ಸೋಮವಾರಪೇಟೆಯಲ್ಲಿ ಎಸ್ಕೇಪ್ ಟು ನೇಚರ್ ರ್ಯಾಲಿ
[Updated 09/09/2012 03:16 pm]ಸೋಮವಾರಪೇಟೆ. ಸೆ.9: ಇಲ್ಲಿನ ಪಯೋನೀರ್ ಟೆನ್ನಿಸ್ ಕ್ಲಬ್ ವತಿಯಿಂದ 9ನೇ ವರ್ಷದ ಎಸ್ಕೇಪ್ ಟು ನೇಚರ್ ರ್ಯಾಲಿ ನಡೆಯಿತು. ಈ ರ್ಯಾಲಿಯಲ್ಲಿ ಮುಂಬೈ, ತಿರುವನಂತಪುರ, ಕೊಚ್ಚಿನ್, ಚೆನ್ನೈ, ಹೈದರಾಬಾದ್ ಸೇರಿದಂತೆ ವಿವಿಧ ಭಾಗಗಳಿಂದ ಸುಮಾರು 80 ವಾಹನಗಳು ಭಾಗವಹಿಸಿದ್ದವು. ಬೆಳಿಗ್ಗೆ 8.30 ಕ್ಕೆ ಆರಂಭಗೊಂಡ ರ್ಯಾಲಿ ತಾಲೂಕಿನ ಪುಷ್ಪಗಿರಿ ವಿಭಾಗದ ಶಾಂತಳ್ಳಿ, ಕುಂದಳ್ಳಿ, ಬೆಟ್ಟದಳ್ಳಿ, ಬೀರೆ ಬೆಟ್ಟ, ಹೆಗ್ಗಡೆ ಮನೆ, ಮಲ್ಲಳ್ಳಿಯ ಸುಮಾರು 42 ಕಿ.ಮೀಯನ್ನು ಕ್ರಮಿಸಿದವು.




ಕುಗ್ರಾಮಗಳಲ್ಲಿ ವಾಹನಗಳ ಕಿವಿಗಡಚಿಕ್ಕುವ ಶಬ್ದ ಗ್ರಾಮಸ್ಥರನ್ನು ರೋಮಾಂಚನಗೊಳಿಸಿತು. ಗ್ರಾಮಸ್ಥರೊಂದಿಗೆ ಚಿಕ್ಕಮಕ್ಕಳು ರಸ್ತೆಯ ಇಕ್ಕೆಲಗಳಲ್ಲಿ ನಿಂತು ಜೀಪ್ ಗಳ ಓಡಾಟವನ್ನು ಆಸ್ವಾದಿಸಿದರು. ಧಾರಾಕಾರ ಮಳೆ ಸುರಿದಿದ್ದರೆ ಯಾವುದೇ ವಾಹನಗಳು ಬೆಟ್ಟವೇರಲು ಸಾಧ್ಯವಿರಲಿಲ್ಲ. ಸಣ್ಣ ಮಳೆಯಲ್ಲೇ ಕಟ್ಟೆಬೆಟ್ಟ, ಬೀರೆದೇವರಬೆಟ್ಟ, ಜಕ್ಕನಹಳ್ಳಿ ಬೆಟ್ಟ, ಗುಡ್ಡಳ್ಳಿಬೆಟ್ಟಗಳಲ್ಲಿ ಜೀಪನ್ನು ಚಾಲಿಸಲು ಚಾಲಕರು ಹರಸಾಹಸ ಪಡಬೇಕಾಯಿತು. ಬೆಟ್ಟಪ್ರದೇಶದಲ್ಲಿ ಮಂಜು ಮುಸುಕಿದ ವಾತಾವರಣವಿದ್ದ ಹಿನ್ನೆಲೆ ಸುಮಾರು ಐದು ಕಿ.ಮೀ. ಹೆಡ್ ಲೈಟ್ ಹಾಕಿ ವಾಹನ ಚಾಲನೆ ಮಾಡಬೇಕಾದ ಅನಿವಾರ್ಯತೆ ಇತ್ತು.
