ಮಕ್ಕಳಿಂದ ಕುರುಕಲು ತಿಂಡಿಯನ್ನು ದೂರವಿಡಿ
[Updated 11/09/2012 02:39 pm]ಮಕ್ಕಳು ಊಟದ ತಟ್ಟೆ ಎದುರಿಗೆ ತಂದಿಟ್ಟರೆ ಸಾಕು ಅಳೋಕೆ ಶುರು ಮಾಡಿಕೊಳ್ತಾರೆ. ತುಂಬಾ ಒತ್ತಾಯ ಮಾಡಿ ಊಟ ಮಾಡೋಕೆ ಹೇಳಿದ್ರೋ ಅನ್ನದಲ್ಲಿ ಎರಡು ಸಲ ಕೈಯಾಡಿಸಿ ಎದ್ದು ಬಿಡ್ತಾರೆ ಅನ್ನೋದು ಎಲ್ಲ ಅಮ್ಮಂದಿರ ಗೋಳು. ಆದ್ರೆ ಕುರುಕಲು ಪ್ಯಾಕೆಟ್ಸ್ ಎಷ್ಟು ಇದ್ರೂ ಸಾಕಾಗಲ್ಲ. ಅಂಗಡಿ ಮುಂದೆ ಸಾಗುವಾಗ ಎರಡು ಮೂರು ಕುರುಕಲು ತಿಂಡಿಗಳ ಪ್ಯಾಕೆಟ್ಸ್ ಕೈಗಿಡದಿದ್ದರೆ ಮುಂದೆ ಸಾಗೋ ಮಾತೇ ಇಲ್ಲ..ಇಲ್ಲಾಂದ್ರೆ ಪಿಜ್ಜಾ, ಬರ್ಗರ್ ಮೊದಲಾದವು. ಈಗಿನ ಮಕ್ಕಳಿಗೆ ಊಟ, ತಿಂಡಿಗಿಂತ ಈಗ ಇದುವೇ ಅಚ್ಚುಮೆಚ್ಚು. 
ಈಗೆಲ್ಲಾ ದಿನವಿಡೀ ಟಿವಿ ಮುಂದೆ ಕುಳಿತು ಕುರುಕಲು ತಿಂಡಿಯನ್ನು ತಿನ್ನುವುದೇ ಮಕ್ಕಳಿಗೆ ಚಟವಾಗಿಬಿಟ್ಟಿದೆ. ಊಟ, ತಿಂಡಿಯ ಗೊಡವೆಯೇ ಬೇಕಿಲ್ಲ. ಅಮ್ಮಂದಿರೂ ಅಷ್ಟೆ ಮಕ್ಕಳಿಗೆ ಇಷ್ಟ ಅಂತ ಅವರು ಕೇಳಿದಂತೆ ಕುರುಕಲು ತಿಂಡಿಯನ್ನು ಕೊಡುವುದನ್ನೇ ಅಬ್ಯಾಸ ಮಾಡಿಕೊಳ್ಳುತ್ತಿದ್ದಾರೆ. ಆದ್ರೆ ಈ ಕುರುಕಲು ತಿಂಡಿಗಳು ಆರೋಗ್ಯಕ್ಕೆ ಅದೆಷ್ಟು ಹಾನಿಕರ ಅನ್ನೋ ವಿಷಯಾನ ತಿಳಿದುಕೊಳ್ಳುವುದು ಒಳಿತು.
