ಶಿವನಸಮುದ್ರದಲ್ಲಿ ಕಾವೇರಿ ಜಲನರ್ತನ....
[Updated 13/09/2012 10:56 am ][Author: ]
ಕೊಡಗಿನಲ್ಲಿ ಮಳೆಯಾಗುತ್ತಿದೆ ಎನ್ನುವ ಸುದ್ದಿ ಬರುತ್ತಿದ್ದಂತೆಯೇ ಶಿವನಸಮುದ್ರದಲ್ಲಿ ಕಾವೇರಿಯ ಜಲನರ್ತನವನ್ನು ನೋಡುವ ತವಕ ನಿಸರ್ಗ ಪ್ರೇಮಿಗಳಲ್ಲಿ ಮನೆಮಾಡುವುದು ಸಹಜ. ಏಕೆಂದರೆ ಕೊಡಗಿನಲ್ಲಿ ಮಳೆಯಾಗಿ ಕಾವೇರಿ ನದಿ ತುಂಬಿ ಹರಿದು ಶಿವನಸಮುದ್ರದ ಭರಚುಕ್ಕಿ ಮತ್ತು ಗಗನಚುಕ್ಕಿಯಲ್ಲಿ ಭೋರ್ಗರೆದು ಧುಮುಕುವಾಗ ಆ ರುದ್ರರಮಣೀಯ ದೃಶ್ಯವನ್ನು ನೋಡಲು ಎರಡು ಕಣ್ಣುಗಳೇ ಸಾಲದಾಗುತ್ತದೆ.
ಹಾಗೆ ನೋಡಿದರೆ ಶಿವನಸಮುದ್ರ ಎಂದಾಕ್ಷಣವೇ ಮೈಮನ ರೋಮಾಂಚನಗೊಳ್ಳುತ್ತದೆ. ಇಡೀ ಏಷ್ಯಾದಲ್ಲಿಯೇ ಪ್ರಪ್ರಥಮ ಜಲವಿದ್ಯುತ್ ಯೋಜನೆ ಸ್ಥಾಪನೆಗೊಂಡ ಹೆಗ್ಗಳಿಕೆ ಇಲ್ಲಿಗಿದೆ. ಗಗನಚುಕ್ಕಿ, ಭರಚುಕ್ಕಿಗಳ ಭೋರ್ಗರೆತ... ಅದರಿಂದ ಹಾರಿ ಬರುವ ಮಂಜಿನ ಸಿಂಚನ... ತಣ್ಣನೆ ಬೀಸುವ ತಂಗಾಳಿ... ಕಣ್ಣು ಹಾಯಿಸಿದೆಡೆಯಲ್ಲೆಲ್ಲಾ ಹಸಿರು ಹಚ್ಚಡದ ನಿಸರ್ಗ... ಒಬ್ಬ ಪ್ರವಾಸಿಗನಿಗೆ ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸಲು ಇದಕ್ಕಿಂತ ಇನ್ನೇನು ಬೇಕು?
ಕಾವೇರಿಯ ನರ್ತನ: ಕೊಡಗಿನ ತಲಕಾವೇರಿಯಲ್ಲಿ ಹುಟ್ಟಿ ಹರಿಯುವ ಕಾವೇರಿ ನದಿ ಉಪ ನದಿಗಳೊಂದಿಗೆ ಸಂಗಮಗೊಂಡು ಕೆಆರ್ ಎಸ್ ತಲುಪುತ್ತಾಳೆ. ಬಳಿಕ ಟಿ.ನರಸೀಪುರ ಬಳಿ ಕಬಿನಿ ಇತರೆ ಉಪನದಿಗಳು ಸಂಗಮವಾಗುತ್ತವೆ. ಈ ಸಂದರ್ಭ ಕಾವೇರಿ ರೌದ್ರತೆಯನ್ನು ತಾಳುತ್ತಾಳೆ. ಬೆಟ್ಟಗುಡ್ಡ, ಕಾಡುಮೇಡುಗಳನ್ನೆಲ್ಲಾ ಕ್ರಮಿಸುತ್ತಾ ಶಿವನಸಮುದ್ರ ತಲುಪುತ್ತಿದ್ದಂತೆಯೇ ಗಗನದೆತ್ತರದಿಂದ ಧುಮುಕಿ ಗಗನಚುಕ್ಕಿಯಾಗಿ, ಬಳಿಕ ಭರದಿಂದ ಹರಿದು ಭರಚುಕ್ಕಿಯಾಗಿ ಗಮನಸೆಳೆಯುತ್ತಾಳೆ. ನಿಸರ್ಗದ ನಡುವೆ ಹೆಬ್ಬಂಡೆಗಳ ಮೇಲೆ ಹಾಲ್ನೊರೆಯಾಗಿ ಧುಮುಕುತ್ತಾ ವೀಕ್ಷಕರ ಮನಕ್ಕೆ ಲಗ್ಗೆಯಿಡುವ ಈ ಜಲಧಾರೆಗಳು ಶಿವನಸಮುದ್ರದ ಮುಕುಟ ಮಣಿಗಳಾಗಿವೆ.
