ಸುಜಾತ ಮಿಲ್ ಕಾರ್ಮಿಕರಿಂದ ಬೃಹತ್ ಪ್ರತಿಭಟನಾ ರ್ಯಾಲಿ
[Updated 07/08/2012 05:06 pm]ನಂಜನಗೂಡು: ಸುಜಾತ ಮಿಲ್ ಕಾರ್ಮಿಕರಿಗೆ ಸಿಕ್ಕಬೇಕಾದ ಪರಿಹಾರವನ್ನು ನೀಡಬೇಕೆಂದು ಆಗ್ರಹಿಸಿ ಸುಜಾತ ಮಿಲ್ ಕಾರ್ಮಿಕರು ಮಂಗಳವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದರು.


ಸುಜಾತ ಮಿಲ್ ಮುಂಭಾಗದಿಂದ ಹೊರಟ ಪ್ರತಿಭಟನಾ ರ್ಯಾಲಿ ಸಾವಿರಾರು ಕಾರ್ಮಿಕರು ವಿ. ರಾಮಸ್ವಾಮಿ ನೇತೃತ್ವದಲ್ಲಿ ಹುಲ್ಲಹಳ್ಳಿ ವೃತ್ತ, ಆರ್ ಪಿ ರಸ್ತೆ, ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ಮುಂಭಾಗದಿಂದ ಎಂಜಿಎಸ್ ರಸ್ತೆ, ಮೂಲಕ ರ್ಯಾಲಿ ನಡೆಸಿ ಸುಜಾತ ಮಿಲ್ ಮಾಲೀಕರಿಗೆ ಧಿಕ್ಕಾರ, ಕಾರ್ಮಿಕ ಹೋರಾಟಕ್ಕೆ ಜಯವಾಗಲಿ ಎಂಬ ಘೋಷಣೆ ಕೂಗುತ್ತಾ ಸುಜಾತ ಮಿಲ್ ಮುಂಭಾಗ ಜಮಾಯಿಸಿದರು.
14 ವರ್ಷಗಳ ಹಿಂದೆ ಮುಚ್ಚಿದ ಸುಜಾತ ಮಿಲ್ ನ ನೌಕರರು ಅಕ್ಷರಶಃ ಬೀದಿಗೆ ಬಿದ್ದು, ಬದುಕು ಮೂರು ಪಟ್ಟೆಯಾಗಿ ಹಲವು ಕಾರ್ಮಿಕರು ಈ ವ್ಯಥೆಯಿಂದಲೇ ಸಾವನ್ನಪ್ಪಿದ್ದರೂ ಮಿಲ್ ಮಾಲೀಕರು ಪರಿಹಾರದ ಕರುಣೆ ತೋರದೆ ಕಾರ್ಮಿಕ ವಿರೋಧ ನೀತಿ ಅನುಸರಿಸುತ್ತಿದ್ದಾರೆ ಎಂದು ವಿ ರಾಮಸ್ವಾಮಿ ಅವರು ಆರೋಪಿಸಿ ಈ ಧೋರಣೆ ಹೀಗೆಯೇ ಮುಂದುವರಿದರೆ ಉಗ್ರ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು. ಕಳೆದ 5 ದಿನಗಳಿಂದಲೂ ಮಿಲ್ ಮುಂಭಾಗ ಧರಣಿ ನಡೆಸುತ್ತಿದ್ದರೂ ಸಂಬಂಧಪಟ್ಟವರು ಇತ್ತ ತಲೆ ಹಾಕದೆ ಕಾರ್ಮಿಕರ ನೋವಿಗೆ ಸ್ಪಂಧಿಸದೇ ಇರುವುದು ವಿಷಾದ ಎಂದ ಅವರು, ಕಾರ್ಮಿಕರಿಗೆ ಬರಬೇಕಾದ ನ್ಯಾಯ ಸಮ್ಮತವಾದ ಪರಿಹಾರ ನೀಡಬೇಕೆಂದು ಸಂಬಂಧಪಟ್ಟವರನ್ನು ಒತ್ತಾಯಿಸಿದರು.
ರ್ಯಾಲಿಯಲ್ಲಿ ಸುಜಾತ ಮಿಲ್ ಹೋರಾಟ ಸಮಿತಿ ಅಧ್ಯಕ್ಷ ಡಿ.ಕೆ.ಸುರೇಶ್, ಮುಖಂಡರುಗಳಾದ ಸಿದ್ದರಾಜು, ರಾಚಪ್ಪ, ದೇವರಾಜು, ಕೂಸಪ್ಪ, ಲಿಂಗರಾಜು, ವಹಿಸಿದ್ದರು. ಡಿವೈಎಸ್ ಪಿ ವಿಜಯ್ ಕುಮಾರ್ ನೇತೃತ್ವದಲ್ಲಿ ಸಿಪಿಐ ಶಿವಸ್ವಾಮಿ, ಪಿಎಸ್ಐ ರಫೀಕ್ ಪಾಂಡು ವಿಜೇಂದ್ರನ್ ಎಎಸ್ಐ ಸುಬ್ರಹ್ಮಣ್ಯ, ನಾಗರಾಜು ಸೇರಿದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು.