ಈ ಜಂಕ್ ಫುಡ್ ಗಳಲ್ಲಿ ಕೊಲೆಸ್ಟ್ರಾಲ್ ಅಂಶ ಹೆಚ್ಚಿರುವುದರಿಂದ ಇದು ಆರೋಗ್ಯಕ್ಕೆ ಎಲ್ಲಾ ರೀತಿಯಲ್ಲೂ ಹಾನಿಕಾರಕ. ಇದು ದೇಹದಲ್ಲಿ ಅಧಿಕ ಪ್ರಮಾಣದಲ್ಲಿ ಬೊಜ್ಜನ್ನು ಉಂಟು ಮಾಡುತ್ತದೆ. ಯಾವಾಗಲೂ ಇಂತಹಾ ಕುರುಕಲುಗಳನ್ನೇ ಸೇವಿಸುವುದರಿಂದ ಇತರ ಆಹಾರಗಳ್ಯಾವುದೂ ಬಾಯಿಗೆ ರುಚಿಸುವುದಿಲ್ಲ. ಇದರಿಂದ ದೇಹಕ್ಕೆ ಸತ್ವಭರಿತ ಆಹಾರದ ಕೊರತೆ ಉಂಟಾಗಿ ನಿಶ್ಯಕ್ತಿ ಕಾಣಿಸಿಕೊಳ್ಳಬಹುದು.
ಈ ಕುರುಕಲು ತಿಂಡಿಯಲ್ಲಿ ಕೃತಕ ಬಣ್ಣಗಳು, ಪರಿಮಳಗಳನ್ನು ಸೇರಿಸುವುದರಿಂದ ಇದು ದೇಹಕ್ಕೆ ಎಲ್ಲಾ ರೀತಿಯಲ್ಲೂ ಹಾನಿಯನ್ನುಂಟು ಮಾಡುತ್ತದೆ. ಮಾತ್ರವಲ್ಲ ಇದರಲ್ಲಿ ತುಂಬಾ ದಿನ ಹಾಳಾಗದಂತೆ ಸಂಸ್ಕರಿಸಿ ಇಡುವ ರಾಸಾಯನಿಕಗಳನ್ನೂ ಬಳಸಿಕೊಳ್ಳುತ್ತಾರೆ. ಇವೆಲ್ಲಾ ದೇಹಕ್ಕೆ ಕೆಡುಕನ್ನು ಮಾತ್ರ ಉಂಟು ಮಾಡುತ್ತವೆ. ಈ ಕುರುಕಲು ತಿಂಡಿಗಳಲ್ಲಿ ಯಾವುದೇ ರೀತಿಯ ಪ್ರೋಟೀನ್ ಆಗಲೀ, ಪೋಷಕಾಂಶಗಳಾಗಲೀ ಇರುವುದಿಲ್ಲ. ಬರೀ ನಾಲಗೆಗೆ ರುಚಿಯೆನಿಸುತ್ತದೆ ಎಂಬ ಕಾರಣಕ್ಕೆ ಇದನ್ನು ಸೇವಿಸಬಹುದು ಹೊರತು ಇದರಲ್ಲಿ ದೇಹಕ್ಕೆ ಪೂರಕವಾದ ಯಾವುದೇ ಸತ್ವಭರಿತ ಅಂಶಗಳಿಲ್ಲ ಎಂಬುದು ನಿಜ. ಹಾಗಾಗಿ ಇನ್ನು ಮುಂದೆಯಾದರೂ ಅಮ್ಮಂದಿರು ಮಕ್ಕಳಿಂದ ಈ ಕುರುಕಲು ತಿಂಡಿಗಳನ್ನು ದೂರವಿಡುವುದು ಒಳಿತು.
ಹಣ್ಣು-ತರಕಾರಿ ಸೇವಿಸಿ ಆರೋಗ್ಯ ವೃದ್ದಿಸಿ
ಹವಾಮಾನ ಬದಲಾಗುತ್ತಿದ್ದಂತೆಯೇ ನಮ್ಮ ದೇಹ(ಆರೋಗ್ಯ)ದಲ್ಲಿ ಕೆಲವು ಬದಲಾವಣೆಗಳು ಕಂಡು ಬರುವುದು ಸಹಜ. ಹಾಗಾಗಿ ಆಯಾಯ ವಾತಾವರಣಕ್ಕೆ ಅನುಕೂಲವಾಗುವಂತೆ ಆಹಾರ ಪದಾರ್ಥ ಬಳಕೆಯಲ್ಲಿಯೂ ಕೆಲವೊಂದು...
