ಕೊಡಗಿನ ಕೆಸರುಗದ್ದೆಗಳಲ್ಲೀಗ ಕ್ರೀಡಾ ಭರಾಟೆ....
[Updated 25/07/2012 01:39 pm ][Author: ]ಬಿ.ಎಂ.ಲವಕುಮಾರ್
ಕೊಡಗಿನಲ್ಲೀಗ ಕೆಸರುಗದ್ದೆಗಳು ಆಟದ ಮೈದಾನಗಳಾಗುತ್ತಿವೆ ಎಂದರೆ ಅಚ್ಚರಿಯಾಗಬಹುದು. ಆದರೆ ಇದು ಸತ್ಯ. ಏಕೆಂದರೆ ಜಿಲ್ಲೆಯಾದ್ಯಂತ ಎಲ್ಲಿ ನೋಡಿದರಲ್ಲಿ ಕೆಸರುಗದ್ದೆ ಕ್ರೀಡಾಕೂಟಗಳು ನಡೆಯುತ್ತಿವೆ. ಇದು ಕೊಡಗಿನವರು ವೀರರು, ಶೂರರು ಮಾತ್ರವಲ್ಲ ಕ್ರೀಡಾಪ್ರೇಮಿಗಳೂ ಹೌದು ಎಂಬುವುದಕ್ಕೆ ಸಾಕ್ಷಿಯಾಗಿವೆ.ಬೇಸಿಗೆಯಲ್ಲಿ ಹಾಕಿ, ಫುಟ್ಭಾಲ್, ಕ್ರಿಕೆಟ್, ವಾಲಿಬಾಲ್ ಹೀಗೆ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಕ್ರೀಡಾ ಶೌರ್ಯ ಮೆರೆದ ಕ್ರೀಡಾಪಟುಗಳು, ಅದನ್ನು ಕಣ್ಣಾರೆ ನೋಡಿ ಆನಂದಿಸಿದ ಕ್ರೀಡಾಪ್ರೇಮಿಗಳು ಮಳೆಗಾಲ ಬಂತೆಂದರೆ ಕೈ ಕಟ್ಟಿ ಕೂರುವುದಿಲ್ಲ. ಮಳೆಗಾಲದಲ್ಲಿ ಭತ್ತದ ಗದ್ದೆಯನ್ನೇ ಮೈದಾನವನ್ನಾಗಿಸಿಕೊಂಡು ಕೆಸರುಗದ್ದೆ ಕ್ರೀಡೆಗಳನ್ನು ಆಯೋಜಿಸಿ ಆನಂದಿಸುವುದು ಹಿಂದಿನ ಕಾಲದಿಂದಲೂ ನಡೆದು ಬಂದಿದೆ.
ಹಾಗೆ ನೋಡಿದರೆ ಕೊಡಗಿನಲ್ಲಿ ನಡೆಯುವ ಕೆಸರುಗದ್ದೆ ಕ್ರೀಡಾಕೂಟಕ್ಕೆ ತನ್ನದೇ ಆದ ಇತಿಹಾಸವಿದೆ. ಇದು ರಾಜಮಹಾರಾಜರ ಕಾಲದಲ್ಲಿಯೇ ಪ್ರಚಲಿತದಲ್ಲಿತ್ತು ಎಂದು ಹೇಳಲಾಗುತ್ತಿದೆ. ಸೈನಿಕರು ಭತ್ತದ ಗದ್ದೆಯಲ್ಲಿ ನಡೆಯುವ ಸ್ಪರ್ಧೆಯಲ್ಲಿ ಪಾಲ್ಗೊಂಡರೆ, ರಾಜ ಗದ್ದೆಯ ಏರಿಯಲ್ಲಿ ನಿಂತು ವೀಕ್ಷಿಸುತ್ತಿದ್ದರಂತೆ. ಹಿಂದಿನ ಕಾಲದಲ್ಲಿ ಕೊಡಗಿನ ಮಳೆ ಎಂದರೆ ಜನ ಭಯಪಡುತ್ತಿದ್ದರು. ದೂರದ ಊರುಗಳಿಂದ ಇಲ್ಲಿಗೆ ಬರಲು ಸರ್ಕಾರಿ ನೌಕರರು ಕೂಡ ಹಿಂದೇಟು ಹಾಕುತ್ತಿದ್ದರು. ಏಕೆಂದರೆ ಆಗಿನ ಮಳೆಯೂ ಕೂಡ ಹಾಗೆಯೇ ಇತ್ತು. ಯುಗಾದಿ ಹಬ್ಬ ಕಳೆಯುತ್ತಿದ್ದಂತೆಯೇ ಪ್ರಾರಂಭವಾಗುತ್ತಿದ್ದ ಮಳೆ ದೀಪಾವಳಿ ತನಕವೂ ಸುರಿಯುತ್ತಿತ್ತು. ಆಗ ಈಗಿನಂತೆ ವಾಣಿಜ್ಯ ಬೆಳೆಗಳ ಭರಾಟೆಯೂ ಇರಲಿಲ್ಲ. ಭತ್ತದ ಬೆಳೆಯೇ ಜೀವನಾಧಾರವಾಗಿತ್ತು. ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಭತ್ತದ ಕೃಷಿಯನ್ನು ಮಾಡುತ್ತಿದ್ದರು. ಹೀಗಾಗಿ ಜೂನ್ ತಿಂಗಳ ಪ್ರಾರಂಭದಲ್ಲಿ ರೈತರು ನೇಗಿಲು ಹಿಡಿದು ಗದ್ದೆಗಿಳಿದರೆ ನಾಟಿ ಕೆಲಸ ಮುಗಿಸಿ ಈಚೆಗೆ ಬರುವ ವೇಳೆಗೆ ತಿಂಗಳುಗಳೇ ಕಳೆದು ಹೋಗುತ್ತಿತ್ತು. ಈ ಸಂದರ್ಭ ಪೇಟೆ, ಪಟ್ಟಣದ ರಂಗು ರಂಗಿನ ಬದುಕಾಗಲೀ, ಮನೋರಂಜನೆಯಾಗಲೀ ಅವರಿಗೆ ದೊರೆಯುತ್ತಿರಲಿಲ್ಲ. ಆದರೂ ಬಿಡುವಿಲ್ಲದ ಕೆಲಸದ ನಡುವೆಯೂ ಒಂದಷ್ಟು ಮನೋರಂಜನೆಗಾಗಿ ನಾಟಿ ಓಟವನ್ನು ಏರ್ಪಡಿಸುತ್ತಿದ್ದರು.