ಸ್ಥಳೀಯ ಪ್ರತಿಭೆಗಳೂ ಕೂಡ, ಹೊರ ರಾಜ್ಯದವರಂತೆ ವಾಹನ ಚಾಲನೆಯಲಿ ಪಾಲ್ಗೊಂಡಿದ್ದರು. ಸುಮಾರು 45 ಕಿ.ಮೀ. ದೂರದ ಆಫ್ರೋಡ್ ಡ್ರೈವಿಂಗ್ ನಲ್ಲಿ ಕೊಡಗು ಜಿಲ್ಲೆಯ ಚಾಲಕರು ರೋಮಾಂಚಕಾರಿಯಾಗಿ ರ್ಯಾಲಿಯನ್ನು ಪೂರ್ಣಗೊಳಿಸಿದರು. ರ್ಯಾಲಿಗೆ ಮಾಜಿ ಅರಣ್ಯ ಸಚಿವ ಬಿ.ಎ.ಜೀವಿಜಯರವರು ಚಾಲನೆ ನೀಡಿ ಮಾತನಾಡಿ, ಈ ರೀತಿಯ ರ್ಯಾಲಿಯಿಂದ ಜಿಲ್ಲೆಯ ಪ್ರವಾಸೋದ್ಯಮ ಬೆಳವಣಿಗೆಗೆ ಹೆಚ್ಚಿನ ಅನುಕೂಲ ಆಗುವುದೆಂದು ಹೇಳಿದರು.
ಮಾಜಿ ಶಾಸಕ ಎಸ್ .ಜಿ.ಮೇದಪ್ಪ, ತಾಲೂಕು ಒಕ್ಕಲಿಗರ ಸಂಘದ ಅದ್ಯಕ್ಷ ಎ.ಆರ್.ಮುತ್ತಣ್ಣ, ಸಂಸ್ಥೆಯ ಅದ್ಯಕ್ಷ ಎ.ಎಮ್.ವಿಶ್ವನಾಥ್, ಕಾರ್ಯದರ್ಶಿ ದೇವದಾಸ್, ರ್ಯಾಲಿ ಆಯೋಜನಾ ಸಮಿತಿಯ ಉದಯ ಉದ್ದೂರಯ್ಯ, ಬಿ.ಟಿ.ಉದಯ, ಬಿ.ಇ.ಅರುಣ್ ಕುಮಾರ್, ಎಸ್.ಬಿ.ಯಶವಂತ್, ಬಿ.ಎಮ್.ಸುರೇಶ್ ಮೊದಲಾದವರು ಉಪಸ್ಥಿತರಿದ್ದರು.
ಸರ್ವೇಯರ್ ಗಳನ್ನು ಖಾಯಂಗೊಳಿಸಲು ಚಿಂತನೆ
ಹುಣಸೂರು: ತಾತ್ಕಾಲಿಕ ಕೆಲಸ ಮಾಡುತ್ತಿರುವ ಸರ್ವೇಯರ್ ಗಳನ್ನು ಸದ್ಯದಲ್ಲೇ ಖಾಯಂಗೊಳಿಸಲು ಚಿಂತನೆ ನಡೆಸಲಾಗುವುದು ಎಂದು ಕಂದಾಯ ಸಚಿವ ಆರ್.ಶ್ರೀನಿವಾಸಪ್ರಸಾದ್ ತಿಳಿಸಿದರು.
ಮುಂದಿನ 2ವಾರಕ್ಕೆ ನೀರಿಗೆ ತೊಂದರೆ ಕಾಣಿಸದು!
ಮೈಸೂರು: ಹೇಮಾವತಿ ಜಲಾಶಯದಿಂದ ಕೆಆರ್ ಎಸ್ ಗೆ 2 ಟಿಎಂಸಿ ನೀರು ಬಿಟ್ಟಿರುವುದರಿಂದ ಮೈಸೂರು ನಗರದಲ್ಲಿ ಕುಡಿಯುವ ನೀರಿಗೆ ಮುಂದಿನ 15 ದಿನಗಳ ತನಕ ಯಾವುದೇ ತೊಂದರೆಯಾಗದು ಎಂದು ಶಾಸಕ ಎಂ.ಕೆ.ಸೋಮಶೇಖರ್ ಹೇಳಿದ್ದಾರೆ.