ನಿಮ್ಮ ಕೈಕಾಲು ಸೌಂದರ್ಯದ ಬಗ್ಗೆ ಗಮನವಿರಲಿ
ಮುಖದ ಸೌಂದರ್ಯ ಮಾತ್ರ ನೋಡಿಕೊಂಡರೆ ಸಾಲದು. ಕೈಕಾಲುಗಳು ಚಂದ ಇರಬೇಡವೆ? ಬೇಕಲ್ವ? ಮನೆಯಲ್ಲಿಯೇ ಹೆಚ್ಚು ಖರ್ಚಿಲ್ಲದ ಉಪಚಾರದಿಂದ ಸುಂದರವಾದ ಕೈಕಾಲುಗಳನ್ನು ಹೊಂದಬಹುದು. ಅಥವಾ ಕೈ ಕಾಲುಗಳನ್ನು ಸುಂದರವಾಗಿಸಬಹುದು.
ಉತ್ತಮ ಆರೋಗ್ಯಕ್ಕೆ ತುಳಸಿ
ತುಳಸಿಯಲ್ಲಿ ರೋಗನಿರೋಧಕ ಶಕ್ತಿ ಇದ್ದು ದಿನಾ ಬೆಳಗ್ಗೆ ಎದ್ದು ಅದರ 4-5 ಎಲೆಗಳನ್ನು ತೊಳೆದು ಅಗಿದು ತಿನ್ನುವುದರಿ೦ದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ತುಳಸಿಯ ಪಾತ್ರ ಮಹತ್ವದ್ದು.
ಶಂಖ ಪುಷ್ಪ ಔಷಧೀಯ ಗುಣ
ಶಂಖಪುಷ್ಪ ನೋಡಲು ಸುಂದರ. ಅಷ್ಟೆ ಅಲ್ಲ ಆರೋಗ್ಯ ವರ್ಧಕವೂ ಹೌದು. ಬೀನ್ಸ್ ಬಳ್ಳಿಯಂತಿರುವ ಈ ಸಸ್ಯವು ಬೇರೆ ಗಿಡವನ್ನು ಆಧಾರವಾಗಿರಿಸಿಕೊಂಡು ಹರಡಿ ಬೆಳೆಯುತ್ತದೆ. ಹೂವಿನ ದಳಗಳು ಶಂಖದ ಒಳಭಾಗದ ಆಕಾರವನ್ನು ಹೊಂದಿರುವ ಕಾರಣ...
ಹಾಲಿನಿಂದ ಮುಖದ ಅಂದ ಹೆಚ್ಚಿಸಿಕೊಳ್ಳಿ!
ಲೆನ್ಸಿಂಗ್, ಮಾಯಿಶ್ಚರೈಸರ್ ಇವೆಲ್ಲಾ ತ್ವಚೆ ಸೌಂದರ್ಯ ಕಾಪಾಡಲು ಮಾಡಬೇಕಾದ ಮುಖ್ಯವಾದ ಆರೈಕೆಗಳು. ಕ್ಲೆನ್ಸಿಂಗ್ ಮಾಡಿದರೆ ನಿರ್ಜೀವ ತ್ವಚೆಯನ್ನು ಹೋಗಲಾಡಿಸಬಹುದು, ಅಲ್ಲದೆ ಮೇಕಪ್...
ಕೂದಲಿನ ಬೆಳವಣಿಗೆಗೆ ಕರಿಬೇವು
ಕರಿಬೇವಿನ ಎಲೆಯನ್ನು ಅಡುಗೆಯಲ್ಲಿ ಬಳಸಿದರೆ ಅಡುಗೆ ಘಮ್ಮೆನ್ನುವುದು. ಕೂದಲಿನ ಆರೈಕೆಯಲ್ಲಿ ಕೂಡ ಕರಿಬೇವಿನ ಎಲೆಯನ್ನು ಬಳಸಲಾಗುವದು. ರುಚಿ, ಸೌಂದರ್ಯ, ಆರೋಗ್ಯಕ್ಕೆ ಹೀಗೆ ಅನೇಕ ಗುಣಗಳನ್ನು ಈ ಕರಿಬೇವು ಹೊಂದಿದೆ.
