ಜಗತ್ತಿಗೆ ಕಿಟಕಿ ತೆರೆದು ಕನ್ನಡಿಗರಿಗೆ ಬೆಳಕು ತೋರಿದ ಮೊಗ್ಲಿಂಗ್
[Updated 01/07/2012 01:50 pm ][Author: ]ಡಾ. ಎ.ಎಸ್. ಬಾಲಸುಬ್ರಹ್ಮಣ್ಯ
ಪ್ರತಿವರ್ಷ ಜುಲೈ 1 ರಂದು ಕರ್ನಾಟಕದಲ್ಲಿ ಪತ್ರಿಕಾ ದಿನ ಆಚರಿಸಲಾಗುತ್ತದೆ. ಕನ್ನಡ ಪತ್ರಿಕೋದ್ಯಮದ ಸ್ಥಿತಿಗತಿಗಳ ಕುರಿತು ಈ ದಿನ ಚರ್ಚೆಯಾಗಬೇಕು. ವಿಚಾರ ವಿನಿಮಯಗಳಾಗಬೇಕು. ಪತ್ರಿಕೋದ್ಯಮದ ಪರಿಚಯ ಜನಸಾಮಾನ್ಯರಿಗಾಗಬೇಕು. ಜನಸಾಮಾನ್ಯರ ಒಳಿತಿಗೆ ನಿರಂತರ ದುಡಿಯುವ ಪತ್ರಕರ್ತರ ಬೆನ್ನು ಚಪ್ಪರಿಸಬೇಕೆನ್ನುವುದು ಈ ದಿನಾಚರಣೆಯ ಸದುದ್ದೇಶಗಳು. 1982ರಲ್ಲಿ ಅಸ್ತಿತ್ವಕ್ಕೆ ಬಂದ ಕರ್ನಾಟಕ ಪತ್ರಿಕಾ ಅಕಾಡೆಮಿ (ಈಗ ಕರ್ನಾಟಕ ಮಾಧ್ಯಮ ಅಕಾಡೆಮಿ) ಪತ್ರಿಕಾ ದಿನಾಚರಣೆಯ ಮುಂದಾಳತ್ವವನ್ನು ವಹಿಸುತ್ತಿದೆ. 1996ರಿಂದ ಪ್ರತಿ ವರ್ಷ ಈ ಆಚರಣೆ ನಡೆಯುತ್ತಿದೆ.
ಮುದ್ರಣ ಮಾಧ್ಯಮ ನಾಗರಿಕತೆಯ ಬೆಳವಣಿಗೆಯಲ್ಲಿ ಅತ್ಯಂತ ನಿರ್ಣಾಯಕ ಪಾತ್ರ ವಹಿಸಿದೆ. ಮೊದಲು ಪುಸ್ತಕಗಳು ನಂತರ ನಿಯತಕಾಲಿಕೆಗಳು ಹಾಗೂ ದಿನಪತ್ರಿಕೆಗಳು ಜ್ಞಾನದ ಪ್ರಸರಣ ಆರಂಭಿಸಿದವು. ಜರ್ಮನಿಯ ಜೊಹಾನ್ ಗುಟನ್ ಬರ್ಗ್ 1440 ರಲ್ಲಿ ಎರಕಹೊಯ್ದ ಅಚ್ಚುಮೊಳೆ ತಯಾರಿಸಿ, ಪವಿತ್ರ ಗ್ರಂಥ ದಿ ಬೈಬಲ್ ಅನ್ನು ಮುದ್ರಿಸಿದಾಗ, ಅದೊಂದು ಕ್ರಾಂತಿಕಾರಕ ಆವಿಷ್ಕಾರವಾಗಿತ್ತು. ಜರ್ಮನಿ-ಫ್ರಾನ್ಸ್ ದೇಶಗಳ ಗಡಿಗೆ ಹೊಂದಿಕೊಂಡಿರುವ ಪುಟ್ಟ ಪಟ್ಟಣವಾದ ಬಾಸೆಲ್ ನ ಜನರು ಯುರೋಪಿನಲ್ಲಿನ ಯುದ್ಧಗಳಿಂದ ಬೇಸತ್ತಿದ್ದರು. ದೇವರ ಸೇವೆ ಮಾಡಿದರೆ ಶಾಂತಿ ನೆಲಸಬಹುದೆಂಬ ಸದುದ್ದೇಶದಿಂದ ಆರು ಜನ ಪ್ರಮುಖರು ಕಟ್ಟಿದ ಧರ್ಮ ಪ್ರಸಾರ ಸಂಸ್ಥೆ ಮುಂದೆ ಬಾಸೆಲ್ ಮಿಷನ್ ಎಂದು ವಿಶ್ವವಿಖ್ಯಾತವಾಯಿತು.
ಸ್ಯಾಮುಯಲ್ ಹೆಬಿಕ್ ಸೇರಿದಂತೆ ಮೂವರು ಧರ್ಮ ಪ್ರಚಾರಕ್ಕಾಗಿ 1834ರಲ್ಲಿ ಕಲ್ಲಿಕೋಟೆ ತಲುಪಿದರು. ನಂತರ ಮಂಗಳೂರಿಗೆ ಪಯಣಿಸಿದರು. 178 ವರ್ಷಗಳ ಇತಿಹಾಸದ ಬಾಸೆಲ್ ಮಿಷನ್ ಕನ್ನಡ ಸಾಹಿತ್ಯ ಹಾಗೂ ಪತ್ರಿಕೊದ್ಯಮಕ್ಕೆ ಅನುಪಮ ಸೇವೆ ಸಲ್ಲಿಸಿದೆ. ಧರ್ಮ ಪ್ರಸಾರದ ಜತೆಗೆ ಅನೇಕ ಉಪಯುಕ್ತವಾದ ಶೈಕ್ಷಣಿಕ ಹಾಗೂ ಕೈಗಾರಿಕಾ ತರಬೇತಿಗಳನ್ನು ಈ ಸಂಸ್ಥೆ ಆರಂಭಿಸಿತು. ಒಂದು ಪತ್ರಿಕೆಯನ್ನು ಆರಂಭಿಸಿ ನಿಖರವಾದ ಸುದ್ದಿಯನ್ನು ಜನತೆಗೆ ನೀಡಬೇಕೆಂದು 1843ರಲ್ಲಿ ಈ ಸಂಸ್ಥೆ ನಿರ್ಧರಿಸಿತು.
ಅಂಚೆ ಸೌಲಭ್ಯ ಬಿಟ್ಟರೆ, ಉಳಿದ ಯಾವ ಬಗೆಯ ಸಂಪರ್ಕ ಸಾಧನಗಳು ಆದಿನಗಳಲ್ಲಿ ಇರಲಿಲ್ಲ. ಗಾಳಿ ಸುದ್ದಿಗೆ ಹೆಚ್ಚಿನ ಪ್ರದಾನವಿತ್ತು. ಈ ಮಹತ್ಕಾರ್ಯದ ರೂವಾರಿ ಹೆರ್ಮನ್ ಪ್ರೆಢರಿಕ್ ಮೊಗ್ಲಿಂಗ್. ಕನ್ನಡ ಪತ್ರಿಕೋದ್ಯಮದ ಮೂಲಪುರುಷ. ಪ್ರಾತಃಸ್ಮರಣೀಯ ಲೇಖಕ, ಸಾಹಿತಿ, ಇತಿಹಾಸಕಾರ, ತರ್ಜುಮೆದಾರ ಹಾಗೂ ಸಂಗ್ರಹಕಾರ.