ಶಿವನಸಮುದ್ರದಲ್ಲಿ ಕಾವೇರಿ ನದಿ ಸುಮಾರು ನಾನೂರ ಹತ್ತೊಂಬತ್ತು ಅಡಿ ಎತ್ತರದಿಂದ ಕಂದಕಕ್ಕೆ ಧುಮುಕುವುದು ನೋಡುಗರಿಗೆ ವಿಸ್ಮಯ ಮೂಡಿಸುತ್ತಿತ್ತಾದರೂ ಅಂದಿನ ಮೈಸೂರು ರಾಜ್ಯದ ಉಪಮುಖ್ಯ ಇಂಜಿನಿಯರ್ ಎ.ಜೆ.ಡಿ. ಲಾಬಿನೀರ್ ಅವರಿಗೆ ಇದು ವಿದ್ಯುತ್ ತಯಾರಿಸಲು ಪ್ರೇರಣೆಯಾಯಿತು. ಅವತ್ತು ಶಿವನಸಮುದ್ರದಲ್ಲಿ ಸ್ಥಾಪನೆಯಾದ ವಿದ್ಯುತ್ ಘಟಕ ಇಂದು ಏಷ್ಯಾಖಂಡದಲ್ಲಿಯೇ ಪ್ರಥಮ ವಿದ್ಯುತ್ ಉತ್ಪಾದನಾ ಘಟಕವಾಗಿ ಹೆಸರುವಾಸಿಯಾಗಿದೆ. ಆದರೆ ಈ ವಿದ್ಯುತ್ ಘಟಕ ಸ್ಥಾಪನೆಯ ಹಿಂದಿನ ಕಥೆ ಮಾತ್ರ ರೋಚಕವಾಗಿದೆ.
ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆ: ಈ ವಿದ್ಯುತ್ ಘಟಕದ ಸ್ಥಾಪನೆ ಕುರಿತಂತೆ ಒಂದಷ್ಟು ಮಾಹಿತಿಗಳನ್ನು ಪಡೆಯಬೇಕಾದರೆ ನಾವು ಸುಮಾರು ನೂರಹದಿನೈದು ವರ್ಷಗಳ ಹಿಂದಿನ ದಿನಗಳಿಗೆ ಹೋಗಬೇಕು. ಅದು 1896-99ರ ದಿನಗಳು. ಅಂದಿನ ಮೈಸೂರು ರಾಜ್ಯದ ಉಪ ಮುಖ್ಯ ಇಂಜಿನಿಯರ್ ಎ.ಜಿ.ಡಿ.ಲಾಬಿನೀರ್ ಶಿವನಸಮುದ್ರಕ್ಕೆ ಭೇಟಿ ನೀಡಿದ್ದರು. ಅವರಿಗೆ ಇಲ್ಲಿ ಧುಮ್ಮಿಕ್ಕಿ ಹರಿಯುವ ಜಲಪಾತಗಳು ಮುದ ನೀಡಿದರೂ, ಕಾವೇರಿ ನದಿ ರೌದ್ರಾವತಾರ ತಾಳಿ ಕಂದಕಕ್ಕೆ ಧುಮುಕುತ್ತಿರುವ ದೃಶ್ಯ ನೋಡಿದ ಅವರಿಗೆ ಮನದಲ್ಲಿಯೇ ಬೆಳಕೊಂದು ಹಾದು ಹೋಗಿತ್ತು. ಆಗಲೇ ಅವರಿಗೆ ಕಂದಕಕ್ಕೆ ಧುಮುಕುತ್ತಿರುವ ನೀರಿನಿಂದ ವಿದ್ಯುತ್ ತಯಾರಿಸುವ ಆಲೋಚನೆ ತಲೆಯಲ್ಲಿ ಹೊಳೆದಿತ್ತು.
ಅಲ್ಲಿಂದ ಮೈಸೂರಿಗೆ ಹೋದವರೇ ಅಂದಿನ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಭೇಟಿಯಾಗಿ ತಮ್ಮ ಇಂಗಿತವನ್ನು ವ್ಯಕ್ತಪಡಿಸಿದರು. ಇದನ್ನು ಕೇಳಿದ ಒಡೆಯರ್ ಉತ್ಸಾಹ ಮೂಡಿತ್ತು. ನಮ್ಮ ರಾಜ್ಯದಲ್ಲಿ ನೀರಿನಿಂದ ವಿದ್ಯುತ್ ತಯಾರಿಸಿ ಬೆಳಕು ಪಡೆಯುವುದೆಂದರೆ ಅದಕ್ಕಿಂತ ಸಂತೋಷ ಮತ್ತೇನಿದೆ? ಕೂಡಲೇ ಅವರು ಹಸಿರು ನಿಶಾನೆ ತೋರಿದರು. ಇದೇ ಸಂದರ್ಭ ಎಂಜಿನಿಯರ್ ಲಾಬಿನೀಗರ್ ಅಂದಿನ ದಿವಾನರಾಗಿದ್ದ ಸರ್.ಕೆ.ಶೇಷಾದ್ರಿ ಅಯ್ಯರ್ ಮಾರ್ಗದರ್ಶನ ನೀಡಿ ಏನು ಬೇಕೋ ಅದನ್ನೆಲ್ಲಾ ಒದಗಿಸುವ ಮೂಲಕ ಪ್ರೋತ್ಸಾಹಿಸಿದರು. ವಿದ್ಯುತ್ ಯೋಜನೆ ಸ್ಥಾಪನೆಯ ಕಾಮಗಾರಿ ಆರಂಭಗೊಂಡು ಭರದಿಂದ ಸಾಗತೊಡಗಿತು.
ವಿದ್ಯುತ್ ಘಟಕ ಸ್ಥಾಪನೆಗೆ ಅಗತ್ಯವಿರುವಂತಹ ಯಂತ್ರೋಪಕರಣಗಳು ದೂರದ ಬ್ರಿಟನ್ ಹಾಗೂ ಅಮೆರಿಕಾದಿಂದ ತರಿಸಿಕೊಳ್ಳಲಾಯಿತು. ಬಳಿಕ ಅವುಗಳನ್ನು ಆನೆ, ಕುದುರೆ, ಎತ್ತಿನಬಂಡಿ ಮೂಲಕ ಆಳವಾದ ಕಂದಕಕ್ಕೆ ಇಳಿಜಾರು ಮಾರ್ಗದಲ್ಲಿ ಕೊಂಡೊಯ್ದು ಜೋಡಿಸುವ ಮೂಲಕ ಸುಮಾರು ಏಳುನೂರು ಕಿಲೋವ್ಯಾಟ್ ಸಾಮರ್ಥ್ಯದ ವಿದ್ಯುತ್
ಘಟಕವನ್ನು ನಿರ್ಮಿಸಲಾಯಿತು. ಇದು ಏಷ್ಯಾದಲ್ಲಿಯೇ ಪ್ರಪ್ರಥಮ ಜಲವಿದ್ಯುತ್ ಘಟಕ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು. 