ಬಾಳೆ ಎಲೆಯಿಂದ ತ್ವಚೆ ರಕ್ಷಣೆ
ನಮ್ಮ ದೇಹದ ಪ್ರತಿಯೊಂದು ಅಂಗಾಂಗಗಳನ್ನು ರಕ್ಷಣೆ ಮಾಡುವುದು ಅತೀ ಮುಖ್ಯ. ತ್ವಚೆಯ ರಕ್ಷಣೆಯನ್ನು ನೈಸರ್ಗಿಕವಾದ ವಸ್ತುಗಳನ್ನು ಬಳಸಿಕೊಂಡರೆ ಉತ್ತಮ. ಅವುಗಳಲ್ಲಿ ಬಾಳೆ ಎಲೆಯೂ ಒಂದು.
ಸೌಂದರ್ಯವರ್ಧಕದಲ್ಲಿ ಜೇನಿನ ಪಾತ್ರ
ಜೇನು ಆರೋಗ್ಯಕ್ಕೆ ಎಷ್ಟು ಒಳ್ಳೆಯದೋ ಅಷ್ಟೇ ಸೌಂದರ್ಯವರ್ಧಕದಲ್ಲೂ ಪ್ರಾಮುಖ್ಯತೆ ವಹಿಸುತ್ತದೆ. ಇದನ್ನು ಸೌಂದರ್ಯ ವೃದ್ಧಿಸಲು ಅನೇಕ ರೀತಿಯಲ್ಲಿ ಬಳಸಬಹುದು.
ಉತ್ತಮ ಆರೋಗ್ಯಕ್ಕೆ ಸಮತೋಲನ ಆಹಾರ ಅಗತ್ಯ
ದೇಹ, ಮನಸ್ಸು ಹಾಗೂ ಆತ್ಮಗಳಿಗೆ ಸಂಪೂರ್ಣ ಪೋಷಣೆಯನ್ನು ಒದಗಿಸುವ ಪೋಷಣೆಯನ್ನು ಒದಗಿಸುವ ಪೋಷಕಾಂಶಗಳಿಗೆ ಸಮಗ್ರ ಪೋಷಕಾಂಶಗಳು ಎಂದು ಹೇಳಬಹುದು.
ಮಕ್ಕಳ ಕಿವಿ ಸೋರುವಿಕೆಯಲ್ಲಿ ಎಚ್ಚರವಿರಲಿ
ಮನುಷ್ಯನ ಪ್ರತಿಯೊಂದು ಅಂಗಾಂಗಳನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಂಡು ಬಂದರೆ ಒಳಿತು. ಇಲ್ಲದೇ ಹೋದರೆ ಒಂದಲ್ಲ ಒಂದು ರೀತಿಯಲ್ಲಿ ಸಮಸ್ಯೆಗಳು ಕಾಡುತ್ತಿರುತ್ತದೆ. ಪಂಚೇಂದ್ರಿಯಗಳಲ್ಲಿ ಒಂದಾದ ಕಿವಿಯು...
ಬಂಧನದ ವೇಳೆ ಮದ್ಯಪಾನ ಮಾಡಿದ್ದ ಶ್ರೀಶಾಂತ್
ಹೊಸದಿಲ್ಲಿ: ಸ್ಪಾಟ್ ಫಿಕ್ಸಿಂಗ್ ಮಾಡಿರುವ ರಾಜಸ್ಥಾನ ರಾಯಲ್ಸ್ ತಂಡದ ವೇಗಿ ಎಸ್. ಶ್ರೀಶಾಂತ್ ಬಂಧನದ ವೇಳೆ ಮದ್ಯಪಾನ ಮಾಡಿದ್ದು, ಯುವತಿಯರೊಂದಿಗೆ ಪಂಚತಾರಾ ಹೋಟೆಲ್ ನ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ಕಾರಿನಲ್ಲಿದ್ದ
ಖಾತೆಗಳ ಹಂಚಿಕೆ: ಪ್ರಮುಖ ಖಾತೆಗಳ ಜವಾಬ್ದಾರಿ ಹೊತ್ತುಕೊಂಡ ಸಿಎಂ
ಬೆಂಗಳೂರು: ಸಚಿವರು ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಹಂಚಿಕೆಯಾಗಬೇಕಿದ್ದ ಖಾತೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಹಂಚಿಕೆ ಮಾಡಿದ್ದು, ಪ್ರಮುಖ ಖಾತೆಗಳಾದ ಇಂಧನ ಹಾಗೂ ಹಣಕಾಸು....
