ರೇಣುಕಾಚಾರ್ಯನ ವಿರುದ್ಧ ಕ್ರಮ ಕೈಗೊಳ್ಳಿ: ಶಿವಪ್ಪ
[Updated 08/08/2012 06:04 pm]ಮಂಗಳೂರು,ಆ.8: ಮಾಜಿ ಮುಖ್ಯ ಮಂತ್ರಿ ಸದಾನಂದ ಗೌಡ ಅವರ ಆಡಳಿತ ಅವಧಿ ಬಿಜೆಪಿ ಸರ್ಕಾರದ ಅವಧಿಯಲ್ಲ. ಅದು ಸದಾನಂದ ಗೌಡರ ಸರ್ಕಾರ ಎಂದು ಹೇಳುವ ಮೂಲಕ ರಾಜ್ಯದ ಜನತೆಗೆ ಅವಮಾನ ಮಾಡಿರುವ ಹೊನ್ನಾಳಿ ಶಾಸಕ ಹಾಗೂ ಅಬಕಾರಿ ಸಚಿವ ರೇಣುಕಾಚಾರ್ಯ ಅಮಲಿನಿಂದ ಹೊರ ಬರಲಿ ಎಂದು ಡಾ. ಬಿ ಆರ್ ಅಂಬೇಡ್ಕರ್ ಪ್ರತಿಷ್ಠಾನದ ಅಧ್ಯಕ್ಷ ಶಿವಪ್ಪ ರೆಂಕದಗುತ್ತು ಕಿಡಿಕಾರಿದ್ದಾರೆ.
ಪ್ರೇಮ ಪ್ರಕರಣದಲ್ಲಿ ಭಾಗಿಯಾಗಿ ಮದುವೆಯಾಗುವುದಾಗಿ ನಂಬಿಸಿ ನರ್ಸ್ ಜಯಲಕ್ಷ್ಮಿಯ ಜೊತೆ ದೇಹ ಸಂಪರ್ಕ ಬೆಳೆಸಿ ನಂತರ ಆಕೆಗೆ ಕೈ ಕೊಟ್ಟಿರುವ ಫೋರ್ ಟ್ವೆಂಟಿ ರೇಣುಕಾಚಾರ್ಯ ಜಗದೀಶ್ ಶೆಟ್ಟರ್ ಅವರ ಸರ್ಕಾರದಲ್ಲಿ ಮುಂದುವರಿಯಲು ಯೋಗ್ಯನಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳದ ಪಕ್ಷ ರಾಷ್ಟ್ರಮಟ್ಟದ ನಾಯಕರಾದ ನಿತಿನ್ ಗಡ್ಕರಿ ಹಾಗೂ ಎಲ್ .ಕೆ ಅಡ್ವಾನಿ ಅವರ ಗಮನಕ್ಕೆ ಈ ವಿಚಾರವನ್ನು ತರಲಾಗುವುದು ಎಂದು ಶಿವಪ್ಪ ಹೇಳಿದರು.
ದಲಿತ ಜನಾಂಗದ ಧೀಮಂತ ನಾಯಕ ಡಿ. ಎಸ್. ವೀರಯ್ಯ ಅವರಿಗೆ ಕ್ಯಾಬಿನೆಟ್ ದರ್ಜೆಯ ಸಮಾಜ ಕಲ್ಯಾಣ ಖಾತೆಯನ್ನು ನೀಡಬೇಕೆಂದು ಅವರು ಸರ್ಕಾರವನ್ನು ಆಗ್ರಹಿಸಿದರು.
ಶರಣ್ ಮೇಲಿನ ಮೊಕದ್ದಮೆ ಹಿಂದಕ್ಕೆ ಪಡೆಯಲು ಗೃಹ ಸಚಿವರಿಗೆ ಮನವಿ
ಮಂಗಳೂರು: ಹೋಮ್ ಸ್ಟೇ ಪ್ರಕರಣ ಸಂಬಂಧಿಸಿ ಬಂಧಿತರಾಗಿದ್ದ ಮಾಧ್ಯಮ ಪ್ರತಿನಿಧಿ ಶರಣ್ ಮೇಲಿನ ಮೊಕದ್ದಮೆ ಹಿಂದಕ್ಕೆ ಪಡೆಯಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳುವಂತೆ ಒತ್ತಾಯಿಸಿ...