ಕೋಲಾರದ ಚಿನ್ನದ ಗಣಿಗೆ ಸಂಪರ್ಕ: ಈ ಜಲವಿದ್ಯುತ್ ಘಟಕಕ್ಕೆ 1902ರ ಜೂನ್ 30ರಂದು ಅಂದಿನ ಮೈಸೂರು ರೆಸಿಡೆಂಟ್ ಜನರಲ್ ಡೋನಾಲ್ಡ್ ರಾಬಟ್ಸ್ ನವರು ಚಾಲನೆ ನೀಡಿದರು. ಇಲ್ಲಿಂದ ಕೋಲಾರದ ಚಿನ್ನದ ಗಣಿಗೆ ಸುಮಾರು 35 ಕಿಲೋ ವೋಲ್ಟ್ ಸಾಮರ್ಥ್ಯದ 148 ಕಿ.ಮೀ. ಉದ್ದದ ಮಾರ್ಗಕ್ಕೆ ರಾಬಟ್ಸ್ ರವರ ಪತ್ನಿ ಶ್ರೀಮತಿ ರಾಬಟ್ಸ್ ರವರು ಚಾಲನೆ ನೀಡಿದರು. ಈ ಸಂಪರ್ಕ ಜಗತ್ತಿನಲ್ಲಿಯೇ ಅತಿ ಉದ್ದದ ಪ್ರಸರಣ ಮಾರ್ಗ ಎಂಬ ಖ್ಯಾತಿ ಪಡೆಯಿತು.
ಆ ನಂತರದ ವರ್ಷಗಳಲ್ಲಿ ಈ ವಿದ್ಯುತ್ ಘಟಕ ಆಧುನೀಕರಣಗೊಂಡು ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುತ್ತಾ ಸಾಗಿತು. 1905ರಲ್ಲಿ ಬೆಂಗಳೂರಿಗೂ ಹಾಗೂ 1908ರಲ್ಲಿ ಮೈಸೂರಿಗೂ ಈ ಕೇಂದ್ರದಿಂದ ವಿದ್ಯುತ್ ಸಂಪರ್ಕವನ್ನು ಒದಗಿಸುವ ಮೂಲಕ ಕತ್ತಲೆಯಲ್ಲಿ ಮುಳುಗಿದ್ದ ನಗರಗಳು ಬೆಳಕು ಕಂಡವು. ಮುಂದೆ ವಿದ್ಯುತ್ ಬೇಡಿಕೆ ಹೆಚ್ಚಾಗುತ್ತಿದ್ದಂತೆಯೇ ಶಿವನಸಮುದ್ರದಲ್ಲಿ 17.2 ಮೆಗಾವ್ಯಾಟ್ ಸಾಮರ್ಥ್ಯದ ಎರಡು ವಿದ್ಯುತ್ ಘಟಕಗಳನ್ನು ಸ್ಥಾಪಿಸಲಾಯಿತು. ಪ್ರಸ್ತುತ ಇದರ ನಿರ್ವಹಣೆಯನ್ನು ವಿಶ್ವೇಶ್ವರಯ್ಯ ವಿದ್ಯುತ್ ನಿಗಮ ನಿರ್ವಹಿಸುತ್ತಿದೆ. ಇಲ್ಲಿ ಏಟ್ರಿಯಾ ಬೃಂದಾವನ್ ಹಾಗೂ ಆಂಧ್ರಮೂಲದ ಸಂಸ್ಥೆಗಳು ಸೇರಿದಂತೆ ಹತ್ತು ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ವಾರ್ಷಿಕ ಉತ್ತಮ ಮಳೆಯಾದಲ್ಲಿ ಸುಮಾರು 180ಮಿಲಿಯನ್ ಯೂನಿಟ್ ಗಳಷ್ಟು ವಿದ್ಯುತ್ನ್ನು ಈ ಘಟಕಗಳಿಂದ ಉತ್ಪಾದಿಸಲು ಸಾಧ್ಯವಾಗಿದೆ.
ರುದ್ರರಮಣೀಯ ಜಲಧಾರೆಗಳು: ಶಿವನಸಮುದ್ರದಲ್ಲಿರುವ ಎರಡು ಜಲಧಾರೆಗಳು ಕೆಲವೇ ಕೆಲವು ಕಿಲೋಮೀಟರ್ ದೂರದ ಅಂತರದಲ್ಲಿದ್ದರೂ ಇವು ಬೇರೆ, ಬೇರೆ ಜಿಲ್ಲೆಗಳಿಗೆ ಸೇರಿವೆ. ಭರಚುಕ್ಕಿ ಚಾಮರಾಜನಗರಕ್ಕೆ ಸೇರಿದರೆ, ಗಗನಚುಕ್ಕಿ ಮಂಡ್ಯ ಜಿಲ್ಲೆಗೆ ಸೇರಿದೆ. ಈ ಜಲಧಾರೆಗಳು ನಯನಮನೊಹರವಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ.ಹೀಗೆ ಬರುವ ಪ್ರವಾಸಿಗರು ವಿದ್ಯುತ್ ಉತ್ಪಾದನಾ ಘಟಕವನ್ನು ನೋಡಲು ಮುಗಿ ಬೀಳುತ್ತಾರೆ.