29ರಿಂದ ವಿಧಾನ ಮಂಡಲ ಅಧಿವೇಶನ
ಬೆಂಗಳೂರು: ಮೇ 29 ರಿಂದ ವಿಧಾನ ಮಂಡಲದ ಅಧಿವೇಶನವನ್ನು ನಡೆಸಲು ನಿರ್ಧರಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೇ 31 ರಂದು ಸ್ಪೀಕರ್ ಸ್ಥಾನಕ್ಕೆ...
ಭ್ರಷ್ಟಾಚಾರಕ್ಕೆ ಅವಕಾಶ ನೀಡದಂತೆ ಸಚಿವರಿಗೆ ಸಿಎಂ ಕರೆ
ಬೆಂಗಳೂರು: ಭ್ರಷ್ಟಾಚಾರ ನಡೆಸಿದ ಸರ್ಕಾರವನ್ನು ಹೊರಗಿಟ್ಟು ಕಾಂಗ್ರೆಸ್ ಗೆ ಜನ ಅವಕಾಶ ಮಾಡಿಕೊಟ್ಟಿದ್ದಾರೆ. ಆದ್ದರಿಂದ ಭ್ರಷ್ಟಾಚಾರಕ್ಕೆ ಅವಕಾಶ ನೀಡದೆ ಕಾನೂನು ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ...
ಖಾದರ್, ರೈ, ಜೈನ್, ಸೊರಕೆ ಸಹಿತ ಸಚಿವರ ಪ್ರಮಾಣವಚನ
ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ನೂತನ ಸಚಿವರುಗಳು ಶನಿವಾರ ರಾಜ್ಯಪಾಲರ ಭವನದ ಗಾಜಿನಮನೆಯಲ್ಲಿ ನಡೆದ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಇಂದು ನೂತನ ಸಚಿವರ ಪ್ರಮಾಣ ವಚನ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸಚಿವ ಸಂಪುಟ ಇಂದು ಅಸ್ಥಿತ್ವಕ್ಕೆ ಬರಲಿದ್ದು, ಬೆಳಿಗ್ಗೆ 10.30ಕ್ಕೆ ರಾಜಭವನದಲ್ಲಿ ನಡೆಯುವ ಸರಳ ಸಮಾರಂಭದಲ್ಲಿ 29 ಮಂದಿ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಸ್ಪಾಟ್ ಫಿಕ್ಸಿಂಗ್: ಕರ್ನಾಟಕದ ಅಮಿತ್ ಸಿಂಗ್ ಸೆರೆ
ಹೊಸದಿಲ್ಲಿ: ಐಪಿಎಲ್ ನಲ್ಲಿ ತಲ್ಲಣವನ್ನು ಉಂಟು ಮಾಡಿರುವ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಬುಕ್ಕಿಗಳು ಮತ್ತು ಆಟಗಾರರ ಮಧ್ಯವರ್ತಿಯಾಗಿದ್ದ ರಾಜಸ್ಥಾನ ರಾಯಲ್ಸ್ ನ ಮಾಜಿ ವೇಗಿ ಅಮಿತ್ ಸಿಂಗ್ ನನ್ನು ಪೊಲೀಸರು ಬಂಧಿಸಿದ್ದಾರೆ.