ನಾಟಿ ಓಟವನ್ನು ಊರಿನ ಕೆಲವೇ ಕುಟುಂಬಗಳು ಮಾತ್ರ ನಡೆಸುತ್ತಿದ್ದರು. ತಿಂಗಳುಗಟ್ಟಲೆ ಭತ್ತದ ನಾಟಿ ಕೆಲಸದಲ್ಲಿ ನಿರತರಾದ ಮಂದಿ ನಾಟಿ ಕೆಲಸವನ್ನು ಮುಗಿಸಿ ಕೊನೆಗೆ ದೊಡ್ಡ ಗದ್ದೆಯೊಂದನ್ನು ಉಳಿಸಿಕೊಳ್ಳುತ್ತಿದ್ದರು. ಈ ಗದ್ದೆಯಲ್ಲಿ ನಾಟಿ ನೆಡಲು ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುತ್ತಿದ್ದರು. ಇದನ್ನು ದೊಡ್ಡ ನಾಟಿ ಎಂದು ಕರೆಯಲಾಗುತ್ತಿತ್ತು. ಈ ನಾಟಿಗೆ ಮಾಂಸದ ಊಟ ತಯಾರಿಸಿ ಬಡಿಸಲಾಗುತ್ತಿತ್ತು. ಬಳಿಕ ನಾಟಿ ಮುಗಿದ ಮೇಲೆ ಸಂಜೆ ನಾಟಿ ನೆಟ್ಟ ಗದ್ದೆಯಲ್ಲಿ ನಾಟಿ ಓಟ ಏರ್ಪಡಿಸಲಾಗುತ್ತಿತ್ತು. ನಾಟಿ ಓಟದಲ್ಲಿ ಸ್ಪರ್ಧೆಸಿ ವಿಜೇತರಾದವರಿಗೆ ನಗದು, ಬಾಳೆಗೊನೆ, ತೆಂಗಿನಕಾಯಿ, ವೀಳ್ಯದೆಲೆ ನೀಡಲಾಗುತ್ತಿತ್ತು. ನಾಟಿ ಓಟದಲ್ಲಿ ಪಾಲ್ಗೊಳ್ಳುವ ಸ್ಪರ್ಧೆಗಳಲ್ಲಿ ಯಾವುದೇ ರೀತಿಯ ಪೈಪೋಟಿಯಿಲ್ಲದೆ, ಮನೋರಂಜನೆಯಷ್ಟೆ ಮುಖ್ಯವಾಗಿತ್ತು.
ಆ ದಿನಗಳಲ್ಲಿ ಇಂತಹ ನಾಟಿ ಓಟಗಳು ಕೊಡಗಿನಲ್ಲಿ ಅಲ್ಲಲ್ಲಿ ನಡೆಯುತ್ತಿತ್ತಾದರೂ, ಮಡಿಕೇರಿ ಸಮೀಪದ ಕಗ್ಗೋಡ್ಲುವಿನ ಸಿ.ಬಿ.ಬೋಪಯ್ಯರವರ ಗದ್ದೆಯಲ್ಲಿ ನಡೆಯುತ್ತಿದ್ದ ನಾಟಿ ಓಟ ತನ್ನದೇ ಆದ ವೈಶಿಷ್ಟ್ಯತೆಯನ್ನು ಪಡೆದು ಜನರ ಗಮನಸೆಳೆದಿತ್ತು. ಇಲ್ಲಿ ನಡೆಯುವ ನಾಟಿ ಓಟವನ್ನು ವೀಕ್ಷಿಸಲು ದೂರದ ಊರುಗಳಿಂದ ಕ್ರೀಡಾಸ್ಪರ್ಧೆಗಳು ಹಾಗೂ ಕ್ರೀಡಾಪ್ರೇಮಿಗಳು ಬರುತ್ತಿದ್ದರು. ತದನಂತರ ಇಲ್ಲಿ ನಡೆಯುವ ನಾಟಿ ಓಟದ ಪ್ರಾಯೋಜಕತ್ವವನ್ನು ಲಯನ್ಸ್ ಕ್ಲಬ್, ಕೊಡಗು ಪೊಲೀಸ್ ಇಲಾಖೆ ನಡೆಸುವ ಮೂಲಕ ಇನ್ನಷ್ಟು ಮೆರಗು ನೀಡಿತು. ಪ್ರತಿ ವರ್ಷದ ಸ್ವಾತಂತ್ರ್ಯೋತ್ಸವದ ಹಿಂದಿನ ಶನಿವಾರ ಮಧ್ಯಾಹ್ನ ನಾಟಿ ಓಟ ನಡೆಸಲಾಗುತ್ತಿತ್ತಲ್ಲದೆ, ವಿಜೇತರಿಗೆ ಸ್ವಾತಂತ್ರ್ಯೋತ್ಸವದ ದಿನದಂದು ಮಡಿಕೇರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುತ್ತಿತ್ತು. ಇದು ಕೆಲವು ವರ್ಷಗಳ ಕಾಲ ಹೀಗೆಯೇ ನಡೆಯುತ್ತಾ ಬಂತಾದರೂ ಇದಕ್ಕೆ ಹೊಸರೂಪ ನೀಡಿದ್ದು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಹಾಗೂ ಯೂತ್ ಹಾಸ್ಟೆಲ್ ಮಡಿಕೇರಿ ಘಟಕ.