ಹೀಗಾಗಿ ಈ ವಿದ್ಯುತ್ ಉತ್ಪಾದನಾ ಘಟಕಗಳನ್ನು ವೀಕ್ಷಿಸಲೆಂದೇ ಟ್ರಾಲಿಗಳನ್ನು ನಿರ್ಮಿಸಲಾಗಿದೆ. ಬಿಟೀಷರು ಶಿವನಸಮುದ್ರ ವಿದ್ಯುತ್ ಉತ್ಪಾದನಾ ಘಟಕವನ್ನು ಬ್ಲಫ್ ಎಂಬ ಹೆಸರಿನಿಂದ ಕರೆಯುತ್ತಿದ್ದರು. ಶಿವನಸಮುದ್ರಕ್ಕೆ ಬೆಂಗಳೂರಿನಿಂದ ಬರುವುದಾದರೆ ರಾಮನಗರ, ಚನ್ನಪಟ್ಟಣ, ಮದ್ದೂರು, ಮಳವಳ್ಳಿ ಮೂಲಕ ಹಾಗೂ ಮೈಸೂರಿನಿಂದ ಬನ್ನೂರು, ಮಳವಳ್ಳಿ ಅಥವಾ ಚಾಮರಾಜನಗರ, ಕೊಳ್ಳೆಗಾಲ ಮೂಲಕವೂ ಬರಬಹುದು. ಶಿವನಸಮುದ್ರಕ್ಕೆ ತೆರಳಿದರೆ ಸುತ್ತಮುತ್ತಲಿರುವ ತಲಕಾಡು, ಸೋಮನಾಥಪುರ ಮುಂತಾದ ಪ್ರವಾಸಿ ತಾಣಗಳಿಗೂ ಭೇಟಿ ನೀಡಿ ಬರಬಹುದಾಗಿದೆ.
ಇಲ್ಲಿಗೆ ತೆರಳಲು ಬಸ್ ವ್ಯವಸ್ಥೆ ಇಲ್ಲದಿರುವುದರಿಂದ ಬಾಡಿಗೆ ಅಥವಾ ಸ್ವಂತ ವಾಹನಗಳಲ್ಲಿ ತೆರಳಬೇಕಾಗುತ್ತದೆ. ಶಿವನಸಮುದ್ರಕ್ಕೆ ತೆರಳುವ ಪ್ರವಾಸಿಗರು ಇಲ್ಲಿರುವ ಗಗನಚುಕ್ಕಿ ಮತ್ತು ಭರಚುಕ್ಕಿ ಜಲಧಾರೆಗಳನ್ನು ದೂರದಿಂದ ನೋಡಿ ಹಿಂತಿರುಗಿದರೆ ಕ್ಷೇಮ. ಅದು ಬಿಟ್ಟು ಜಲಧಾರೆಯ ಸೌಂದರ್ಯಕ್ಕೆ ಮನಸೋತು ಜಲಧಾರೆಯಲ್ಲಿ ಈಜುವ, ಸ್ನಾನ ಮಾಡುವ ಪ್ರಯತ್ನ ಮಾಡುವುದು ಒಳ್ಳೆಯದಲ್ಲ. ಏಕೆಂದರೆ ಇಲ್ಲಿ ಪ್ರಾಣಕಳೆದುಕೊಂಡವರ ದೊಡ್ಡಪಟ್ಟಿಯೇ ಇದೆ. ಶಿವನಸಮುದ್ರದಲ್ಲಿ ಮಾರಮ್ಮನ ದೇವಾಲಯವಿದ್ದು ಇಲ್ಲಿ ಕೋಳಿ, ಕುರಿಗಳನ್ನು ಬಲಿಕೊಡಲಾಗುತ್ತದೆ. ದೂರದಿಂದ ತೆರಳುವ ಪ್ರವಾಸಿಗರಿಗೆ ಅಲ್ಲಿ ಉಳಿದುಕೊಳ್ಳಲು ಯಾವುದೇ ಸೌಲಭ್ಯವಿಲ್ಲ. ಹಾಗಾಗಿ ಸಮೀಪದ ಪಟ್ಟಣಗಳಾದ ಕೊಳ್ಳೆಗಾಲ ಅಥವಾ ಮಳವಳ್ಳಿಗೆ ಹೋಗಬೇಕಾಗುತ್ತದೆ.
ಆತ ರಕ್ಷಿಸಿದ ಮಗು ಬದುಕುಳಿಯಲಿಲ್ಲವೆಂದು ಬಿಕ್ಕಿಬಿಕ್ಕಿ ಅತ್ತಿದ್ದ...!
ದೇಶದ ಇತಿಹಾಸದಲ್ಲಿಯೇ ಭೀಕರ ದುರಂತವಾದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತಕ್ಕೆ ಇಂದಿಗೆ(ಮೇ 22) ಮೂರು ವರ್ಷಗಳು ತುಂಬುತ್ತಿದೆ. 2010ರ ಮೇ 22 ರಂದು ಬೆಳಗ್ಗೆ 6.05ರ...
ಮಾಯಾಲೋಕದ ಅಪೂರ್ವ ಬಾಲೆ...!
ಹ್ಯಾಟ್ ತಲೆಗೇರಿಸಿ, ಕೈಯಲ್ಲೊಂದು ಮಂತ್ರದಂಡ ಹಿಡಿದುಕೊಂಡು ಸ್ಟೇಜ್ ಏರಿದಳೆಂದರೆ ಎದುರು ಕುಳಿತವರು ಕಣ್ ಕಣ್ ಬಿಟ್ಟು ನೋಡುತ್ತಲೇ ಇರಬೇಕೆನ್ನುವ ಮಯಾ ಲೋಕವೇ ಸೃಷ್ಟಿಯಾಗಿಬಿಡುತ್ತದೆ. ಈ ಮಾಯಾಲೋಕದ...
