ಕತ್ರಿನಾ ಜಾಹೀರಾತು ಸಂಭಾವನೆ ರೂ. 7 ಕೋಟಿ!
[Updated 03/08/2012 12:25 pm]ಇಂಟ್ರೆಸ್ಟಿಂಗ್ ಸಿನೆಮಾವೊಂದನ್ನು ಟಿವಿಯಲ್ಲಿ ನೋಡುತ್ತಿದ್ದಲ್ಲಿ ಪದೇಪದೇ ಜಾಹೀರಾತುಗಳು ಬರುತ್ತಿದ್ದರೆ ನಿಮಗೆ ಕೋಪ ನೆತ್ತಿಗೇರಿರಬಹುದು. ಆದರೆ ಆ ಕಾರ್ಯಕರ್ಮಗಳ ನಡುವೆ ಜಾಹೀರಾತು ನೀಡುವವರು ಆ ಟಿವಿ ವಾಹಿನಿಗಳಿಗೆ ಕೋಟ್ಯಂತರ ರೂ.ಗಳನ್ನು ಸುರಿದಿರುತ್ತಾರೆ. ಜಾಹೀರಾತು ಮೂಲಕವೇ ಟಿವಿ ಕಾರ್ಯಕ್ರಮಗಳು ಪ್ರಸಾರಕ್ಕೆ ಸಾಧ್ಯವಾಗುತ್ತದೆ. ಅದು ಒಂದಕ್ಕೊಂದು ಸಂಬಂಧಗಳನ್ನು ಹೊಂದಿದೆ. ಇದು ಒಂದು ಕಡೆಯಾದರೆ, ಇನ್ನೊಂದು ಕಡೆ ಈ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ರೂಪದರ್ಶಿಗಳಿಗೂ ಆ ಜಾಹೀರಾತುದಾರರು ಅಷ್ಟೇ ಮೊತ್ತವನ್ನು ತೆರಬೇಕಾಗುತ್ತದೆ. ಎಷ್ಟು ಹೆಚ್ಚು ಬೆಲೆ ಕೊಡಲು ಸಾಧ್ಯವಿದೆಯೇ ಅಷ್ಟು ಉತ್ತಮ ಮತ್ತು ಜನಪ್ರಿಯ ರೂಪದರ್ಶಿಗಳನ್ನು ಕಂಪೆನಿಗಳು ಪಡೆಯಲು ಸಾಧ್ಯವಿರುತ್ತದೆ. ಬಾಲಿವುಡ್ ನಟ ನಟಿಯರು ಒಂದೆರಡು ಚಿತ್ರಗಳಲ್ಲಿ ಯಶಸ್ವಿಯಾಗುತ್ತಿದ್ದಂತೆ ಜಾಹೀರಾತು ಲೋಕ ಅವರತ್ತ ಮುಖ ಮಾಡುವುದು ನಿಮಗೆಲ್ಲ ಗೊತ್ತಿರುವ ಪ್ರಚಾರ. ಈ ರೀತಿ ಜಾಹೀರಾತುಗಳನ್ನು ಪಡೆಯುವ ಬಾಲಿವುಡ್ ನಟ-ನಟಿಯರು ಎಷ್ಟು ಸಂಭಾವನೆ ಪಡೆಯುತ್ತಾರೆ ಎಂಬುದು ಅವರ ಜನಪ್ರಿಯತೆಯನ್ನು ಆಧರಿಸಿ ನಿರ್ಧರಿಸಲ್ಪಟ್ಟಿದೆ.
