ಮತ್ತೆ ಕ್ಯಾಮೆರಾ ಎದುರಿಸಿದ ಐಶ್ವರ್ಯಾ ರೈ
[Updated 06/08/2012 01:04 pm]ಬೇಟಿ ಬಿ ಆರಾಧ್ಯಾಗೆ ಜನ್ಮ ನೀಡಿದ ಒಂಬತ್ತು ತಿಂಗಳ ಬಳಿಕ ಬಾಲಿವುಡ್ ನ ಜನಪ್ರಿಯ ನಟಿ ಐಶ್ವರ್ಯಾ ರೈ ಮತ್ತೆ ಕ್ಯಾಮೆರಾ ಕಣ್ಣು ಎದುರಿಸಿದ್ದಾರೆ. ಅದಕ್ಕೂ ಮೊದಲು, 6 ತಿಂಗಳ ಗರ್ಭಿಯಾಗಿದ್ದಾಗ ಐಶ್ವರ್ಯಾ ಕೊನೆಯದಾಗಿ ಕ್ಯಾಮೆರಾ ಎದುರಿಸಿದ್ದರು. ಮಗು ಜನನದ ಬಳಿಕ ಕ್ಯಾಮೆರಾ ಮುಂದೆ ಬರುವುದಕ್ಕೆ ಐಶ್ವರ್ಯಾ ಹಿಂದೇಟು ಹಾಕಿದ್ದರು. ತನ್ನ ತಾಯ್ತನದ ಸಂತೋಷವನ್ನು ಪೂರ್ಣ ಪ್ರಮಾಣದಲ್ಲಿ ಸವಿಯುವ ಉದ್ದೇಶದಿಂದ ಐಶ್ವರ್ಯಾ ಯಾವುದೇ ವಾಣಿಜ್ಯ ಪ್ರಚಾರಗಳಲ್ಲಿ ಅಥವಾ ಚಿತ್ರಗಳಲ್ಲಿ ಕಾಣಿಸಿಕೊಂಡಿರಲಿಲ್ಲ.
ಆ್ಯಶ್ ಇತ್ತೀಚೆಗೆ ಜ್ಯುವೆಲ್ಲರಿ ಬ್ರಾಂಡ್ ಒಂದಕ್ಕಾಗಿ ಫೋಟೊ ಶೂಟ್ ನಲ್ಲಿ ಭಾಗವಹಿಸಿದ್ದಾರೆ. ಹೆರಿಗೆ ನಂತರದ ಹೆಚ್ಚುವರಿ ತೂಕವನ್ನು ಕಳೆದುಕೊಂಡಿರುವ ಐಶ್ವರ್ಯಾ, ಆಕೆಯ ಮುಖದಲ್ಲಿ ಹೊಸ ಕಳೆಯೊಂದು ಗೋಚರಿಸಿದೆ. ಇದೀಗ ಆಕೆ ಮತ್ತಷ್ಟು ಆಕರ್ಷಕವಾಗಿ ಕಾಣಿಸಿದ್ದಾಳೆ ಎಂದು ಮೂಲವೊಂದು ತಿಳಿಸಿರುವುದಾಗಿ ವರದಿಯೊಂದು ಹೇಳಿದೆ.
ಆ್ಯಶ್ ಜೊತೆಗೆ ಇದು ನನ್ನ ಮೊದಲ ಶೂಟಿಂಗ್ ಆಗಿದೆ. ವಿವರಣೆ ಕೇಳುವ ಆಕೆಯ ಗುಣ ನನಗೆ ತುಂಬಾ ಹಿಡಿಸಿತು ಎಂದು ಮುಂಬಯಿಯಲ್ಲಿ ವಾಣಿಜ್ಯ ಫೋಟೊ ಶೂಟಿಂಗ್ ನಡೆಸಿದ ಶ್ರೀಕುಮಾರ್ ಹೇಳಿದ್ದಾರೆ. ಈ ಜಾಹೀರಾತಿನಲ್ಲಿ ನೀರಿನೊಳಗೂ ಶೂಟಿಂಗ್ ನಡೆಸಲಾಗಿದೆ. ಆಕೆಯೊಂದಿಗೆ ಶೂಟಿಂಗ್ ನಡೆಸಿದ ಕ್ಷಣಗಳಲ್ಲಿ ಹಲವಾರು ಕ್ಷಣಗಳು ಮರೆಯಲಾರದವುಗಳಾಗಿವೆ ಎಂದು ಅವರು ತಿಳಿಸಿದ್ದಾರೆ.