ಚೊಚ್ಚಲ ಚಿತ್ರದಲ್ಲೇ ಕೇಳುಗರ ಮೋಡಿ ಮಾಡಿದ ಸಂಗೀತ ನಿರ್ದೇಶಕ ವಿಜೇತ್
ಕಳೆದ ಸಂಚಿಕೆಯಲ್ಲಿ ಸರ್ಜಾ ಕುಟುಂಬದಿಂದ ಚಿತ್ರರಂಗಕ್ಕೆ ನಟನಾಗಿ ಪ್ರವೇಶ ಮಾಡ್ತಾ ಇರೋ ಭರತ್ ಸರ್ಜಾ ರವರ ಬಗ್ಗೆ ಪರಿಚಯ ಮಾಡಿಸಲಾಯ್ತು. ಈ ಬಾರಿ ಸರ್ಜಾ ಕುಟುಂಬದ ಮತ್ತೊಬ್ಬನ ಪರಿಚಯ. ಆತ ಚಿತ್ರರಂಗವನ್ನು ಕಾಲಿಟ್ಟಿರುವುದು...
ಪ್ರಯೋಗ ಶೀಲ ಕಲಾವಿದನ ಕಲ್ಪನೆಯಲ್ಲಿ ಮೂಡಿದ ಕಾಗದ ಭಿತ್ತಿ ಶಿಲ್ಪಗಳು
ಆಧುನಿಕತೆ ಬೆಳೆದಂತೆಲ್ಲ ಕಲೆಯು ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಲಿದೆ. ಪ್ರಸುತ್ತ ಸಂದರ್ಭದಲ್ಲಿ ಕಲಾವಿದ ತನ್ನದೇ ಆದ ಮಾಧ್ಯಮದಿಂದ ಕಲಾಕೃತಿಗಳನ್ನು ರಚಿಸುತ್ತ ತನ್ನ ಕಲ್ಪನೆಯನ್ನು ಅಭಿವ್ಯಕ್ತಿಸಲು ವಿಭಿನ್ನ ಮಾರ್ಗವನ್ನು ಕಂಡುಕೊಳ್ಳುತ್ತಿದ್ದಾನೆ.
ಮ್ಯಾಜಿಕ್ ಕಲೆಯ ಸಾಗರ ಈ ಸಾಗರ್...!
ಮ್ಯಾಜಿಕ್ ನೊಂದಿಗೆ ಕೆಲವು ಅಪಾಯಕಾರಿ ಸ್ಟಂಟ್ ಗಳನ್ನು ಮಾಡುವ ಸಾಗರ್ ಗೆ ಮನೆಯೇ ಮೊದಲ ಪ್ರಯೋಗ ಶಾಲೆ. ಚಾಪರ್ ಬ್ಲೇಡ್ ನ ಹರಿತವಾದ ಭಾಗದ ಮೇಲೆ ನಡೆದಾಡುವ ಸಾಗರ್, ಪ್ರೇಕ್ಷಕರನ್ನು ನಿಬ್ಬೆರಗಾಗುವಂತೆ ಮಾಡುವುದಲ್ಲದೆ...
ಶಿಕ್ಷಣ ವ್ಯವಸ್ಥೆಗೇ ಸವಾಲೆಸೆಯುತ್ತಿರುವ ಸ್ವರೂಪ
ಚಿತ್ರಕಲೆ ಮೂಲಕ ಸಾಧಾರಣಾ ವಿದ್ಯಾರ್ಥಿಯೊಬ್ಬ ಹೆಚ್ಚಿನ ಅಂಕ ಪಡೆಯಲು ಸಾಧ್ಯವೇ? ದಡ್ಡನೆಂದು ಬೈದು ಶಾಲೆಯಿಂದ ಹೊರದಬ್ಬಲ್ಪಟ್ಟ ವಿದ್ಯಾರ್ಥಿ ಕೇವಲ 20 ದಿನಗಳ ತರಬೇತಿಯ ಮೂಲಕ ಡಿಸ್ಟಿಂಕ್ಷನ್ ಪಡೆಯಲು ಸಾಧ್ಯವೇ? ಡ್ಯಾನ್ಸ್ ಮಾಡಿ ಗಣಿತ-ವಿಜ್ಞಾನದಲ್ಲಿ...ವಿಶೇಷ
ಕುಟುಂಬವೆಂಬ ವಟವೃಕ್ಷದ ಕೆಳಗೆ...
ಮೇ 15 ವಿಶ್ವ ಅಂತರರಾಷ್ಟ್ರೀಯ ಕುಟುಂಬ ದಿನ, ಸತ್ಸಂಪ್ರದಾಯದಲ್ಲಿ ವಿಶ್ವಕ್ಕೆ ಮಾದರಿಯಾದ ಭಾರತದ ಕುಟುಂಬ ಪದ್ಧತಿಯಲ್ಲಿ ಆತಂಕಕಾರಿಯಲ್ಲದಿದ್ದರೂ ಅಲ್ಪಪ್ರಮಾಣದ ಪಾಶ್ಚಾತ್ಯರ ಅನುಕರಣೆಯಾಗುತ್ತಿರುವುದು ಅಸಹನೀಯವೇ.
ಇತಿಹಾಸದ ಕಥೆ ಹೇಳುತ್ತಿದೆ ಮಡಿಕೇರಿ ಅರಮನೆ
ಕೊಡಗಿನ ಮುಖ್ಯ ಪಟ್ಟಣ ಮಡಿಕೇರಿಗೆ ಆಗಮಿಸುವ ಪ್ರವಾಸಿಗರನ್ನು ಎತ್ತರದ ಸಮತಟ್ಟಾದ ಸ್ಥಳದಲ್ಲಿ ಕಲ್ಲುಕೋಟೆ ನಡುವೆ ನೆಲೆನಿಂತ ಅರಮನೆ ಗಮನಸೆಳೆಯುತ್ತದೆ. ಈ ಅರಮನೆ ಮೈಸೂರು ಅರಮನೆಯಂತೆ ವಿಶ್ವವಿಖ್ಯಾತಿ ಪಡೆಯದಿರಬಹುದು.
ಸ್ತ್ರೀಯರ ಮಹತ್ವದ ದಿನ ಅಕ್ಷಯ ತೃತೀಯಾ....