ಕಿಟಕಿಯಿರದ ಬಿಡಾರದಲ್ಲಿರುವ ಜನರಿಗೆ ಪತ್ರಿಕೆಗಳ ಮೂಲಕ ನಾಲ್ಕು ದಿಕ್ಕಿಗೆ ಬೆಳಕು ಬಿರುವ ಹಾಗೆ ಸಮಾಚಾರ ನೀಡುವ ಪಾಕ್ಷಿಕ ಪ್ರಕಟಣೆಯಾದ ಮಂಗಳೂರು ಸಮಾಚಾರ 1843 ಜುಲೈ 1ರಂದು ಹೊರಬಂತು. ಈ ಪತ್ರಿಕೆ ಕನ್ನಡ ಪತ್ರಿಕಾ ಲೋಕಕ್ಕೆ ಮುನ್ನುಡಿ ಬರೆಯಿತು. ಈ ಪತ್ರಿಕೆಯ ಮೂಲಕ ಜನ ಸಮೂಹದಬೌದ್ಧಿಕ ಸುಧಾರಣೆಗೆ ಮೊಗ್ಲಿಂಗ್ ಒತ್ತು ನೀಡಿದ.
ಜರ್ಮನಿಯ ಪ್ರಕನಹೈಮ ಊರಿನಲ್ಲಿ 29-05- 181 1ರಲ್ಲಿ ವಿಲ್ಹೆಲ್ಮ ಲುಡವಿಗ ಫ್ರೆಡ್ರಿಕ್ ಮೊಗ್ಲಿಂಗ್ ಮತ್ತು ರೀಸೆ ಎಂಬ ದಂಪತಿಗಳ ಜೇಷ್ಠ ಪುತ್ರನಾಗಿ ಜನಿಸಿದ ಮೊಗ್ಲಿಂಗ್, ಶಿಕ್ಷಣದಲ್ಲಿ ಅಪಾರ ಆಸಕ್ತಿ ಪ್ರದರ್ಶಿಸಿದ. ಬೈಬಲ್ಲಿನ ನಿತ್ಯ ಪಠಣ ಹಾಗೂ ಅಭ್ಯಾಸಗಳು ಈತನ ಮೇಲೆ ಗಂಭೀರ ಪರಿಣಾಮ ಬೀರಿದವು. ತಂದೆ ಶಿಕ್ಷಕನಾಗಿದ್ದರಿಂದ ಮನೆ ತುಂಬ ಶೈಕ್ಷಣಿಕ ವಾತಾವರಣವಿತ್ತು. ಲ್ಯಾಟಿನ ಭಾಷೆಯ ಅಧ್ಯಯನದ ಬಗ್ಗೆ ವಿಶೇಷ ಆಸಕ್ತಿ ವಹಿಸಿದ ಮೊಗ್ಲಿಂಗ್ ಧರ್ಮ ಬೋಧನೆ ಮಾಡುವ ಸೆಮಿನರ್ ನಲ್ಲಿ ತನ್ನ ಭಾಷಾ ಪಾಂಡಿತ್ಯವನ್ನು ಪ್ರದರ್ಶಿಸಿದ. 
1829ರಲ್ಲಿ ಟ್ಯಬಿಂಗಿನ ವಿಶ್ವವಿದ್ಯಾಲಯ ಸೇರಿದ ಮೊಗ್ಲಿಂಗ್ ಸಾಹಿತ್ಯ ಅಭ್ಯಾಸದಲ್ಲಿ ತಲ್ಲೀನನಾದ. ಮನೋವಿಶ್ಲೇಷಣೆ ಹಾಗೂ ಆಧ್ಯಾತ್ಮ ಅವನ ನೆಚ್ಚಿನ ವ್ಯಾಸಂಗ ಕ್ಷೇತ್ರಗಳಾದವು. 1834 ರಲ್ಲಿ ವಿದ್ಯಾಭ್ಯಾಸ ಮುಗಿಸಿ ಸಹಾಯಕ ಪಾದ್ರಿಯಾಗಿ ಧಾರ್ಮಿಕ ಸೇವೆ ಪ್ರಾರಂಭಿಸಿದ. ಕ್ರೈಸ್ತನ ತತ್ವಗಳನ್ನು ಭಾವ ಪೂರಕವಾಗಿ ವಿವರಿಸುವ ಕಲೆಯನ್ನು ಮೊಗ್ಲಿಂಗ್ ಕರಗತ ಮಾಡಿಕೊಂಡ. ತನ್ನ ವಿಶೇಷ ಪಾಂಡಿತ್ಯಕ್ಕೆ ಡಾಕ್ಟರೇಟ್ ಪದವಿಯನ್ನು ಸಹ ಪಡೆದುಕೊಂಡ ಮೊಗ್ಲಿಂಗ್ ಧರ್ಮ ಪ್ರಚಾರವನ್ನೇ ತನ್ನ ಜೀವನದ ಮುಖ್ಯ ಧ್ಯೇಯವನ್ನಾಗಿರಿಸಿಕೊಂಡಿದ್ದ.
ಭಾರತದಲ್ಲಿ ಕ್ರೈಸ್ತ ಧರ್ಮದ ಪ್ರಚಾರ ಕೆಲಸಕ್ಕೆ ಬರುವಂತೆ ಯೂರೋಪಿನ ಯುವಕರನ್ನು ಧರ್ಮ ಪ್ರಚಾರ ಸಂಸ್ಥೆಗಳು ಮನವೊಲಿಸುತ್ತಿದ್ದವು. ಅಂದಿನ ದಿನಗಳಲ್ಲಿ ಮೊಗ್ಲಿಂಗ್ ಭಾರತಕ್ಕೆ ಹೋಗಲು ಉತ್ಸುಕತೆ ತೋರಿದ. ಸೂಕ್ತ ತರಬೇತಿ ಪಡೆದು ಅರೆಬಿಕ್, ಸಂಸ್ಕೃತ ಹಾಗೂ ಇಂಗ್ಲಿಷ್ ಭಾಷೆಗಳನ್ನು ಅಧ್ಯಯನ ಮಾಡಿದ. 1836ರ ಮೇ ತಿಂಗಳಲ್ಲಿ ಇಂಗ್ಲೆಂಡಿನಿಂದ ಮೂರು ತಿಂಗಳು ಹಡಗು ಪ್ರಯಾಣ ನಡೆಸಿ ಭಾರತ ತಲುಪಿದ. ಬಾಸೆಲ್ ಮಿಷನ್ ಸಂಸ್ಥೆ ಮಂಗಳೂರಿನಲ್ಲಿ ತನ್ನ ಕಾರ್ಯ ಚಟುವಟಿಕೆಗಳನ್ನು 1834ರಲ್ಲೇ ಆರಂಭಿಸಿತ್ತು. ಮೊಗ್ಲಿಂಗ್ ಕನ್ನಡ ಭಾಷೆ ಕಲಿಯುವಿಕೆ ಹಾಗೂ ಭಾಷಾಂತರ ಕೆಲಸಗಳಿಗೆ ಹೆಚ್ಚಿನ ಸಮಯವನ್ನು ಮೀಸಲಿಟ್ಟ. ಧರ್ಮಪ್ರಚಾರ ಕೆಲಸದತ್ತ ಇವನ ಒಲವು ಕುಗ್ಗಿತು.
