ಕುಂದಾಪುರದಲ್ಲಿ ಮುಂದುವರಿದ ಮಳೆ
[Updated 08/08/2012 06:19 pm]
ಕುಂದಾಪುರ,ಆ.8: ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ನೆರೆಹಾವಳಿಯಿಂದ ಅತೀ ಹೆಚ್ಚು ತೊಂದರೆಯನ್ನು ಎದುರಿಸುವ ನಾವುಂದ ಗ್ರಾಮದ ಸಾಲ್ಬುಡದಲ್ಲಿ ಕಳೆದ ಮೂರು ವರ್ಷಗಳಿಗಿಂತ ಭಾರೀ ಪ್ರಮಾಣದಲ್ಲಿ ನೆರೆ ಹಾವಳಿ ಉಂಟಾಗಿದೆ.
ಸಾಲುಹಾಡ ಮತ್ತು ಬಾಗಿನಮನೆ ಪ್ರದೇಶದ 90ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ಇಲ್ಲಿನ 400 ಎಕರೆ ಕೃಷಿಭೂಮಿ ಜಲಾವೃತಗೊಂಡಿದೆ. ಬಾಗಿನಮನೆ, ಅರೆಹೊಳೆ ಮೊದಲಾದೆಡೆ ಜನರು ದೋಣಿಗಳ ಸಂಚಾರಕ್ಕೆ ದೋಣಿಗಳನ್ನು ಆಶ್ರಯಿಸಿದ್ದಾರೆ. ನಾವುಂದ ಗ್ರಾಮ ಪಂಚಾಯತ್ ಅಧ್ಯಕ್ಷ ಜಗದೀಶ್ ಪೂಜಾರಿ ಹಾಗೂ ತಾ.ಪಂ. ಸದಸ್ಯ ಮಹೇಂದ್ರ ಪೂಜಾರಿ ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿ ನೆರೆಪೀಡಿತ ಪ್ರದೇಶದ ಜನರಿಗೆ ಮೂಲಸೌಕರ್ಯ ವ್ಯವಸ್ಥೆಗಳನ್ನು ಕಲ್ಪಿಸಿಕೊಡಲು ಮುಂದಾಗಿದ್ದಾರೆ.
ಇನ್ನೂ ನಾಡಾ ಗ್ರಾ.ಪಂ. ವ್ಯಾಪ್ತಿಯ ಬಡಾಕೆರೆ-ನಾವುಂದ ಸಂಪರ್ಕ ರಸ್ತೆ ನೆರೆನೀರಲ್ಲಿ ಮುಳುಗಿದ್ದು, ಸಂಚಾರಕ್ಕಾಗಿ ಜನರು ಪರದಾಟ ನಡೆಸುವಂತಾಗಿದೆ. ನಾಡಾ, ಚಿಕ್ಕಳ್ಳಿ, ಕಡೆಖ ಮತ್ತು ಬಡಾಕೆರೆ ಸಂಪರ್ಕ ರಸ್ತೆಯೂ ನೆರೆನೀರಲ್ಲಿ ಮುಳುಗಿದ್ದು ಜನರು ಸಂಚಾರಕ್ಕೆ ಸಮೀಪದ ಕೊಂಕಣ ರೈಲು ಮಾರ್ಗವನ್ನು ಬಳಸಿಕೊಂಡಿದ್ದಾರೆ. ಇದಲ್ಲದೆ ಹೆಮ್ಮಾಡಿ ಸಮೀಪ ಸೌಪರ್ಣಿಕಾ ಮತ್ತು ಚಕ್ರಾ ನದಿಗಳ ಸಂಗಮ ಸ್ಥಳದಲ್ಲಿರುವ ಕನ್ನಡಕುದ್ರು, ಮರವಂತೆ ಸಮೀಪ ಕುರು ದ್ವೀಪ, ನಾವುಂದ ಕುದ್ರು, ಕಟ್ಬೇಲೂನಿರಿನ ಚಕ್ರಾನದಿಯ ನಡುವಿನಲ್ಲಿರುವ ಪಡುಕುದ್ರು, ತಲ್ಲೂರು ಸಮೀಪ ಹೇರಿಕುದ್ರು ಮೊದಲಾದ ಕುದ್ರು ಪ್ರದೇಶಗಳು ಜಲಾವೃತವಾಗಿದ್ದು, ಜನರಲ್ಲಿ ತೀವ್ರ ಆತಂಕ ಉಂಟು ಮಾಡಿದೆ.
ಈ ಮಧ್ಯೆ ಸೌಪರ್ಣಿಕಾ ನದೀ ತೀರ ಪ್ರದೇಶದಲ್ಲಿರುವ ನಾಡಾ ಗ್ರಾ.ಪಂ. ವ್ಯಾಪ್ತಿಯ ಪಡುಕೋಣೆ, ಹಡವು, ಗುಡಿಹೊಲ, ಚಿಕ್ಕಳ್ಳಿ, ಕೂಡ್ಗಿತ್ಲು, ಸೇನಾಪುರ ಗ್ರಾಮದ ತೆಂಗಿನಗುಂಡಿ, ಪರಮಕಳಿ ಮೊದಲಾದೆಡೆ ಭಾರೀ ನೆರೆಹಾವಳಿ ಕಾಣಿಸಿ ಕೊಂಡಿದ್ದರಿಂದ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ನಾಡಾ ಮತ್ತು ಪಡುಕೋಣೆಯ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ನೆರೆಹಾವಳಿ ಜನಜೀವನವನ್ನು ತಲ್ಲಣಗೊಳಿಸಿದ್ದರೂ ಜನರ ಮೂಲಸೌಕರ್ಯ ಕುರಿತಂತೆ ವಿಚಾರಿಸಲು ಯಾವೊಬ್ಬ ಅಧಿಕಾರಿಯೂ ಭೇಟಿ ನೀಡಿದ್ದು ಕಂಡುಬರಲಿಲ್ಲ.