ಅಕ್ಷಯ ತದಿಗೆ ಸ್ತ್ರೀಯರಿಗೆ ಮಹತ್ವದ್ದಾಗಿದೆ. ಸ್ತ್ರೀಯರು ಚೈತ್ರದಲ್ಲಿ ಕೂರಿಸಿದ ಚೈತ್ರ ಗೌರಿಯನ್ನು ಈ ದಿನ ವಿಸರ್ಜನೆ ಮಾಡುತ್ತಾರೆ. ಇದರ ಪ್ರಯುಕ್ತ ಅರಿಶಿನ-ಕುಂಕುಮ ನೀಡುವ ಕಾರ್ಯಕ್ರಮವನ್ನೂ ಮಾಡುತ್ತಾರೆ.
ಅಮ್ಮಾ ಜಸ್ಟ್ ಫ್ರೆಂಡ್ ಅಲ್ಲ, ಬೆಸ್ಟ್ ಫ್ರೆಂಡ್!
ಅಮ್ಮಾ ನಿನ್ನ ತೋಳಿನಲ್ಲಿ ಕಂದ ನಾನು... ನಿನ್ನಾ ಸಂಗ ಆಡಲೆಂದು ಬಂದೆ ನಾನು... ಪದ್ಯದ ಸಾಲುಗಳಲ್ಲಿ ಅಮ್ಮಾ... ಅನ್ನೋ ಪದವನ್ನು ಕೇಳಿದಾಗ ಹೆತ್ತು, ಹೊತ್ತು, ಸಾಕಿ ಸಲಹಿದ ಅಮ್ಮನನ್ನು ನೆನೆಸಿಕೊಳ್ಳದವರು ಇರಲಿಕ್ಕಿಲ್ಲ.
ನಾನು ಮುಗ್ದ, ಯಾವುದೇ ತಪ್ಪು ಮಾಡಿಲ್ಲ: ಶ್ರೀಶಾಂತ್
ಹೊಸದಿಲ್ಲಿ: ನಾನು ಮುಗ್ದ ಮತ್ತು ಯಾವುದೇ ತಪ್ಪನ್ನು ಮಾಡಿಲ್ಲ. ನಾನು ಸ್ಪಾಟ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿಲ್ಲ ಎಂದು ಐಪಿಎಲ್ ಸ್ಪಾಟ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿರುವ ಆರೋಪವನ್ನು ಎದುರಿಸುತ್ತಿರುವ ರಾಜಸ್ಥಾನ್ ರಾಯಲ್ಸ್ ತಂಡ...
ಸ್ಪಾಟ್ ಫಿಕ್ಸಿಂಗ್: ಬಾಲಿವುಡ್ ನಟ ವಿಂದೂ ದಾರಾ ಸಿಂಗ್ ಬಂಧನ
ಹೊಸದಿಲ್ಲಿ: ಬಾಲಿವುಡ್ ಮತ್ತು ಸ್ಪಾಟ್ ಫಿಕ್ಸಿಂಗ್ ಲಿಂಕ್ ಒಂದೊಂದಾಗಿ ಬಯಲಾಗುತ್ತಿದ್ದು, ಜನಪ್ರಿಯ ನಟ, ಕುಸ್ತಿಪಟು, ದಿವಂಗತ ದಾರಾ ಸಿಂಗ್ ಅವರ ಪುತ್ರ ವಿಂದೂ ದಾರಾ ಸಿಂಗ್ ನನ್ನು ಪೊಲೀಸರು ಮುಂಬಯಿಯಲ್ಲಿ ಬಂಧಿಸಿದ್ದಾರೆ.
ಅಗ್ಗದ ಮದ್ಯ ಮಾರಾಟ ಮಾಡಿದರೆ ಪ್ರತಿಭಟನೆ
ಬೆಂಗಳೂರು: ಮತ್ತೆ ರಾಜ್ಯದಲ್ಲಿ ಅಗ್ಗದ ಮದ್ಯ ಮಾರಾಟ ಮಾಡಲು ಸರ್ಕಾರ ಮುಂದಾದರೆ ರಾಜ್ಯದಾದ್ಯಂತ ಉಗ್ರ ಪ್ರತಿಭಟನೆ ನಡೆಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ಎಚ್ಚರಿಕೆ ನೀಡಿದ್ದಾರೆ.
ಅದೃಷ್ಟದ ಕೊಠಡಿಗಾಗಿ ಸಚಿವರ ಕಿತ್ತಾಟ
ಬೆಂಗಳೂರು: ಹೋರಾಟದ ಮೂಲಕ ಸಚಿವ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಂಡ ಸಚಿವರು ಇದೀಗ ವಿಧಾನಸೌಧದಲ್ಲಿ ತಮ್ಮ ಅದೃಷ್ಟದ ಕಚೇರಿ ಮತ್ತು ಬಂಗಲೆಗಾಗಿ ಕಿತ್ತಾಟ ಆರಂಭಿಸಿದ್ದಾರೆ.
ಮಹಾತ್ಮ ಗಾಂಧಿ ಅವರ ರಕ್ತ ಹರಾಜಿಗೆ!
ಲಂಡನ್: ಲಂಡನ್ ಮೂಲದ ಜಾಗತಿಕ ಹರಾಜು ಸಂಸ್ಥೆ ಮುಲ್ಲೊಕ್ಸ್ ಮಂಗಳವಾರ ಮಹಾತ್ಮ ಗಾಂಧಿ ಅವರಿಗೆ ಸಂಬಂಧಪಟ್ಟಿರುವ ಕೆಲವು ಮಹತ್ವದ ವಸ್ತುಗಳನ್ನು ಹರಾಜು ಹಾಕಲಿದ್ದು, ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಒಂದಾ ಈ...