1837ರಲ್ಲಿ ಧಾರವಾಡಕ್ಕೆ ಆಗಮಿಸಿ. ಸರಕಾರ ಹಾಗೂ ಸ್ಥಳೀಯರ ನೆರವಿನಿಂದ ಪ್ರಾರ್ಥನಾ ಮಂದಿರ ನಿರ್ಮಿಸಿದ. ಅಲ್ಲದೇ ಒಂದು ಇಂಗ್ಲಿಷ್ ಶಾಲೆಯನ್ನು ಆರಂಭಿಸುವಲ್ಲಿ ಸಫಲನಾದ. ಇದೇ ಅವಧಿಯಲ್ಲಿ ಆತ ಹುಬ್ಬಳ್ಳಿ ಹಾಗೂ ಗದಗದಲ್ಲಿ ಧರ್ಮ ಪ್ರಸಾರ ಹಾಗೂ ಶಿಕ್ಷಕ ವೃತ್ತಿಯನ್ನು ನಿರ್ವಹಿಸಿದ. ಮೊಗ್ಲಿಂಗ್ ಧಾರವಾಡ ದಿಂದ ಮರಳಿ 1838 ರಿಂದ 1852ರ ವರೆಗೆ ಮಂಗಳೂರಿನಲ್ಲಿ ಸೇವೆ ಸಲ್ಲಿಸಿದ. ಈ ಅವಧಿಯಲ್ಲಿ ಆತ ಕೈಗೊಂಡ ಪ್ರಮುಖ ನಿರ್ಧಾರ ವೆಂದರೆ ಪತ್ರಿಕೆಯೊಂದನ್ನು ಪ್ರಕಟಿಸಿ ಜನರಿಗೆ ಮಾಹಿತಿ ಒದಗಿಸುವುದು.
ಹೊರಗಿನ ಕಾರ್ಯಗಳನ್ನು ಕಾಣುವ ಹಾಗೆಯೂ ಒಳಗೆ ಸಲ್ಪ ಬೆಳಕು ಬೀರುವ ಹಾಗೆಯೂ ನಾಲ್ಕು ದಿಕ್ಕಿಗೆ ಕಿಟಕಿಗಳನ್ನು ಮಾಡುವ ಈ ಸಮಾಚಾರ ಕಾಗದವನ್ನು ಪಕ್ಷಕ್ಕೆ ಒಂದು ಸಾರಿ ಸಿದ್ದ ಮಾಡಿ ಅದನ್ನು ಓದಬೇಕೆಂದಿರುವವರೆಲ್ಲರಿಗೆ ಕೊಟ್ಟರೆ ಕಿಟಕಿಗಳನ್ನು ಮಾಡಿದ ಹಾಗಾಗಿರುವುದು ಎಂಬ ಉದಾತ್ತ ಧ್ಯೇಯದೊಂದಿಗೆ 1843ರ ಜುಲೈ 1ರಂದು ಮಂಗಳೂರು ಸಮಾಚಾರ ಎಂಬ ಒಂದು ದುಡ್ಡಿನ (ನಾಲ್ಕು ಪೈಸೆ) ನಾಲ್ಕು ಪುಟಗಳ ಕಲ್ಲಚ್ಚಿನ ಪತ್ರಿಕೆಯನ್ನು ಹೊರತಂದ. ವಿವಿಧ ಮೂಲಗಳಿಂದ ಸಂಗ್ರಹಿಸಿದ ವರ್ತಮಾನಗಳನ್ನು ಬಹು ಎಚ್ಚರಿಕೆಯಿಂದ ವರ್ಗಿಕರಿಸಿ ಈ ಪತ್ರಿಕೆ ಪ್ರಕಟಿಸುತ್ತಿತ್ತು.
ಮೊಗ್ಲಿಂಗ್ ನಿಯಮಿತವಾಗಿ ಸುದ್ದಿಗಳನ್ನು ಸಂಗ್ರಹಿಸಿ, ಭಾಷಾಂತರಿಸಿ, ಪ್ರಕಟಣೆಗೆ ಸಿದ್ದ ಪಡಿಸುತ್ತಿದ್ದ. ಬಹುಪಾಲು ಬರವಣಿಗೆ ಈತನೊಬ್ಬನಿದಂಲೇ ಆಗುತ್ತಿತ್ತು. ಓದುಗರ ಪತ್ರಗಳನ್ನು ಪ್ರಕಟಿಸಲು ಆತ ಹಿಂಜರಿಯಲಿಲ್ಲ.
ಇನ್ನು ಮುಂದೆ ಯಾರಾದರೂ ಒಂದು ವರ್ತಮಾನ ಸೇರಿಸಬೇಕು ಅಂತ ಬರೆದು ಕಳುಹಿಸುವುದಾದರೆ ಅವರ ಹೆಸರು, ಊರು, ಮುಂತಾಗಿ ನಮಗೆ ತಿಳಿಯುವ ಹಾಗೆ ಮಾತ್ರ ಬರೆದು ಟಪಾಲ್ ದಸ್ತುರಿ ಕೊಟ್ಟು ಕಳಿಸಿದರೆ ಆ ಸಮಾಚಾರ ಛಾಪಿಸಬಹುದು ಎಂದು ಓದುಗರಿಗೆ ತಿಳಿಯ ಹೇಳುತ್ತಿದ್ದನು.