ಮನ ನೊಂದ ವಿದ್ಯಾರ್ಥಿನಿ ಆತ್ಮಹತ್ಯೆ
ಹಾಸನ: ಸಮೀಪದ ವಿವೇಕನಗರ ಬಡಾವಣೆಯಲ್ಲಿ ಸಹಪಾಠಿಗಳು ರೇಗಿಸಿದ್ದರಿಂದ ಮನನೊಂದು ಮನೆಯ ಪ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ನಡೆದಿದೆ.
ನಂಜನಗೂಡಿನಲ್ಲಿ ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿ ರಥೋತ್ಸವ
ದಕ್ಷಿಣ ಕಾಶಿ ಶ್ರೀಕಂಠೇಶ್ವರ ಸ್ವಾಮಿ ದೇಗುಲದಲ್ಲಿ ಧನುರ್ಮಾಸದಲ್ಲಿ ನಡೆಯುವ ಷಷ್ಠಿ ಸುಬ್ರಹ್ಮಣ್ಯೇಶ್ವರ ರಥೋತ್ಸವ ವಿಜೃಂಭಣೆಯಿಂದ ಜರುಗಿತು. ನೂರಾರು ಭಕ್ತರು ಶ್ರದ್ಧಾಭಕ್ತಿಯಿಂದ ಸುಬ್ರಹ್ಮಣ್ಯೇಶ್ವರ ಸ್ವಾಮಿ ರಥ ಎಳೆದು ಪುನೀತರಾದರು.
ಕೊನೆಗೂ ಕೇರಳ ಸಿಎಂಗೆ ಕೈಗೆ ಮೊಬೈಲ್!
ತಿರುವನಂತಪುರಂ: ತುಂಬಾ ಸರಳ ಜೀವಿಯಾಗಿರುವ ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂದಿ ಅವರು ಸದ್ಯದಲ್ಲೇ ಮೊಬೈಲ್ ಫೋನ್ ಖರೀದಿ ಮಾಡಲಿದ್ದಾರಂತೆ. ಚಾಂದಿ ಅವರ ಬಳಿಯಲ್ಲಿ ಸ್ವಂತ ಮೊಬೈಲ್ ಇಲ್ಲದಿದ್ದ ಕಾರಣ
ಮೊಬೈಲ್ ಬಿಲ್ ಪಾವತಿಯಾಗದ ಹಿನ್ನೆಲೆಯಲ್ಲಿ 108 ಸೇವೆ ಸ್ಥಗಿತ
ಬೆಂಗಳೂರು: ಜಿವಿಕೆ ಸಂಸ್ಥೆ ಏರ್ ಟೆಲ್ ನ ಮೊಬೈಲ್ ಬಿಲ್ ಪಾವತಿಸದಿರುವ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿಯಿಂದ 108 ಆ್ಯಂಬುಲೆನ್ಸ್ ಸೇವೆ ಸಂಪೂರ್ಣ ಸ್ಥಗಿತಗೊಂಡಿದೆ.
ಕೊಡಗಿನ ಮಳೆಗಾಲದ ಸುಂದರಿ ಡೇಲಿಯಾ
ಮುಂಗಾರು ಮಳೆ ಸುರಿದಾಗ ಮನೆಮುಂದಿನ ಹೂತೋಟದಲ್ಲಿ ಸುಪ್ತವಾಗಿದ್ದ ಡೆಲೀಯಾ ಗೆಡ್ಡೆಗಳು ಮೊಳಕೆಯೊಡೆದು ಗಿಡಗಳಾಗಿ ವಿವಿಧ ಆಕಾರ, ಬಣ್ಣಗಳಲ್ಲಿ ಗೊಂಚಲುಗೊಂಚಲಾಗಿ ಹೂಬಿಟ್ಟು ಕಂಗೊಳಿಸುತ್ತವೆ.
ಮೈಸೂರಿನಲ್ಲಿ ಅಖಿಲೇಶ್ ಕಳೆದ ಮಧುರ ಕ್ಷಣಗಳು...
ಮೈಸೂರು: ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮೈಸೂರಿನ ಜೆಸಿಇ ಕ್ಯಾಂಪಸ್ಸಿಗೆ ಬರುವ ಮುನ್ನ ಅವರ ಶಿಕ್ಷಕರು ಮತ್ತು ಸ್ನೇಹಿತರನ್ನು ಮಾತಿಗೆಳೆದಾಗ ಅವತ್ತಿನ ಆ ಮಧುರ ಕ್ಷಣಗಳನ್ನು ನೆನಪು ಮಾಡಿಕೊಂಡ ಪರಿ ಇಲ್ಲಿದೆ.

Write Your Comment Here...