ಯೂತ್ ಹಾಸ್ಟೆಲ್ ಹಾಗೂ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯು ಇತರೆ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸಾಂಪ್ರದಾಯಿಕ ನಾಟಿ ಓಟದೊಂದಿಗೆ ಕೆಸರು ಗದ್ದೆಯಲ್ಲಿ ವಿವಿಧ ಕ್ರೀಡೆಗಳಾದ ವಾಲಿಬಾಲ್, ಕೆಸರುಗದ್ದೆ ಓಟ, ರಿಲೇ, ನಿಂಬೆಹಣ್ಣು ಚಮಚ ಓಟ, ಹಗ್ಗಜಗ್ಗಾಟ ಸೇರಿದಂತೆ ಹಲವು ಕ್ರೀಡೆಗಳನ್ನು ಆಯೋಜಿಸುವುದರೊಂದಿಗೆ ರಾಜ್ಯ ಮಟ್ಟದ ಕೆಸರುಗದ್ದೆ ಕ್ರೀಡಾಕೂಟವನ್ನಾಗಿ ಮಾರ್ಪಡಿಸುವುದರೊಂದಿಗೆ ರಾಜ್ಯಮಟ್ಟದಲ್ಲಿ ಗಮನಸೆಳೆಯುವಂತೆ ಮಾಡಿದರು.ಇದೀಗ ಪ್ರತಿ ವರ್ಷವೂ ಆಗಸ್ಟ್ 15ನೇ ತಾರೀಕಿ ನ ಹಿಂದಿನ ಶನಿವಾರ ಕಗ್ಗೋಡ್ಲುನಲ್ಲಿ ಕೆಸರು ಗದ್ದೆ ಕ್ರೀಡಾಕೂಟವನ್ನು ಏರ್ಪಡಿಸಲಾಗುತ್ತದೆ. ಈ ಸಂದರ್ಭ ಸಹಸ್ರಾರು ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಮಕ್ಕಳು, ಮಹಿಳೆಯರು, ಪುರುಷರ ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆ ನಡೆಯುತ್ತದೆ. ಬೃಹತ್ ಕೆಸರು ಗದ್ದೆಗಳಲ್ಲಿ ಕೆಸರು ಸಿಂಚನದೊಂದಿಗೆ ಪ್ರಶಸ್ತಿಗಾಗಿ ಸೆಣಸಾಡುವ ದೃಶ್ಯ ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡುತ್ತದೆ.
ಪ್ರಕೃತಿ ರಮಣೀಯ ತಾಣವಾಗಿರುವ ಕಗ್ಗೋಡ್ಲು ಕೆಸರು ಗದ್ದೆ ಕ್ರೀಡಾಕೂಟದಿಂದಾಗಿ ಇಂದು ದೇಶವಿದೇಶಗಳಲ್ಲಿ ಗಮನಸೆಳೆಯುತ್ತಿದೆ. ಇಲ್ಲಿನ ವಿಶಾಲಗದ್ದೆ ಬಯಲು, ಸುತ್ತಲೂ ಆವರಿಸಿಕೊಂಡಿರುವ ಕಾಫಿ, ಅಡಿಕೆ ತೋಟಗಳು, ದೂರದ ಬೆಟ್ಟಗುಡ್ಡಗಳು ಪ್ರಕೃತಿ ಪ್ರಿಯರಿಗೆ ಮುದ ನೀಡುತ್ತದೆ. ಸುರಿಯುವ ಮಳೆಯಲ್ಲಿಯೇ ಇಲ್ಲಿ ಕ್ರೀಡಾಕೂಟ ನಡೆಯುತ್ತದೆ. ಈ ಕ್ರೀಡಾಕೂಟವನ್ನು ವೀಕ್ಷಿಸಲು ಯಾವುದೇ ಗ್ಯಾಲರಿಗಳಿಲ್ಲ. ಗದ್ದೆ ಏರಿ, ರಸ್ತೆ ಬದಿಯಲ್ಲಿ ನಿಂತುಕೊಂಡೇ ವೀಕ್ಷಿಸಬೇಕು. ಇಲ್ಲಿ ಗ್ಯಾಲರಿ ನಿರ್ಮಿಸುವ ಭರವಸೆಗಳು ಪ್ರತಿ ವರ್ಷ ಕೇಳಿಬರುತ್ತಿವೆಯಾದರೂ ಗ್ಯಾಲರಿ ನಿರ್ಮಾಣದ ಕನಸು ಮಾತ್ರ ಸಕಾರಗೊಂಡಿಲ್ಲ. ಇತ್ತೀಚಿಗಿನ ವರ್ಷಗಳಲ್ಲಿ ಕೆಸರುಗದ್ದೆ ಕ್ರೀಡಾಕೂಟ ಜನಪ್ರಿಯವಾಗುತ್ತಿದ್ದು, ಜಿಲ್ಲೆಯ ಕೆಲವೆಡೆ ಯುವಕ ಸಂಘಗಳು, ಸಂಘ ಸಂಸ್ಥೆಗಳು ಕೆಸರುಗದ್ದೆ ಕ್ರೀಡಾಕೂಟವನ್ನು ಆಯೋಜಿಸುತ್ತಿರುವುದನ್ನು ನಾವು ಕಾಣಬಹುದು. ಆದರೆ ಕಗ್ಗೋಡ್ಲುವಿನಲ್ಲಿ ನಡೆಯುವ ಕ್ರೀಡಾಕೂಟ ಮಾತ್ರ ಎಲ್ಲಕ್ಕಿಂತ ಭಿನ್ನ ಹಾಗಾಗಿ ಜನಪ್ರಿಯವಾಗಿದೆ. ದಿನನಿತ್ಯದ ಜಂಜಾಟ, ಸದಾ ಗಿಜಿಗಿಡುವ ಪೇಟೆಯ ಬದುಕಿಂದ ಹೊರಗಿದ್ದು ಪ್ರಶಾಂತ ವಾತಾವರಣದಲ್ಲಿ ಒಂದಷ್ಟು ಸಮಯವನ್ನು ನೆಮ್ಮದಿಯಾಗಿ ಕಳೆಯುವುದರೊಂದಿಗೆ ಮನರಂಜನೆ ಪಡೆಯಬೇಕೆಂಬ ಬಯಕೆ ನಿಮ್ಮದಾದರೆ ಈ ಬಾರಿ ಕಗೋಡ್ಲುವಿನಲ್ಲಿ ನಡೆಯುವ ಕೆಸರುಗದ್ದೆ ಕ್ರೀಡಾಕೂಟಕ್ಕೆ ತಪ್ಪದೆ ಬನ್ನಿ.
ಬಿಗ್ ಬಾಸ್ ನ ವಿನಾಯಕ್ ಜೋಶಿ ಜತೆ ನಮ್ ಸ್ಟೈಲ್ ನ ಮಾತುಕತೆ...
ವಿನಾಯಕ್ ಜೋಶಿ, ಒಂದ್ ಟೈಮ್ ನಲ್ಲಿ ಈ ಹೆಸರು ಕೇಳಿದಾಕ್ಷಣ ತಕ್ಷಣ ನೆನಪಿಗೆ ಬರ್ತಿದ್ದದ್ದು ನಮ್ಮೂರ ಮಂದಾರ ಹೂವೇ, ಅಮೃತ ವರ್ಷಿಣಿ ಚಿತ್ರದ ಗುಂಡು ಗುಂಡಾಗಿ, ಮುದ್ದು ಮುದ್ದಾಗಿದ್ದ ಪುಟ್ಟ ಬಾಲಕ.
ಆತ ರಕ್ಷಿಸಿದ ಮಗು ಬದುಕುಳಿಯಲಿಲ್ಲವೆಂದು ಬಿಕ್ಕಿಬಿಕ್ಕಿ ಅತ್ತಿದ್ದ...!
ದೇಶದ ಇತಿಹಾಸದಲ್ಲಿಯೇ ಭೀಕರ ದುರಂತವಾದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತಕ್ಕೆ ಇಂದಿಗೆ(ಮೇ 22) ಮೂರು ವರ್ಷಗಳು ತುಂಬುತ್ತಿದೆ. 2010ರ ಮೇ 22 ರಂದು ಬೆಳಗ್ಗೆ 6.05ರ...
ಮಾಯಾಲೋಕದ ಅಪೂರ್ವ ಬಾಲೆ...!
ಹ್ಯಾಟ್ ತಲೆಗೇರಿಸಿ, ಕೈಯಲ್ಲೊಂದು ಮಂತ್ರದಂಡ ಹಿಡಿದುಕೊಂಡು ಸ್ಟೇಜ್ ಏರಿದಳೆಂದರೆ ಎದುರು ಕುಳಿತವರು ಕಣ್ ಕಣ್ ಬಿಟ್ಟು ನೋಡುತ್ತಲೇ ಇರಬೇಕೆನ್ನುವ ಮಯಾ ಲೋಕವೇ ಸೃಷ್ಟಿಯಾಗಿಬಿಡುತ್ತದೆ. ಈ ಮಾಯಾಲೋಕದ...
ಚೊಚ್ಚಲ ಚಿತ್ರದಲ್ಲೇ ಕೇಳುಗರ ಮೋಡಿ ಮಾಡಿದ ಸಂಗೀತ ನಿರ್ದೇಶಕ ವಿಜೇತ್
ಕಳೆದ ಸಂಚಿಕೆಯಲ್ಲಿ ಸರ್ಜಾ ಕುಟುಂಬದಿಂದ ಚಿತ್ರರಂಗಕ್ಕೆ ನಟನಾಗಿ ಪ್ರವೇಶ ಮಾಡ್ತಾ ಇರೋ ಭರತ್ ಸರ್ಜಾ ರವರ ಬಗ್ಗೆ ಪರಿಚಯ ಮಾಡಿಸಲಾಯ್ತು. ಈ ಬಾರಿ ಸರ್ಜಾ ಕುಟುಂಬದ ಮತ್ತೊಬ್ಬನ ಪರಿಚಯ. ಆತ ಚಿತ್ರರಂಗವನ್ನು ಕಾಲಿಟ್ಟಿರುವುದು...