ಆಟದ ಮೈದಾನವಲ್ಲ ಕೆಆರ್ ಎಸ್ ಜಲಾಶಯ!
ಮೈಸೂರು: ಸದಾ ನೀರಿನಿಂದ ತುಂಬಿ ತುಳುಕುತ್ತಿದ್ದ ಕೆಆರ್ ಎಸ್ ಜಲಾಶಯ ಖಾಲಿ ಖಾಲಿಯಾಗಿ ಆಟದ ಮೈದಾನವಾಗಿ ಗೋಚರಿಸುತ್ತಿದೆ. ಕಾವೇರಿ ಕಣಿವೆಯಲ್ಲಿ ಮಳೆ ಬಾರದೆ ಹೋದರೆ ಮುಂದೆ ಭೀಕರ ಜಲಕ್ಷಾಮದ ಭಯ ಮೈಸೂರು...
20ರೂ.ಗಳಿಗೆ ಗುಣಮಟ್ಟದ ಮದ್ಯ: ಸಿಎಂ
ಮೈಸೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಎಲುಬಿಲ್ಲದ ನಾಲಿಗೆಯಲ್ಲಿ ಇಲ್ಲ ಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಆರೋಪಿಸಿದರು. ಅವರು ಪಿರಿಯಾಪಟ್ಟಣ ತಾಲೂಕಿನ ವಿವಿಧ ಗ್ರಾಮಗಳಲ್ಲಿ ರೋಡ್ ಶೋ ...
ತಿ.ನರಸೀಪುರ ಅಭಿವೃದ್ಧಿಗೆ ಕ್ರಮ: ಮಹದೇವಪ್ಪ
ತಿ.ನರಸೀಪುರ: ಮುಖ್ಯಮಂತ್ರಿಗಳ ಸಹಕಾರದೊಂದಿಗೆ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದಾಗಿ ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು. ಸರ್ಕಾರಿ ಅತಿಥಿಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು....
ಸಿಎಂ ಕಾರು ತಡೆದು ತಪಾಸಣೆ
ಮೈಸೂರು: ಪಿರಿಯಾಪಟ್ಟಣದಲ್ಲಿ ಮೇ 28ರಂದು ಚುನಾವಣೆ ನಡೆಯಲಿರುವುದರಿಂದ ಜಿಲ್ಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಚುನಾವಣಾ ಪ್ರಚಾರಕ್ಕಾಗಿ ತೆರಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರನ್ನು ಚುನಾವಣಾ...
ಮದ್ಯಪಾನ ನಿಷೇಧಿಸಲು ಒತ್ತಾಯಿಸಿ ಪ್ರತಿಭಟನೆ
ಮೈಸೂರು: ನೂತನವಾಗಿ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್ ಸರ ಅಗ್ಗದ ಮದ್ಯವನ್ನು ಜಾರಿಗೆ ತರಲು ನಿರ್ಧರಿಸಿರುವುದನ್ನು ವಿರೋಧಿಸಿ ಮೈಸೂರು ಕನ್ನಡ ವೇದಿಕೆ ನಗರದ ನ್ಯಾಯಾಲಯದ ಎದುರಿನ ಗಾಂಧಿ ಪುತ್ಥಳಿ ಬಳಿ ಪ್ರತಿಭಟನೆ ನಡೆಸಿತು.
ಮಾನವ ವನ್ಯಪ್ರಾಣಿ ಸಂಘರ್ಷಕ್ಕೆ ತಡೆ: ಸಿಎಂ
ಹುಣಸೂರು: ಕಾಡಂಚಿನ ಗ್ರಾಮಗಳಲ್ಲಿ ವನ್ಯ ಪ್ರಾಣಿ ಮತ್ತು ಮಾನವನ ನಡುವೆ ನಡೆಯುವ ಸಂಘರ್ಷ ತಪ್ಪಿಸಲು ಕಾಡಂಚಿನ ಗ್ರಾಮಗಳಲ್ಲಿ ಆನೆ ತಡೆಗೋಡೆಯನ್ನು ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದರು.
ಶುಶ್ರೂಷಕರಿಗೆ ಉನ್ನತ ಶಿಕ್ಷಣ ಅಗತ್ಯ
ಮೈಸೂರು: ತಾಳ್ಮೆ, ಅಂತಃಕರಣದಿಂದ ಆರೋಗ್ಯ ರಕ್ಷಕರಾಗಿ ಸದಾ ರೋಗಿಗಳ ಆರೈಕೆಯಲ್ಲೇ ಬದುಕು ಸಾಗಿಸುವ ಶುಶ್ರೂಷಕರಿಗೆ ಉನ್ನತ ಶಿಕ್ಷಣದ ಅಗತ್ಯವಿದೆ ಎಂದು ಬೆಳಗಾವಿ ಕೆಎಎಲ್ಇ ಇನ್ಸಿಟ್ಯೂಟ್ ನ ನಿವೃತ್ತ ಪ್ರಾಚಾರ್ಯ ಡಾ.ರಾಮಚಂದ್ರ ಎಸ್.ಹೂಲಿ ಹೇಳಿದರು.
ಕಾಂಗ್ರೆಸ್ ಗೆ ವರವಾದ ಬಿಜೆಪಿ ಒಳಜಗಳ
ಮೈಸೂರು: ಬಿಜೆಪಿಯ ಆಂತರಿಕ ಜಗಳ ಕಾಂಗ್ರೆಸ್ ಗೆ ವರದಾನವಾಯಿತು ಎಂದು ಮಾಜಿ ಸಚಿವ ಸುರೇಶ್ ಕುಮಾರ್ ಅಭಿಪ್ರಾಯಪಟ್ಟರು. ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಬಿಜೆಪಿ ಆತ್ಮಾವಲೋಕನ ಸಭೆಯಲ್ಲಿ...
ಮಂಗಳೂರು ಮೂಲದ ಬಾಲಕನಿಗೆ ನ್ಯಾಶನಲ್ ಜಿಯೋಗ್ರಾಫಿಕ್ ಬೀ ಪ್ರಶಸ್ತಿ
ವಾಷಿಂಗ್ಟನ್: ಮಂಗಳೂರು ಮೂಲದ ಬಾಲಕನೊಬ್ಬ ಅಮೆರಿಕಾದಲ್ಲಿ ನಡೆದ ನ್ಯಾಶನಲ್ ಜಿಯೋಗ್ರಾಪಿಕ್ ಬೀ 2013 ಸ್ಪರ್ಧೆಯನ್ನು ಗೆದ್ದುಕೊಂಡಿದ್ದಾನೆ. ಏಶ್ಯಾದ ಬೆಟ್ಟ ಪ್ರದೇಶ ಬೊತ್ಸವಾನಾದಲ್ಲಿರುವ ಹುಲಿಗಳ ಬಗ್ಗೆ ಮತ್ತು ಇಂಗ್ಲೆಂಡ್ ನ...
ಮಾಸಾಂತ್ಯಕ್ಕೆ ರಾಜ್ಯಕ್ಕೆ ಮುಂಗಾರು ಪ್ರವೇಶ!
ಬೆಂಗಳೂರು: ಮೇ ತಿಂಗಳ ಕೊನೆಯ ವಾರದಲ್ಲೇ ರಾಜ್ಯಕ್ಕೆ ಮುಂಗಾರು ಪ್ರವೇಶಿಸುವ ಸಾಧ್ಯತೆಗಳಿವೆ ದಟ್ಟವಾಗಿದೆ ಎಂದು ಹವಾಮಾನ ಇಲಾಖೆಯ ನಿರ್ದೇಶಕ ಪುಟ್ಟಣ್ಣ ಹೇಳಿದ್ದಾರೆ.