ಭಾರತ-ಚೀನಾ ಗಡಿ ವಿವಾದದ ಮಾತುಕತೆ ಯಶಸ್ವಿ
ಹೊಸದಿಲ್ಲಿ: ಅತ್ಯಂತ ಮಹತ್ವದ ಭಾರತ ಮತ್ತು ಚೀನಾ ಗಡಿ ವಿವಾದ ಸಹಿತ ಹಲವಾರು ವಿಷಯಗಳ ಚರ್ಚೆ ಯಶಸ್ವಿಯಾಗಿದೆ ಎಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಸೋಮವಾರ ಹೇಳಿದರು.
ಖಾತೆಗಳ ಹಂಚಿಕೆ: ಪ್ರಮುಖ ಖಾತೆಗಳ ಜವಾಬ್ದಾರಿ ಹೊತ್ತುಕೊಂಡ ಸಿಎಂ
ಬೆಂಗಳೂರು: ಸಚಿವರು ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಹಂಚಿಕೆಯಾಗಬೇಕಿದ್ದ ಖಾತೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಹಂಚಿಕೆ ಮಾಡಿದ್ದು, ಪ್ರಮುಖ ಖಾತೆಗಳಾದ ಇಂಧನ ಹಾಗೂ ಹಣಕಾಸು....
29ರಿಂದ ವಿಧಾನ ಮಂಡಲ ಅಧಿವೇಶನ
ಬೆಂಗಳೂರು: ಮೇ 29 ರಿಂದ ವಿಧಾನ ಮಂಡಲದ ಅಧಿವೇಶನವನ್ನು ನಡೆಸಲು ನಿರ್ಧರಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೇ 31 ರಂದು ಸ್ಪೀಕರ್ ಸ್ಥಾನಕ್ಕೆ...
ಭ್ರಷ್ಟಾಚಾರಕ್ಕೆ ಅವಕಾಶ ನೀಡದಂತೆ ಸಚಿವರಿಗೆ ಸಿಎಂ ಕರೆ
ಬೆಂಗಳೂರು: ಭ್ರಷ್ಟಾಚಾರ ನಡೆಸಿದ ಸರ್ಕಾರವನ್ನು ಹೊರಗಿಟ್ಟು ಕಾಂಗ್ರೆಸ್ ಗೆ ಜನ ಅವಕಾಶ ಮಾಡಿಕೊಟ್ಟಿದ್ದಾರೆ. ಆದ್ದರಿಂದ ಭ್ರಷ್ಟಾಚಾರಕ್ಕೆ ಅವಕಾಶ ನೀಡದೆ ಕಾನೂನು ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ...
ಖಾದರ್, ರೈ, ಜೈನ್, ಸೊರಕೆ ಸಹಿತ ಸಚಿವರ ಪ್ರಮಾಣವಚನ
ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ನೂತನ ಸಚಿವರುಗಳು ಶನಿವಾರ ರಾಜ್ಯಪಾಲರ ಭವನದ ಗಾಜಿನಮನೆಯಲ್ಲಿ ನಡೆದ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಸಂಜಯ್ ದತ್ ಪುಣೆಯ ಯೆರವಾಡ ಜೈಲಿಗೆ
ಮುಂಬಯಿ: 1993ರ ಸರಣಿ ಸ್ಫೋಟ ಪ್ರಕರಣದಲ್ಲಿ ಅಪರಾಧಿಯಾಗಿರುವ ಬಾಲಿವುಡ್ ನಟ ಸಂಜಯ್ ದತ್ ನ್ನು ಪುಣೆಯ ಯೆರವಾಡ ಜೈಲಿಗೆ ಸ್ಥಳಾಂತರಿಸಲಾಗಿದೆ. ಮೇ 16ರಂದು ದತ್ ವಿಶೇಷ ಟಾಡಾ ಕೋರ್ಟ್ ಮುಂದೆ ಶರಣಾಗಿದ್ದರು.
ಚೆನ್ನೈ ಪೊಲೀಸರ ದಾಳಿ: 6 ಮಂದಿ ಬುಕ್ಕಿಗಳ ಸೆರೆ
ಚೆನ್ನೈ: ಸ್ಪಾಟ್ ಫಿಕ್ಸಿಂಗ್ ಆರೋಪದ ಮೇಲೆ ರಾಜಸ್ಥಾನ ರಾಯಲ್ಸ್ ನ ಮೂರು ಮಂದಿ ಆಟಗಾರರು ಸಿಕ್ಕಿಬಿದ್ದ ಮರುದಿನ ಚೆನ್ನೈ ಪೊಲೀಸರು 10 ಕಡೆಗಳಲ್ಲಿ ದಾಳಿ ಮಾಡಿ 6 ಮಂದಿ ಬುಕ್ಕಿಗಳನ್ನು ಬಂಧಿಸಿದ್ದಾರೆ.