ಪ್ರಯೋಗ ಶೀಲ ಕಲಾವಿದನ ಕಲ್ಪನೆಯಲ್ಲಿ ಮೂಡಿದ ಕಾಗದ ಭಿತ್ತಿ ಶಿಲ್ಪಗಳು
ಆಧುನಿಕತೆ ಬೆಳೆದಂತೆಲ್ಲ ಕಲೆಯು ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಲಿದೆ. ಪ್ರಸುತ್ತ ಸಂದರ್ಭದಲ್ಲಿ ಕಲಾವಿದ ತನ್ನದೇ ಆದ ಮಾಧ್ಯಮದಿಂದ ಕಲಾಕೃತಿಗಳನ್ನು ರಚಿಸುತ್ತ ತನ್ನ ಕಲ್ಪನೆಯನ್ನು ಅಭಿವ್ಯಕ್ತಿಸಲು ವಿಭಿನ್ನ ಮಾರ್ಗವನ್ನು ಕಂಡುಕೊಳ್ಳುತ್ತಿದ್ದಾನೆ.
ಮ್ಯಾಜಿಕ್ ಕಲೆಯ ಸಾಗರ ಈ ಸಾಗರ್...!
ಮ್ಯಾಜಿಕ್ ನೊಂದಿಗೆ ಕೆಲವು ಅಪಾಯಕಾರಿ ಸ್ಟಂಟ್ ಗಳನ್ನು ಮಾಡುವ ಸಾಗರ್ ಗೆ ಮನೆಯೇ ಮೊದಲ ಪ್ರಯೋಗ ಶಾಲೆ. ಚಾಪರ್ ಬ್ಲೇಡ್ ನ ಹರಿತವಾದ ಭಾಗದ ಮೇಲೆ ನಡೆದಾಡುವ ಸಾಗರ್, ಪ್ರೇಕ್ಷಕರನ್ನು ನಿಬ್ಬೆರಗಾಗುವಂತೆ ಮಾಡುವುದಲ್ಲದೆ...
ಶಿಕ್ಷಣ ವ್ಯವಸ್ಥೆಗೇ ಸವಾಲೆಸೆಯುತ್ತಿರುವ ಸ್ವರೂಪ
ಚಿತ್ರಕಲೆ ಮೂಲಕ ಸಾಧಾರಣಾ ವಿದ್ಯಾರ್ಥಿಯೊಬ್ಬ ಹೆಚ್ಚಿನ ಅಂಕ ಪಡೆಯಲು ಸಾಧ್ಯವೇ? ದಡ್ಡನೆಂದು ಬೈದು ಶಾಲೆಯಿಂದ ಹೊರದಬ್ಬಲ್ಪಟ್ಟ ವಿದ್ಯಾರ್ಥಿ ಕೇವಲ 20 ದಿನಗಳ ತರಬೇತಿಯ ಮೂಲಕ ಡಿಸ್ಟಿಂಕ್ಷನ್ ಪಡೆಯಲು ಸಾಧ್ಯವೇ? ಡ್ಯಾನ್ಸ್ ಮಾಡಿ ಗಣಿತ-ವಿಜ್ಞಾನದಲ್ಲಿ...ವಿಶೇಷ
ಕುಟುಂಬವೆಂಬ ವಟವೃಕ್ಷದ ಕೆಳಗೆ...
ಮೇ 15 ವಿಶ್ವ ಅಂತರರಾಷ್ಟ್ರೀಯ ಕುಟುಂಬ ದಿನ, ಸತ್ಸಂಪ್ರದಾಯದಲ್ಲಿ ವಿಶ್ವಕ್ಕೆ ಮಾದರಿಯಾದ ಭಾರತದ ಕುಟುಂಬ ಪದ್ಧತಿಯಲ್ಲಿ ಆತಂಕಕಾರಿಯಲ್ಲದಿದ್ದರೂ ಅಲ್ಪಪ್ರಮಾಣದ ಪಾಶ್ಚಾತ್ಯರ ಅನುಕರಣೆಯಾಗುತ್ತಿರುವುದು ಅಸಹನೀಯವೇ.
ಇತಿಹಾಸದ ಕಥೆ ಹೇಳುತ್ತಿದೆ ಮಡಿಕೇರಿ ಅರಮನೆ
ಕೊಡಗಿನ ಮುಖ್ಯ ಪಟ್ಟಣ ಮಡಿಕೇರಿಗೆ ಆಗಮಿಸುವ ಪ್ರವಾಸಿಗರನ್ನು ಎತ್ತರದ ಸಮತಟ್ಟಾದ ಸ್ಥಳದಲ್ಲಿ ಕಲ್ಲುಕೋಟೆ ನಡುವೆ ನೆಲೆನಿಂತ ಅರಮನೆ ಗಮನಸೆಳೆಯುತ್ತದೆ. ಈ ಅರಮನೆ ಮೈಸೂರು ಅರಮನೆಯಂತೆ ವಿಶ್ವವಿಖ್ಯಾತಿ ಪಡೆಯದಿರಬಹುದು.
ಸ್ತ್ರೀಯರ ಮಹತ್ವದ ದಿನ ಅಕ್ಷಯ ತೃತೀಯಾ....
ಅಕ್ಷಯ ತದಿಗೆ ಸ್ತ್ರೀಯರಿಗೆ ಮಹತ್ವದ್ದಾಗಿದೆ. ಸ್ತ್ರೀಯರು ಚೈತ್ರದಲ್ಲಿ ಕೂರಿಸಿದ ಚೈತ್ರ ಗೌರಿಯನ್ನು ಈ ದಿನ ವಿಸರ್ಜನೆ ಮಾಡುತ್ತಾರೆ. ಇದರ ಪ್ರಯುಕ್ತ ಅರಿಶಿನ-ಕುಂಕುಮ ನೀಡುವ ಕಾರ್ಯಕ್ರಮವನ್ನೂ ಮಾಡುತ್ತಾರೆ.