ರಾಜ್ಯದಲ್ಲಿ ಈ ಶೈಕ್ಷಣಿಕ ವರ್ಷದಿಂದ ಬಂಗಾಳಿ ದ್ವಿತೀಯ ಭಾಷೆ
ಬೆಂಗಳೂರು: ಕರ್ನಾಟಕದಲ್ಲಿ ಬಂಗಾಳಿ ಭಾಷೆಯನ್ನು ಈ ಶೈಕ್ಷಣಿಕ ವರ್ಷದಿಂದ ದ್ವಿತೀಯ ಭಾಷೆಯನ್ನಾಗಿ ಮಾಡಲು ಸರ್ಕಾರ ಆದೇಶ ಹೊರಡಿಸಿದೆ. ಬಂಗಾಳಿ ಸಮುದಾಯದವರು ದೀರ್ಘ ಸಮಯದಿಂದ ಈ ಬಗ್ಗೆ ಮನವಿ...
ಅನಂತಮೂರ್ತಿ ಹಿಂದಿಕ್ಕಿ ಬೂಕರ್ ಪಡೆದ ಅಮೆರಿಕಾದ ಲೇಖಕಿ
ಲಂಡನ್: ಕರ್ನಾಟಕದ ಸಾಹಿತಿ ಯು. ಆರ್. ಅನಂತಮೂರ್ತಿ ಅವರು 2013ರ ಬೂಕರ್ ಅಂತಾರಾಷ್ಟ್ರೀಯ ಪ್ರಶಸ್ತಿಯಿಂದ ಕೂದಲೆಳೆಯ ಅಂತರದಲ್ಲಿ ವಂಚಿತರಾಗಿದ್ದಾರೆ. ಅನಂತಮೂರ್ತಿ ಅವರನ್ನು ಹಿಂದಿಕ್ಕಿದ ಅಮೆರಿಕಾದ ಲೇಖಕಿ ಲೈಡಿಯಾ
ಬಿಸಿಸಿಐ ಅಧ್ಯಕ್ಷನ ಅಳಿಯನೂ ಸ್ಪಾಟ್ ಫಿಕ್ಸಿಂಗ್ ನಲ್ಲಿ ಭಾಗಿ?
ಮುಂಬಯಿ: ಸ್ಪಾಟ್ ಫಿಕ್ಸಿಂಗ್ ನ ನೀರು ಬಿಸಿಸಿಐ ಕಾಲಬುಡಕ್ಕೆ ಬಂದಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗುರುನಾಥ್ ಮೆಯಪ್ಪನ್ ಅವರನ್ನು ಪೊಲೀಸರು ವಿಚಾರಣೆ ನಡೆಸಲಿದ್ದಾರೆ.
ನಾನು ಮುಗ್ದ, ಯಾವುದೇ ತಪ್ಪು ಮಾಡಿಲ್ಲ: ಶ್ರೀಶಾಂತ್
ಹೊಸದಿಲ್ಲಿ: ನಾನು ಮುಗ್ದ ಮತ್ತು ಯಾವುದೇ ತಪ್ಪನ್ನು ಮಾಡಿಲ್ಲ. ನಾನು ಸ್ಪಾಟ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿಲ್ಲ ಎಂದು ಐಪಿಎಲ್ ಸ್ಪಾಟ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿರುವ ಆರೋಪವನ್ನು ಎದುರಿಸುತ್ತಿರುವ ರಾಜಸ್ಥಾನ್ ರಾಯಲ್ಸ್ ತಂಡ...
ಸ್ಪಾಟ್ ಫಿಕ್ಸಿಂಗ್: ಬಾಲಿವುಡ್ ನಟ ವಿಂದೂ ದಾರಾ ಸಿಂಗ್ ಬಂಧನ
ಹೊಸದಿಲ್ಲಿ: ಬಾಲಿವುಡ್ ಮತ್ತು ಸ್ಪಾಟ್ ಫಿಕ್ಸಿಂಗ್ ಲಿಂಕ್ ಒಂದೊಂದಾಗಿ ಬಯಲಾಗುತ್ತಿದ್ದು, ಜನಪ್ರಿಯ ನಟ, ಕುಸ್ತಿಪಟು, ದಿವಂಗತ ದಾರಾ ಸಿಂಗ್ ಅವರ ಪುತ್ರ ವಿಂದೂ ದಾರಾ ಸಿಂಗ್ ನನ್ನು ಪೊಲೀಸರು ಮುಂಬಯಿಯಲ್ಲಿ ಬಂಧಿಸಿದ್ದಾರೆ.
