ಪದ್ಯದ ಸಾಲುಗಳಲ್ಲಿ ಅಮ್ಮಾ... ಅನ್ನೋ ಪದವನ್ನು ಕೇಳಿದಾಗ ಹೆತ್ತು, ಹೊತ್ತು, ಸಾಕಿ ಸಲಹಿದ ಅಮ್ಮನನ್ನು ನೆನೆಸಿಕೊಳ್ಳದವರು ಇರಲಿಕ್ಕಿಲ್ಲ.
ಕೊಡಗಿನಲ್ಲಿ ಕಂಡ ಕಂಡವರನ್ನು ಬೈಯ್ಯೋ ಹಬ್ಬ...
ಇದೊಂದು ವಿಚಿತ್ರವಾದರೂ ವಿಶಿಷ್ಟ ಹಬ್ಬ. ಬಹುಶಃ ಇಂತಹವೊಂದು ಹಬ್ಬವನ್ನು ಕೊಡಗು ಹೊರತುಪಡಿಸಿದರೆ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಇಷ್ಟಕ್ಕೂ ಇದ್ಯಾವುದಪ್ಪಾ ಅಂತಹ ವಿಚಿತ್ರಹಬ್ಬ ಎಂಬ ಕುತೂಹಲ ಪ್ರತಿಯೊಬ್ಬರನ್ನು ಕಾಡದಿರದು.

Write Your Comment Here...