ಧರ್ಮಪ್ರಚಾರ ಸಂಸ್ಥೆಯಿಂದ ಹೊರಡಿಸಲ್ಪಟ್ಟ ಪತ್ರಿಕೆಯಾದರೂ, ಮಂಗಳೂರು ಸಮಾಚಾರ ಎಲ್ಲ ಬಗೆಯ ವರ್ತಮಾನಗಳನ್ನು ಪ್ರಕಟಿಸುತ್ತಿತ್ತು. ಓದುಗರ ಕುತೂಹಲವನ್ನ ಅರಿತಿದ್ದ ಮೊಗ್ಲಿಂಗ್, ವರ್ತಮಾನಗಳನ್ನು ಬಹು ಎಚ್ಚರಿಕೆಯಿಂದ ಆಯ್ದು, ಭಾಷಾಂತರಿಸಿ ಸರಳ ಕನ್ನಡದಲ್ಲಿ ಪ್ರಕಟಿಸುತ್ತಿದ್ದ. ಇದೊಂದು ಸ್ವತಂತ್ರ ವಾರ್ತೆ ಪತ್ರಿಕೆ ಎನ್ನುವ ರೂಪುರೇಷೆ ಹೊಂದಿತ್ತು ಎಂಬುದು ವಿಶೇಷ. ಇಂಗ್ಲಿಷರ ಆಳ್ವಿಕೆಯ ಆ ಮಹತ್ವದ ದಿನಗಳಲ್ಲಿ ಬಹುತೇಕ ರಾಜಸಂಸ್ಥಾನಗಳು ನಾಶವಾಗಿ, ಕಂಪನಿ ಆಡಳಿತ ವಿಸ್ತಾರವಾಗುತ್ತಿದ್ದ ಕಾಲವದು. ಈ ಎಲ್ಲ ರಾಜಕೀಯ ಬೆಳವಣಿಗೆಗಳ ಕಿರು ಪರಿಚಯಗಳನ್ನು ಈ ಪತ್ರಿಕೆ ಮಾಡುತ್ತಿತ್ತು. ಈ ಪ್ರಕಟಣೆಗೆ ಕನ್ನಡ ಭಾಷಿಕರಿಂದ ಬಂದ ಪ್ರತಿಕ್ರಿಯೆಯನ್ನು ಗಮನಿಸಿದ, ಮೊಗ್ಲಿಂಗ್ ಇದು ಮಂಗಳೂರು ಸಮಾಚಾರದ ಬದಲಾಗಿ ಕಂನಡ ಸಮಾಚಾರವಾದರೆ ತುಂಬ ಅರ್ಥ ಪೂರ್ಣವಾಗುತ್ತದೆ ಎಂದು ನಿಶ್ಚಯಿಸಿದ. ಕನ್ನಡ ಭಾಷಿಕರು ವಿಶಾಲವಾದ ಪ್ರದೇಶಗಳಲ್ಲಿ ನೆಲೆಸಿದ್ದಾರೆ ಎಂಬ ಅಂಶವನ್ನ ಗಮನಿಸಿ ಪತ್ರಿಕೆಯ ಕ್ಷೇತ್ರವ್ಯಾಪ್ತಿ ವಿಸ್ತಾರವಾಗಬೇಕೆಂಬ ಕನಸು ಕಂಡ. ಓದುಗರ ಬೆಂಬಲ ಆತನ ನಿರೀಕ್ಷೆಗೆ ಮೀರಿತ್ತು. ವಿವಿಧ ಪ್ರಾಂತ್ಯಗಳಿಂದ ಕನ್ನಡ ಭಾಷಿಕರು ಬರೆಯುತ್ತಿದ್ದ ಪತ್ರಗಳು ಮೊಗ್ಲಿಂಗ್ ಗೆ ಅತೀವ ಆನಂದ ನೀಡುತ್ತಿದ್ದವು. ಆತನೇ ಹೇಳಿರುವ ಹಾಗೆ ಮಂಗಳೂರು, ಮೈಸೂರು, ತುಮಕೂರು, ಬಳ್ಳಾರಿ, ಶಿವಮೊಗ್ಗ, ಹುಬ್ಬಳ್ಳಿ, ಶಿರಸಿ, ಹೊನ್ನಾವರ ಮೊದಲಾದ ಸ್ಥಳಗಳಲ್ಲಿ ಕೆಲವು ನೂರು ಮಂದಿ ಈ ಕಾಗದವನ್ನು ಈ ವರೆಗೆ ತೆಗೆದುಕೊಳ್ಳುತ್ತಾ ಬಂದರು. ಮೊದಲಿನ ಕಾಗದಗಳನ್ನು ಛಾಪಿಸಿ ಪ್ರಕಟಣೆ ಮಾಡುವಾಗ. ಮುಂದೆ ಅದನ್ನು ಕಲ್ಲಿನಲ್ಲಿ ಛಾಪಿಸದೆ ಬಳ್ಳಾರಿಯಲ್ಲಿ ಇರುವ ಅಕ್ಷರ ಛಾಪಖಾನೆಯಲ್ಲಿ ಅಚ್ಚು ಪಡಿ ಮಾಡಲಿಕ್ಕೆ ನಿಶ್ಚೈಸಿದ್ದೇವೆ.
ಆ ಮೇಲೆ ಕನ್ನಡ ಸೀಮೆಯ ನಾಲ್ಕು ದಿಕ್ಕುಗಳಲ್ಲಿ ಇರುವವರು ಶುದ್ಧವಾದ ಅಚ್ಚು ಮೊಳೆಗಳಿಂದ ಆಗುವ ಬರಹವನ್ನು ಸುಲಭವಾಗಿ ಓದಬಹುದು. ಇದಲ್ಲದೆ, ಹೆಚ್ಚು ವರ್ತಮಾನ ಮನುಚರಿತ್ರೆಗಳನ್ನೂ ವಿದ್ಯಾಪಾಠಗಳನ್ನೂ ಬುದ್ದಿ ಮಾತುಗಳನ್ನು ಬರಿಯುವುದಕ್ಕೆ ಸ್ಥಳ ಸಿಗುವುದು ಎಂದು ಪ್ರಕಟಿಸಿದ. ಪತ್ರಿಕೆಯೊಂದರ ಮೂಲಕ ಎಲ್ಲ ಕನ್ನಡ ಭಾಷಿಕರನ್ನು ತಲುಪುವ ಹೆಬ್ಬಯಕೆ ಆತನದಾಗಿತ್ತು. ಸುಮಾರು ಎಂಟು ತಿಂಗಳು ಮಂಗಳೂರಿನಲ್ಲಿ ಪ್ರಕಟವಾದ ಈ ಪತ್ರಿಕೆ ಬಳ್ಳಾರಿಗೆ ಮಾರ್ಚ್ 1844 ರಲ್ಲಿ ವರ್ಗಾವಣೆಗೊಂಡಿತು. ನಂತರ ಕನ್ನಡ ಸಮಾಚಾರ ವೆಂದು ಪುನರ್ ನಾಮಕರಣಗೊಂಡಿತು. ಬಳ್ಳಾರಿಯಲ್ಲಿ ಸುಮಾರು ಹತ್ತು ತಿಂಗಳ ಕಾಲ ಈ ಪತ್ರಿಕೆ ಪ್ರಕಟವಾಯಿತು. ಮೊಗ್ಲಿಂಗ್ ನಷ್ಟು ಸಮರ್ಪಣಾ ಮನೋಭಾವದ ಪತ್ರಿಕಾ ಸಂಪಾದಕರು ಬಳ್ಳಾರಿಯಲ್ಲಿ ಲಭ್ಯವಾಗಲಿಲ್ಲ. ಮಂಗಳೂರಿನಲ್ಲಿದ್ದು ಕೊಂಡು ಬಳ್ಳಾರಿಯಿಂದ ಪತ್ರಿಕೆ ನಡೆಸುವ ಆತನ ಸಾಹಸ ಯಶಸ್ವಿಯಾಗಲಿಲ್ಲ. ಸಿಪಾಯಿ ದಂಗೆಯ ಬೆಳವಣಿಗೆಗಳನ್ನು ಜನತೆಗೆ ಮುಟ್ಟಿಸಬೇಕೆನ್ನುವ ಆಕಾಂಕ್ಷೆಯಿಂದ 13 ವರ್ಷಗಳ ನಂತರ ಕಂನಡ ವಾರ್ತೆ ಪತ್ರಿಕೆಯನ್ನು ಮೊಗ್ಲಿಂಗ್ ಆರಂಭಿಸಿದ.