ಅಗ್ಗದ ಮದ್ಯ ಮಾರಾಟ ಮಾಡಿದರೆ ಪ್ರತಿಭಟನೆ
ಬೆಂಗಳೂರು: ಮತ್ತೆ ರಾಜ್ಯದಲ್ಲಿ ಅಗ್ಗದ ಮದ್ಯ ಮಾರಾಟ ಮಾಡಲು ಸರ್ಕಾರ ಮುಂದಾದರೆ ರಾಜ್ಯದಾದ್ಯಂತ ಉಗ್ರ ಪ್ರತಿಭಟನೆ ನಡೆಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ಎಚ್ಚರಿಕೆ ನೀಡಿದ್ದಾರೆ.
ಅದೃಷ್ಟದ ಕೊಠಡಿಗಾಗಿ ಸಚಿವರ ಕಿತ್ತಾಟ
ಬೆಂಗಳೂರು: ಹೋರಾಟದ ಮೂಲಕ ಸಚಿವ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಂಡ ಸಚಿವರು ಇದೀಗ ವಿಧಾನಸೌಧದಲ್ಲಿ ತಮ್ಮ ಅದೃಷ್ಟದ ಕಚೇರಿ ಮತ್ತು ಬಂಗಲೆಗಾಗಿ ಕಿತ್ತಾಟ ಆರಂಭಿಸಿದ್ದಾರೆ.
ಮಹಾತ್ಮ ಗಾಂಧಿ ಅವರ ರಕ್ತ ಹರಾಜಿಗೆ!
ಲಂಡನ್: ಲಂಡನ್ ಮೂಲದ ಜಾಗತಿಕ ಹರಾಜು ಸಂಸ್ಥೆ ಮುಲ್ಲೊಕ್ಸ್ ಮಂಗಳವಾರ ಮಹಾತ್ಮ ಗಾಂಧಿ ಅವರಿಗೆ ಸಂಬಂಧಪಟ್ಟಿರುವ ಕೆಲವು ಮಹತ್ವದ ವಸ್ತುಗಳನ್ನು ಹರಾಜು ಹಾಕಲಿದ್ದು, ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಒಂದಾ ಈ...
ಆತ ರಕ್ಷಿಸಿದ ಮಗು ಬದುಕುಳಿಯಲಿಲ್ಲವೆಂದು ಬಿಕ್ಕಿಬಿಕ್ಕಿ ಅತ್ತಿದ್ದ...!
ದೇಶದ ಇತಿಹಾಸದಲ್ಲಿಯೇ ಭೀಕರ ದುರಂತವಾದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತಕ್ಕೆ ಇಂದಿಗೆ(ಮೇ 22) ಮೂರು ವರ್ಷಗಳು ತುಂಬುತ್ತಿದೆ. 2010ರ ಮೇ 22 ರಂದು ಬೆಳಗ್ಗೆ 6.05ರ...
ಮಾಯಾಲೋಕದ ಅಪೂರ್ವ ಬಾಲೆ...!
ಹ್ಯಾಟ್ ತಲೆಗೇರಿಸಿ, ಕೈಯಲ್ಲೊಂದು ಮಂತ್ರದಂಡ ಹಿಡಿದುಕೊಂಡು ಸ್ಟೇಜ್ ಏರಿದಳೆಂದರೆ ಎದುರು ಕುಳಿತವರು ಕಣ್ ಕಣ್ ಬಿಟ್ಟು ನೋಡುತ್ತಲೇ ಇರಬೇಕೆನ್ನುವ ಮಯಾ ಲೋಕವೇ ಸೃಷ್ಟಿಯಾಗಿಬಿಡುತ್ತದೆ. ಈ ಮಾಯಾಲೋಕದ...