ಸಂಭಾವನೆ ಎಷ್ಟು ಎಂಬುದು ಕೋಟಿಗಳ ಲೆಕ್ಕಾಚಾರದಲ್ಲಿರುತ್ತದೆ. ವಿಷಯ ಏನಪ್ಪಾ ಅಂದ್ರೆ, ಬಾಲಿವುಡ್ ನಲ್ಲಿ ಜಾಹೀರಾತಿಗಾಗಿ ಹೆಚ್ಚು ಸಂಭಾವನೆ ಪಡೆದಿರುವುದಕ್ಕೆ ಕತ್ರಿನಾ ಕೈಫ್ ಸುದ್ದಿ ಮಾಡಿರುವುದೇ ಈಗಿನ ಪ್ರಮುಖ ಸುದ್ದಿ. ಹೌದು, ಈ ಹಿಂದೆ ಜಾಹೀರಾತೊಂದಕ್ಕೆ ಬಾಲಿವುಡ್ ತಾರೆ ಕರೀನಾ ಕಪೂರ್ ರೂ. 5 ಕೋಟಿ ಸಂಭಾವನೆ ಸುದ್ದಿ ಮಾಡಿದ್ದಳು. ಇದೀಗ ಕತ್ರಿನಾ ಕೈಫ್ ಅದಕ್ಕಿಂತಲೂ ಹೆಚ್ಚು, ಬರೋಬ್ಬರಿ ರೂ. 7 ಕೋಟಿ ಸಂಭಾವನೆ ಪೈಂಟ್ ಕಂಪೆನಿಯೊಂದರ ಜಾಹೀರಾತಿಗಾಗಿ ಪಡೆದಿರುವುದು ಭಾರೀ ಸುದ್ದಿಯನ್ನುಂಟು ಮಾಡಿದೆ. ಕೋಲಾ ಬ್ರಾಂಡ್ ಗಾಗಿ ಈ ಹಿಂದೆ ಕರೀನಾ ಕಪೂರ್ ರೂ. 5 ಕೋಟಿ ಪಡೆದು ಸುದ್ದಿಯಾಗಿದ್ದಳು.
ಈಗಾಗಲೇ 3 ಚಿತ್ರಗಳನ್ನು ಕೈಯಲ್ಲಿ ಹೊಂದಿರುವ ಕತ್ರಿನಾ ಬಾಲಿವುಡ್ ನಲ್ಲೆ ಪ್ರಸ್ತುತ ಭಾರೀ ಬೇಡಿಕೆಯ ನಟಿಯಾಗಿದ್ದಾಳೆ. ಯುವಕರ ನಡುವೆ ಆಕೆಗೆ ದೊಡ್ಡ ಅಭಿಮಾನಿ ಪಡೆಯಿದೆ. ಅದ್ಯಕ್ಕೆ ಆಕೆ 12 ವಸ್ತುಗಳ ಬ್ರಾಂಡ್ ಪ್ರಚಾರಕಿಯಾಗಿದ್ದಾಳೆ ಎಂದು ಮೂಲಗಳು ಹೇಳಿವೆ.
ದರ್ಶನ್ ರಿಯಾಲಿಟಿ ಶೋ ನಡೆಸಿ ಕೊಡಲ್ವಂತೆ!
ಕಿರುತೆರೆಯತ್ತ ಸ್ಯಾಂಡಲ್ ವುಡ್ ನ ನಟರು ಮುಖ ಮಾಡುತ್ತಿದ್ದಂತೆಯೇ ನಟ ದರ್ಶನ್ ರಿಯಾಲಿಟಿ ಶೋ ನಡೆಸಿಕೊಡಲು ನನಗೆ ಟೈಮಿಲ್ಲ ಎಂದು ಹೇಳುವ ಮೂಲಕ ಖಾಸಗಿ ವಾಹಿನಿಯೊಂದರ ರಿಯಾಲಿಟಿ ಶೋ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆಂಬ ಊಹಾಪೋಹಕ್ಕೆ ತೆರೆ ಎಳೆದಿದ್ದಾರೆ.
ನಟಿ ಅನಿಸ್ಟನ್ ಗೆ ದತ್ತು ಮಕ್ಕಳು ಬೇಕಂತೆ!