ಸ್ಪಾಟ್ ಫಿಕ್ಸಿಂಗ್: ಗುರುನಾಥ್ ಇಂದು ಕೋರ್ಟಿಗೆ
ಮುಂಬಯಿ: ಚೆನ್ನೈ ಸೂಪರ್ ಕಿಂಗ್ಸ್ ನ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಗುರುನಾಥ್ ಮೇಯಪ್ಪನ್ ನನ್ನು ಇಂದು ಮುಂಬಯಿ ಪೊಲೀಸರು ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಕೋರ್ಟಿಗೆ ಹಾಜರುಪಡಿಸಲಿದ್ದಾರೆ.
ಒಂದುವರೆ ತಿಂಗಳಲ್ಲಿ ಸೌದಿಯಿಂದ 56,700 ಮಂದಿ ಭಾರತೀಯರ ಗಡಿಪಾರು
ಹೊಸದಿಲ್ಲಿ: ಸುಮಾರು 56,700 ಮಂದಿ ಭಾರತೀಯರನ್ನು ಸೌದಿ ಅರೇಬಿಯಾ ಮುಂದಿನ ಒಂದುವರೆ ತಿಂಗಳಲ್ಲಿ ಗಡಿಪಾರು ಮಾಡಲಿದೆ ಮತ್ತು ಇವರೆಲ್ಲರಿಗೆ ಎಮರ್ಜೆನ್ಸಿ ಸರ್ಟಿಫಿಕೇಟ್ ನೀಡಲು ಹತ್ತು ಅಧಿಕಾರಿಗಳನ್ನು ಸೌದಿಗೆ...
ಜನಸಂಖ್ಯೆಯಲ್ಲಿ ಕರ್ನಾಟಕಕ್ಕೆ 9ನೇ ಸ್ಥಾನ
ಬೆಂಗಳೂರು: ದೇಶದಲ್ಲಿ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕ್ಕೆ 9ನೇ ಸ್ಥಾನದಲ್ಲಿದೆ. ಇದು 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ 6,10,95,297 ಜನರಿದ್ದು, 2001ರ ಜನಗಣತಿಗೆ ಹೋಲಿಸಿದರೆ...
ಬೆಂಗಳೂರಿನ ಐಐಎಂ-ಬಿಗೆ ಹುಸಿ ಬಾಂಬ್ ಕರೆ
ಬೆಂಗಳೂರು: ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೆಜ್ ಮೆಂಟ್ ಬೆಂಗಳೂರು(ಐಐಎಂ-ಬಿ) ಗೆ ಬಾಂಬ್ ಕರೆ ಬಂದಿದ್ದು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಿ ಶೋಧಿಸಿದಾಗ ಇದು ಹುಸಿ ಕರೆಯೆಂದು ತಿಳಿದುಬಂದಿದೆ.
ಎಪಿಎಲ್ -ಬಿಪಿಎಲ್ ಕಾರ್ಡ್ ದಾರರೇ ಅಕ್ಕಿ ಸಿಗೋದು ಫುಲ್ ಡೌಟು!
ಬೆಂಗಳೂರು: ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ ದಾರರೇ ಹುಷಾರ್..! ಮುಂದಿನ ತಿಂಗಳು ನಿಮಗೆ ಅಕ್ಕಿ ಸಿಗುವುದು ಬಹುತೇಕ ಅನುಮಾನ ಕಾರಣ ರಾಜ್ಯದ ಗೋದಾಮಿನಲ್ಲಿ ಇರುವ ಅಕ್ಕಿಗೆ ನುಸಿಬಾಧೆ ತಗುಲಿದ್ದು..
ಮಂಗಳೂರು ಮೂಲದ ಬಾಲಕನಿಗೆ ನ್ಯಾಶನಲ್ ಜಿಯೋಗ್ರಾಫಿಕ್ ಬೀ ಪ್ರಶಸ್ತಿ
ವಾಷಿಂಗ್ಟನ್: ಮಂಗಳೂರು ಮೂಲದ ಬಾಲಕನೊಬ್ಬ ಅಮೆರಿಕಾದಲ್ಲಿ ನಡೆದ ನ್ಯಾಶನಲ್ ಜಿಯೋಗ್ರಾಪಿಕ್ ಬೀ 2013 ಸ್ಪರ್ಧೆಯನ್ನು ಗೆದ್ದುಕೊಂಡಿದ್ದಾನೆ. ಏಶ್ಯಾದ ಬೆಟ್ಟ ಪ್ರದೇಶ ಬೊತ್ಸವಾನಾದಲ್ಲಿರುವ ಹುಲಿಗಳ ಬಗ್ಗೆ ಮತ್ತು ಇಂಗ್ಲೆಂಡ್ ನ...
ಮಾಸಾಂತ್ಯಕ್ಕೆ ರಾಜ್ಯಕ್ಕೆ ಮುಂಗಾರು ಪ್ರವೇಶ!
ಬೆಂಗಳೂರು: ಮೇ ತಿಂಗಳ ಕೊನೆಯ ವಾರದಲ್ಲೇ ರಾಜ್ಯಕ್ಕೆ ಮುಂಗಾರು ಪ್ರವೇಶಿಸುವ ಸಾಧ್ಯತೆಗಳಿವೆ ದಟ್ಟವಾಗಿದೆ ಎಂದು ಹವಾಮಾನ ಇಲಾಖೆಯ ನಿರ್ದೇಶಕ ಪುಟ್ಟಣ್ಣ ಹೇಳಿದ್ದಾರೆ.