Floods hit hard Navunda in Kundapur taluk
Kundapur: Several villages in Kundapur taluk have been affected due to incessant rains. The Navunda village is worst affected where water has entered over 90 houses and 400 acres of agricultural land, has inundated.
ಸ್ನೇಹಿತನ ಕೊಲೆಗೈದ ಇಬ್ಬರ ಸೆರೆ
ಕಾಸರಗೋಡು: ನೀಲೇಶ್ವರ ಬಸ್ಸು ನಿಲ್ದಾಣ ಸಮೀಪದ ಕ್ಷೌರದ ಅಂಗಡಿ ಮಾಲಕ ಜಯನ್ ರನ್ನು ನೀರಿನಲ್ಲಿ ಮುಳುಗಿಸಿ ಕೊಲೆಗೈದ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಯನ್ ನ ಸ್ನೇಹಿತರಿಬ್ಬರನ್ನು ...
ಕಾರಿನಲ್ಲಿ ಜಿಂಕೆ ಕೊಂಬು ಪತ್ತೆ: ಆರೋಪಿ ಬಂಧನ
ಕಾಸರಗೋಡು: ಮಾರುತಿ ಕಾರಿನಲ್ಲಿ ಸಾಗಿಸುತ್ತಿದ್ದ ಜಿಂಕೆಯ ಕೊಂಬುಗಳನ್ನು ವಶಪಡಿಸಿಕೊಂಡಿರುವ ಅರಣ್ಯಾಧಿಕಾರಿಗಳು ಓರ್ವನನ್ನು ಬಂಧಿಸಿದ್ದಾರೆ. ಬಂಧಿತನನ್ನು ಪಿ.ಆರ್ ಸುನಿಲ್(28) ಎಂದು ಗುರುತಿಸಲಾಗಿದೆ.
ಸರ್ಕಾರ ನಿಮ್ಮ ಇ ಮೇಲ್, ದೂರವಾಣಿ ಕರೆ ಟ್ಯಾಪ್ ಮಾಡಬಹುದು!
ಹೊಸದಿಲ್ಲಿ: ಭಾರತ ಸರ್ಕಾರ ಕಣ್ಗಾವಲು ವ್ಯವಸ್ಥೆಯನ್ನು ಆರಂಭಿಸಿದ್ದು, ಇದರ ಮೂಲಕ ತೆರಿಗೆ ಇಲಾಖೆ ಸಹಿತ ಭಾರತ ಸರ್ಕಾರದ ವಿವಿಧ ಏಜೆನ್ಸಿ ಮತ್ತು ಇಲಾಖೆಗಳು ಸಂಶಯಾಸ್ಪದ ವ್ಯಕ್ತಿಗಳ ಇಮೇಲ್ ಮತ್ತು ದೂರವಾಣಿ
ಇನ್ನು ಫ್ಯಾನ್ ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವಂತಿಲ್ಲ!
ಭೋಪಾಲ್: ಇತ್ತೀಚಿನ ದಿನಗಳಲ್ಲಿ ಸಣ್ಣ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಆತ್ಮಹತ್ಯೆಗೆ ಹೆಚ್ಚಾಗಿ ಬಳಸಿಕೊಳ್ಳುವುದು ಮನೆಯಲ್ಲಿರುವ ಫ್ಯಾನ್. ಇದನ್ನು ಆತ್ಮಹತ್ಯೆಗೆ
ಬೆಳ್ಳಿತೆರೆಯಲ್ಲೂ ಮಿಂಚಲು ರೆಡಿ: ಅನುಶ್ರೀ
ಕನ್ನಡ ಚಿತ್ರರಂಗ ಮತ್ತು ಕಿರುತೆರೆಗೆ ಯಾವತ್ತೂ ಅವಿನಾಭಾವ ಸಂಬಂಧ. ಒಂದು ಕಡೆ ಕನ್ನಡ ಚಿತ್ರರಂಗ, ಕನ್ನಡ ಚಿತ್ರಗಳಿಗೆ ಪ್ರೇಕ್ಷಕರಿಲ್ಲ, ಚಿತ್ರಗಳು ಓಡುತ್ತಿಲ್ಲ ಎಂದು ಕೂಗುತ್ತಿದ್ದರೆ, ಇನ್ನೊಂದೆಡೆ ಕನ್ನಡ ಕಿರುತೆರೆ...
ಕೊಡಗಿನ ಮಳೆಗಾಲದ ಸುಂದರಿ ಡೇಲಿಯಾ
ಮುಂಗಾರು ಮಳೆ ಸುರಿದಾಗ ಮನೆಮುಂದಿನ ಹೂತೋಟದಲ್ಲಿ ಸುಪ್ತವಾಗಿದ್ದ ಡೆಲೀಯಾ ಗೆಡ್ಡೆಗಳು ಮೊಳಕೆಯೊಡೆದು ಗಿಡಗಳಾಗಿ ವಿವಿಧ ಆಕಾರ, ಬಣ್ಣಗಳಲ್ಲಿ ಗೊಂಚಲುಗೊಂಚಲಾಗಿ ಹೂಬಿಟ್ಟು ಕಂಗೊಳಿಸುತ್ತವೆ.

Write Your Comment Here...