ಜೂ.22ರಂದು ಭರತನಾಟ್ಯ ಕಾರ್ಯಕ್ರಮ ನೀಡಲಿರುವ ಹಂಗೇರಿಯದ ಅಲೆಕ್ಸಾಂಡ್ರ
ಮಂಗಳೂರು: ಕಲೆಯೆನ್ನುವುದೇ ಹಾಗೆ. ಯಾರನ್ನೂ ಎಲ್ಲಿಗೆ ಬೇಕಾದರೂ ಸೆಳೆಯುತ್ತದೆ. ಭಾರತದ ಕಲೆಗಳ ಸಾಗರದಲ್ಲಿ ಮಿಂದೆದ್ದು ಹೋಗಲು ಹಲವಾರು ಮಂದಿ ವಿದೇಶಿಯರು ಆಗಮಿಸುತ್ತಾರೆ. ಆದರೆ ಏಕಾಗ್ರತೆಯಿಂದ ಕಲೆಯನ್ನು
ಬಿಹಾರದ ಜೆಡಿಯು ಸರ್ಕಾರ ಭದ್ರ
ಪಟ್ನಾ: ಬಿಜೆಪಿಯೊಂದಿಗಿನ ಮೈತ್ರಿ ಕಡಿದುಕೊಂಡ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಸರ್ಕಾರ ಬುಧವಾದ ವಿಶ್ವಾಸಮತ ಗೆದ್ದುಕೊಂಡಿದೆ. ಬಿಜೆಪಿ ವಿಶ್ವಾಸಮತ ಯಾಚನೆ ವಿರುದ್ಧ
ಕೊನೆಗೂ ಕೇರಳ ಸಿಎಂಗೆ ಕೈಗೆ ಮೊಬೈಲ್!
ತಿರುವನಂತಪುರಂ: ತುಂಬಾ ಸರಳ ಜೀವಿಯಾಗಿರುವ ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂದಿ ಅವರು ಸದ್ಯದಲ್ಲೇ ಮೊಬೈಲ್ ಫೋನ್ ಖರೀದಿ ಮಾಡಲಿದ್ದಾರಂತೆ. ಚಾಂದಿ ಅವರ ಬಳಿಯಲ್ಲಿ ಸ್ವಂತ ಮೊಬೈಲ್ ಇಲ್ಲದಿದ್ದ ಕಾರಣ
ಬೆಳ್ಳಿತೆರೆಯಲ್ಲೂ ಮಿಂಚಲು ರೆಡಿ: ಅನುಶ್ರೀ
ಕನ್ನಡ ಚಿತ್ರರಂಗ ಮತ್ತು ಕಿರುತೆರೆಗೆ ಯಾವತ್ತೂ ಅವಿನಾಭಾವ ಸಂಬಂಧ. ಒಂದು ಕಡೆ ಕನ್ನಡ ಚಿತ್ರರಂಗ, ಕನ್ನಡ ಚಿತ್ರಗಳಿಗೆ ಪ್ರೇಕ್ಷಕರಿಲ್ಲ, ಚಿತ್ರಗಳು ಓಡುತ್ತಿಲ್ಲ ಎಂದು ಕೂಗುತ್ತಿದ್ದರೆ, ಇನ್ನೊಂದೆಡೆ ಕನ್ನಡ ಕಿರುತೆರೆ...
ಕೊಡಗಿನ ಮಳೆಗಾಲದ ಸುಂದರಿ ಡೇಲಿಯಾ
ಮುಂಗಾರು ಮಳೆ ಸುರಿದಾಗ ಮನೆಮುಂದಿನ ಹೂತೋಟದಲ್ಲಿ ಸುಪ್ತವಾಗಿದ್ದ ಡೆಲೀಯಾ ಗೆಡ್ಡೆಗಳು ಮೊಳಕೆಯೊಡೆದು ಗಿಡಗಳಾಗಿ ವಿವಿಧ ಆಕಾರ, ಬಣ್ಣಗಳಲ್ಲಿ ಗೊಂಚಲುಗೊಂಚಲಾಗಿ ಹೂಬಿಟ್ಟು ಕಂಗೊಳಿಸುತ್ತವೆ.

Write Your Comment Here...