ನಾನು ನಿರ್ದೋಷಿ, ಹಗರಣದಲ್ಲಿ ನನ್ನನ್ನು ಸಿಲುಕಿಸಲಾಗಿದೆ: ಶ್ರೀಶಾಂತ್
ಹೊಸದಿಲ್ಲಿ: ಐಪಿಎಲ್ ನಲ್ಲಿ ಸ್ಪಾಟ್ ಫಿಕ್ಸಿಂಗ್ ಆರೋಪದಲ್ಲಿ ಸಿಲುಕಿರುವ ವೇಗಿ ಶ್ರೀಶಾಂತ್, ತಾನು ನಿರ್ದೋಷಿ ಮತ್ತು ಪ್ರಕರಣದಲ್ಲಿ ತನ್ನನ್ನು ಸಿಲುಕಿಸಲಾಗಿದೆ ಎಂದು ದೆಹಲಿ ಕೋರ್ಟ್ ಮುಂದೆ ಹೇಳಿದರು.
ಲಾಕೆಟ್, ಕರ್ಚಿಫ್ ಸ್ಪಾಟ್ ಫಿಕ್ಸಿಂಗ್ ಸಂಕೇತಗಳು!
ನವದೆಹಲಿ: ಐಪಿಎಲ್ ನಲ್ಲಿ ಸ್ಫಾಟ್ ಫಿಕ್ಸಿಂಗ್ ನಲ್ಲಿ ನಡೆಸಿದ ಆರೋಪದ ಮೇಲೆ ಬಂಧಿತರಾಗಿರುವ ರಾಜಸ್ಥಾನ ರಾಯಲ್ಸ್ ತಂಡದ ಎಸ್. ಶ್ರೀಶಾಂತ್, ಅಜಿತ್ ಚಾಂಡಿಲಾ ಮತ್ತು ಅಂಕಿತ್ ಚೌವ್ಹಾಣ್ ಬುಕ್ಕಿಗಳಿಗೆ ನಿರ್ದೇಶನ ನೀಡಲು ವಿವಿಧ
ನಾಳೆ ಸಚಿವರ ಪ್ರಮಾಣ ವಚನ?
ಬೆಂಗಳೂರು: ಸಚಿವ ಸಂಪುಟಕ್ಕೆ 22 ಸಚಿವರನ್ನು ಸೇರ್ಪಡೆ ಮಾಡಿಕೊಳ್ಳಲು ಹೈಕಮಾಂಡ್ ಸೂಚಿಸಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ನಾಳೆ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯುವ ಸಾಧ್ಯತೆ ದಟ್ಟವಾಗಿದೆ.
ಪ್ರಯೋಗ ಶೀಲ ಕಲಾವಿದನ ಕಲ್ಪನೆಯಲ್ಲಿ ಮೂಡಿದ ಕಾಗದ ಭಿತ್ತಿ ಶಿಲ್ಪಗಳು
ಆಧುನಿಕತೆ ಬೆಳೆದಂತೆಲ್ಲ ಕಲೆಯು ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಲಿದೆ. ಪ್ರಸುತ್ತ ಸಂದರ್ಭದಲ್ಲಿ ಕಲಾವಿದ ತನ್ನದೇ ಆದ ಮಾಧ್ಯಮದಿಂದ ಕಲಾಕೃತಿಗಳನ್ನು ರಚಿಸುತ್ತ ತನ್ನ ಕಲ್ಪನೆಯನ್ನು ಅಭಿವ್ಯಕ್ತಿಸಲು ವಿಭಿನ್ನ ಮಾರ್ಗವನ್ನು ಕಂಡುಕೊಳ್ಳುತ್ತಿದ್ದಾನೆ.
ಮ್ಯಾಜಿಕ್ ಕಲೆಯ ಸಾಗರ ಈ ಸಾಗರ್...!