ರಾಜ್ಯದಲ್ಲಿ ಈ ಶೈಕ್ಷಣಿಕ ವರ್ಷದಿಂದ ಬಂಗಾಳಿ ದ್ವಿತೀಯ ಭಾಷೆ
ಬೆಂಗಳೂರು: ಕರ್ನಾಟಕದಲ್ಲಿ ಬಂಗಾಳಿ ಭಾಷೆಯನ್ನು ಈ ಶೈಕ್ಷಣಿಕ ವರ್ಷದಿಂದ ದ್ವಿತೀಯ ಭಾಷೆಯನ್ನಾಗಿ ಮಾಡಲು ಸರ್ಕಾರ ಆದೇಶ ಹೊರಡಿಸಿದೆ. ಬಂಗಾಳಿ ಸಮುದಾಯದವರು ದೀರ್ಘ ಸಮಯದಿಂದ ಈ ಬಗ್ಗೆ ಮನವಿ...
ಅನಂತಮೂರ್ತಿ ಹಿಂದಿಕ್ಕಿ ಬೂಕರ್ ಪಡೆದ ಅಮೆರಿಕಾದ ಲೇಖಕಿ
ಲಂಡನ್: ಕರ್ನಾಟಕದ ಸಾಹಿತಿ ಯು. ಆರ್. ಅನಂತಮೂರ್ತಿ ಅವರು 2013ರ ಬೂಕರ್ ಅಂತಾರಾಷ್ಟ್ರೀಯ ಪ್ರಶಸ್ತಿಯಿಂದ ಕೂದಲೆಳೆಯ ಅಂತರದಲ್ಲಿ ವಂಚಿತರಾಗಿದ್ದಾರೆ. ಅನಂತಮೂರ್ತಿ ಅವರನ್ನು ಹಿಂದಿಕ್ಕಿದ ಅಮೆರಿಕಾದ ಲೇಖಕಿ ಲೈಡಿಯಾ
ಬಿಸಿಸಿಐ ಅಧ್ಯಕ್ಷನ ಅಳಿಯನೂ ಸ್ಪಾಟ್ ಫಿಕ್ಸಿಂಗ್ ನಲ್ಲಿ ಭಾಗಿ?
ಮುಂಬಯಿ: ಸ್ಪಾಟ್ ಫಿಕ್ಸಿಂಗ್ ನ ನೀರು ಬಿಸಿಸಿಐ ಕಾಲಬುಡಕ್ಕೆ ಬಂದಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗುರುನಾಥ್ ಮೆಯಪ್ಪನ್ ಅವರನ್ನು ಪೊಲೀಸರು ವಿಚಾರಣೆ ನಡೆಸಲಿದ್ದಾರೆ.
ಫನೀಶ್ ಮೂರ್ತಿ ಮೇಲೆ ಲೈಂಗಿಕ ಕಿರುಕುಳ ಆರೋಪ: ಕೋರ್ಟ್ ಹೊರಗಡೆ ಇತ್ಯರ್ಥ
ಹೊಸದಿಲ್ಲಿ: ಸಹ ಉದ್ಯೋಗಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪವನ್ನು ಎದುರಿಸುತ್ತಿರುವ ಐಗೇಟ್ ನ ಮಾಜಿ ಸಿಇಒ ಫನೀಶ್ ಮೂರ್ತಿ ತನ್ನ ಮೇಲಿನ ಪ್ರಕರಣವನ್ನು ಕೋರ್ಟ್ ನ ಹೊರಗಡೆಯೇ ಬಗೆಹರಿಸುವ
ಸಂಜಯ್ ದತ್ ಪುಣೆಯ ಯೆರವಾಡ ಜೈಲಿಗೆ
ಮುಂಬಯಿ: 1993ರ ಸರಣಿ ಸ್ಫೋಟ ಪ್ರಕರಣದಲ್ಲಿ ಅಪರಾಧಿಯಾಗಿರುವ ಬಾಲಿವುಡ್ ನಟ ಸಂಜಯ್ ದತ್ ನ್ನು ಪುಣೆಯ ಯೆರವಾಡ ಜೈಲಿಗೆ ಸ್ಥಳಾಂತರಿಸಲಾಗಿದೆ. ಮೇ 16ರಂದು ದತ್ ವಿಶೇಷ ಟಾಡಾ ಕೋರ್ಟ್ ಮುಂದೆ ಶರಣಾಗಿದ್ದರು.
ಚೆನ್ನೈ ಪೊಲೀಸರ ದಾಳಿ: 6 ಮಂದಿ ಬುಕ್ಕಿಗಳ ಸೆರೆ
ಚೆನ್ನೈ: ಸ್ಪಾಟ್ ಫಿಕ್ಸಿಂಗ್ ಆರೋಪದ ಮೇಲೆ ರಾಜಸ್ಥಾನ ರಾಯಲ್ಸ್ ನ ಮೂರು ಮಂದಿ ಆಟಗಾರರು ಸಿಕ್ಕಿಬಿದ್ದ ಮರುದಿನ ಚೆನ್ನೈ ಪೊಲೀಸರು 10 ಕಡೆಗಳಲ್ಲಿ ದಾಳಿ ಮಾಡಿ 6 ಮಂದಿ ಬುಕ್ಕಿಗಳನ್ನು ಬಂಧಿಸಿದ್ದಾರೆ.