ಎರಕದಲ್ಲಿ ಹೊಯ್ದ ಅಚ್ಚು ಮೊಳೆಗಳನ್ನು ಮೊದಲ ಬಾರಿಗೆ ಈ ಪತ್ರಿಕೆ ಅಳವಡಿಸಿಕೊಂಡಿತ್ತು. ಆದರೆ ಇದು ಕೇವಲ ಒಂದೇ ವರ್ಷದಲ್ಲಿ ನಿಂತಿತು. ಕಳೆದ 169 ವರ್ಷಗಳಲ್ಲಿ ಕನ್ನಡ ಪತ್ರಿಕೋದ್ಯಮ ವೈವಿಧ್ಯಮಯವಾಗಿ ಬೆಳೆದಿದೆ. ಕನ್ನಡ ಪತ್ರಿಕೆಗಳ ಒಟ್ಟು ಪ್ರಸಾರ ಅಂದಾಜು 40 ಲಕ್ಷವಿದೆ. ಆರು ಕೋಟಿ ಜನಸಂಖ್ಯೆ ಇರುವ ಕರ್ನಾಟಕದಲ್ಲಿ ಕನ್ನಡ ಭಾಷಿಕರ ಸಂಖ್ಯೆ ಸುಮಾರು ಐದು ಕೋಟಿ. ಈ ಹಿನ್ನಲೆಯಲ್ಲಿ ಕನ್ನಡ ಪತ್ರಿಕೆಗಳ ಪ್ರಸಾರ ಇನ್ನೂ ವ್ಯಾಪಕವಾಗಬೇಕಾಗಿದೆ. ಪ್ರತಿ ಕನ್ನಡಿಗರ ಮನೆಯಲ್ಲಿಯೂ ಕನಿಷ್ಠ ಒಂದೆರಡು ಪತ್ರಿಕೆಗಳು ರಾರಾಜಿಸಬೇಕಾಗಿದೆ. ಕನ್ನಡ ಪತ್ರಿಕೆಗಳನ್ನು ಖರೀದಿಸಿ ಓದುವ ಪ್ರವೃತ್ತಿ ಹೆಚ್ಚಲಿ ಎಂದು ಈ ಐತಿಹಾಸಿಕ ದಿನದಂದು ಆಶಿಸೋಣ.
ಬಿಗ್ ಬಾಸ್ ನ ವಿನಾಯಕ್ ಜೋಶಿ ಜತೆ ನಮ್ ಸ್ಟೈಲ್ ನ ಮಾತುಕತೆ...
ವಿನಾಯಕ್ ಜೋಶಿ, ಒಂದ್ ಟೈಮ್ ನಲ್ಲಿ ಈ ಹೆಸರು ಕೇಳಿದಾಕ್ಷಣ ತಕ್ಷಣ ನೆನಪಿಗೆ ಬರ್ತಿದ್ದದ್ದು ನಮ್ಮೂರ ಮಂದಾರ ಹೂವೇ, ಅಮೃತ ವರ್ಷಿಣಿ ಚಿತ್ರದ ಗುಂಡು ಗುಂಡಾಗಿ, ಮುದ್ದು ಮುದ್ದಾಗಿದ್ದ ಪುಟ್ಟ ಬಾಲಕ.
ಆತ ರಕ್ಷಿಸಿದ ಮಗು ಬದುಕುಳಿಯಲಿಲ್ಲವೆಂದು ಬಿಕ್ಕಿಬಿಕ್ಕಿ ಅತ್ತಿದ್ದ...!
ದೇಶದ ಇತಿಹಾಸದಲ್ಲಿಯೇ ಭೀಕರ ದುರಂತವಾದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತಕ್ಕೆ ಇಂದಿಗೆ(ಮೇ 22) ಮೂರು ವರ್ಷಗಳು ತುಂಬುತ್ತಿದೆ. 2010ರ ಮೇ 22 ರಂದು ಬೆಳಗ್ಗೆ 6.05ರ...
ಮಾಯಾಲೋಕದ ಅಪೂರ್ವ ಬಾಲೆ...!
ಹ್ಯಾಟ್ ತಲೆಗೇರಿಸಿ, ಕೈಯಲ್ಲೊಂದು ಮಂತ್ರದಂಡ ಹಿಡಿದುಕೊಂಡು ಸ್ಟೇಜ್ ಏರಿದಳೆಂದರೆ ಎದುರು ಕುಳಿತವರು ಕಣ್ ಕಣ್ ಬಿಟ್ಟು ನೋಡುತ್ತಲೇ ಇರಬೇಕೆನ್ನುವ ಮಯಾ ಲೋಕವೇ ಸೃಷ್ಟಿಯಾಗಿಬಿಡುತ್ತದೆ. ಈ ಮಾಯಾಲೋಕದ...
ಚೊಚ್ಚಲ ಚಿತ್ರದಲ್ಲೇ ಕೇಳುಗರ ಮೋಡಿ ಮಾಡಿದ ಸಂಗೀತ ನಿರ್ದೇಶಕ ವಿಜೇತ್
ಕಳೆದ ಸಂಚಿಕೆಯಲ್ಲಿ ಸರ್ಜಾ ಕುಟುಂಬದಿಂದ ಚಿತ್ರರಂಗಕ್ಕೆ ನಟನಾಗಿ ಪ್ರವೇಶ ಮಾಡ್ತಾ ಇರೋ ಭರತ್ ಸರ್ಜಾ ರವರ ಬಗ್ಗೆ ಪರಿಚಯ ಮಾಡಿಸಲಾಯ್ತು. ಈ ಬಾರಿ ಸರ್ಜಾ ಕುಟುಂಬದ ಮತ್ತೊಬ್ಬನ ಪರಿಚಯ. ಆತ ಚಿತ್ರರಂಗವನ್ನು ಕಾಲಿಟ್ಟಿರುವುದು...
ಪ್ರಯೋಗ ಶೀಲ ಕಲಾವಿದನ ಕಲ್ಪನೆಯಲ್ಲಿ ಮೂಡಿದ ಕಾಗದ ಭಿತ್ತಿ ಶಿಲ್ಪಗಳು
ಆಧುನಿಕತೆ ಬೆಳೆದಂತೆಲ್ಲ ಕಲೆಯು ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಲಿದೆ. ಪ್ರಸುತ್ತ ಸಂದರ್ಭದಲ್ಲಿ ಕಲಾವಿದ ತನ್ನದೇ ಆದ ಮಾಧ್ಯಮದಿಂದ ಕಲಾಕೃತಿಗಳನ್ನು ರಚಿಸುತ್ತ ತನ್ನ ಕಲ್ಪನೆಯನ್ನು ಅಭಿವ್ಯಕ್ತಿಸಲು ವಿಭಿನ್ನ ಮಾರ್ಗವನ್ನು ಕಂಡುಕೊಳ್ಳುತ್ತಿದ್ದಾನೆ.
ಮ್ಯಾಜಿಕ್ ಕಲೆಯ ಸಾಗರ ಈ ಸಾಗರ್...!