ದೆಹಲಿಯಲ್ಲಿ ವೈದ್ಯನಿಂದ ರೋಗಿಯ ಅತ್ಯಾಚಾರ
ಹೊಸದಿಲ್ಲಿ: ದೆಹಲಿಯ ಸರ್ಕಾರಿ ಆಸ್ಪತ್ರೆಯ 51ರ ಹರೆಯದ ವೈದ್ಯ ತನ್ನ ಕ್ಲಿನಿಕ್ ನಲ್ಲಿ 21ರ ಹರೆಯದ ರೋಗಿಯೊಬ್ಬಳನ್ನು ಅತ್ಯಾಚಾರ ಮಾಡಿದ ಪ್ರಕರಣ ನಡೆದಿದೆ. ದೆಹಲಿಯ ಜಗ್ ಪ್ರವೇಶ್ ಚಂದ್ರ ಆಸ್ಪತ್ರೆಯಲ್ಲಿ
ದೆಹಲಿಯಲ್ಲಿ 12ನೇ ತರಗತಿ ಬಾಲಕಿಯ ಗುಂಡಿಕ್ಕಿ ಹತ್ಯೆ
ಹೊಸದಿಲ್ಲಿ: ದಕ್ಷಿಣ ದೆಹಲಿಯಲ್ಲಿ 12ನೇ ತರಗತಿಯಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿನಿಯೊಬ್ಬಳನ್ನು ಹುಡುಗನೊಬ್ಬ ಗುಂಡು ಹಾರಿಸಿ ಕೊಂದ ಘಟನೆ ನಡೆದಿದೆ. ಮುನಿಕ್ರಾ ಪ್ರದೇಶದ ಬುಧ ವಿಹಾರ್ ಪ್ರದೇಶದಲ್ಲಿರುವ
ಬಿಜೆಪಿ ನಾಯಕನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು
ಮುಂಬಯಿ: ಮಹಾರಾಷ್ಟ್ರದ ಬಿಜೆಪಿಯ ಎಂಎಲ್ ಸಿ ಮಧು ಚೌವಾಣ್ ತನ್ನ ಪಕ್ಷದ ಮಾಜಿ ಕಾರ್ಯಕರ್ತೆಯನ್ನು ಅತ್ಯಾಚಾರ ಮಾಡಿದ ಆರೋಪವನ್ನು ಎದುರಿಸುತ್ತಿದ್ದಾರೆ.
ಮಧು ಚೌವಾಣ್ ವಿರುದ್ಧ ಮುಂಬಯಿ ಪೊಲೀಸರು
ಹಲ್ಲೆಗೊಳಗಾಗಿದ್ದ ಪಾಕ್ ಕೈದಿ ಸಾವು
ಚಂಡೀಗಡ: ಜಮ್ಮು ಜೈಲಿನಲ್ಲಿ ಕಳೆದ ವಾರ ಸಹ ಕೈದಿಗಳಿಂದ ಹಲ್ಲೆಗೊಳಗಾಗಿದ್ದ ಪಾಕಿಸ್ತಾನದ ಕೈದಿ ಸಾನುಲ್ಲಾ ರಂಜಾಯ್ ಗುರುವಾರ ಬೆಳಗ್ಗೆ ಮೃತಪಟ್ಟಿದ್ದಾನೆ.
ಹತ್ಯೆ ಪ್ರಕರಣ: ತಲ್ವಾರ್ ದಂಪತಿ ಹೇಳಿಕೆ ದಾಖಲಿಸಲು ಕೋರ್ಟ್ ಆದೇಶ
ಘಜಿಯಾಬಾದ್: ಆರುಷಿ-ಹೇಮರಾಜ್ ಹತ್ಯಾ ಪ್ರಕರಣದಲ್ಲಿ ಮಂಗಳವಾರ ಸಿಬಿಐ ವಿಶೇಷ ನ್ಯಾಯಾಲಯವು ರಾಜೇಶ್ ಮತ್ತು ನುಪುರ್ ತಲ್ವಾರ್ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಿದೆ.
ಅತ್ಯಾಚಾರ ಪ್ರಕರಣ: ವೈದ್ಯಕೀಯ ವಿದ್ಯಾರ್ಥಿನಿ ದೇಹದ ಮೇಲಿತ್ತು ಕಚ್ಚಿದ ಗುರುತು!
ಹೊಸದಿಲ್ಲಿ: ಕಳೆದ ವರ್ಷ ಡಿಸೆಂಬರ್ ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ವೈದ್ಯಕೀಯ ವಿದ್ಯಾರ್ಥಿನಿಯನ್ನು ಇಬ್ಬರು ಕಚ್ಚಿದ ಗುರುತುಗಳಿದ್ದವು ಎಂದು ಹೇಳಲಾಗಿದೆ. ಈ ಎರಡು ಗುರುತುಗಳು
ಬಾಲಿವುಡ್ ನಿರ್ಮಾಪಕಿ ಏಕ್ತಾ ಕಪೂರ್ ಮನೆ, ಕಚೇರಿಗೆ ಐಟಿ ದಾಳಿ
ಮುಂಬಯಿ: ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಮಂಗಳವಾರ ಬಾಲಿವುಡ್ ನಿರ್ಮಾಪಕಿ ಏಕ್ತಾ ಕಪೂರ್ ಮನೆ ಹಾಗೂ ಕಚೇರಿಗೆ ದಾಳಿ ಮಾಡಿದ್ದಾರೆ. ಕಿರುತೆರೆಯಲ್ಲಿ ತನ್ನ ಧಾರಾವಾಹಿಗಳಿಂದ ಹೆಚ್ಚಿನ ಪ್ರಚಾರವನ್ನು ಪಡೆದುಕೊಂಡಿರುವ
ಹೆಲಿಕಾಪ್ಟರ್ ನಲ್ಲಿ ವಧುವನ್ನು ಕರೆತಂದ ಬಿಹಾರದ ಕಾಂಗ್ರೆಸ್ ಶಾಸಕ
ಪಟ್ನಾ: ಜನರಿಗೆ ಮೂಲಭೂತ ಸೌಲಭ್ಯಗಳಿಲ್ಲದಿದ್ದರೂ ನಮ್ಮ ರಾಷ್ಟ್ರದ ಎಲ್ಲಾ ರಾಜ್ಯಗಳ ಶಾಸಕರು ತಮ್ಮ ಶ್ರೀಮಂತಿಕೆಯನ್ನು ತೋರಿಸುವುದರಲ್ಲಿ ಹಿಂದೆ ಬಿದ್ದಿಲ್ಲ. ಬಿಹಾರದಲ್ಲಿ ಕಾಂಗ್ರೆಸ್ ನ ಶಾಸಕನೊಬ್ಬ ಹೆಲಿಕಾಪ್ಟರ್ ನಲ್ಲಿ ವಧುವನ್ನು ಕರೆದುಕೊಂಡು ಬಂದಿದ್ದಾನೆ.

Write Your Comment Here...