ಮ್ಯಾಜಿಕ್ ನೊಂದಿಗೆ ಕೆಲವು ಅಪಾಯಕಾರಿ ಸ್ಟಂಟ್ ಗಳನ್ನು ಮಾಡುವ ಸಾಗರ್ ಗೆ ಮನೆಯೇ ಮೊದಲ ಪ್ರಯೋಗ ಶಾಲೆ. ಚಾಪರ್ ಬ್ಲೇಡ್ ನ ಹರಿತವಾದ ಭಾಗದ ಮೇಲೆ ನಡೆದಾಡುವ ಸಾಗರ್, ಪ್ರೇಕ್ಷಕರನ್ನು ನಿಬ್ಬೆರಗಾಗುವಂತೆ ಮಾಡುವುದಲ್ಲದೆ...
ಶಿಕ್ಷಣ ವ್ಯವಸ್ಥೆಗೇ ಸವಾಲೆಸೆಯುತ್ತಿರುವ ಸ್ವರೂಪ
ಚಿತ್ರಕಲೆ ಮೂಲಕ ಸಾಧಾರಣಾ ವಿದ್ಯಾರ್ಥಿಯೊಬ್ಬ ಹೆಚ್ಚಿನ ಅಂಕ ಪಡೆಯಲು ಸಾಧ್ಯವೇ? ದಡ್ಡನೆಂದು ಬೈದು ಶಾಲೆಯಿಂದ ಹೊರದಬ್ಬಲ್ಪಟ್ಟ ವಿದ್ಯಾರ್ಥಿ ಕೇವಲ 20 ದಿನಗಳ ತರಬೇತಿಯ ಮೂಲಕ ಡಿಸ್ಟಿಂಕ್ಷನ್ ಪಡೆಯಲು ಸಾಧ್ಯವೇ? ಡ್ಯಾನ್ಸ್ ಮಾಡಿ ಗಣಿತ-ವಿಜ್ಞಾನದಲ್ಲಿ...ವಿಶೇಷ
ಕುಟುಂಬವೆಂಬ ವಟವೃಕ್ಷದ ಕೆಳಗೆ...
ಮೇ 15 ವಿಶ್ವ ಅಂತರರಾಷ್ಟ್ರೀಯ ಕುಟುಂಬ ದಿನ, ಸತ್ಸಂಪ್ರದಾಯದಲ್ಲಿ ವಿಶ್ವಕ್ಕೆ ಮಾದರಿಯಾದ ಭಾರತದ ಕುಟುಂಬ ಪದ್ಧತಿಯಲ್ಲಿ ಆತಂಕಕಾರಿಯಲ್ಲದಿದ್ದರೂ ಅಲ್ಪಪ್ರಮಾಣದ ಪಾಶ್ಚಾತ್ಯರ ಅನುಕರಣೆಯಾಗುತ್ತಿರುವುದು ಅಸಹನೀಯವೇ.
ಇತಿಹಾಸದ ಕಥೆ ಹೇಳುತ್ತಿದೆ ಮಡಿಕೇರಿ ಅರಮನೆ
ಕೊಡಗಿನ ಮುಖ್ಯ ಪಟ್ಟಣ ಮಡಿಕೇರಿಗೆ ಆಗಮಿಸುವ ಪ್ರವಾಸಿಗರನ್ನು ಎತ್ತರದ ಸಮತಟ್ಟಾದ ಸ್ಥಳದಲ್ಲಿ ಕಲ್ಲುಕೋಟೆ ನಡುವೆ ನೆಲೆನಿಂತ ಅರಮನೆ ಗಮನಸೆಳೆಯುತ್ತದೆ. ಈ ಅರಮನೆ ಮೈಸೂರು ಅರಮನೆಯಂತೆ ವಿಶ್ವವಿಖ್ಯಾತಿ ಪಡೆಯದಿರಬಹುದು.
ಸ್ತ್ರೀಯರ ಮಹತ್ವದ ದಿನ ಅಕ್ಷಯ ತೃತೀಯಾ....
ಅಕ್ಷಯ ತದಿಗೆ ಸ್ತ್ರೀಯರಿಗೆ ಮಹತ್ವದ್ದಾಗಿದೆ. ಸ್ತ್ರೀಯರು ಚೈತ್ರದಲ್ಲಿ ಕೂರಿಸಿದ ಚೈತ್ರ ಗೌರಿಯನ್ನು ಈ ದಿನ ವಿಸರ್ಜನೆ ಮಾಡುತ್ತಾರೆ. ಇದರ ಪ್ರಯುಕ್ತ ಅರಿಶಿನ-ಕುಂಕುಮ ನೀಡುವ ಕಾರ್ಯಕ್ರಮವನ್ನೂ ಮಾಡುತ್ತಾರೆ.