ದರ್ಶನ್ ರಿಯಾಲಿಟಿ ಶೋ ನಡೆಸಿ ಕೊಡಲ್ವಂತೆ!
ಕಿರುತೆರೆಯತ್ತ ಸ್ಯಾಂಡಲ್ ವುಡ್ ನ ನಟರು ಮುಖ ಮಾಡುತ್ತಿದ್ದಂತೆಯೇ ನಟ ದರ್ಶನ್ ರಿಯಾಲಿಟಿ ಶೋ ನಡೆಸಿಕೊಡಲು ನನಗೆ ಟೈಮಿಲ್ಲ ಎಂದು ಹೇಳುವ ಮೂಲಕ ಖಾಸಗಿ ವಾಹಿನಿಯೊಂದರ ರಿಯಾಲಿಟಿ ಶೋ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆಂಬ ಊಹಾಪೋಹಕ್ಕೆ ತೆರೆ ಎಳೆದಿದ್ದಾರೆ.
ನಟಿ ಅನಿಸ್ಟನ್ ಗೆ ದತ್ತು ಮಕ್ಕಳು ಬೇಕಂತೆ!
ಹಾಲಿವುಡ್ ಮಂದಿಯೇ ಹೀಗೆ. ಮದುವೆ ಸಮಯದಲ್ಲಿ ಮದುವೆಯಾಗುವುದಿಲ್ಲ. ಮದುವೆ ಕಾಲ ಕಳೆದ ಬಳಿಕ ಲೆಕ್ಕಕೆಂದು ಶಾಸ್ತ್ರ ಮುಗಿಸಿ ಕೆಲವೇ ತಿಂಗಳಲ್ಲಿ ಡೈವೋರ್ಸ್ ಕೂಡ ನೀಡುತ್ತಾರೆ. ಮಕ್ಕಳು ಮರಿ ಎನ್ನುವ ಆಸೆಯಿದ್ದರೂ
ಐಟಂ ಸಾಂಗ್ ಗೂ ರೆಡಿಯಾದ ನಟಿ ಕಾಜೋಲ್!
ಬಾಲಿವುಡ್ ನ ಸಭ್ಯ ನಟಿಯೆಂದು ಪರಿಗಣಿಸಲ್ಪಟ್ಟಿರುವ ಕಾಜೋಲ್ ಕೂಡ ಹೊಸ ಟ್ರೆಂಡ್ ಗೆ ತನ್ನ ಇಮೇಜ್ ನ್ನು ಬದಲಾಯಿಸಲು ನಿರ್ಧರಿಸಿದ್ದಾರೆ. ಚಿತ್ರಕ್ಕೆ ಅಗತ್ಯವೆಂದಾದಲ್ಲಿ ಐಟಂ ಸಾಂಗ್ ಮಾಡಲು ಸಿದ್ಧಳಿದ್ದೇನೆ ಎಂದು ಹೇಳಿದ್ದಾರೆ.
ಪಮೇಲ ಮನೆಯಲ್ಲಿ ಪ್ರಾಣಿಗಳ ವಾಸಭಾಗ್ಯ
ಹಾಲಿವುಡ್ನ ಬಿಂದಾಸ್ ನಟಿ ಪಮೇಲಾ ಆಂಡರ್ಸನ್ಗೆ ಪ್ರಾಣಿಗಳ ಮೇಲೆ ಸಕ್ಕತ್ ಪ್ರಿತಿ ಉಕ್ಕಿ ಬಂದಿದೆ. ಪೇಟಾ ಎಂಬ ಪ್ರಾಣಿ ಪ್ರೀಯರ ಸಂಘದ ಸದಸ್ಯೆ ಹಾಗೂ ಅದರ ಸಕ್ರೀಯ ಕಾರ್ಯಕರ್ತೆ ಸಹಾ ಆಗಿರುವ ಪಮೇಲ ಈ ಮೊದಲು ಪೇಟಾಕ್ಕಾಗಿ ತನ್ನ ಅಂಗಿ ಬಿಚ್ಚಿ ಸುದ್ದಿಯಾಗಿದ್ದರು.