ಮ್ಯಾಜಿಕ್ ನೊಂದಿಗೆ ಕೆಲವು ಅಪಾಯಕಾರಿ ಸ್ಟಂಟ್ ಗಳನ್ನು ಮಾಡುವ ಸಾಗರ್ ಗೆ ಮನೆಯೇ ಮೊದಲ ಪ್ರಯೋಗ ಶಾಲೆ. ಚಾಪರ್ ಬ್ಲೇಡ್ ನ ಹರಿತವಾದ ಭಾಗದ ಮೇಲೆ ನಡೆದಾಡುವ ಸಾಗರ್, ಪ್ರೇಕ್ಷಕರನ್ನು ನಿಬ್ಬೆರಗಾಗುವಂತೆ ಮಾಡುವುದಲ್ಲದೆ...
ಶಿಕ್ಷಣ ವ್ಯವಸ್ಥೆಗೇ ಸವಾಲೆಸೆಯುತ್ತಿರುವ ಸ್ವರೂಪ
ಚಿತ್ರಕಲೆ ಮೂಲಕ ಸಾಧಾರಣಾ ವಿದ್ಯಾರ್ಥಿಯೊಬ್ಬ ಹೆಚ್ಚಿನ ಅಂಕ ಪಡೆಯಲು ಸಾಧ್ಯವೇ? ದಡ್ಡನೆಂದು ಬೈದು ಶಾಲೆಯಿಂದ ಹೊರದಬ್ಬಲ್ಪಟ್ಟ ವಿದ್ಯಾರ್ಥಿ ಕೇವಲ 20 ದಿನಗಳ ತರಬೇತಿಯ ಮೂಲಕ ಡಿಸ್ಟಿಂಕ್ಷನ್ ಪಡೆಯಲು ಸಾಧ್ಯವೇ? ಡ್ಯಾನ್ಸ್ ಮಾಡಿ ಗಣಿತ-ವಿಜ್ಞಾನದಲ್ಲಿ...ವಿಶೇಷ
ಕುಟುಂಬವೆಂಬ ವಟವೃಕ್ಷದ ಕೆಳಗೆ...
ಮೇ 15 ವಿಶ್ವ ಅಂತರರಾಷ್ಟ್ರೀಯ ಕುಟುಂಬ ದಿನ, ಸತ್ಸಂಪ್ರದಾಯದಲ್ಲಿ ವಿಶ್ವಕ್ಕೆ ಮಾದರಿಯಾದ ಭಾರತದ ಕುಟುಂಬ ಪದ್ಧತಿಯಲ್ಲಿ ಆತಂಕಕಾರಿಯಲ್ಲದಿದ್ದರೂ ಅಲ್ಪಪ್ರಮಾಣದ ಪಾಶ್ಚಾತ್ಯರ ಅನುಕರಣೆಯಾಗುತ್ತಿರುವುದು ಅಸಹನೀಯವೇ.
ಇತಿಹಾಸದ ಕಥೆ ಹೇಳುತ್ತಿದೆ ಮಡಿಕೇರಿ ಅರಮನೆ
ಕೊಡಗಿನ ಮುಖ್ಯ ಪಟ್ಟಣ ಮಡಿಕೇರಿಗೆ ಆಗಮಿಸುವ ಪ್ರವಾಸಿಗರನ್ನು ಎತ್ತರದ ಸಮತಟ್ಟಾದ ಸ್ಥಳದಲ್ಲಿ ಕಲ್ಲುಕೋಟೆ ನಡುವೆ ನೆಲೆನಿಂತ ಅರಮನೆ ಗಮನಸೆಳೆಯುತ್ತದೆ. ಈ ಅರಮನೆ ಮೈಸೂರು ಅರಮನೆಯಂತೆ ವಿಶ್ವವಿಖ್ಯಾತಿ ಪಡೆಯದಿರಬಹುದು.
ಸ್ತ್ರೀಯರ ಮಹತ್ವದ ದಿನ ಅಕ್ಷಯ ತೃತೀಯಾ....
ಅಕ್ಷಯ ತದಿಗೆ ಸ್ತ್ರೀಯರಿಗೆ ಮಹತ್ವದ್ದಾಗಿದೆ. ಸ್ತ್ರೀಯರು ಚೈತ್ರದಲ್ಲಿ ಕೂರಿಸಿದ ಚೈತ್ರ ಗೌರಿಯನ್ನು ಈ ದಿನ ವಿಸರ್ಜನೆ ಮಾಡುತ್ತಾರೆ. ಇದರ ಪ್ರಯುಕ್ತ ಅರಿಶಿನ-ಕುಂಕುಮ ನೀಡುವ ಕಾರ್ಯಕ್ರಮವನ್ನೂ ಮಾಡುತ್ತಾರೆ.
ಒಂದುವರೆ ತಿಂಗಳಲ್ಲಿ ಸೌದಿಯಿಂದ 56,700 ಮಂದಿ ಭಾರತೀಯರ ಗಡಿಪಾರು
ಹೊಸದಿಲ್ಲಿ: ಸುಮಾರು 56,700 ಮಂದಿ ಭಾರತೀಯರನ್ನು ಸೌದಿ ಅರೇಬಿಯಾ ಮುಂದಿನ ಒಂದುವರೆ ತಿಂಗಳಲ್ಲಿ ಗಡಿಪಾರು ಮಾಡಲಿದೆ ಮತ್ತು ಇವರೆಲ್ಲರಿಗೆ ಎಮರ್ಜೆನ್ಸಿ ಸರ್ಟಿಫಿಕೇಟ್ ನೀಡಲು ಹತ್ತು ಅಧಿಕಾರಿಗಳನ್ನು ಸೌದಿಗೆ...
ಜನಸಂಖ್ಯೆಯಲ್ಲಿ ಕರ್ನಾಟಕಕ್ಕೆ 9ನೇ ಸ್ಥಾನ
ಬೆಂಗಳೂರು: ದೇಶದಲ್ಲಿ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕ್ಕೆ 9ನೇ ಸ್ಥಾನದಲ್ಲಿದೆ. ಇದು 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ 6,10,95,297 ಜನರಿದ್ದು, 2001ರ ಜನಗಣತಿಗೆ ಹೋಲಿಸಿದರೆ...
ಬೆಂಗಳೂರಿನ ಐಐಎಂ-ಬಿಗೆ ಹುಸಿ ಬಾಂಬ್ ಕರೆ
ಬೆಂಗಳೂರು: ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೆಜ್ ಮೆಂಟ್ ಬೆಂಗಳೂರು(ಐಐಎಂ-ಬಿ) ಗೆ ಬಾಂಬ್ ಕರೆ ಬಂದಿದ್ದು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಿ ಶೋಧಿಸಿದಾಗ ಇದು ಹುಸಿ ಕರೆಯೆಂದು ತಿಳಿದುಬಂದಿದೆ.
ಎಪಿಎಲ್ -ಬಿಪಿಎಲ್ ಕಾರ್ಡ್ ದಾರರೇ ಅಕ್ಕಿ ಸಿಗೋದು ಫುಲ್ ಡೌಟು!