ಚೊಚ್ಚಲ ಚಿತ್ರದಲ್ಲೇ ಕೇಳುಗರ ಮೋಡಿ ಮಾಡಿದ ಸಂಗೀತ ನಿರ್ದೇಶಕ ವಿಜೇತ್
ಕಳೆದ ಸಂಚಿಕೆಯಲ್ಲಿ ಸರ್ಜಾ ಕುಟುಂಬದಿಂದ ಚಿತ್ರರಂಗಕ್ಕೆ ನಟನಾಗಿ ಪ್ರವೇಶ ಮಾಡ್ತಾ ಇರೋ ಭರತ್ ಸರ್ಜಾ ರವರ ಬಗ್ಗೆ ಪರಿಚಯ ಮಾಡಿಸಲಾಯ್ತು. ಈ ಬಾರಿ ಸರ್ಜಾ ಕುಟುಂಬದ ಮತ್ತೊಬ್ಬನ ಪರಿಚಯ. ಆತ ಚಿತ್ರರಂಗವನ್ನು ಕಾಲಿಟ್ಟಿರುವುದು...
ಪ್ರಯೋಗ ಶೀಲ ಕಲಾವಿದನ ಕಲ್ಪನೆಯಲ್ಲಿ ಮೂಡಿದ ಕಾಗದ ಭಿತ್ತಿ ಶಿಲ್ಪಗಳು
ಆಧುನಿಕತೆ ಬೆಳೆದಂತೆಲ್ಲ ಕಲೆಯು ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಲಿದೆ. ಪ್ರಸುತ್ತ ಸಂದರ್ಭದಲ್ಲಿ ಕಲಾವಿದ ತನ್ನದೇ ಆದ ಮಾಧ್ಯಮದಿಂದ ಕಲಾಕೃತಿಗಳನ್ನು ರಚಿಸುತ್ತ ತನ್ನ ಕಲ್ಪನೆಯನ್ನು ಅಭಿವ್ಯಕ್ತಿಸಲು ವಿಭಿನ್ನ ಮಾರ್ಗವನ್ನು ಕಂಡುಕೊಳ್ಳುತ್ತಿದ್ದಾನೆ.
ಮ್ಯಾಜಿಕ್ ಕಲೆಯ ಸಾಗರ ಈ ಸಾಗರ್...!
ಮ್ಯಾಜಿಕ್ ನೊಂದಿಗೆ ಕೆಲವು ಅಪಾಯಕಾರಿ ಸ್ಟಂಟ್ ಗಳನ್ನು ಮಾಡುವ ಸಾಗರ್ ಗೆ ಮನೆಯೇ ಮೊದಲ ಪ್ರಯೋಗ ಶಾಲೆ. ಚಾಪರ್ ಬ್ಲೇಡ್ ನ ಹರಿತವಾದ ಭಾಗದ ಮೇಲೆ ನಡೆದಾಡುವ ಸಾಗರ್, ಪ್ರೇಕ್ಷಕರನ್ನು ನಿಬ್ಬೆರಗಾಗುವಂತೆ ಮಾಡುವುದಲ್ಲದೆ...
ಶಿಕ್ಷಣ ವ್ಯವಸ್ಥೆಗೇ ಸವಾಲೆಸೆಯುತ್ತಿರುವ ಸ್ವರೂಪ
ಚಿತ್ರಕಲೆ ಮೂಲಕ ಸಾಧಾರಣಾ ವಿದ್ಯಾರ್ಥಿಯೊಬ್ಬ ಹೆಚ್ಚಿನ ಅಂಕ ಪಡೆಯಲು ಸಾಧ್ಯವೇ? ದಡ್ಡನೆಂದು ಬೈದು ಶಾಲೆಯಿಂದ ಹೊರದಬ್ಬಲ್ಪಟ್ಟ ವಿದ್ಯಾರ್ಥಿ ಕೇವಲ 20 ದಿನಗಳ ತರಬೇತಿಯ ಮೂಲಕ ಡಿಸ್ಟಿಂಕ್ಷನ್ ಪಡೆಯಲು ಸಾಧ್ಯವೇ? ಡ್ಯಾನ್ಸ್ ಮಾಡಿ ಗಣಿತ-ವಿಜ್ಞಾನದಲ್ಲಿ...ವಿಶೇಷ
ಕುಟುಂಬವೆಂಬ ವಟವೃಕ್ಷದ ಕೆಳಗೆ...