ಹಾಲಿವುಡ್ ಮಂದಿಯೇ ಹೀಗೆ. ಮದುವೆ ಸಮಯದಲ್ಲಿ ಮದುವೆಯಾಗುವುದಿಲ್ಲ. ಮದುವೆ ಕಾಲ ಕಳೆದ ಬಳಿಕ ಲೆಕ್ಕಕೆಂದು ಶಾಸ್ತ್ರ ಮುಗಿಸಿ ಕೆಲವೇ ತಿಂಗಳಲ್ಲಿ ಡೈವೋರ್ಸ್ ಕೂಡ ನೀಡುತ್ತಾರೆ. ಮಕ್ಕಳು ಮರಿ ಎನ್ನುವ ಆಸೆಯಿದ್ದರೂ
ಮೈತ್ರಿ ಮುರಿದುಕೊಂಡ ಎರಡೇ ದಿನದಲ್ಲಿ ಬಿಜೆಪಿ-ಜೆಡಿಯು ಹೊಡೆದಾಟ
ಪಟ್ನಾ: ಎನ್ ಡಿಎ ಮೈತ್ರಿಕೂಟದಿಂದ ಹೊರನಡೆದ ಜೆಡಿಯು ಮಾಡಿರುವ ವಿಶ್ವಾಸಘಾತಕ್ಕೆ ಮಂಗಳವಾರ ಬಿಹಾರ್ ಬಂದ್ ಗೆ ಕರೆ ನೀಡಿರುವ ಬಿಜೆಪಿ ಮತ್ತು ಜೆಡಿಯು ಕಾರ್ಯಕರ್ತರ ಮಧ್ಯೆ ಮಾರಾಮಾರಿ ನಡೆದಿದೆ.
ಸೋನಿಯಾ ಗಾಂಧಿ ಆದೇಶಿಸಿದರೆ ಕಸ ಗುಡಿಸಲು ಸಿದ್ಧ
ರಾಯ್ ಪುರ: ರಾಷ್ಟ್ರ ಎಷ್ಟೇ ಮುಂದುವರಿದರೂ ಗುಲಾಮಗಿರಿ ಹಾಗೆ ಇದೆ. ಅದರಲ್ಲೂ ರಾಜಕೀಯ ಗುಲಾಮಗಿರಿ ಎನ್ನುವುದು ನಡೆಯುತ್ತಲೇ ಇದೆ. ರಾಜಕೀಯ ಗುಲಾಮಗಿರಿ ಪಟ್ಟಿಗೆ ಮತ್ತೊಬ್ಬ ನಾಯಕ ಸೇರ್ಪಡೆಯಾಗಿದ್ದಾರೆ.
ಕೊಡಗಿನ ಮಳೆಗಾಲದ ಸುಂದರಿ ಡೇಲಿಯಾ
ಮುಂಗಾರು ಮಳೆ ಸುರಿದಾಗ ಮನೆಮುಂದಿನ ಹೂತೋಟದಲ್ಲಿ ಸುಪ್ತವಾಗಿದ್ದ ಡೆಲೀಯಾ ಗೆಡ್ಡೆಗಳು ಮೊಳಕೆಯೊಡೆದು ಗಿಡಗಳಾಗಿ ವಿವಿಧ ಆಕಾರ, ಬಣ್ಣಗಳಲ್ಲಿ ಗೊಂಚಲುಗೊಂಚಲಾಗಿ ಹೂಬಿಟ್ಟು ಕಂಗೊಳಿಸುತ್ತವೆ.
ಮೈಸೂರಿನಲ್ಲಿ ಅಖಿಲೇಶ್ ಕಳೆದ ಮಧುರ ಕ್ಷಣಗಳು...
ಮೈಸೂರು: ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮೈಸೂರಿನ ಜೆಸಿಇ ಕ್ಯಾಂಪಸ್ಸಿಗೆ ಬರುವ ಮುನ್ನ ಅವರ ಶಿಕ್ಷಕರು ಮತ್ತು ಸ್ನೇಹಿತರನ್ನು ಮಾತಿಗೆಳೆದಾಗ ಅವತ್ತಿನ ಆ ಮಧುರ ಕ್ಷಣಗಳನ್ನು ನೆನಪು ಮಾಡಿಕೊಂಡ ಪರಿ ಇಲ್ಲಿದೆ.

Write Your Comment Here...