ಬೆಂಗಳೂರು: ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ ದಾರರೇ ಹುಷಾರ್..! ಮುಂದಿನ ತಿಂಗಳು ನಿಮಗೆ ಅಕ್ಕಿ ಸಿಗುವುದು ಬಹುತೇಕ ಅನುಮಾನ ಕಾರಣ ರಾಜ್ಯದ ಗೋದಾಮಿನಲ್ಲಿ ಇರುವ ಅಕ್ಕಿಗೆ ನುಸಿಬಾಧೆ ತಗುಲಿದ್ದು..
ಮಂಗಳೂರು ಮೂಲದ ಬಾಲಕನಿಗೆ ನ್ಯಾಶನಲ್ ಜಿಯೋಗ್ರಾಫಿಕ್ ಬೀ ಪ್ರಶಸ್ತಿ
ವಾಷಿಂಗ್ಟನ್: ಮಂಗಳೂರು ಮೂಲದ ಬಾಲಕನೊಬ್ಬ ಅಮೆರಿಕಾದಲ್ಲಿ ನಡೆದ ನ್ಯಾಶನಲ್ ಜಿಯೋಗ್ರಾಪಿಕ್ ಬೀ 2013 ಸ್ಪರ್ಧೆಯನ್ನು ಗೆದ್ದುಕೊಂಡಿದ್ದಾನೆ. ಏಶ್ಯಾದ ಬೆಟ್ಟ ಪ್ರದೇಶ ಬೊತ್ಸವಾನಾದಲ್ಲಿರುವ ಹುಲಿಗಳ ಬಗ್ಗೆ ಮತ್ತು ಇಂಗ್ಲೆಂಡ್ ನ...
ಮಾಸಾಂತ್ಯಕ್ಕೆ ರಾಜ್ಯಕ್ಕೆ ಮುಂಗಾರು ಪ್ರವೇಶ!
ಬೆಂಗಳೂರು: ಮೇ ತಿಂಗಳ ಕೊನೆಯ ವಾರದಲ್ಲೇ ರಾಜ್ಯಕ್ಕೆ ಮುಂಗಾರು ಪ್ರವೇಶಿಸುವ ಸಾಧ್ಯತೆಗಳಿವೆ ದಟ್ಟವಾಗಿದೆ ಎಂದು ಹವಾಮಾನ ಇಲಾಖೆಯ ನಿರ್ದೇಶಕ ಪುಟ್ಟಣ್ಣ ಹೇಳಿದ್ದಾರೆ.
ರಾಜ್ಯದಲ್ಲಿ ಈ ಶೈಕ್ಷಣಿಕ ವರ್ಷದಿಂದ ಬಂಗಾಳಿ ದ್ವಿತೀಯ ಭಾಷೆ
ಬೆಂಗಳೂರು: ಕರ್ನಾಟಕದಲ್ಲಿ ಬಂಗಾಳಿ ಭಾಷೆಯನ್ನು ಈ ಶೈಕ್ಷಣಿಕ ವರ್ಷದಿಂದ ದ್ವಿತೀಯ ಭಾಷೆಯನ್ನಾಗಿ ಮಾಡಲು ಸರ್ಕಾರ ಆದೇಶ ಹೊರಡಿಸಿದೆ. ಬಂಗಾಳಿ ಸಮುದಾಯದವರು ದೀರ್ಘ ಸಮಯದಿಂದ ಈ ಬಗ್ಗೆ ಮನವಿ...
ಅನಂತಮೂರ್ತಿ ಹಿಂದಿಕ್ಕಿ ಬೂಕರ್ ಪಡೆದ ಅಮೆರಿಕಾದ ಲೇಖಕಿ
ಲಂಡನ್: ಕರ್ನಾಟಕದ ಸಾಹಿತಿ ಯು. ಆರ್. ಅನಂತಮೂರ್ತಿ ಅವರು 2013ರ ಬೂಕರ್ ಅಂತಾರಾಷ್ಟ್ರೀಯ ಪ್ರಶಸ್ತಿಯಿಂದ ಕೂದಲೆಳೆಯ ಅಂತರದಲ್ಲಿ ವಂಚಿತರಾಗಿದ್ದಾರೆ. ಅನಂತಮೂರ್ತಿ ಅವರನ್ನು ಹಿಂದಿಕ್ಕಿದ ಅಮೆರಿಕಾದ ಲೇಖಕಿ ಲೈಡಿಯಾ
ಬಿಸಿಸಿಐ ಅಧ್ಯಕ್ಷನ ಅಳಿಯನೂ ಸ್ಪಾಟ್ ಫಿಕ್ಸಿಂಗ್ ನಲ್ಲಿ ಭಾಗಿ?
ಮುಂಬಯಿ: ಸ್ಪಾಟ್ ಫಿಕ್ಸಿಂಗ್ ನ ನೀರು ಬಿಸಿಸಿಐ ಕಾಲಬುಡಕ್ಕೆ ಬಂದಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗುರುನಾಥ್ ಮೆಯಪ್ಪನ್ ಅವರನ್ನು ಪೊಲೀಸರು ವಿಚಾರಣೆ ನಡೆಸಲಿದ್ದಾರೆ.
ನಾನು ಮುಗ್ದ, ಯಾವುದೇ ತಪ್ಪು ಮಾಡಿಲ್ಲ: ಶ್ರೀಶಾಂತ್
ಹೊಸದಿಲ್ಲಿ: ನಾನು ಮುಗ್ದ ಮತ್ತು ಯಾವುದೇ ತಪ್ಪನ್ನು ಮಾಡಿಲ್ಲ. ನಾನು ಸ್ಪಾಟ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿಲ್ಲ ಎಂದು ಐಪಿಎಲ್ ಸ್ಪಾಟ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿರುವ ಆರೋಪವನ್ನು ಎದುರಿಸುತ್ತಿರುವ ರಾಜಸ್ಥಾನ್ ರಾಯಲ್ಸ್ ತಂಡ...
ಫನೀಶ್ ಮೂರ್ತಿ ಮೇಲೆ ಲೈಂಗಿಕ ಕಿರುಕುಳ ಆರೋಪ: ಕೋರ್ಟ್ ಹೊರಗಡೆ ಇತ್ಯರ್ಥ
ಹೊಸದಿಲ್ಲಿ: ಸಹ ಉದ್ಯೋಗಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪವನ್ನು ಎದುರಿಸುತ್ತಿರುವ ಐಗೇಟ್ ನ ಮಾಜಿ ಸಿಇಒ ಫನೀಶ್ ಮೂರ್ತಿ ತನ್ನ ಮೇಲಿನ ಪ್ರಕರಣವನ್ನು ಕೋರ್ಟ್ ನ ಹೊರಗಡೆಯೇ ಬಗೆಹರಿಸುವ
ಸಂಜಯ್ ದತ್ ಪುಣೆಯ ಯೆರವಾಡ ಜೈಲಿಗೆ
ಮುಂಬಯಿ: 1993ರ ಸರಣಿ ಸ್ಫೋಟ ಪ್ರಕರಣದಲ್ಲಿ ಅಪರಾಧಿಯಾಗಿರುವ ಬಾಲಿವುಡ್ ನಟ ಸಂಜಯ್ ದತ್ ನ್ನು ಪುಣೆಯ ಯೆರವಾಡ ಜೈಲಿಗೆ ಸ್ಥಳಾಂತರಿಸಲಾಗಿದೆ. ಮೇ 16ರಂದು ದತ್ ವಿಶೇಷ ಟಾಡಾ ಕೋರ್ಟ್ ಮುಂದೆ ಶರಣಾಗಿದ್ದರು.