ಮೇ 15 ವಿಶ್ವ ಅಂತರರಾಷ್ಟ್ರೀಯ ಕುಟುಂಬ ದಿನ, ಸತ್ಸಂಪ್ರದಾಯದಲ್ಲಿ ವಿಶ್ವಕ್ಕೆ ಮಾದರಿಯಾದ ಭಾರತದ ಕುಟುಂಬ ಪದ್ಧತಿಯಲ್ಲಿ ಆತಂಕಕಾರಿಯಲ್ಲದಿದ್ದರೂ ಅಲ್ಪಪ್ರಮಾಣದ ಪಾಶ್ಚಾತ್ಯರ ಅನುಕರಣೆಯಾಗುತ್ತಿರುವುದು ಅಸಹನೀಯವೇ.
ಇತಿಹಾಸದ ಕಥೆ ಹೇಳುತ್ತಿದೆ ಮಡಿಕೇರಿ ಅರಮನೆ
ಕೊಡಗಿನ ಮುಖ್ಯ ಪಟ್ಟಣ ಮಡಿಕೇರಿಗೆ ಆಗಮಿಸುವ ಪ್ರವಾಸಿಗರನ್ನು ಎತ್ತರದ ಸಮತಟ್ಟಾದ ಸ್ಥಳದಲ್ಲಿ ಕಲ್ಲುಕೋಟೆ ನಡುವೆ ನೆಲೆನಿಂತ ಅರಮನೆ ಗಮನಸೆಳೆಯುತ್ತದೆ. ಈ ಅರಮನೆ ಮೈಸೂರು ಅರಮನೆಯಂತೆ ವಿಶ್ವವಿಖ್ಯಾತಿ ಪಡೆಯದಿರಬಹುದು.
ಸ್ತ್ರೀಯರ ಮಹತ್ವದ ದಿನ ಅಕ್ಷಯ ತೃತೀಯಾ....
ಅಕ್ಷಯ ತದಿಗೆ ಸ್ತ್ರೀಯರಿಗೆ ಮಹತ್ವದ್ದಾಗಿದೆ. ಸ್ತ್ರೀಯರು ಚೈತ್ರದಲ್ಲಿ ಕೂರಿಸಿದ ಚೈತ್ರ ಗೌರಿಯನ್ನು ಈ ದಿನ ವಿಸರ್ಜನೆ ಮಾಡುತ್ತಾರೆ. ಇದರ ಪ್ರಯುಕ್ತ ಅರಿಶಿನ-ಕುಂಕುಮ ನೀಡುವ ಕಾರ್ಯಕ್ರಮವನ್ನೂ ಮಾಡುತ್ತಾರೆ.
ಅಮ್ಮಾ ಜಸ್ಟ್ ಫ್ರೆಂಡ್ ಅಲ್ಲ, ಬೆಸ್ಟ್ ಫ್ರೆಂಡ್!
ಅಮ್ಮಾ ನಿನ್ನ ತೋಳಿನಲ್ಲಿ ಕಂದ ನಾನು... ನಿನ್ನಾ ಸಂಗ ಆಡಲೆಂದು ಬಂದೆ ನಾನು... ಪದ್ಯದ ಸಾಲುಗಳಲ್ಲಿ ಅಮ್ಮಾ... ಅನ್ನೋ ಪದವನ್ನು ಕೇಳಿದಾಗ ಹೆತ್ತು, ಹೊತ್ತು, ಸಾಕಿ ಸಲಹಿದ ಅಮ್ಮನನ್ನು ನೆನೆಸಿಕೊಳ್ಳದವರು ಇರಲಿಕ್ಕಿಲ್ಲ.

Write Your Comment Here...