ದೆಹಲಿಯಲ್ಲಿ ವೈದ್ಯನಿಂದ ರೋಗಿಯ ಅತ್ಯಾಚಾರ
ಹೊಸದಿಲ್ಲಿ: ದೆಹಲಿಯ ಸರ್ಕಾರಿ ಆಸ್ಪತ್ರೆಯ 51ರ ಹರೆಯದ ವೈದ್ಯ ತನ್ನ ಕ್ಲಿನಿಕ್ ನಲ್ಲಿ 21ರ ಹರೆಯದ ರೋಗಿಯೊಬ್ಬಳನ್ನು ಅತ್ಯಾಚಾರ ಮಾಡಿದ ಪ್ರಕರಣ ನಡೆದಿದೆ. ದೆಹಲಿಯ ಜಗ್ ಪ್ರವೇಶ್ ಚಂದ್ರ ಆಸ್ಪತ್ರೆಯಲ್ಲಿ
ದೆಹಲಿಯಲ್ಲಿ 12ನೇ ತರಗತಿ ಬಾಲಕಿಯ ಗುಂಡಿಕ್ಕಿ ಹತ್ಯೆ
ಹೊಸದಿಲ್ಲಿ: ದಕ್ಷಿಣ ದೆಹಲಿಯಲ್ಲಿ 12ನೇ ತರಗತಿಯಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿನಿಯೊಬ್ಬಳನ್ನು ಹುಡುಗನೊಬ್ಬ ಗುಂಡು ಹಾರಿಸಿ ಕೊಂದ ಘಟನೆ ನಡೆದಿದೆ. ಮುನಿಕ್ರಾ ಪ್ರದೇಶದ ಬುಧ ವಿಹಾರ್ ಪ್ರದೇಶದಲ್ಲಿರುವ
ಬಿಜೆಪಿ ನಾಯಕನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು
ಮುಂಬಯಿ: ಮಹಾರಾಷ್ಟ್ರದ ಬಿಜೆಪಿಯ ಎಂಎಲ್ ಸಿ ಮಧು ಚೌವಾಣ್ ತನ್ನ ಪಕ್ಷದ ಮಾಜಿ ಕಾರ್ಯಕರ್ತೆಯನ್ನು ಅತ್ಯಾಚಾರ ಮಾಡಿದ ಆರೋಪವನ್ನು ಎದುರಿಸುತ್ತಿದ್ದಾರೆ.
ಮಧು ಚೌವಾಣ್ ವಿರುದ್ಧ ಮುಂಬಯಿ ಪೊಲೀಸರು
ಹಲ್ಲೆಗೊಳಗಾಗಿದ್ದ ಪಾಕ್ ಕೈದಿ ಸಾವು
ಚಂಡೀಗಡ: ಜಮ್ಮು ಜೈಲಿನಲ್ಲಿ ಕಳೆದ ವಾರ ಸಹ ಕೈದಿಗಳಿಂದ ಹಲ್ಲೆಗೊಳಗಾಗಿದ್ದ ಪಾಕಿಸ್ತಾನದ ಕೈದಿ ಸಾನುಲ್ಲಾ ರಂಜಾಯ್ ಗುರುವಾರ ಬೆಳಗ್ಗೆ ಮೃತಪಟ್ಟಿದ್ದಾನೆ.
ಹತ್ಯೆ ಪ್ರಕರಣ: ತಲ್ವಾರ್ ದಂಪತಿ ಹೇಳಿಕೆ ದಾಖಲಿಸಲು ಕೋರ್ಟ್ ಆದೇಶ
ಘಜಿಯಾಬಾದ್: ಆರುಷಿ-ಹೇಮರಾಜ್ ಹತ್ಯಾ ಪ್ರಕರಣದಲ್ಲಿ ಮಂಗಳವಾರ ಸಿಬಿಐ ವಿಶೇಷ ನ್ಯಾಯಾಲಯವು ರಾಜೇಶ್ ಮತ್ತು ನುಪುರ್ ತಲ್ವಾರ್ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಿದೆ.
ಅತ್ಯಾಚಾರ ಪ್ರಕರಣ: ವೈದ್ಯಕೀಯ ವಿದ್ಯಾರ್ಥಿನಿ ದೇಹದ ಮೇಲಿತ್ತು ಕಚ್ಚಿದ ಗುರುತು!
ಹೊಸದಿಲ್ಲಿ: ಕಳೆದ ವರ್ಷ ಡಿಸೆಂಬರ್ ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ವೈದ್ಯಕೀಯ ವಿದ್ಯಾರ್ಥಿನಿಯನ್ನು ಇಬ್ಬರು ಕಚ್ಚಿದ ಗುರುತುಗಳಿದ್ದವು ಎಂದು ಹೇಳಲಾಗಿದೆ. ಈ ಎರಡು ಗುರುತುಗಳು
ಬಾಲಿವುಡ್ ನಿರ್ಮಾಪಕಿ ಏಕ್ತಾ ಕಪೂರ್ ಮನೆ, ಕಚೇರಿಗೆ ಐಟಿ ದಾಳಿ
ಮುಂಬಯಿ: ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಮಂಗಳವಾರ ಬಾಲಿವುಡ್ ನಿರ್ಮಾಪಕಿ ಏಕ್ತಾ ಕಪೂರ್ ಮನೆ ಹಾಗೂ ಕಚೇರಿಗೆ ದಾಳಿ ಮಾಡಿದ್ದಾರೆ. ಕಿರುತೆರೆಯಲ್ಲಿ ತನ್ನ ಧಾರಾವಾಹಿಗಳಿಂದ ಹೆಚ್ಚಿನ ಪ್ರಚಾರವನ್ನು ಪಡೆದುಕೊಂಡಿರುವ

Write Your Comment Here...