ಚೆನ್ನೈ ಪೊಲೀಸರ ದಾಳಿ: 6 ಮಂದಿ ಬುಕ್ಕಿಗಳ ಸೆರೆ
ಚೆನ್ನೈ: ಸ್ಪಾಟ್ ಫಿಕ್ಸಿಂಗ್ ಆರೋಪದ ಮೇಲೆ ರಾಜಸ್ಥಾನ ರಾಯಲ್ಸ್ ನ ಮೂರು ಮಂದಿ ಆಟಗಾರರು ಸಿಕ್ಕಿಬಿದ್ದ ಮರುದಿನ ಚೆನ್ನೈ ಪೊಲೀಸರು 10 ಕಡೆಗಳಲ್ಲಿ ದಾಳಿ ಮಾಡಿ 6 ಮಂದಿ ಬುಕ್ಕಿಗಳನ್ನು ಬಂಧಿಸಿದ್ದಾರೆ.
ದೆಹಲಿಯಲ್ಲಿ ವೈದ್ಯನಿಂದ ರೋಗಿಯ ಅತ್ಯಾಚಾರ
ಹೊಸದಿಲ್ಲಿ: ದೆಹಲಿಯ ಸರ್ಕಾರಿ ಆಸ್ಪತ್ರೆಯ 51ರ ಹರೆಯದ ವೈದ್ಯ ತನ್ನ ಕ್ಲಿನಿಕ್ ನಲ್ಲಿ 21ರ ಹರೆಯದ ರೋಗಿಯೊಬ್ಬಳನ್ನು ಅತ್ಯಾಚಾರ ಮಾಡಿದ ಪ್ರಕರಣ ನಡೆದಿದೆ. ದೆಹಲಿಯ ಜಗ್ ಪ್ರವೇಶ್ ಚಂದ್ರ ಆಸ್ಪತ್ರೆಯಲ್ಲಿ
ದೆಹಲಿಯಲ್ಲಿ 12ನೇ ತರಗತಿ ಬಾಲಕಿಯ ಗುಂಡಿಕ್ಕಿ ಹತ್ಯೆ
ಹೊಸದಿಲ್ಲಿ: ದಕ್ಷಿಣ ದೆಹಲಿಯಲ್ಲಿ 12ನೇ ತರಗತಿಯಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿನಿಯೊಬ್ಬಳನ್ನು ಹುಡುಗನೊಬ್ಬ ಗುಂಡು ಹಾರಿಸಿ ಕೊಂದ ಘಟನೆ ನಡೆದಿದೆ. ಮುನಿಕ್ರಾ ಪ್ರದೇಶದ ಬುಧ ವಿಹಾರ್ ಪ್ರದೇಶದಲ್ಲಿರುವ
ಬಿಜೆಪಿ ನಾಯಕನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು
ಮುಂಬಯಿ: ಮಹಾರಾಷ್ಟ್ರದ ಬಿಜೆಪಿಯ ಎಂಎಲ್ ಸಿ ಮಧು ಚೌವಾಣ್ ತನ್ನ ಪಕ್ಷದ ಮಾಜಿ ಕಾರ್ಯಕರ್ತೆಯನ್ನು ಅತ್ಯಾಚಾರ ಮಾಡಿದ ಆರೋಪವನ್ನು ಎದುರಿಸುತ್ತಿದ್ದಾರೆ.
ಮಧು ಚೌವಾಣ್ ವಿರುದ್ಧ ಮುಂಬಯಿ ಪೊಲೀಸರು
ಹಲ್ಲೆಗೊಳಗಾಗಿದ್ದ ಪಾಕ್ ಕೈದಿ ಸಾವು
ಚಂಡೀಗಡ: ಜಮ್ಮು ಜೈಲಿನಲ್ಲಿ ಕಳೆದ ವಾರ ಸಹ ಕೈದಿಗಳಿಂದ ಹಲ್ಲೆಗೊಳಗಾಗಿದ್ದ ಪಾಕಿಸ್ತಾನದ ಕೈದಿ ಸಾನುಲ್ಲಾ ರಂಜಾಯ್ ಗುರುವಾರ ಬೆಳಗ್ಗೆ ಮೃತಪಟ್ಟಿದ್ದಾನೆ.
ಹತ್ಯೆ ಪ್ರಕರಣ: ತಲ್ವಾರ್ ದಂಪತಿ ಹೇಳಿಕೆ ದಾಖಲಿಸಲು ಕೋರ್ಟ್ ಆದೇಶ
ಘಜಿಯಾಬಾದ್: ಆರುಷಿ-ಹೇಮರಾಜ್ ಹತ್ಯಾ ಪ್ರಕರಣದಲ್ಲಿ ಮಂಗಳವಾರ ಸಿಬಿಐ ವಿಶೇಷ ನ್ಯಾಯಾಲಯವು ರಾಜೇಶ್ ಮತ್ತು ನುಪುರ್ ತಲ್ವಾರ್ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಿದೆ.
ಅತ್ಯಾಚಾರ ಪ್ರಕರಣ: ವೈದ್ಯಕೀಯ ವಿದ್ಯಾರ್ಥಿನಿ ದೇಹದ ಮೇಲಿತ್ತು ಕಚ್ಚಿದ ಗುರುತು!
ಹೊಸದಿಲ್ಲಿ: ಕಳೆದ ವರ್ಷ ಡಿಸೆಂಬರ್ ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ವೈದ್ಯಕೀಯ ವಿದ್ಯಾರ್ಥಿನಿಯನ್ನು ಇಬ್ಬರು ಕಚ್ಚಿದ ಗುರುತುಗಳಿದ್ದವು ಎಂದು ಹೇಳಲಾಗಿದೆ. ಈ ಎರಡು ಗುರುತುಗಳು
ಬಾಲಿವುಡ್ ನಿರ್ಮಾಪಕಿ ಏಕ್ತಾ ಕಪೂರ್ ಮನೆ, ಕಚೇರಿಗೆ ಐಟಿ ದಾಳಿ
ಮುಂಬಯಿ: ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಮಂಗಳವಾರ ಬಾಲಿವುಡ್ ನಿರ್ಮಾಪಕಿ ಏಕ್ತಾ ಕಪೂರ್ ಮನೆ ಹಾಗೂ ಕಚೇರಿಗೆ ದಾಳಿ ಮಾಡಿದ್ದಾರೆ. ಕಿರುತೆರೆಯಲ್ಲಿ ತನ್ನ ಧಾರಾವಾಹಿಗಳಿಂದ ಹೆಚ್ಚಿನ ಪ್ರಚಾರವನ್ನು ಪಡೆದುಕೊಂಡಿರುವ

Write Your Comment Here...