ಹೊಸ ವರ್ಷದಲ್ಲಿ ಸನ್ನಿ ಕುಣಿತಕ್ಕೆ ಜೋರು ಬೇಡಿಕೆ !
ಕಳೆದ ವರ್ಷ ತಣ್ಣಗೆ ಸದ್ದಿಲ್ಲದೆ ರಿಯಾಲಿಟಿ ಶೋ ಮನೆ ಸೇರಿಕೊಂಡ ಮೇಲೆ ಬಿರುಗಾಳಿಯಂತೆ ಹವಾ ಎಬ್ಬಿಸಿದ ಈಕೆಯ ಎದೆಗಾರಿಕೆ ಕಂಡು ಸಮಸ್ತ ಭಾರತೀಯರು ಬೆಚ್ಚಿಬಿದ್ದಿದ್ದು, ಈಗ ಇತಿಹಾಸ. ಆಮೇಲೆ ಬಾಲಿವುಡ್ ನಲ್ಲಿ ಹಾಟ್ ಸಿನಿಮಾಗಳ
ಪುನೀತ್ ಈಗ ನ್ಯಾಷನಲ್ ಬ್ರಾಂಡ್ ಐಟಂ
ಪುನೀತ್ ರಾಜ್ ಕುಮಾರ್ ಈಗ ನ್ಯಾಷನಲ್ ಲೆವಲ್ ನ ಪ್ರಾಡಕ್ಟ್ ಗಳಲ್ಲಿ ಜಾಸ್ತಿ ನುಸುಳಿಕೊಂಡಿದ್ದಾರೆ ಎನ್ನುವ ಮಾತು ಗಾಂಧಿನಗರದ ಗಲ್ಲಿಯಿಂದ ಕೇಳಿ ಬರುತ್ತಿದೆ. ಯಾಕ್ ಅಂತೀರಾ...ಖ್ಯಾತ ಪಾನೀಯ ಸೆವನ್ ಆಫ್ ನಲ್ಲಿ ಕನ್ನಡದ ನಟರೊಬ್ಬರು ಜಾಹೀರಾತಿಗೆ ಆಯ್ಕೆಗೊಂಡಿದ್ದಾರೆ.
ಮ್ಯಾಕ್ಸಿಮ್ ಬಟ್ಟೆಯಲ್ಲಿ ಮಿನಿಮಮ್ ಗ್ಯಾರಂಟಿ ಬಸು
ಬಿಪ್ಸ್ ಹೆಸರಿನಲ್ಲೇ ಒಂದು ರೀತಿಯ ನಶೆ ತುಂಬಿಕೊಳ್ಳುತ್ತದೆ. ಅದರಲ್ಲೂ ಈ ನಶೆ ಸಿಕ್ಕಾಪಟ್ಟೆ ಕಿಕ್ ಕೊಡಲು ಆರಂಭವಾದರೆ ಮುಗಿಯಿತು ಬಿಡಿ ಕತೆ. ಈಗ ಇಂತಹ ಒಂದು ಕಿಕ್ ನೆಸ್ ನಲ್ಲಿ ಬಿಪಾಶಾ ಬಸು ಕಾಣಿಸಿಕೊಂಡಿದ್ದಾರೆ.
ದಬಾಂಗ್ 2ನಲ್ಲಿ ಸಲ್ಮಾನ್ ಗೆ ಹೆಚ್ಚುಕಮ್ಮಿ ಇರಿದೇ ಬಿಟ್ಟ ಸೋನಾಕ್ಷಿ!