ಅಮ್ಮಾ ಜಸ್ಟ್ ಫ್ರೆಂಡ್ ಅಲ್ಲ, ಬೆಸ್ಟ್ ಫ್ರೆಂಡ್!
ಅಮ್ಮಾ ನಿನ್ನ ತೋಳಿನಲ್ಲಿ ಕಂದ ನಾನು... ನಿನ್ನಾ ಸಂಗ ಆಡಲೆಂದು ಬಂದೆ ನಾನು... ಪದ್ಯದ ಸಾಲುಗಳಲ್ಲಿ ಅಮ್ಮಾ... ಅನ್ನೋ ಪದವನ್ನು ಕೇಳಿದಾಗ ಹೆತ್ತು, ಹೊತ್ತು, ಸಾಕಿ ಸಲಹಿದ ಅಮ್ಮನನ್ನು ನೆನೆಸಿಕೊಳ್ಳದವರು ಇರಲಿಕ್ಕಿಲ್ಲ.
ಕೊಡಗಿನಲ್ಲಿ ಕಂಡ ಕಂಡವರನ್ನು ಬೈಯ್ಯೋ ಹಬ್ಬ...
ಇದೊಂದು ವಿಚಿತ್ರವಾದರೂ ವಿಶಿಷ್ಟ ಹಬ್ಬ. ಬಹುಶಃ ಇಂತಹವೊಂದು ಹಬ್ಬವನ್ನು ಕೊಡಗು ಹೊರತುಪಡಿಸಿದರೆ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಇಷ್ಟಕ್ಕೂ ಇದ್ಯಾವುದಪ್ಪಾ ಅಂತಹ ವಿಚಿತ್ರಹಬ್ಬ ಎಂಬ ಕುತೂಹಲ ಪ್ರತಿಯೊಬ್ಬರನ್ನು ಕಾಡದಿರದು.
ಸ್ಯಾಂಡಲ್ ವುಡ್ ನಲ್ಲಿ ಮತ್ತೊಬ್ಬ ಸರ್ಜಾ
ಕನ್ನಡದವರೇ ಆಗಿರುವ ತಮಿಳು, ತೆಲುಗು ಚಿತ್ರರಂಗದಲ್ಲಿ ವಿಶೇಷವಾಗಿ ಹೆಸರು ಮಾಡಿರುವ, ಬಹುಮುಖ್ಯವಾಗಿ ಈ ವರ್ಷ ಕನ್ನಡದ ಪ್ರಸಾದ್ ಚಿತ್ರದ ಮನೋಜ್ಞ ಅಭಿನಯಕ್ಕಾಗಿ ಈ ವರ್ಷದ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿಯನ್ನು...
ಬನ್ನಿ ಬಿಳಿಗಿರಿರಂಗನ ಬೆಟ್ಟಕ್ಕೆ...... ನಿಸರ್ಗದ ಸ್ವರ್ಗಕ್ಕೆ......
ಚಾಮರಾಜನಗರ ಜಿಲ್ಲೆಯ ಪ್ರವಾಸಿ ತಾಣಗಳಲ್ಲೊಂದಾದ ಬಿಳಿಗಿರಿರಂಗನ ಬೆಟ್ಟವು ಮೈಸೂರಿನಿಂದ ಸುಮಾರು ತೊಂಬತ್ತು ಕಿ.ಮೀ. ಹಾಗೂ ಚಾಮರಾಜನಗರ ಜಿಲ್ಲೆಯ ಯಳಂದೂರಿನಿಂದ ಸುಮಾರು 15ಕಿಮೀ ದೂರದಲ್ಲಿದೆ.

Write Your Comment Here...