ಜಾಕಿಚಾನ್ ರಿಂದ ಹಿಡಿದು ಅಮಿತಾಭ್ ಬಚ್ಚನ್ ರ ವರೆಗೆ ಪ್ರತಿಯೊಬ್ಬ ಜನಪ್ರಿಯ ತಾರೆಯರಿಗೆ ಸಾಹಸ ದೃಶ್ಯಗಳ ಚಿತ್ರೀಕರಣ ಸಂದರ್ಭ ಒಂದಲ್ಲ ಒಂದು ಕಾರಣಕ್ಕೆ ಏಟುಗಳಾದ ಬಗ್ಗೆ ನಮಗೆ ತಿಳಿದಿದೆ. ಆದರೆ ನಾಯಕಿಯೊಬ್ಬಳು ತನ್ನ ಪಾತ್ರದಲ್ಲಿ ಮುಳುಗಿದ ರೀತಿಗೆ ನಾಯಕನೊಬ್ಬನಿಗೆ
ಡಿ.14ರಂದು ವಿದ್ಯಾ ಬಾಲನ್ ಸಿದ್ದಾರ್ಥ್ ರಾಯ್ ವಿವಾಹ
ಸದಾ ಸಂಪ್ರದಾಯಗಳ ಬೇರನ್ನು ಬಿಟ್ಟು ಕೊಡದಿರುವ ಕಾರಣಕ್ಕೆ ಜನಪ್ರಿಯಳಾಗಿರುವ ನಟಿ ವಿದ್ಯಾಬಾಲನ್ ತನ್ನ ಬದುಕಿನ ಪ್ರಮುಖ ದಿನದ ವಿಚಾರದಲ್ಲೂ ಈ ಸಂಪ್ರದಾಯವನ್ನು ಬಿಟ್ಟು ಕೊಡುತ್ತಿಲ್ಲ. ವಿದ್ಯಾಬಾಲನ್ ಡಿಸೆಂಬರ್ 14ರಂದು
ಕತ್ತಲ ಲೋಕದಲ್ಲಿ ಹುಡುಕಾಡಿದ ಅಮೀರ್
ಆಮೀರ್ ಖಾನ್ ಎಂಥಾ ಪರ್ಫೆಕ್ಷನಿಸ್ಟ್ ಅನ್ನೋದು ಎಲ್ಲರಿಗೂ ಗೊತ್ತು. ಯಾವುದೇ ಪಾತ್ರ, ಸೀನ್ ಆಗಿದ್ದರೂ ಅದರ ಬಗ್ಗೆ ಹಲವಾರು ಸುತ್ತು ಸ್ಟಡಿ ಮಾಡಿಯೇ ಶೂಟ್ ಮಾಡೋದು ಅವನ ಸ್ಟೈಲ್. ಥ್ರಿಲ್ಲರ್ ಸಿನಿಮಾ ತಲಾಶ್ ಗೆ ಪರ್ಫೆಕ್ಟ್ ಶಾಟ್ ಗಳನ್ನು ಪಡೆಯುವುದಕ್ಕಾಗಿ
ಸ್ಪಾಟ್ ಫಿಕ್ಸಿಂಗ್: ಬಾಲಿವುಡ್ ನಟ ವಿಂದೂ ದಾರಾ ಸಿಂಗ್ ಬಂಧನ
ಹೊಸದಿಲ್ಲಿ: ಬಾಲಿವುಡ್ ಮತ್ತು ಸ್ಪಾಟ್ ಫಿಕ್ಸಿಂಗ್ ಲಿಂಕ್ ಒಂದೊಂದಾಗಿ ಬಯಲಾಗುತ್ತಿದ್ದು, ಜನಪ್ರಿಯ ನಟ, ಕುಸ್ತಿಪಟು, ದಿವಂಗತ ದಾರಾ ಸಿಂಗ್ ಅವರ ಪುತ್ರ ವಿಂದೂ ದಾರಾ ಸಿಂಗ್ ನನ್ನು ಪೊಲೀಸರು ಮುಂಬಯಿಯಲ್ಲಿ ಬಂಧಿಸಿದ್ದಾರೆ.
ಐಪಿಎಲ್ ಪಂದ್ಯಗಳಿಗೆ ತಡೆ ಹೇರಲು ಸುಪ್ರೀಂ ನಕಾರ
ಹೊಸದಿಲ್ಲಿ: ಸ್ಪಾಟ್ ಫಿಕ್ಸಿಂಗ್ ನಿಂದಾಗಿ ಐಪಿಎಲ್ ನ ಮುಂದಿನ ಪಂದ್ಯಗಳಿಗೆ ತಡೆ ಹೇರಲು ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ. ಕೆಲವು ಆಟಗಾರರು ಅಕ್ರಮದಲ್ಲಿ ತೊಡಗಿದ್ದಾರೆಂಬ ಕಾರಣಕ್ಕೆ ಐಪಿಎಲ್ ನ್ನು ಸಂಪೂರ್ಣವಾಗಿ
ಅಗ್ಗದ ಮದ್ಯ ಮಾರಾಟ ಮಾಡಿದರೆ ಪ್ರತಿಭಟನೆ
ಬೆಂಗಳೂರು: ಮತ್ತೆ ರಾಜ್ಯದಲ್ಲಿ ಅಗ್ಗದ ಮದ್ಯ ಮಾರಾಟ ಮಾಡಲು ಸರ್ಕಾರ ಮುಂದಾದರೆ ರಾಜ್ಯದಾದ್ಯಂತ ಉಗ್ರ ಪ್ರತಿಭಟನೆ ನಡೆಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ಎಚ್ಚರಿಕೆ ನೀಡಿದ್ದಾರೆ.
ಅದೃಷ್ಟದ ಕೊಠಡಿಗಾಗಿ ಸಚಿವರ ಕಿತ್ತಾಟ
ಬೆಂಗಳೂರು: ಹೋರಾಟದ ಮೂಲಕ ಸಚಿವ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಂಡ ಸಚಿವರು ಇದೀಗ ವಿಧಾನಸೌಧದಲ್ಲಿ ತಮ್ಮ ಅದೃಷ್ಟದ ಕಚೇರಿ ಮತ್ತು ಬಂಗಲೆಗಾಗಿ ಕಿತ್ತಾಟ ಆರಂಭಿಸಿದ್ದಾರೆ.
ಮಹಾತ್ಮ ಗಾಂಧಿ ಅವರ ರಕ್ತ ಹರಾಜಿಗೆ!
ಲಂಡನ್: ಲಂಡನ್ ಮೂಲದ ಜಾಗತಿಕ ಹರಾಜು ಸಂಸ್ಥೆ ಮುಲ್ಲೊಕ್ಸ್ ಮಂಗಳವಾರ ಮಹಾತ್ಮ ಗಾಂಧಿ ಅವರಿಗೆ ಸಂಬಂಧಪಟ್ಟಿರುವ ಕೆಲವು ಮಹತ್ವದ ವಸ್ತುಗಳನ್ನು ಹರಾಜು ಹಾಕಲಿದ್ದು, ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಒಂದಾ ಈ...
ಭಾರತ-ಚೀನಾ ಗಡಿ ವಿವಾದದ ಮಾತುಕತೆ ಯಶಸ್ವಿ
ಹೊಸದಿಲ್ಲಿ: ಅತ್ಯಂತ ಮಹತ್ವದ ಭಾರತ ಮತ್ತು ಚೀನಾ ಗಡಿ ವಿವಾದ ಸಹಿತ ಹಲವಾರು ವಿಷಯಗಳ ಚರ್ಚೆ ಯಶಸ್ವಿಯಾಗಿದೆ ಎಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಸೋಮವಾರ ಹೇಳಿದರು.
ಖಾತೆಗಳ ಹಂಚಿಕೆ: ಪ್ರಮುಖ ಖಾತೆಗಳ ಜವಾಬ್ದಾರಿ ಹೊತ್ತುಕೊಂಡ ಸಿಎಂ
ಬೆಂಗಳೂರು: ಸಚಿವರು ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಹಂಚಿಕೆಯಾಗಬೇಕಿದ್ದ ಖಾತೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಹಂಚಿಕೆ ಮಾಡಿದ್ದು, ಪ್ರಮುಖ ಖಾತೆಗಳಾದ ಇಂಧನ ಹಾಗೂ ಹಣಕಾಸು....
29ರಿಂದ ವಿಧಾನ ಮಂಡಲ ಅಧಿವೇಶನ
ಬೆಂಗಳೂರು: ಮೇ 29 ರಿಂದ ವಿಧಾನ ಮಂಡಲದ ಅಧಿವೇಶನವನ್ನು ನಡೆಸಲು ನಿರ್ಧರಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೇ 31 ರಂದು ಸ್ಪೀಕರ್ ಸ್ಥಾನಕ್ಕೆ...
ಭ್ರಷ್ಟಾಚಾರಕ್ಕೆ ಅವಕಾಶ ನೀಡದಂತೆ ಸಚಿವರಿಗೆ ಸಿಎಂ ಕರೆ
ಬೆಂಗಳೂರು: ಭ್ರಷ್ಟಾಚಾರ ನಡೆಸಿದ ಸರ್ಕಾರವನ್ನು ಹೊರಗಿಟ್ಟು ಕಾಂಗ್ರೆಸ್ ಗೆ ಜನ ಅವಕಾಶ ಮಾಡಿಕೊಟ್ಟಿದ್ದಾರೆ. ಆದ್ದರಿಂದ ಭ್ರಷ್ಟಾಚಾರಕ್ಕೆ ಅವಕಾಶ ನೀಡದೆ ಕಾನೂನು ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ...
ಖಾದರ್, ರೈ, ಜೈನ್, ಸೊರಕೆ ಸಹಿತ ಸಚಿವರ ಪ್ರಮಾಣವಚನ
ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ನೂತನ ಸಚಿವರುಗಳು ಶನಿವಾರ ರಾಜ್ಯಪಾಲರ ಭವನದ ಗಾಜಿನಮನೆಯಲ್ಲಿ ನಡೆದ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಮಾಯಾಲೋಕದ ಅಪೂರ್ವ ಬಾಲೆ...!
ಹ್ಯಾಟ್ ತಲೆಗೇರಿಸಿ, ಕೈಯಲ್ಲೊಂದು ಮಂತ್ರದಂಡ ಹಿಡಿದುಕೊಂಡು ಸ್ಟೇಜ್ ಏರಿದಳೆಂದರೆ ಎದುರು ಕುಳಿತವರು ಕಣ್ ಕಣ್ ಬಿಟ್ಟು ನೋಡುತ್ತಲೇ ಇರಬೇಕೆನ್ನುವ ಮಯಾ ಲೋಕವೇ ಸೃಷ್ಟಿಯಾಗಿಬಿಡುತ್ತದೆ. ಈ ಮಾಯಾಲೋಕದ...
ಚೊಚ್ಚಲ ಚಿತ್ರದಲ್ಲೇ ಕೇಳುಗರ ಮೋಡಿ ಮಾಡಿದ ಸಂಗೀತ ನಿರ್ದೇಶಕ ವಿಜೇತ್
ಕಳೆದ ಸಂಚಿಕೆಯಲ್ಲಿ ಸರ್ಜಾ ಕುಟುಂಬದಿಂದ ಚಿತ್ರರಂಗಕ್ಕೆ ನಟನಾಗಿ ಪ್ರವೇಶ ಮಾಡ್ತಾ ಇರೋ ಭರತ್ ಸರ್ಜಾ ರವರ ಬಗ್ಗೆ ಪರಿಚಯ ಮಾಡಿಸಲಾಯ್ತು. ಈ ಬಾರಿ ಸರ್ಜಾ ಕುಟುಂಬದ ಮತ್ತೊಬ್ಬನ ಪರಿಚಯ. ಆತ ಚಿತ್ರರಂಗವನ್ನು ಕಾಲಿಟ್ಟಿರುವುದು...
ಪ್ರಯೋಗ ಶೀಲ ಕಲಾವಿದನ ಕಲ್ಪನೆಯಲ್ಲಿ ಮೂಡಿದ ಕಾಗದ ಭಿತ್ತಿ ಶಿಲ್ಪಗಳು
ಆಧುನಿಕತೆ ಬೆಳೆದಂತೆಲ್ಲ ಕಲೆಯು ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಲಿದೆ. ಪ್ರಸುತ್ತ ಸಂದರ್ಭದಲ್ಲಿ ಕಲಾವಿದ ತನ್ನದೇ ಆದ ಮಾಧ್ಯಮದಿಂದ ಕಲಾಕೃತಿಗಳನ್ನು ರಚಿಸುತ್ತ ತನ್ನ ಕಲ್ಪನೆಯನ್ನು ಅಭಿವ್ಯಕ್ತಿಸಲು ವಿಭಿನ್ನ ಮಾರ್ಗವನ್ನು ಕಂಡುಕೊಳ್ಳುತ್ತಿದ್ದಾನೆ.
ಮ್ಯಾಜಿಕ್ ಕಲೆಯ ಸಾಗರ ಈ ಸಾಗರ್...!
ಮ್ಯಾಜಿಕ್ ನೊಂದಿಗೆ ಕೆಲವು ಅಪಾಯಕಾರಿ ಸ್ಟಂಟ್ ಗಳನ್ನು ಮಾಡುವ ಸಾಗರ್ ಗೆ ಮನೆಯೇ ಮೊದಲ ಪ್ರಯೋಗ ಶಾಲೆ. ಚಾಪರ್ ಬ್ಲೇಡ್ ನ ಹರಿತವಾದ ಭಾಗದ ಮೇಲೆ ನಡೆದಾಡುವ ಸಾಗರ್, ಪ್ರೇಕ್ಷಕರನ್ನು ನಿಬ್ಬೆರಗಾಗುವಂತೆ ಮಾಡುವುದಲ್ಲದೆ...
ಶಿಕ್ಷಣ ವ್ಯವಸ್ಥೆಗೇ ಸವಾಲೆಸೆಯುತ್ತಿರುವ ಸ್ವರೂಪ
ಚಿತ್ರಕಲೆ ಮೂಲಕ ಸಾಧಾರಣಾ ವಿದ್ಯಾರ್ಥಿಯೊಬ್ಬ ಹೆಚ್ಚಿನ ಅಂಕ ಪಡೆಯಲು ಸಾಧ್ಯವೇ? ದಡ್ಡನೆಂದು ಬೈದು ಶಾಲೆಯಿಂದ ಹೊರದಬ್ಬಲ್ಪಟ್ಟ ವಿದ್ಯಾರ್ಥಿ ಕೇವಲ 20 ದಿನಗಳ ತರಬೇತಿಯ ಮೂಲಕ ಡಿಸ್ಟಿಂಕ್ಷನ್ ಪಡೆಯಲು ಸಾಧ್ಯವೇ? ಡ್ಯಾನ್ಸ್ ಮಾಡಿ ಗಣಿತ-ವಿಜ್ಞಾನದಲ್ಲಿ...ವಿಶೇಷ
ಕುಟುಂಬವೆಂಬ ವಟವೃಕ್ಷದ ಕೆಳಗೆ...
ಮೇ 15 ವಿಶ್ವ ಅಂತರರಾಷ್ಟ್ರೀಯ ಕುಟುಂಬ ದಿನ, ಸತ್ಸಂಪ್ರದಾಯದಲ್ಲಿ ವಿಶ್ವಕ್ಕೆ ಮಾದರಿಯಾದ ಭಾರತದ ಕುಟುಂಬ ಪದ್ಧತಿಯಲ್ಲಿ ಆತಂಕಕಾರಿಯಲ್ಲದಿದ್ದರೂ ಅಲ್ಪಪ್ರಮಾಣದ ಪಾಶ್ಚಾತ್ಯರ ಅನುಕರಣೆಯಾಗುತ್ತಿರುವುದು ಅಸಹನೀಯವೇ.
ಇತಿಹಾಸದ ಕಥೆ ಹೇಳುತ್ತಿದೆ ಮಡಿಕೇರಿ ಅರಮನೆ
ಕೊಡಗಿನ ಮುಖ್ಯ ಪಟ್ಟಣ ಮಡಿಕೇರಿಗೆ ಆಗಮಿಸುವ ಪ್ರವಾಸಿಗರನ್ನು ಎತ್ತರದ ಸಮತಟ್ಟಾದ ಸ್ಥಳದಲ್ಲಿ ಕಲ್ಲುಕೋಟೆ ನಡುವೆ ನೆಲೆನಿಂತ ಅರಮನೆ ಗಮನಸೆಳೆಯುತ್ತದೆ. ಈ ಅರಮನೆ ಮೈಸೂರು ಅರಮನೆಯಂತೆ ವಿಶ್ವವಿಖ್ಯಾತಿ ಪಡೆಯದಿರಬಹುದು.
ಸ್ತ್ರೀಯರ ಮಹತ್ವದ ದಿನ ಅಕ್ಷಯ ತೃತೀಯಾ....
ಅಕ್ಷಯ ತದಿಗೆ ಸ್ತ್ರೀಯರಿಗೆ ಮಹತ್ವದ್ದಾಗಿದೆ. ಸ್ತ್ರೀಯರು ಚೈತ್ರದಲ್ಲಿ ಕೂರಿಸಿದ ಚೈತ್ರ ಗೌರಿಯನ್ನು ಈ ದಿನ ವಿಸರ್ಜನೆ ಮಾಡುತ್ತಾರೆ. ಇದರ ಪ್ರಯುಕ್ತ ಅರಿಶಿನ-ಕುಂಕುಮ ನೀಡುವ ಕಾರ್ಯಕ್ರಮವನ್ನೂ ಮಾಡುತ್ತಾರೆ.
ಅಮ್ಮಾ ಜಸ್ಟ್ ಫ್ರೆಂಡ್ ಅಲ್ಲ, ಬೆಸ್ಟ್ ಫ್ರೆಂಡ್!
ಅಮ್ಮಾ ನಿನ್ನ ತೋಳಿನಲ್ಲಿ ಕಂದ ನಾನು... ನಿನ್ನಾ ಸಂಗ ಆಡಲೆಂದು ಬಂದೆ ನಾನು... ಪದ್ಯದ ಸಾಲುಗಳಲ್ಲಿ ಅಮ್ಮಾ... ಅನ್ನೋ ಪದವನ್ನು ಕೇಳಿದಾಗ ಹೆತ್ತು, ಹೊತ್ತು, ಸಾಕಿ ಸಲಹಿದ ಅಮ್ಮನನ್ನು ನೆನೆಸಿಕೊಳ್ಳದವರು ಇರಲಿಕ್ಕಿಲ್ಲ.
ಕೊಡಗಿನಲ್ಲಿ ಕಂಡ ಕಂಡವರನ್ನು ಬೈಯ್ಯೋ ಹಬ್ಬ...
ಇದೊಂದು ವಿಚಿತ್ರವಾದರೂ ವಿಶಿಷ್ಟ ಹಬ್ಬ. ಬಹುಶಃ ಇಂತಹವೊಂದು ಹಬ್ಬವನ್ನು ಕೊಡಗು ಹೊರತುಪಡಿಸಿದರೆ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಇಷ್ಟಕ್ಕೂ ಇದ್ಯಾವುದಪ್ಪಾ ಅಂತಹ ವಿಚಿತ್ರಹಬ್ಬ ಎಂಬ ಕುತೂಹಲ ಪ್ರತಿಯೊಬ್ಬರನ್ನು ಕಾಡದಿರದು.

Write Your Comment Here...